ಕನ್ನಡ ಸುದ್ದಿ  /  ಕ್ರಿಕೆಟ್  /  ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?

ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?

Ravindra Jadeja : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ಸ್ಟಾರ್​ ಆಲ್​​ರೌಂಡರ್​ ರವೀಂದ್ರ ಜಡೇಜಾ ರನೌಟ್​ ಆಗದಿದ್ದರೂ ಔಟ್ ಕೊಟ್ಟಿದ್ದೇಕೆ? ಇಲ್ಲಿದೆ ವಿವರ.

ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?
ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ; ಕ್ರಿಕೆಟ್ ನಿಯಮ ಹೇಳುವುದೇನು?

2024ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಮತ್ತೊಂದು ವಿವಾದ ದಾಖಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ರನ್ ಚೇಸ್‌ನ 16ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಔಟಾಗಿದ್ದು ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಸಂಜು ಸ್ಯಾಮ್ಸನ್ ಎಸೆದ​ ಥ್ರೋ ವಿಕೆಟ್​ಗೆ ಬೀಳದಿದ್ದರೂ ಔಟ್​ ಕೊಟ್ಟಿದ್ದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.

ಟ್ರೆಂಡಿಂಗ್​ ಸುದ್ದಿ

ಸಂಜು ಸ್ಯಾಮ್ಸನ್ ಅವರ ಸ್ಟ್ರೈಟ್ ಥ್ರೋ ಸ್ಟಾರ್ ಆಲ್​ರೌಂಡರ್ ದೇಹಕ್ಕೆ ಬಡಿಯಿತು. ವಿಕೆಟ್​ ಬೀಳದೆ, ರನೌಟ್​ ಆಗದಿದ್ದರೂ ಚೆಂಡಿನಿಂದ ಪೆಟ್ಟು ತಿಂದ ರವೀಂದ್ರ ಜಡೇಜಾ ಔಟಾಗಿದ್ದೇಕೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದರಲ್ಲೂ ಸಿಎಸ್​ಕೆ ಫ್ಯಾನ್ಸ್ ಅಂಪೈರ್​ಗಳ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಈ ಔಟ್ ಅನ್ನು ಫೀಲ್ಡಿಂಗ್​ಗೆ ಅಡ್ಡಿಪಡಿಸಿದ್ದಕ್ಕೆ ನೀಡಲಾಗಿದೆ. ಅಬ್​ಸ್ಟ್ರಕ್ಟಿಂಗ್ ದ ಫೀಲ್ಡ್ ಎಂಬ ಔಟ್​ಗೆ (OBS) ಗುರಿಯಾಗಿದ್ದಾರೆ. ಐಪಿಎಲ್​ನಲ್ಲಿ ಒಬಿಎಸ್​ ಆದ ಮೊದಲ ಆಟಗಾರ ಎನಿಸಿದ್ದಾರೆ.

ರವೀಂದ್ರ ಜಡೇಜಾ ಔಟಾಗಿದ್ದೇಗೆ?

ಆವೇಶ್​ ಖಾನ್ ಎಸೆದ 16ನೇ ಓವರ್​​​ನ 5ನೇ ಎಸೆತದ ಶಾರ್ಟ್ ಲೆಂಗ್ತ್ ಡೆಲಿವರಿಯನ್ನು ಥರ್ಡ್​ ಮ್ಯಾನ್ ಕಡೆಗೆ ಬಾರಿಸಿದ ರವೀಂದ್ರ ಜಡೇಜಾ, ಒಂದು ರನ್ ಪೂರೈಸಿ ಮತ್ತೊಂದು ರನ್​ಗಾಗಿ ಪಿಚ್​​ನ ಅರ್ಧಭಾಗಕ್ಕೆ ಬಂದೇ ಬಿಟ್ಟರು. ಆಗ ನಾಯಕ ಋತುರಾಜ್​ ಗಾಯಕ್ವಾಡ್, ಜಡ್ಡುಗೆ ಬೇಡವೆಂದು ಸಿಗ್ನಲ್ ಕೊಟ್ಟರು. ಅಷ್ಟರಲ್ಲಾಗಲೇ ಫೀಲ್ಡರ್​ ಚೆಂಡು ಫೀಲ್ಡರ್​ ಕೈಯಿಂದ ವಿಕೆಟ್ ಕೀಪರ್​ ಕೈ ಸೇರಿತ್ತು. ತಕ್ಷಣವೇ ಸಂಜು ಚೆಂಡನ್ನು ನಾನ್​ಸ್ಟೈಕರ್ ವಿಕೆಟ್​ಗೆ ಎಸೆದರು.

