ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Crispy Chicken Recipe: ಮನೆಯಲ್ಲೇ ಕ್ರಿಸ್ಪಿ ಚಿಕನ್‌ ತಯಾರಿಸಿ ರೆಸ್ಟೋರೆಂಟ್‌ ದಾರಿ ಮರೆಯಿರಿ; ಸಂಪೂರ್ಣ ಸರಳ ರೆಸಿಪಿ ಇಲ್ಲಿದೆ, ಟ್ರೈ ಮಾಡಿ

Crispy Chicken Recipe: ಮನೆಯಲ್ಲೇ ಕ್ರಿಸ್ಪಿ ಚಿಕನ್‌ ತಯಾರಿಸಿ ರೆಸ್ಟೋರೆಂಟ್‌ ದಾರಿ ಮರೆಯಿರಿ; ಸಂಪೂರ್ಣ ಸರಳ ರೆಸಿಪಿ ಇಲ್ಲಿದೆ, ಟ್ರೈ ಮಾಡಿ

  • ನಾನ್‌ವೆಜ್‌ ಪ್ರೇಮಿಗಳಿಗೆ ತಮ್ಮಿಷ್ಟದ ತಿಂಡಿ ತಿನ್ನಲು ಇಂತದ್ದೇ ದಿನ ಎಂದೇನಿಲ್ಲ. ತಮಗೆ ಇಷ್ಟ ಬಂದ ದಿನ, ತಾವು ಬಹಳ ಇಷ್ಟ ಪಡುವ ಚಿಕನ್‌, ಮಟನ್‌, ಎಗ್‌ ಅಥವಾ ಸೀ ಫುಡ್‌ ಪ್ರಿಪೇರ್‌ ಮಾಡಿ ತಿಂತಾರೆ. ಆದರೆ ಕೆಲವೊಂದು ರೆಸಿಪಿಗಳನ್ನು ಮನೆಯಲ್ಲಿ ತಯಾರಿಸಲು ಸಾಧ್ಯ ಆಗದೆ ರೆಸ್ಟೋರೆಂಟ್‌ ಹಾದಿ ಹಿಡಿಯುತ್ತಾರೆ.

ಎಲ್ಲಾ ಸಾಮಗ್ರಿಗಳು ಇದ್ದರೆ ಯಾರು ಬೇಕಾದ್ರೂ ರೆಸ್ಟೋರೆಂಟ್‌ ಶೈಲಿಯ ಅಡುಗೆಯನ್ನು ಮನೆಯಲ್ಲೇ ತಯಾರಿಸಿ ತಿನ್ನಬಹುದು. ಸಾಮಾನ್ಯವಾಗಿ ಎಲ್ಲರೂ ಕೆಎಫ್‌ಸಿ ಚಿಕನ್‌ ಹೆಚ್ಚು ಇಷ್ಟ ಪಟ್ಟು ತಿಂತಾರೆ. ಅದರಲ್ಲಿ ಕ್ರಿಸ್ಪಿ ಚಿಕನ್‌ ಎಂದರೆ ಪುಟ್ಟ ಮಕ್ಕಳಿಗೂ ಬಹಳ ಇಷ್ಟ. ನೀವು ಮನೆಯಲ್ಲೇ ದೊರೆಯುವ ಸಾಮಗ್ರಿಗಳಿಂದ ರುಚಿಯಾದ ಕ್ರಿಸ್ಪಿ ಚಿಕನ್‌ ತಯಾರಿಸಿ ತಿನ್ನಬಹುದು. ಕಂಟೆಂಟ್‌ ಕ್ರಿಯೇಟರ್‌ ಸಾಮ್ರಾಟ್‌ ಶೆಟ್ಟಿ ಕ್ರಿಸ್ಪಿ ಚಿಕನ್‌ ರೆಸಿಪಿಯನ್ನು ನಿಮಗಾಗಿ ಹೇಳಿಕೊಡ್ತಿದ್ದಾರೆ. 
icon

(1 / 10)

