OTT Releases This Week: ಈ ವಾರ ಒಟಿಟಿಯಲ್ಲಿ ಬರೋಬ್ಬರಿ 20 ಸಿನಿಮಾಗಳ ಬಿಡುಗಡೆ; ಇಲ್ಲಿದೆ ಸಂಪೂರ್ಣ ಲಿಸ್ಟ್
OTT Releases This Week: ಈ ವಾರ ಒಟಿಟಿಯಲ್ಲಿ ಒಟ್ಟ 21 ಸಿನಿಮಾಗಳು ಡಿಜಿಟಲ್ ಸ್ಟ್ರೀಮ್ ಆಗಲಿವೆ. ಆ 21ರಲ್ಲಿ ಕ್ರೈಂ ಥ್ರಿಲ್ಲರ್, ರೊಮ್ಯಂಟಿಕ್, ಕಾಮಿಡಿ, ಮರ್ಡರ್ ಮಿಸ್ಟರಿ ಸೇರಿ ಹಲವು ಪ್ರಕಾರದ ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ಗಳೂ ಈ ವಾರ ಬಿಡುಗಡೆ ಆಗಲಿವೆ. ಇಲ್ಲಿದೆ ಅವುಗಳ ಮಾಹಿತಿ.
OTT Movies This Week: ಈ ವಾರ (ಡಿಸೆಂಬರ್ 2 ರಿಂದ ಡಿಸೆಂಬರ್ 8 ರವರೆಗೆ) ಒಂದಲ್ಲ ಎರಡಲ್ಲ ಬರೋಬ್ಬರಿ 21 ಸಿನಿಮಾಗಳು ಸೇರಿ ಹಲವು ವೆಬ್‌ಸಿರೀಸ್‌ಗಳು ಒಟಿಟಿಯಲ್ಲಿ ಪ್ರಸಾರ ಆರಂಭಿಸಿವೆ. ಆಕ್ಷನ್ ಥ್ರಿಲ್ಲರ್, ಕ್ರೈಂ ಡ್ರಾಮ, ಹಾರರ್, ಬೋಲ್ಡ್ ಮತ್ತು ರೊಮ್ಯಾಂಟಿಕ್ ಶೈಲಿಯ ಸಿನಿಮಾಗಳು, ವೆಬ್ ಸರಣಿಗಳು ಬಹಳ ವಿಶೇಷ. ಇದೀಗ ಆ ಸಿನಿಮಾಗಳು ಯಾವವು? ಅವುಗಳು ಯಾವ ಒಟಿಟಿಯಲ್ಲಿವೆ ಎಂಬ ಮಾಹಿತಿ ಇಲ್ಲಿದೆ.
ನೆಟ್‌ಫ್ಲಿಕ್ಸ್
- ಚರ್ಚಿಲ್ ಅಟ್ ವಾರ್ (ಹಾಲಿವುಡ್ ವೆಬ್ ಸರಣಿ)- ಡಿಸೆಂಬರ್ 4
- ದಟ್ ಕ್ರಿಸ್ಮಸ್ (ಅನಿಮೇಟೆಡ್ ಫ್ಯಾಂಟಸಿ ಸಿನಿಮಾ)- ಡಿಸೆಂಬರ್ 4
- ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ (ಇಂಗ್ಲಿಷ್ ಸಾಕ್ಷ್ಯಚಿತ್ರ)- ಡಿಸೆಂಬರ್ 4
- ದಿ ಅಲ್ಟಿಮೇಟ್ ಮೇರಿ ಆರ್ ಮೂವ್ ಆನ್ ಸೀಸನ್ 3 (ಇಂಗ್ಲಿಷ್ ವೆಬ್ ಸರಣಿ)- ಡಿಸೆಂಬರ್ 4
- ಬ್ಲ್ಯಾಕ್ ಡನ್ಜ್ (ಹಾಲಿವುಡ್ ಚಲನಚಿತ್ರ)- ಡಿಸೆಂಬರ್ 5
- ಎ ನಾನ್ಸೆನ್ಸ್ ಕ್ರಿಸ್ಮಸ್ ವಿತ್ ಸಬರಿನಾ (ಇಂಗ್ಲೀಷ್ ಸಿನಿಮಾ) - ಡಿಸೆಂಬರ್ 5
- ಜಿಗ್ರಾ (ಆಲಿಯಾ ಭಟ್ ಹಿಂದಿ ಚಿತ್ರ)- ಡಿಸೆಂಬರ್ 6
- ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ (ಹಿಂದಿ ರೊಮ್ಯಾಂಟಿಕ್ ಕಾಮಿಡಿ ಚಿತ್ರ)- ಡಿಸೆಂಬರ್ 6
- ಮೇರಿ (ಇಂಗ್ಲಿಷ್ ಚಿತ್ರ)- ಡಿಸೆಂಬರ್ 6
ಇದನ್ನೂ ಓದಿ: ಆಗಬಾರದ್ದೇ ಆಗೋಯ್ತು, ಸೀತಾ ರಾಮ ಸೀರಿಯಲ್‌ನಲ್ಲಿ ದುಷ್ಟರು ಉರುಳಿಸಿದ ದಾಳಕ್ಕೆ ಬಲಿಯಾದ ಸಿಹಿ!
