Guava Fruit: ಪೇರಳೆಹಣ್ಣು ಇಷ್ಟ ಪಡೋರು ಇಲ್ಕೇಳಿ; ಬಿಳಿ ತಿರುಳಿಗಿಂತ ಗುಲಾಬಿ ತಿರುಳಿನ ಪೇರಳೆಯೇ ಆರೋಗ್ಯಕ್ಕೆ ಬೆಸ್ಟ್‌, ಯಾಕೆ ಅಂತ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Guava Fruit: ಪೇರಳೆಹಣ್ಣು ಇಷ್ಟ ಪಡೋರು ಇಲ್ಕೇಳಿ; ಬಿಳಿ ತಿರುಳಿಗಿಂತ ಗುಲಾಬಿ ತಿರುಳಿನ ಪೇರಳೆಯೇ ಆರೋಗ್ಯಕ್ಕೆ ಬೆಸ್ಟ್‌, ಯಾಕೆ ಅಂತ ನೋಡಿ

Guava Fruit: ಪೇರಳೆಹಣ್ಣು ಇಷ್ಟ ಪಡೋರು ಇಲ್ಕೇಳಿ; ಬಿಳಿ ತಿರುಳಿಗಿಂತ ಗುಲಾಬಿ ತಿರುಳಿನ ಪೇರಳೆಯೇ ಆರೋಗ್ಯಕ್ಕೆ ಬೆಸ್ಟ್‌, ಯಾಕೆ ಅಂತ ನೋಡಿ

  • White or Pink Guava: ಪೇರಳೆ ಅಥವಾ ಸೀಬೆಹಣ್ಣು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪೇರಳೆಯಲ್ಲಿ ಗುಲಾಬಿ ಬಣ್ಣದ ತಿರುಳು ಹಾಗೂ ಬಿಳಿ ಬಣ್ಣದ ತಿರುಳು ಹೀಗೆ ಎರಡು ಜಾತಿಗಳಿವೆ. ಈ ಎರಡಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ. ಈ ಕುರಿತ ವಿವರ ಇಲ್ಲಿದೆ.

ಸೀಬೆಹಣ್ಣು, ಪೇರಳೆ ಹಣ್ಣು, ಚಾಪೆ ಹಣ್ಣು ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ, ಸಾಮಾನ್ಯವಾಗಿ ಹಲವರ ಮನೆಯಲ್ಲೂ ಬೆಳೆಯುವ ಈ ಹಣ್ಣು ಸರ್ವಋತುವಿನಲ್ಲೂ ಬೆಳೆಯುವ ಗುಣವನ್ನು ಹೊಂದಿದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ, ಕೆ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಸಮೃದ್ಧವಾಗಿದೆ ಮತ್ತು ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಇದು ಪರಿಣಾಮಕಾರಿ. ಆದರೆ ಸೀಬೆಹಣ್ಣಿನಲ್ಲಿ ಎರಡು ಬೇರೆ ಬೇರೆ ವಿಧಗಳಿವೆ.
icon

(1 / 7)

ಒಂದು ಗುಲಾಬಿ ಬಣ್ಣದ ತಿರುಳಿನ ಪೇರಳೆಯಾದರೆ, ಇನ್ನೊಂದು ಬಿಳಿ ಬಣ್ಣದ ತಿರುಳಿನ ಪೇರಳೆ. ಹಾಗಾದರೆ ಈ ಎರಡಲ್ಲೂ ಪೌಷ್ಟಿಕಾಂಶ ಹೆಚ್ಚಿರುವುದೇ, ಎರಡಲ್ಲೂ ಆರೋಗ್ಯಕ್ಕೆ ಯಾವುದು ಉತ್ತಮ ಎಂಬ ಪ್ರಶ್ನೆ ಮೂಡುವುದು ಸಹಜ. 
icon

(2 / 7)

ಈ ಪ್ರಶ್ನೆಗೆ ಉತ್ತರಿಸುವ ಮೊದಲು, ಪೇರಳೆ ಹಣ್ಣಿನ ಕೆಲವು ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ. ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಕಾಪಾಡಿಕೊಳ್ಳಲು ಪೇರಳೆ ಹಣ್ಣಿನ ಸೇವನೆ ಸಹಕಾರಿ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.
icon

(3 / 7)

ಜೀರ್ಣಕ್ರಿಯೆಗೆ ಸಹ ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೂ ಪೇರಳೆ ಸೇವನೆ ಉತ್ತಮ. ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳುವಂತೆ ಮಾಡುತ್ತದೆ. ಇದರ ಹಲವು ಅಂಶಗಳು ಹಲ್ಲು, ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ.
icon

(4 / 7)

ಇಷ್ಟೇ ಅಲ್ಲ, ಇತ್ತೀಚಿನ ಕೆಲವು ಅಧ್ಯಯನಗಳು ಪೇರಲದ ಹಲವಾರು ಘಟಕಗಳು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ ಎಂದು ತೋರಿಸಿವೆ. 
icon

(5 / 7)

ಪೌಷ್ಟಿಕತಜ್ಞರ ಪ್ರಕಾರ, ಗುಲಾಬಿ ಬಣ್ಣದ ತಿರುಳಿರುವ ಪೇರಳೆಯಲ್ಲಿ ಹೆಚ್ಚಿನ ನೀರಿನಾಂಶ ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿವೆ. ಆದರೆ, ಇತರೆ ಪೇರಲಕ್ಕೆ ಹೋಲಿಸಿದರೆ ಸಕ್ಕರೆ, ವಿಟಮಿನ್ ಸಿ ಪ್ರಮಾಣ ತೀರಾ ಕಡಿಮೆ. ಬಿಳಿ ಪೇರಲದಲ್ಲಿ ಉತ್ಕರ್ಷಣ ನಿರೋಧಕಗಳು ಅಂಶಗಳು ಸಾಕಷ್ಟಿದ್ದರೂ ಗುಲಾಬಿ ಷೇರಳೆಯಷ್ಟಿರುವುದಿಲ್ಲ. 
icon

(6 / 7)

ಇದಲ್ಲದೆ, ಗುಲಾಬಿ ಪೇರಲ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಏಕೆಂದರೆ ಇದು ವಿಟಮಿನ್ ಎ, ಸಿ, ಒಮೆಗಾ 3, ಒಮೆಗಾ 6 ನಂತಹ ಕೊಬ್ಬಿನಾಮ್ಲಗಳು ಮತ್ತು ನಾರಿನಾಂಶ ಸೇರಿದಂತೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ಗುಲಾಬಿ ತಿರುಳಿನ ಪೇರಲೆ ಹೆಚ್ಚು ಪ್ರಯೋಜನಕಾರಿ. 
icon

(7 / 7)

ಇತರ ಗ್ಯಾಲರಿಗಳು