Heeraben Modi: ಗಾಂಧಿನಗರದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ ಅವರ ಶತಾಯುಷಿ ತಾಯಿ
- ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶತಾಯುಷಿ ತಾಯಿ ಹೀರಾಬೆನ್ ಮೋದಿ ಅವರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಶತಾಯುಷಿ ಹೀರಾಬೆನ್ ಮೋದಿ ಅವರು ಮತದಾನದ ಮಹತ್ವವನ್ನು ಸಾರಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

(1 / 5)
ಗಾಂಧಿನಗರದ ರೇಸನ್ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಮತಗಟ್ಟೆಗೆ ವ್ಹೀಲ್ ಚೇರ್‌ನಲ್ಲಿ ಆಗಮಿಸಿದ ಪ್ರಧಾನಿ ಮೋದಿ ಅವರ ತಾಯಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಗಮನ ಸೆಳೆದರು.(ANI)
(2 / 5)
ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು, ಕಳೆದ ಜೂನ್ 18ರಂದು ತಮ್ಮ 100ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ ಎಂಬುದು ವಿಶೇಷ.(ANI)
(3 / 5)
ಇನ್ನು ಈ ಹಿಂದಿನ ರಾಜಮನೆತನದ ರಾಜಮಾತೆ ಶುಭಾಂಗಿನಿರಾಜೆ ಗಾಯಕ್ವಾಡ್ ಅವರು, ವಡೋದರದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಮತದಾನ ನಮ್ಮ ಪ್ರಾಥಮಿಕ ಹಕ್ಕಾಗಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡುವುದಾಗಿ ಶುಭಾಂಗಿನಿರಾಜೆ ಗಾಯಕ್ವಾಡ್ ಈ ವೇಳೆ ಹೇಳಿದರು.(ANI)
(4 / 5)
ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು.(Narendra Modi Twitter)
ಇತರ ಗ್ಯಾಲರಿಗಳು