ಆದರೆ, ವಿಕೆಟ್ ಕೀಪರ್​ ಕೈ ಸೇರಿದ್ದನ್ನು ನೋಡಿ ಹಿಂದಕ್ಕೆ ಮರಳಿದ ಜಡ್ಡು, ಓಡುವ ದಿಕ್ಕನ್ನು ಬದಲಿಸಿ ಫೀಲ್ಡಿಂಗ್​ಗೆ ಅಡ್ಡಿಪಡಿಸಿದರು. ಸಂಜು ಥ್ರೋ ಮಾಡಿದ್ದು ಎಲ್ಲಿಗೆ ಬೀಳುತ್ತದೆ ಎಂಬ ಅರಿವಿದ್ದರೂ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್​ಗೆ ಅಡ್ಡಿಪಡಿಸಿದರು. ಚೆಂಡು ಕೈಗೆ ಸಿಕ್ಕ ಕೆಲವೇ ಸೆಕೆಂಡ್​ಗಳಲ್ಲಿ ಸ್ಯಾಮ್ಸನ್​, ಥ್ರೋ ಮಾಡಿದರು. ಆದರೆ ಆ ಚೆಂಡು ನೇರವಾಗಿ ಜಡ್ಡುಗೆ ಬಿತ್ತು. ಹೀಗಾಗಿ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಕಾರಣ ಔಟ್ ಎಂದು ಪರಿಗಣಿಸಲಾಯಿತು.

ಅಬ್​ಸ್ಟ್ರಕ್ಟಿಂಗ್ ದ ಫೀಲ್ಡ್ ಔಟ್ ಎಂದರೇನು?

ಕ್ರಿಕೆಟ್ ಕ್ರೀಡೆಯಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಒಂಬತ್ತು ವಿಧಾನಗಳಲ್ಲಿ ಇದು ಒಂದು. ನಿಮಯ 37.2 ರಂತೆ ನಿಯಂತ್ರಣ ಮೀರಿದ ಸಂದರ್ಭಗಳನ್ನು ಹೊರತುಪಡಿಸಿ, ಬ್ಯಾಟರ್ ಔಟಾಗಿದ್ದರೂ ಫೀಲ್ಡಿಂಗ್​ಗೆ ಅಡ್ಡಿಪಡಿಸಿದರೆ ಮತ್ತು ರನೌಟ್, ಕ್ಯಾಚ್ ಅಥವಾ ಇತರೆ ಸಂದರ್ಭದಲ್ಲಿ ಚೆಂಡಿಗೆ ಉದ್ದೇಶಪೂರ್ವಕವಾಗಿ ಪದ ಪ್ರಯೋಗ ಮಾಡುವುದಾಗಲಿ ಅಥವಾ ಆ್ಯಕ್ಷನ್​ ಮೂಲಕ ಅಡ್ಡಿಪಡಿಸಲು ಪ್ರಯತ್ನಿಸಿದರೆ ಆ ಬ್ಯಾಟರ್​​ನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ ಎಂದು ಎಂಸಿಸಿ ಕ್ರಿಕೆಟ್ ನಿಯಮ 37.1.1 ಹೇಳುತ್ತದೆ.

ನಿಯಂತ್ರಣ ಮೀರಿದ ಸಂದರ್ಭಗಳಲ್ಲಿ ಹೊರತುಪಡಿಸಿ ಬೌಲರ್ ನೀಡಿದ ಚೆಂಡನ್ನು ಸ್ವೀಕರಿಸುವ ಸಮಯದಲ್ಲಿ ಅವನು/ಅವಳು ಉದ್ದೇಶಪೂರ್ವಕವಾಗಿ ಬ್ಯಾಟ್ ಹಿಡಿದಿಲ್ಲದ ಕೈಯಿಂದ ಚೆಂಡನ್ನು ಹೊಡೆದರೆ, ಔಟ್ ಕೊಡಲಾಗುತ್ತದೆ ಎಂದು ಎಂಸಿಸಿ ಕ್ರಿಕೆಟ್ ನಿಯಮ 37.1.2 ಹೇಳುತ್ತದೆ. ಹಾಗೆಯೇ ಚೆಂಡನ್ನು ಎರಡು ಬಾರಿ ಹೊಡೆಯಲು ಪ್ರಯತ್ನಿಸುವುದು ಸಹ ಅಪರಾಧ ಎಂದು ನಿಯಮ 34 ಹೇಳುತ್ತದೆ.

ಆರ್​ಆರ್ ವಿರುದ್ಧ ಸಿಎಸ್​ಕೆ ಗೆಲುವು

ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 62ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ಬೌಲರ್​ಗಳಿಗೆ ಪಿಚ್​​ನಲ್ಲಿ ಬ್ಯಾಟಿಂಗ್ ಮಾಡಲು ತತ್ತರಿಸಿದ ಆರ್​ಆರ್​ ಬ್ಯಾಟರ್ಸ್, 20 ಓವರ್​​ಗಳಲ್ಲಿ 141 ರನ್​ ಗಳಿಸಲಷ್ಟೇ ಶಕ್ತರಾದರು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಬ್ಯಾಟರ್ಸ್ ಕೂಡ ರನ್ ಗಳಿಸಲು ಪರದಾಡಿದರು. ಅಂತಿಮವಾಗಿ 19ನೇ ಓವರ್​​ನಲ್ಲಿ ಸಿಎಸ್​ಕೆ ಗೆದ್ದು ಬೀಗಿತು. ಅಲ್ಲದೆ, ಪ್ಲೇಆಫ್​​​ ಆಸೆಯನ್ನೂ ಜೀವಂತವಾಗಿಟ್ಟುಕೊಂಡಿತು.

IPL_Entry_Point