ಎಲ್ಲಾ ಸಾಮಗ್ರಿಗಳು ಇದ್ದರೆ ಯಾರು ಬೇಕಾದ್ರೂ ರೆಸ್ಟೋರೆಂಟ್‌ ಶೈಲಿಯ ಅಡುಗೆಯನ್ನು ಮನೆಯಲ್ಲೇ ತಯಾರಿಸಿ ತಿನ್ನಬಹುದು. ಸಾಮಾನ್ಯವಾಗಿ ಎಲ್ಲರೂ ಕೆಎಫ್‌ಸಿ ಚಿಕನ್‌ ಹೆಚ್ಚು ಇಷ್ಟ ಪಟ್ಟು ತಿಂತಾರೆ. ಅದರಲ್ಲಿ ಕ್ರಿಸ್ಪಿ ಚಿಕನ್‌ ಎಂದರೆ ಪುಟ್ಟ ಮಕ್ಕಳಿಗೂ ಬಹಳ ಇಷ್ಟ. ನೀವು ಮನೆಯಲ್ಲೇ ದೊರೆಯುವ ಸಾಮಗ್ರಿಗಳಿಂದ ರುಚಿಯಾದ ಕ್ರಿಸ್ಪಿ ಚಿಕನ್‌ ತಯಾರಿಸಿ ತಿನ್ನಬಹುದು. ಕಂಟೆಂಟ್‌ ಕ್ರಿಯೇಟರ್‌ ಸಾಮ್ರಾಟ್‌ ಶೆಟ್ಟಿ ಕ್ರಿಸ್ಪಿ ಚಿಕನ್‌ ರೆಸಿಪಿಯನ್ನು ನಿಮಗಾಗಿ ಹೇಳಿಕೊಡ್ತಿದ್ದಾರೆ. (PC: Freepik, Sᴀᴍʀᴀᴛ Sʜᴇᴛᴛʏ Oғғɪᴄɪᴀʟ)

ಕ್ರಿಸ್ಪಿ ಚಿಕನ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು ಚಿಕನ್‌ ಲೆಗ್‌ ಪೀಸ್‌ - 2 ಮೊಟ್ಟೆ - 1 ಮೊಸರು - 3 ಟೇಬಲ್‌ ಸ್ಪೂನ್‌ ಕಬಾಬ್‌ ಪುಡಿ - 1 ಟೇಬಲ್‌ ಸ್ಪೂನ್ ಅಚ್ಚ ಖಾರದ ಪುಡಿ - 1 ಟೇಬಲ್‌ ಸ್ಪೂನ್ ಅರಿಶಿನ - ಅಗತ್ಯಕ್ಕೆ ತಕ್ಕಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೀ ಸ್ಪೂನ್‌ ಶೆಜ್ವಾನ್‌ ಚಟ್ನಿ - 1 ಟೀ ಸ್ಪೂನ್‌ ಚಿಪ್ಸ್‌ - ನಿಮಗೆ ಇಷ್ಟವಾದದ್ದು ಎಣ್ಣೆ - ಕರಿಯಲು ಉಪ್ಪು - ರುಚಿಗೆ ತಕ್ಕಷ್ಟು
icon

(2 / 10)

ತಯಾರಿಸುವ ವಿಧಾನ ಒಂದು ಬೌಲ್‌ನಲ್ಲಿ ಮೊಟ್ಟೆ ಹಾಗೂ ಮೊಸರು ಸೇರಿಸಿ ಬೀಟ್‌ ಮಾಡಿ. 
icon

(3 / 10)

ತಯಾರಿಸುವ ವಿಧಾನ ಒಂದು ಬೌಲ್‌ನಲ್ಲಿ ಮೊಟ್ಟೆ ಹಾಗೂ ಮೊಸರು ಸೇರಿಸಿ ಬೀಟ್‌ ಮಾಡಿ. 

