ಸಂಪೂರ್ಣ ಚಂದ್ರಗ್ರಹಣ 2022: ವಿಶ್ವದ ವಿವಿಧೆಡೆ ಕಂಡುಬಂದ ಸುಂದರ ದೃಶ್ಯಗಳಿವು
- ಗ್ರಹಣದ ಸಮಯದಲ್ಲಿ ಚಂದ್ರನು ಕೆಂಪಗೆ ಕಾಣುವುದರಿಂದ ಇದನ್ನು 'ಬ್ಲಡ್ ಮೂನ್' ಎಂದು ಕರೆಯಲಾಗುತ್ತದೆ. ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಚದುರುವುದರಿಂದ ಚಂದ್ರಗ್ರಹ ಕೆಂಪಗೆ ಕಾಣುತ್ತದೆ.
- ಗ್ರಹಣದ ಸಮಯದಲ್ಲಿ ಚಂದ್ರನು ಕೆಂಪಗೆ ಕಾಣುವುದರಿಂದ ಇದನ್ನು 'ಬ್ಲಡ್ ಮೂನ್' ಎಂದು ಕರೆಯಲಾಗುತ್ತದೆ. ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಚದುರುವುದರಿಂದ ಚಂದ್ರಗ್ರಹ ಕೆಂಪಗೆ ಕಾಣುತ್ತದೆ.
(1 / 7)
ಮೇ 16 ರಂದು ಸಂಪೂರ್ಣ ಚಂದ್ರಗ್ರಹಣದಿಂದಾಗಿ ವಿಶ್ವದ ಜನತೆ ರಕ್ತ ಚಂದ್ರನ ಅದ್ಭುತ ನೋಟವನ್ನು ವೀಕ್ಷಿಸಿದರು. ರಕ್ತ ಚಂದ್ರ ಎಂದೂ ಕರೆಯಲ್ಪಡುವ ಸಂಪೂರ್ಣ ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುತ್ತದೆ.(AFP)
(2 / 7)
ರಕ್ತ ಚಂದ್ರನ ಅದ್ಬುತ ದೃಶ್ಯ ನೋಡಿ ವಿಶ್ವದ ಜನರು ಆಶ್ಛರ್ಯಕ್ಕೆ ಒಳಗಾದರು . ಬೊಲಿವಿಯಾ ಮಹಿಳೆಯೊಬ್ಬರು ಚಂದ್ರಗ್ರಹಣವನ್ನು ತಮ್ಮ ಫೋನಿನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿರುವ ಚಿತ್ರ ಇಲ್ಲಿದೆ.(AP Photo)
(3 / 7)
ಕಲ್ಲುಗಳಿಗೆ ವಿವಿಧ ಬಣ್ಣಗಳನ್ನು ಬಳಿದು ಅವುಗಳ ನಡುವೆ ಚಂದ್ರ ಇರುವಂತೆ ಜಿನಿವಾ ಫೋಟೋಗ್ರಾಫರ್ ಸೆರೆ ಹಿಡಿದಿರುವ ಸುಂದರ ಚಿತ್ರ(AP Photo)
(4 / 7)
ಜ್ಯೋತಿಷಿಗಳ ಪ್ರಕಾರ ಸುಮಾರು 80 ವರ್ಷಗಳ ನಂತರ ಇಂತಹ ಅಪರೂಪದ ಗ್ರಹಣ ಸಂಭವಿಸಿದೆ. ಈ ಸಂಪೂರ್ಣ ಚಂದ್ರಗ್ರಹಣವು ನೈರುತ್ಯ ಯುರೋಪ್, ನೈರುತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಗೋಚರಿಸಿತು. ಆದರೆ ಭಾರತೀಯರಿಗೆ ಈ ಬ್ಲಡ್ ಮೂನ್ ವೀಕ್ಷಿಸುವ ಅವಕಾಶ ದೊರೆಯಲಿಲ್ಲ.(AFP)
(6 / 7)
ಸೆಂಟ್ ಲೂಯಿಸ್ನಲ್ಲಿ ಕಂಡು ಬಂದ ಸುಂದರ ದೃಶ್ಯವಿದು. ಯೂನಿಯನ್ ಸ್ಟೇಷನ್ನ ಗೋಪುರದ ಮೇಲೆ ಚಂದ್ರನು ಕಂಡು ಬಂದಿದ್ದರಿಂದ ಗೋಪುರದ ತುದಿಯಲ್ಲಿ ಯಾರೋ ಚೆಂಡು ಇರಿಸಿರುವಂತೆ ಕಂಡುಬಂತು.(AP Photo)
ಇತರ ಗ್ಯಾಲರಿಗಳು