ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ!
ಕನ್ನಡ ಸುದ್ದಿ  /  ಕ್ರೀಡೆ  /  ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ!

ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ!

Kylian Mbappe: ರಿಯಲ್​ ಮ್ಯಾಡ್ರಿಡ್​ ತಂಡದ ಪರ ಆಡುತ್ತಿರುವ ಕೈಲಿಯನ್ ಎಂಬಾಪ್ಪೆ ಅವರ ಮಾಸಿಕ ವೇತನ ಕ್ರಿಕೆಟ್​ನ ಸೂಪರ್​​​ ಸ್ಟಾರ್​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್ ಒಪ್ಪಂದಕ್ಕಿಂತ ಹೆಚ್ಚು.

ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ!
ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ! (PTI-Reuters)

ಫುಟ್ಬಾಲ್ ಆಟಗಾರರ ಸಂಬಳ ನಿರೀಕ್ಷೆಗೂ ಮೀರಿದಷ್ಟು.. ಒಂದು ಸಲ ವಿಶ್ವವಿಖ್ಯಾತಿ ಪಡೆದರೆ ಕೋಟಿಗಳು ಅವರಿಗೆ ಲೆಕ್ಕಕ್ಕೇ ಇರುವುದಿಲ್ಲ. ಫ್ರಾಂಚೈಸಿಗಳೇ ಅವರಿದ್ದ ಕಡೆಗೆ ಹೋಗಿನ ಒಪ್ಪಂದ ಮಾಡಿಕೊಳ್ಳುತ್ತವೆ. ಲಿಯೊನೆಲ್ ಮೆಸ್ಸಿ, ನೇಯ್ಮರ್, ಕ್ರಿಸ್ಟಿಯಾನೊ ರೊನಾಲ್ಡೊ ಅವರಂತೆಯೇ ಫ್ರಾನ್ಸ್​​ನ ಕೈಲಿಯನ್ ಎಂಬಾಪ್ಪೆ ಸಹ ದೊಡ್ಡ ಸ್ಟಾರ್ ಆಟಗಾರ. ಶ್ರೀಮಂತ ಆಟಗಾರರ ಪೈಕಿ ತಾನೂ ಒಬ್ಬರಾದ​ ಎಂಬಾಪ್ಪೆ ಯುಇಎಫ್ಎ ಚಾಂಪಿಯನ್ಸ್ ಲೀಗ್​ನ ಪ್ಯಾರಿಸ್ ಸೇಂಟ್-ಜರ್ಮೈನ್ ಎಫ್‌ಸಿ ಪರ 930 ಕೋಟಿಗೂ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಈಗ ಲಾ ಲೀಗ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡಲು 285 ಕೋಟಿ ವೇತನ ಪಡೆಯುತ್ತಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನವನ್ನೂ ನೀಡುತ್ತಿದ್ದಾರೆ.

ಕನಸಿನ ಸ್ಥಳಾಂತರ ಮಾಡಿದ ಎಂಬಾಪ್ಪೆ, ಸ್ಯಾಂಟಿಯಾಗೊ ಬೆರ್ನಾಬ್ಯೂನಲ್ಲಿ ವಿನೀಸಿಯಸ್ ಜೂನಿಯರ್ ಮತ್ತು ಜೂಡ್ ಬೆಲ್ಲಿಂಗ್​​ಹ್ಯಾಮ್​ ಅವರೊಂದಿಗೆ ಸೇರಿದರು. ಈ ವೇಳೆ ಕಾಗದದ ಮೇಲೆ ಮಾತ್ರ ವೇತನ ಕಡಿತ ಮಾಡಿದ್ದಾರೆ ಎಂದು ವರದಿಯಾಗಿದೆ. ಎಂಬಾಪ್ಪೆ  ಅವರ ಮಾಸಿಕ ವೇತನ ಕ್ರಿಕೆಟ್​ನ ಸೂಪರ್​​​ ಸ್ಟಾರ್​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಒಪ್ಪಂದಕ್ಕಿಂತ ಹೆಚ್ಚು. ಅಚ್ಚರಿ ಏನೆಂದರೆ 2024-2025ರ ಆವೃತ್ತಿಯ ಐಪಿಎಲ್​ನಲ್ಲಿ ಈ ಇಬ್ಬರು ಕ್ರಿಕೆಟಿಗರು ಪಡೆಯುವ ವೇತನಕ್ಕಿಂತ ಅಧಿಕ. ಆರ್​ಸಿಬಿ ವಿರಾಟ್ ಕೊಹ್ಲಿ ಅವರನ್ನು 21 ಕೋಟಿಗೆ ಉಳಿಸಿಕೊಂಡಿದೆ. ಮುಂಬೈ ಇಂಡಿಯನ್ಸ್​ ರೋಹಿತ್ ಶರ್ಮಾ ಅವರನ್ನು 16.30 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. 