ಮೊಸರು, ಮೊಟ್ಟೆ ಮಿಶ್ರಣದೊಂದಿಗೆ ಕಬಾಬ್‌ ಪುಡಿ, ಅಚ್ಚ ಖಾರದ ಪುಡಿ, ಅರಿಶಿನ,  ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಶೆಜ್ವಾನ್‌ ಚಟ್ನಿ ಸ್ವಲ್ಪ ಉಪ್ಪು ಸೇರಿಸಿ ಎಲ್ಲವನ್ನೂ ಮಿಕ್ಸ್‌ ಮಾಡಿ. 
icon

(4 / 10)

ಚಿಕನ್‌ ಲೆಗ್‌ ಪೀಸ್‌ಗಳನ್ನು ಚಾಕುವಿನ ಸಹಾಯದಿಂದ ಅಲ್ಲಲ್ಲಿ ಸೀಳಿ, ಹೀಗೆ ಮಾಡುವುದರಿಂದ ಮಸಾಲೆ ಚೆನ್ನಾಗಿ ಹಿಡಿಯುತ್ತದೆ. 
icon

(5 / 10)

ಖಾರದ ಮಸಾಲೆಯೊಳಗೆ ಚಿಕನ್‌ ಪೀಸ್‌ ಹಾಕಿ ಮಸಾಲೆ ಚೆನ್ನಾಗಿ ಹೊಂದಿಕೊಳ್ಳುವರೆಗೂ ಮಿಕ್ಸ್‌ ಮಾಡಿ. ಪ್ಲೇಟ್‌ ಮುಚ್ಚಿ ಅರ್ಧ ಗಂಟೆ ಮ್ಯಾರಿನೇಟ್‌ ಆಗಲು ಬಿಡಿ. 
icon

(6 / 10)

ಚಿಪ್ಸನ್ನು ಮಿಕ್ಸಿ ಜಾರ್‌ಗೆ ಸೇರಿಸಿ ಪಲ್ಸ್‌ ಮೋಡ್‌ನಲ್ಲಿಟ್ಟು ಕ್ರಶ್‌ ಮಾಡಿಕೊಳ್ಳಿ. ನುಣ್ಣಗೆ ಪುಡಿ ಆಗದಂತೆ ನೋಡಿಕೊಳ್ಳಿ. 
icon

(7 / 10)

ಮ್ಯಾರಿನೇಟ್‌ ಆದ ಚಿಕನ್‌ ತುಂಡುಗಳನ್ನು ಚಿಪ್ಸ್‌ ಮೇಲೆ ಹೊರಳಿಸಿ. ಚಿಪ್ಸ್‌ ಬದಲಿಗೆ ನೀವು ಕಾರ್ನ್‌ ಫ್ಲೇಕ್ಸ್‌ ಕೂಡಾ ಬಳಸಬಹುದು. 
icon

(8 / 10)

ಬಿಸಿ ಎಣ್ಣೆಯಲ್ಲಿ ಚಿಕನ್‌ ತುಂಡುಗಳನ್ನು ಕಡಿಮೆ ಉರಿಯಲ್ಲಿಟ್ಟು ಚೆನ್ನಾಗಿ ರೋಸ್ಟ್‌ ಆಗುವರೆಗೂ ಕರಿಯಿರಿ. 
icon

(9 / 10)

ಗರಿ ಗರಿಯಾದ, ಸ್ಪೈಸಿ ಕ್ರಿಸ್ಪಿ ಚಿಕನ್‌ ಅನ್ನು ನಿಮಗಿಷ್ಟವಾದ ಯಾವುದೇ ಡಿಪ್‌ ಜೊತೆ ಎಂಜಾಯ್‌ ಮಾಡಿ. ನೀವು ಮನೆಯಲ್ಲಿ ಪಾರ್ಟಿಗಳಿಗೆ ಕೂಡಾ ಇದನ್ನು ತಯಾರಿಸಬಹುದು. ಒಮ್ಮೆ ಟ್ರೈ ಮಾಡಿ ರುಚಿ ಹೇಗಿತ್ತು ಅನ್ನೋದನ್ನು ಕಾಮೆಂಟ್‌ ಮಾಡಿ. 
icon

(10 / 10)

IPL_Entry_Point

ಇತರ ಗ್ಯಾಲರಿಗಳು