Vivo Y300 vs Oppo F27: 25 ಸಾವಿರ ರೂಗಿಂತ ಕಡಿಮೆ ದರದ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  Vivo Y300 Vs Oppo F27: 25 ಸಾವಿರ ರೂಗಿಂತ ಕಡಿಮೆ ದರದ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ

Vivo Y300 vs Oppo F27: 25 ಸಾವಿರ ರೂಗಿಂತ ಕಡಿಮೆ ದರದ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ

Vivo Y300 vs Oppo F27: ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸಿದರೆ ವಿವೊ ವೈ300 ಮತ್ತು ಒಪ್ಪೊ ಎಫ್‌27ನಲ್ಲಿ ಯಾವ ಸ್ಮಾರ್ಟ್‌ಫೋನ್‌ ಉತ್ತಮವೆಂದು ಪರಿಶೀಲಿಸಬಹುದು. ಇವೆರಡು ಸ್ಮಾರ್ಟ್‌ಫೋನ್‌ಗಳ ದರ 25 ಸಾವಿರ ರೂಪಾಯಿಗಿಂತ ಕಡಿಮೆ ಇದೆ.

Vivo Y300 vs Oppo F27: ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ
Vivo Y300 vs Oppo F27: ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಹೋಲಿಕೆ (Vivo)

Vivo Y300 vs Oppo F27: ವಿವೊ ಮತ್ತು ಒಪ್ಪೊ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಸಾಕಷ್ಟು ಬೇಡಿಕೆಯಿದೆ. ಇವೆರಡು ಕಂಪನಿಗಳು ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ವಿವೊ ಕಂಪನಿಯು ಇತ್ತೀಚೆಗೆ ತನ್ನ ವೈ ಸರಣಿಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಇದು 25 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಖರೀದಿಸಲು ಉತ್ತಮ ಆಯ್ಕೆಯಾಗಿದೆ. ಆದರೆ, ವಿವೊ ವೈ300 ಜತೆಗೆ ಸ್ಪರ್ಧಿಸಲು ಅದೇ ರೀತಿಯ ಬಜೆಟ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಇವೆ. ವಿವೈ ವೈ300 ಜತೆಗೆ ನಾವಿಲ್ಲಿ ಒಪ್ಪೊ ಎಫ್‌27 ಸ್ಮಾರ್ಟ್‌ಫೋನ್‌ ಹೋಲಿಕೆ ಮಾಡಿದ್ದೇವೆ.

ವಿವೋ ವೈ300 ವರ್ಸಸ್‌ ಒಪ್ಪೊ ಎಫ್‌27

ವಿನ್ಯಾಸ ಮತ್ತು ಪ್ರದರ್ಶನ: ವಿವೊ ವೈ300 ಸ್ಮಾರ್ಟ್‌ಫೋನ್‌ ಪ್ಲಾಸ್ಟಿಕ್‌ ಬಾಡಿ ಮತ್ತು ಬಾಕ್ಸ್‌ ವಿನ್ಯಾಸ ಹೊಂದಿದೆ. ಇದು ಹೊಸ ವಿನ್ಯಾಸದೊಂದಿಗೆ ಆಗಮಿಸಿದೆ. ಅನೇಕರು ಸ್ಮಾರ್ಟ್‌ಫೋನ್‌ನ ದಪ್ಪವನ್ನು ಇಷ್ಟಪಡದೆ ಇರಬಹುದು. ಆದರೆ, ಇದು ಸಾಕಷ್ಟು ಗಟ್ಟಿಮುಟ್ಟಾಗಿದೆ. ಹಗುರವೂ ಇದೆ. ಮತ್ತೊಂದೆಡೆ, ಒಪ್ಪೊ ಎಫ್‌27 ವೃತ್ತಾಕಾರದ ಕ್ಯಾಮೆರಾ ಮಾಡೆಲ್‌ನೊಂದಿಗೆ ಬಂದಿದೆ. ಇದು ಕೂಡ ಪ್ಲಾಸ್ಟಿಕ್‌ ಬಾಡಿ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಹೆಚ್ಚು ಪ್ರೀಮಿಯಂ ಆಗಿ ಕಾಣಿಸುತ್ತದೆ. ಎರಡು ಸ್ಮಾರ್ಟ್‌ಫೋನ್‌ಗಳು ಧೂಳು ಮತ್ತು ನೀರಿನ ರಕ್ಷಣೆಗಾಗಿ ಐಪಿ64 ರೇಟಿಂಗ್ ಪಡೆದಿವೆ.

