ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ, ಬಾಲರಾಮನ ಹಣೆಗೆ ಸೂರ್ಯತಿಲಕ, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ
ಅಯೋಧ್ಯೆ ರಾಮ ಮಂದಿರದಲ್ಲಿ ಇಂದು ರಾಮನವಮಿ, ರಾಮ ಜನ್ಮೋತ್ಸವ ಆಚರಣೆಯ ಸಂಭ್ರಮ. ಈ ವರ್ಷ ಜನವರಿಯಲ್ಲಿ ರಾಮ ಮಂದಿರದಲ್ಲಿ ವಿರಾಜಮಾನನಾದ ಬಾಲರಾಮನಿಗೆ ಅಭಿಷೇಕ, ಐತಿಹಾಸಿಕ ಸೂರ್ಯ ತಿಲಕ ಧಾರಣೆ, ವಿಶೇಷ ಪೂಜೆಗಳು ನಡೆಯುತ್ತಿದ್ದು, ರಾಮಜನ್ಮಭೂಮಿಯಲ್ಲಿ ಭಕ್ತರ ಸಂಭ್ರಮ ಸಡಗರ ಮುಗಿಲುಮುಟ್ಟಿದೆ. ಇಲ್ಲಿದೆ ಚಿತ್ರನೋಟ.
(1 / 11)
ಅಯೋಧ್ಯೆಯ ರಾಮ ಮಂದಿರದಲ್ಲಿ ಚೈತ್ರಮಾಸದ ನವಮಿಯ ದಿನ ಇಂದು ಈಗ 12 ಗಂಟೆಗೆ ಬಾಲರಾಮನ ಹಣೆಗೆ ಮುತ್ತಿಟ್ಟ ಸೂರ್ಯಕಿರಣಗಳು ಅಲ್ಲಿ ಸೂರ್ಯತಿಲಕವನ್ನು ಮೂಡಿಸಿದವು. ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.
(2 / 11)
ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಹಣೆಗೆ ಸೂರ್ಯಕಿರಣಗಳು ಮುತ್ತಿಕ್ಕಿ ರೂಪಿಸಿದ ಸೂರ್ಯತಿಲಕ ಗೋಚರಿಸಿದ್ದು ಹೀಗೆ..
(3 / 11)
ರಾಮನವಮಿ ಪ್ರಯುಕ್ತ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ನೂತನ ರಾಮಮಂದಿರದಲ್ಲಿ ಬಾಲರಾಮನ ಸನ್ನಿಧಿಯಲ್ಲಿ ಇದೇ ಮೊದಲ ಸಲ ರಾಮನವಮಿ ಉತ್ಸವ, ರಾಮ ಜನ್ಮೋತ್ಸವ ಆಚರಿಸಲಾಗುತ್ತಿದೆ. ತನ್ನಿಮಿತ್ತವಾಗಿ ಅಭಿಷೇಕ, ವಿಶೇಷ ಪೂಜೆಗಳು ನಡೆಯುತ್ತಿವೆ. (@ShriRamTeerth)
(4 / 11)
ರಾಮಜನ್ಮೋತ್ಸವ, ರಾಮನವಮಿ ಆಚರಣೆ ಪ್ರಯುಕ್ತ ಅಯೋಧ್ಯೆ ರಾಮ ಮಂದಿರದ ಬಾಲರಾಮ (ರಾಮಲಲಾ)ನಿಗೆ ಕ್ಷೀರಾಭಿಷೇಕ ನೆರವೇರಿತು. (@ShriRamTeerth)
(5 / 11)
ಅಯೋಧ್ಯೆ ಶ್ರೀ ರಾಮಜನ್ಮಭೂಮಿಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹ ಬುಡದಲ್ಲಿರುವ ಪುಟ್ಟ ರಾಮನ ವಿಗ್ರಹಕ್ಕೂ ಕ್ಷೀರಾಭಿಷೇಕ ಮಾಡಲಾಯಿತು. (@ShriRamTeerth)
(6 / 11)
ರಾಮಜನ್ಮೋತ್ಸವ, ರಾಮನವಮಿ ಆಚರಣೆ ಪ್ರಯುಕ್ತ ರಾಮಲಲಾ ವಿಗ್ರಹಕ್ಕೆ ಶಾಸ್ತ್ರೋಕ್ತವಾಗಿ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ಪುರೋಹಿತರು.(@ShriRamTeerth)
(7 / 11)
ರಾಮ ಮಂದಿರದಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ಭಗವಾನ್ ರಾಮನ ದರ್ಶನಕ್ಕೆ ಅವಕಾಶ ನೀಡಿದ್ದು, ಶಾಸ್ತ್ರೋಕ್ತ ಪೂಜಾ ವಿಧಿಗಳನ್ನು ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. (@ShriRamTeerth)
(9 / 11)
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಲ್ಲಿ ನಿಂತು ರಾಮನವಮಿಯ ದಿನವಾದ ಇಂದು (ಏಪ್ರಿಲ್ 17) ಬಾಲರಾಮನ ದರ್ಶನ ಪಡೆದು ಪುನೀತರಾಗಲು ಕಾತರಿಸುತ್ತಿದ್ದಾರೆ. (PTI)
(10 / 11)
ಅಯೋಧ್ಯೆ ಬಾಲರಾಮನ ದರ್ಶನ ಇಂದು ರಾತ್ರಿ 11 ಗಂಟೆ ತನಕ ಲಭ್ಯವಿದೆ. ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಭಕ್ತರು ಇರುವ ಕಾರಣ 19 ಗಂಟೆ ಕಾಲ ರಾಮನ ದರ್ಶನಕ್ಕೆ ಆಡಳಿತ ಮಂಡಳಿ ಅವಕಾಶ ನೀಡಿದೆ. (@ShriRamTeerth)
ಇತರ ಗ್ಯಾಲರಿಗಳು