ಅಮೆಜಾನ್ ಪ್ರೈಮ್ ಒಟಿಟಿ
- ಜ್ಯಾಕ್ ಇನ್ ಟೈಮ್ ಫಾರ್ ಕ್ರಿಸ್ಮಸ್ (ಇಂಗ್ಲಿಷ್ ಚಲನಚಿತ್ರ)- ಡಿಸೆಂಬರ್ 3
- ಪಾಪ್ ಕಲ್ಚರ್ ಜಿಯೋಪರ್ಡಿ (ಹಾಲಿವುಡ್ ಟಿವಿ ಶೋ) - ಡಿಸೆಂಬರ್ 4
- ಸ್ಮೈಲ್ 2 (ಇಂಗ್ಲಿಷ್ ಹಾರರ್ ಸಿನಿಮಾ)- ಡಿಸೆಂಬರ್ 4
- ಅಗ್ನಿ (ಹಿಂದಿ ಆಕ್ಷನ್ ಡ್ರಾಮಾ ಮೂವಿ)- ಡಿಸೆಂಬರ್ 6
- ದಿ ಸ್ಟಿಕ್ಕಿ (ಹಿಸ್ಟರಿ ವೆಬ್ ಸೀರೀಸ್)- ಡಿಸೆಂಬರ್ 6
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ
- ದಿ ಒರಿಜಿನಲ್ (ಕೊರಿಯನ್ ವೆಬ್ ಸರಣಿ)- ಡಿಸೆಂಬರ್ 3
- ಲೈಟ್ ಶಾಪ್ (ಕೊರಿಯನ್ ಮಿಸ್ಟರಿ ವೆಬ್ ಸರಣಿ)- ಡಿಸೆಂಬರ್ 4
ಇದನ್ನೂ ಓದಿ: ಗಹನ, ಗಂಭೀರ ವಿಚಾರಗಳಿಗೆ ಕೈ ಹಾಕಿದ ಉಪೇಂದ್ರ; ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ ಯುಐ ಚಿತ್ರದ ವಾರ್ನರ್
ಜಿಯೋ ಸಿನೆಮಾ ಒಟಿಟಿ
- ಕ್ರಿಚ್ ಕಮಾಂಡೋಸ್ (ಅನಿಮೇಟೆಡ್ ಸಿನಿಮಾ)- ಡಿಸೆಂಬರ್ 6
- ಲಾಂಜಿಂಗ್ (ಇಂಗ್ಲಿಷ್ ಕಾಮಿಡಿ ಡ್ರಾಮಾ ಫಿಲ್ಮ್)- ಡಿಸೆಂಬರ್ 7
- ಮೈರಿ (ಹಿಂದಿ ರಿವೆಂಜ್ ಥ್ರಿಲ್ಲರ್ ವೆಬ್ ಸರಣಿ) - ಜೀ5 ಒಟಿಟಿ - ಡಿಸೆಂಬರ್ 6
- ತನಾವ್ 2 (ಹಿಂದಿ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ) - ಸೋನಿ ಲಿವ್ ಒಟಿಟಿ - ಡಿಸೆಂಬರ್ 6
ಒಟಿಟಿಯಲ್ಲಿ 21 ಚಲನಚಿತ್ರಗಳು
21 ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ವಾರ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮ್ ಆಗಲಿವೆ. ಇವುಗಳಲ್ಲಿ ಆಲಿಯಾ ಭಟ್ ಅವರ ಆಕ್ಷನ್ ಥ್ರಿಲ್ಲರ್ ಜಿಗ್ರಾ, ಆಕ್ಷನ್ ಡ್ರಾಮಾ ಅಗ್ನಿ, ಹಾರರ್ ಸಿನಿಮಾ ಸ್ಮೈಲ್ 2 ಕುತೂಹಲ ಮೂಡಿಸಿವೆ. ಹಿಂದಿ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ ತಾನಾವ್ 2, ತೃಪ್ತಿ ಡಿಮ್ರಿ ಅವರ ಬೋಲ್ಡ್ ಮತ್ತು ರೊಮ್ಯಾಂಟಿಕ್ ಚಿತ್ರ ವಿಕ್ಕಿ ವಿದ್ಯಾ ಕಾ ವೋ ವಾಲಾ ವೀಡಿಯೊ ಸಿನಿಮಾಕ್ಕೂ ಒಟಿಟಿ ವೀಕ್ಷಕ ಕಾಯುತ್ತಿದ್ದಾನೆ.
ಇನ್ನು ಈಗಾಗಲೇ ಒಟಿಟಿಯಲ್ಲಿ ಕಳೆದ ವಾರವೂ ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗಿದ್ದವು. ಇಂದಿಗೂ ಆ ಸಿನಿಮಾಗಳು, ವೆಬ್‌ಸಿರೀಸ್‌ಗಳು ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ಕನ್ನಡದ ಬಘೀರ ಸಿನಿಮಾ ಕೆಲ ದಿನಗಳ ಹಿಂದೆಯೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದರೂ, ಸದ್ಯ ಟಾಪ್ 10ರಲ್ಲಿ 4ನೇ ಸ್ಥಾನದಲ್ಲಿದೆ.