Rajani Praveen:ಸಾಫ್ಟ್‌ವೇರ್‌ ಉದ್ಯಮದಿಂದ ಟೀಚರ್‌ ಆಗಿ ಕೊನೆಗೆ ನಟನೆಗೆ ಬಂದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಸುಪ್ರಿತಾ ಅಲಿಯಾಸ್‌ ರಜನಿ ಪ್ರವೀಣ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rajani Praveen:ಸಾಫ್ಟ್‌ವೇರ್‌ ಉದ್ಯಮದಿಂದ ಟೀಚರ್‌ ಆಗಿ ಕೊನೆಗೆ ನಟನೆಗೆ ಬಂದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಸುಪ್ರಿತಾ ಅಲಿಯಾಸ್‌ ರಜನಿ ಪ್ರವೀಣ್

Rajani Praveen:ಸಾಫ್ಟ್‌ವೇರ್‌ ಉದ್ಯಮದಿಂದ ಟೀಚರ್‌ ಆಗಿ ಕೊನೆಗೆ ನಟನೆಗೆ ಬಂದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಸುಪ್ರಿತಾ ಅಲಿಯಾಸ್‌ ರಜನಿ ಪ್ರವೀಣ್

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಜೊತೆಗೆ ಸುಪ್ರಿತಾ ಕೂಡಾ ನೆಗೆಟಿವ್‌ ಪಾತ್ರಧಾರಿಗಳು. ಕಾವೇರಿ ನಾದಿನಿ ಸುಪ್ರಿತಾ, ಅತ್ತಿಗೆಗೆ ವಿರುದ್ಧ.

ಮಗನನ್ನು ದೂರ ಮಾಡಿದ ಶಾಪ ಎಲ್ಲಿ ನನ್ನನ್ನು ಕಾಡುವುದೋ ಎಂಬ ಚಿಂತೆಯಲ್ಲೇ ಕಾವೇರಿ ದಿನ ದೂಡುತ್ತಿದ್ದಾಳೆ. ಸುಪ್ರಿತಾ, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಕಾವೇರಿಗೆ ವಿರುದ್ಧವಾಗಿ ನಿಂತಿದ್ದಾಳೆ. ಮನೆಯವರೆಲ್ಲಾ ಸೇರಿ ಸುಪ್ರಿತಾಳನ್ನು ಹೊರಹಾಕಿದಾಗ ಆಕೆಯ ಕಷ್ಟಕ್ಕೆ ಬಂದ ಲಕ್ಷ್ಮಿ ಬಗ್ಗೆ ಸುಪ್ರಿತಾ ಪ್ರೀತಿ ತೋರುತ್ತಿದ್ದಾಳೆ. 
icon

(1 / 14)

ಧಾರಾವಾಹಿಯಲ್ಲಿ ಸುಪ್ರಿತಾ ಪಾತ್ರ ಮಾಡುತ್ತಿರುವ ನಟಿಯ ನಿಜವಾದ ಹೆಸರು ರಜನಿ ಪ್ರವೀಣ್‌. 
icon

(2 / 14)

ಧಾರಾವಾಹಿಯಲ್ಲಿ ಸುಪ್ರಿತಾ ಪಾತ್ರ ಮಾಡುತ್ತಿರುವ ನಟಿಯ ನಿಜವಾದ ಹೆಸರು ರಜನಿ ಪ್ರವೀಣ್‌. 

ಸುಪ್ರಿತಾ, ನೆಗೆಟಿವ್‌ ಶೇಡ್‌ನಲ್ಲಿ ನಟಿಸಿದರೂ ಬಹಳಷ್ಟು ಕಿರುತೆರೆ ಪ್ರಿಯರಿಗೆ ಆಕೆ ಅಚ್ಚುಮೆಚ್ಚು, ಇನ್ನೂ ಕೆಲವರಿಗೆ ಸುಪ್ರಿತಾ ಎಂದರೆ ಆಗುವುದಿಲ್ಲ. 
icon

(3 / 14)

