Dodda Ganesh: 493 ವಿಕೆಟ್ ಕಿತ್ತು ಮೈದಾನದಲ್ಲಿ ಆರ್ಭಟಿಸಿದ್ದ ಕರ್ನಾಟಕದ ಖ್ಯಾತ ಕ್ರಿಕೆಟಿಗ ಬಿಜೆಪಿ ಸೇರ್ಪಡೆ!
- Dodda Ganesh : ನೇರ ಮಾತುಗಳಿಂದಲೇ ಹೆಸರುವಾಸಿಯಾಗಿರುವ ಭಾರತ ಮತ್ತು ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
- Dodda Ganesh : ನೇರ ಮಾತುಗಳಿಂದಲೇ ಹೆಸರುವಾಸಿಯಾಗಿರುವ ಭಾರತ ಮತ್ತು ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
(1 / 7)
ಲೋಕಸಭಾ ಚುನಾವಣೆ ಸಮೀಸುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕದ ಖ್ಯಾತ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ (ದೊಡ್ಡ ನರಸಯ್ಯ ಗಣೇಶ್) ಅವರು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
(2 / 7)
ಏಪ್ರಿಲ್ 5ರಂದು ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
(3 / 7)
ತಮ್ಮ ನೇರ ಮಾತುಗಳಿಂದಲೇ ಹೆಸರು ಮಾಡಿರುವ ದೊಡ್ಡ ಗಣೇಶ್ ಅವರು ರಾಜಕೀಯ ಸೇರುವ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಮೂಲಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
(4 / 7)
ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಂಡೆ. ಕನ್ನಡಿಗರ ಆಶೀರ್ವಾದ ನನ್ನ ಮೇಲೆ ಹೀಗೇ ಇರಲಿ ಎಂದು ಬಯಸುತ್ತೇನೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
(5 / 7)
ಭಾರತದ ಪರ 1 ಏಕದಿನ, 5 ಟೆಸ್ಟ್ ಆಡಿರುವ ದೊಡ್ಡ ಗಣೇಶ್, 6 ವಿಕೆಟ್ ಪಡೆದಿದ್ದಾರೆ. ಇನ್ನು ದೇಶೀಯ ಕ್ರಿಕೆಟ್ನಲ್ಲಿ 104 ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ 365 ವಿಕೆಟ್, 89 ಲೀಸ್ಟ್ ಎ ಪಂದ್ಯಗಳಲ್ಲಿ 128 ವಿಕೆಟ್ ಉರುಳಿಸಿದ್ದಾರೆ. ಫಸ್ಟ್ ಕ್ಲಾಸ್ನಲ್ಲಿ 2023 ರನ್ ಗಳಿಸಿದ್ದಾರೆ.
(6 / 7)
ಸಂಸದೆ ಸುಮಲತಾ ಅಂಬರೀಶ್ ಅವರ ಜೊತೆಗೆ ಮಾಜಿ ಆಟಗಾರ ದೊಡ್ಡ ಗಣೇಶ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಕೂಡ ಕಮಲ ಹಿಡಿದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ.
ಇತರ ಗ್ಯಾಲರಿಗಳು