1 ನಿಮಿಷಕ್ಕೆ 5486 ರೂಪಾಯಿ

ರಿಯಲ್ ಮ್ಯಾಡ್ರಿಡ್​ ಪರ ಎಂಬಾಪ್ಪೆ ತನ್ನ ಮೊದಲ ವರ್ಷದಲ್ಲಿ ಅಂದಾಜು 285 ಕೋಟಿ ರೂ.ಗಳ ವೇತನವನ್ನು ಪಡೆಯಲಿದ್ದಾರೆ. ಇದರರ್ಥ ಎಂಬಪೆಗೆ ತಿಂಗಳಿಗೆ 23.7 ಕೋಟಿ ರೂಪಾಯಿ ಸಿಗಲಿದೆ. ಪ್ರತಿದಿನ 79 ಲಕ್ಷ ರೂ ಮತ್ತು 60 ಸೆಕೆಂಡುಗಳಲ್ಲಿ 5,486 ರೂ.ಗಳನ್ನು ಗಳಿಸುತ್ತಾರೆ ಎಂಬಾಪ್ಪೆ. ಅಷ್ಟೆ ಅಲ್ಲದೆ, ಎರಡು ಐಪಿಎಲ್ ತಂಡಗಳ ಪರ್ಸ್​ ಮೊತ್ತಕ್ಕಿಂತ ಅಧಿಕ. ಒಂದು ತಂಡದ ಪರ್ಸ್ ಮೊತ್ತ 120 ಕೋಟಿ.

ಕೈಯಲಿನ್ ಎಂಬಾಪೆ ಸಂಬಳ 
ಪ್ರತಿ ನಿಮಿಷಕ್ಕೆ5,486 ರೂಪಾಯಿ
ಪ್ರತಿ ದಿನಕ್ಕೆ79 ಲಕ್ಷ ರೂಪಾಯಿ
ಪ್ರತಿ ತಿಂಗಳಿಗೆ23.7 ಕೋಟಿ ರೂಪಾಯಿ
ಪ್ರತಿ ವರ್ಷಕ್ಕೆ285 ಕೋಟಿ ರೂಪಾಯಿ

ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ!
ನಿಮಿಷಕ್ಕೆ 5486 ರೂ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಐಪಿಎಲ್ ಒಪ್ಪಂದ ಕೈಲಿಯನ್ ಎಂಬಾಪ್ಪೆ ಒಂದು ತಿಂಗಳ ವೇತನಕ್ಕೆ ಸಮ! (AP)

ರೋಹಿತ್​-ಕೊಹ್ಲಿಗೆ ವಾರ್ಷಿಕ 7 ಕೋಟಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾರ್ಷಿಕ ಕೇಂದ್ರ ಗುತ್ತಿಗೆಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇಬ್ಬರೂ ಕೊಹ್ಲಿ ಮತ್ತು ರೋಹಿತ್ ವರ್ಷಕ್ಕೆ 7+ ಕೋಟಿ ರೂ.ಗಳ ವೇತನ ಪಡೆಯುತ್ತಿದ್ದಾರೆ. ಬ್ಯಾಟಿಂಗ್ ಐಕಾನ್​​ಗಳು ಐಪಿಎಲ್​​ಗಳಲ್ಲಿ ಆಯಾ ತಂಡಗಳ ಪ್ರಮುಖರಾಗಿದ್ದಾರೆ. ರೋಹಿತ್ ಅವರನ್ನು ಮುಂಬೈ (Mumbai Indians) 2011ರಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿ ಉಳಿಸಿಕೊಂಡಿದೆ. 2025ರ ಐಪಿಎಲ್​ಗೆ 16.30 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 21 ಕೋಟಿ ಪಡೆದು 2025ರ ಐಪಿಎಲ್​ಗೆ ಉಳಿದುಕೊಂಡಿದ್ದಾರೆ. ಆದರೆ ಐಪಿಎಲ್ 2022ರ ವೇತನ ಕಡಿತಗೊಳಿಸಿದ್ದರು. ಕೊಹ್ಲಿಯನ್ನು 2018ರಲ್ಲಿ ಆರ್​​ಸಿಬಿ 17 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಆದರೆ 2022ರಲ್ಲಿ 15 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್​ 27 ಕೋಟಿ ಮತ್ತು ಶ್ರೇಯಸ್ ಅಯ್ಯರ್ 26.75 ಕೋಟಿ ಪಡೆಯುವ ಮೂಲಕ ಐಪಿಎಲ್​ನ ದುಬಾರಿ ಆಟಗಾರರು ಎನಿಸಿಕೊಂಡಿದ್ದಾರೆ. ಈ ಇಬ್ಬರು ಎಂಬಾಪ್ಪೆ ಅವರ ಮಾಸಿಕ ವೇತನಕ್ಕಿಂತ ಕೊಂಚ ಹೆ್ಚ್ಚು ಮೊತ್ತವನ್ನು ಪಡೆಯುತ್ತಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.