Rudhiram Movie: ರಾಜ್ ಬಿ. ಶೆಟ್ಟಿ, ಅಪರ್ಣಾ ಬಾಲಮುರಳಿ ಅಭಿನಯದ ರುಧಿರಂ ಸಿನಿಮಾ ಬಿಡುಗಡೆ ದಿನಾಂಕ ಹೀಗಿದೆ
- Rudhiram Movie: ನಟ ರಾಜ್ ಬಿ. ಶೆಟ್ಟಿ, ಕನ್ನಡದಲ್ಲಿ ‘45’, ‘ರಕ್ಕಸಪುರದೊಳ್’, ‘ರಾಚಯ್ಯ’ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಅವರು ಮಲಯಾಳಂ ಮತ್ತು ಹಿಂದಿಗೂ ಹೋಗಿ ಬರುತ್ತಿರುತ್ತಾರೆ. ಇದೀಗ ಅವರ ಚಿತ್ರವೊಂದು ಡಿ. 13ರಂದು ಹೆಚ್ಚು ಸದ್ದುಗದ್ದಲವಿಲ್ಲದೆ ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿದೆ.

(1 / 5)
ಇದು ರಾಜ್ ಬಿ ಶೆಟ್ಟಿ ಅವರ ಕನ್ನಡ ಚಿತ್ರವಲ್ಲ. ಬದಲಿಗೆ ‘ರುಧಿರಂ’ ಎಂಬ ಮಲಯಾಳಂ ಚಿತ್ರ. ವರ್ಷದ ಹಿಂದೆ ರಾಜ್ ಶೆಟ್ಟಿ, ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿ ಇತ್ತು. ಈ ಪೈಕಿ ‘ಟರ್ಬೋ’ ಮತ್ತು ‘ಕೊಂಡಂ’ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ.
(2 / 5)
ಇದೀಗ, ‘ರುಧಿರಂ’ ಸಹ ಇದೇ ಡಿಸೆಂಬರ್ 13ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಬರೀ ಮಲಯಾಳಂ ಅಷ್ಟೇ ಅಲ್ಲ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗುತತ್ತಿದೆ.
(3 / 5)
‘ರುಧಿರಂ’ ಒಂದು ಚಿತ್ರ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ರಾಜ್ ಶೆಟ್ಟಿ ಜೊತೆಗೆ ಅಪರ್ಣಾ ಬಾಲಮುರಳಿ ಸಹ ನಟಿಸುತ್ತಿದ್ದಾರೆ. ರೈಸಿಂಗ್ ಸನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ವಿ.ಎಸ್. ಲಾಲನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
(4 / 5)
ಜಿಶೋ ಲಾನ್ ಆ್ಯಂಟೊನಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ‘The axe forgets, but the tree remembers’ ಎಂಬ ಅಡಿಬರಹವಿದೆ. ಅಂದರೆ, ಕೊಡಲಿ ಮರೆತರೂ ಮರ ಮರೆಯುವುದಿಲ್ಲ ಎಂದರ್ಥ.
ಇತರ ಗ್ಯಾಲರಿಗಳು