ತಾನು ನಟಿಯಾಗಬೇಕು ಎಂದು ಸುಪ್ರಿತಾ ಎಂದಿಗೂ ಕನಸು ಕಂಡವರಲ್ಲ, ಆಕೆಯ ಕುಟುಂಬದಲ್ಲಿ ಯಾರಿಗೂ ಬಣ್ಣದ ಲೋಕದ ಪರಿಚಯ ಕೂಡಾ ಇಲ್ಲ. 
icon

(4 / 14)

ರಜನಿ ಪ್ರವೀಣ್‌ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಆಕೆ ವೃತ್ತಿ ಆರಂಭಿಸಿದ್ದು ಸಾಪ್ಟ್‌ವೇರ್‌ ಉದ್ಯೋಗಿಯಾಗಿ. 
icon

(5 / 14)

ಸಾಫ್ಟ್‌ವೇರ್‌ ಕ್ಷೇತ್ರ ಆಗಿ ಬರದ ಕಾರಣ ರಜನಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. 
icon

(6 / 14)

ಆತ್ಮೀಯರೊಬ್ಬರ ಸಲಹೆ ಮೇರೆಗೆ ನಟನೆ ಬಗ್ಗೆ ಒಲವು ಬೆಳೆಸಿಕೊಂಡ ರಜನಿ ಉಷಾ ಭಂಡಾರಿ ಅವರ ನಟನಾ ಶಾಲೆಗೆ ಸೇರಿದರು. ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾದರು. 
icon

(7 / 14)

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರಾವಾಹಿ ಮೂಲಕ ರಜನಿ ಕಿರುತೆರೆಗೆ ಎಂಟ್ರಿ ಕೊಟ್ಟರು. 
icon

(8 / 14)

ರಂಗನಾಯಕಿ, ರಾಜಿ, ಮಹಾದೇವಿ, ತಮಿಳಿನ ಅಮ್ಮನ್‌ ಸೇರಿ ರಜನಿ ಪ್ರವೀಣ್‌ ಇದುವರೆಗೂ ಸುಮಾರು 7 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಅವರನ್ನು ಜನರು ಗುರುತಿಸುವಂತೆ ಮಾಡಿದೆ. 
icon

(9 / 14)

ಮೊದಲು 120 ಕಿಲೋ ತೂಕ ಇದ್ದ ರಜನಿ ನಂತರ ನಟನೆಗಾಗಿ ಭಾರೀ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ. 
icon

(10 / 14)

ಮೊದಲು 120 ಕಿಲೋ ತೂಕ ಇದ್ದ ರಜನಿ ನಂತರ ನಟನೆಗಾಗಿ ಭಾರೀ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದಾರೆ. 

ರಜನಿ ಪ್ರವೀಣ್‌ ವಿವಾಹಿತೆ, ಅವರಿಗೆ 10 ವರ್ಷದ ಮಗ ಇದ್ದಾನೆ. ಪತಿ ಹಾಗೂ ಮನೆಯವರು ರಜನಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 
icon

(11 / 14)

ಕಿರುತೆರೆಯ ಬ್ಯೂಟಿಫುಲ್‌ ವಿಲನ್‌ ರಜನಿ ಅವರಿಗೆ ಇನ್ನಷ್ಟು ಅವಕಾಶಗಳು ದೊರೆತು, ಇನ್ನೂ ಹೆಚ್ಚಿನ ಖ್ಯಾತಿ ಗಳಿಸಲಿ ಎಂದು ಹಾರೈಸೋಣ. 
icon

(12 / 14)

ತಂದೆ ತಾಯಿಯೊಂದಿಗೆ ರಜನಿ ಪ್ರವೀಣ್
icon

(13 / 14)

ತಂದೆ ತಾಯಿಯೊಂದಿಗೆ ರಜನಿ ಪ್ರವೀಣ್

ಪ್ರೀತಿಯ ಅತ್ತಿಯನ್ನು ಮಗುವಂತೆ ಎತ್ತಿ ಹಿಡಿದ ರಜನಿ
icon

(14 / 14)

ಇತರ ಗ್ಯಾಲರಿಗಳು