ಡಿಸ್‌ಪ್ಲೇ ಹೇಗಿದೆ: ವಿವೊ ವೈ300 ಸ್ಮಾರ್ಟ್‌ಫೋನ್‌ 6.67-ಇಂಚಿನ ಎಫ್‌ಎಚ್‌ಡಿ+ ಅಮೊಲೆಡ್‌ ಡಿಸ್‌ಪ್ಲೇ ಜತೆಗೆ 120 ಹಟ್ಸ್‌ ರಿಫ್ರೆಶ್ ದರ ಮತ್ತು 1800nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಒಪ್ಪೊ ಸ್ಮಾರ್ಟ್‌ಫೋನ್‌ 6.67-ಇಂಚಿನ ಎಫ್‌ಎಚ್‌ಡಿ+ ಅಮೊಲೆಡ್‌ ಡಿಸ್‌ಪ್ಲೇ ಜತೆಗೆ 120 ಹಟ್ಸ್‌ ರಿಫ್ರೆಶ್ ರೇಟ್ ಮತ್ತು 2100nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ.

ಕಾರ್ಯಕ್ಷಮತೆ: ವಿವೊ ವೈ300ನಲ್ಲಿ ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್‌ 4 ಜೆನ್‌ 2 ಚಿಪ್ 8 ಜಿಬಿ ರಾಮ್‌ ಇದೆ. ಇನ್ನೊಂದೆಡೆ ಒಪ್ಪೊ ಎಫ್‌27 ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಜೊತೆಗೆ 8 ಜಿಬಿ ರಾಮ್‌ ಹೊಂದಿದೆ. ವಿವೊ ಸಾಧನವು ಫನ್‌ಟಚ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದೆ. ಒಪ್ಪೊ ಸ್ಮಾರ್ಟ್‌ಫೋನ್‌ನಲ್ಲಿ ಕಲರ್‌ ಓಎಸ್‌ ಇದೆ. ಇವೆರಡೂ ಆಂಡ್ರಾಯ್ಡ್‌ 14 ಆಪರೇಟಿಂಗ್‌ ಸಿಸ್ಟಮ್‌ ಹೊಂದಿವೆ.

ಕ್ಯಾಮೆರಾ: ಫೋಟೋ ತೆಗೆಯಲು ವಿವೊ ವೈ300 50 ಮೆಗಾ ಫಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾ ಫಿಕ್ಸೆಲ್‌ನ ಡೆಪ್ತ್ ಸೆನ್ಸಾರ್ ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಒಪ್ಪೊ ಎಫ್‌27 ಸ್ಮಾರ್ಟ್‌ಫೋನ್‌ ಡ್ಯುಯಲ್-ಕ್ಯಾಮೆರಾ ಸಿಸ್ಟಮ್‌ ಹೊಂದಿದೆ. 50 ಮೆಗಾ ಫಿಕ್ಸೆಲ್‌ ಪ್ರೈಮರಿ ಕ್ಯಾಮೆರಾ ಮತ್ತು 2 ಮೆಗಾ ಫಿಕ್ಸೆಲ್‌ ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು 32 ಮೆಗಾಫಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿವೆ.

ಬ್ಯಾಟರಿ: ವಿವೊ ವೈ300ಮತ್ತು ಒಪ್ಪೊ ಎಫ್‌27, ಎರಡೂ 5000 ಎಂಎಎಚ್‌ ಬ್ಯಾಟರಿ ಹೊಂದಿವೆ. ಆದರೆ, ವಿವೊ 80W ಚಾರ್ಜಿಂಗ್ ಬೆಂಬಲ ಹೊಂದಿದೆ. ಒಪ್ಪೊದಲ್ಲಿ 45 ಚಾರ್ಜಿಂಗ್ ಇದೆ. ಇವೆರಡರಲ್ಲಿ ವಿವೊ ವೈ300 ಚಾರ್ಜಿಂಗ್‌ನ ವೇಗ ಹೆಚ್ಚಿರುತ್ತದೆ.

ಬೆಲೆ: ವಿವೊ ವೈ300 ಸ್ಮಾರ್ಟ್‌ಫೋನ್‌(8 ಜಿಬಿ ರಾಮ್‌ ಮತ್ತು 12 ಜಿಬಿ ಸ್ಟೋರೇಜ್‌) ಆರಂಭಿಕ ದರ 21,999 ರೂಪಾಯಿ ಇದೆ. ಒಪ್ಪೊ ಎಫ್‌27 ಬೆಲೆ (8 ಜಿಬಿ ರಾಮ್‌ ಮತ್ತು 12 ಜಿಬಿ ಸ್ಟೋರೇಜ್‌) 22,499 ರೂಪಾಯಿ ಇದೆ.

Whats_app_banner