Sniffers Dog in Forest Service: ಕರ್ನಾಟಕದ ಹುಲಿ ಯೋಜನೆ ಅರಣ್ಯ ಪ್ರದೇಶದಲ್ಲಿ ಶ್ವಾನ ದಳದ ಗಸ್ತು; ಬಂದಿವೆ ಬಗೆಬಗೆಯ ಶ್ವಾನಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sniffers Dog In Forest Service: ಕರ್ನಾಟಕದ ಹುಲಿ ಯೋಜನೆ ಅರಣ್ಯ ಪ್ರದೇಶದಲ್ಲಿ ಶ್ವಾನ ದಳದ ಗಸ್ತು; ಬಂದಿವೆ ಬಗೆಬಗೆಯ ಶ್ವಾನಗಳು

Sniffers Dog in Forest Service: ಕರ್ನಾಟಕದ ಹುಲಿ ಯೋಜನೆ ಅರಣ್ಯ ಪ್ರದೇಶದಲ್ಲಿ ಶ್ವಾನ ದಳದ ಗಸ್ತು; ಬಂದಿವೆ ಬಗೆಬಗೆಯ ಶ್ವಾನಗಳು

  • Sniffers Dog in Forest Service: ಭಾರತದಲ್ಲಿಯೇ ವ್ಯವಸ್ಥಿತ ಶ್ವಾನದಳ ಹಾಗೂ ಸಿಬ್ಬಂದಿ ತರಬೇತಿ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಮಾದರಿಯಾಗಿದೆ. ಕರ್ನಾಟಕದ ಹುಲಿ ಯೋಜನೆ ಪ್ರದೇಶಗಳಲ್ಲಿ ಶ್ವಾನದಳ ಬಲಪಡಿಸಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯ ಹಿರಿಮೆಗೆ ಮತ್ತೊಂದು ವಿಶೇಷತೆ ಸೇರ್ಪಡೆಯಾಗಿದೆ. ಅದು ಕರ್ನಾಟಕ ಅರಣ್ಯ ಇಲಾಖೆಯ ಶ್ವಾನ ದಳ. ತನಿಖೆ ಹಾಗೂ ವಿಚಕ್ಷಣೆ, ತರಬೇತಿ ನೀಡಲು ಬಂಡೀಪುರದಲ್ಲಿ ಪ್ರತ್ಯೇಕ ಘಟಕವೇ ರಚನೆಯಾಗಿದ್ದು, ಶ್ವಾನಗಳು ಬಂದಿವೆ.
icon

(1 / 7)

ಬಂಡೀಪುರದಲ್ಲಿ ರಾಣಾ ಶ್ವಾನವಿತ್ತು. ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಸಂಬಂಧಿತ ಅಪರಾಧವನ್ನು ಪತ್ತೆಹಚ್ಚುವಲ್ಲಿ ಮತ್ತು ಮುನ್ನೆಚ್ಚರಿಕೆ ವಹಿಸುವಲ್ಲಿ 8 ವರ್ಷಗಳ ಶ್ಲಾಘನೀಯ ಸೇವೆಯ ನಂತರ ವಯೋ  ಸಂಬಂಧಿತ ಕಾಯಿಲೆಗಳಿಂದಾಗಿ ಕಳೆದ ವರ್ಷ ಸಾವನ್ನಪ್ಪಿತ್ತು. ಬಳಿಕ ಬಂಡೀಪುರ ಹುಲಿ ಯೋಜನೆ ಪ್ರದೇಶದಲ್ಲಿ ದ್ರೋಣ ಎನ್ನುವ ಸ್ನಿಫರ್ ಶ್ವಾನವೊಂದಿತ್ತು. ಈಗ  ಮತ್ತಷ್ಟು ಶ್ವಾನಗಳು ಅರಣ್ಯ ಇಲಾಖೆ ಸೇರಿಕೊಂಡಿವೆ.
icon

(2 / 7)

ಕರ್ನಾಟಕ ಹುಲಿ ಯೋಜನೆ ನಿರ್ದೇಶಕರಾಗಿರುವ ಡಾ.ರಮೇಶ್‌ ಕುಮಾರ್‌ ವಿಶೇಷ ಮುತುವರ್ಜಿ ವಹಿಸಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಬಂಡೀಪುರದಲ್ಲಿ ಶ್ವಾನ ಘಟಕ ವಿಸ್ತರಿಸಿದ್ದಾರೆ.
icon

(3 / 7)

ಕರ್ನಾಟಕ ಅರಣ್ಯ ಇಲಾಖೆಯ ಈ ವಿನೂತನ ಪ್ರಯತ್ನವು ಯಾವುದೇ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದಲ್ಲೇ ಮೊದಲನೆಯದು.20 ಸಿಬ್ಬಂದಿಗಳು (ಸ್ನಿಫರ್ ಡಾಗ್ ಕೀಪರ್ಸ್) ಬಂಡೀಪುರ ಟೈಗರ್ ರಿಸೆಟ್ವೆಯ ಮೆಲುಕಾಮನಹಳ್ಳಿ ಅಡ್ಮಿನ್ ಬ್ಲಾಕ್‌ನಲ್ಲಿ ವರದಿ ಮಾಡಿದ್ದಾರೆ. ಅವರು 10 ತಿಂಗಳ ಕಾಲ ಬಂಡೀಪುರದಲ್ಲಿ ಉಳಿದು ತರಬೇತಿ ಪಡೆಯುತ್ತಾರೆ.
icon

(4 / 7)

10 ತಿಂಗಳ ತರಬೇತಿಯ ನಂತರ ಸಿಬ್ಬಂದಿಯನ್ನು ಆಯಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅಂದರೆ ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ,  ಕಾಳಿ ಪ್ರದೇಶದಲ್ಲಿನ ಬೇಟೆ ಪ್ರಕರಣ, ಅಕ್ರಮ ಮರ ಕಡಿಯುವ ಪ್ರಕರಣಗಳಂತಹ ಯಾವುದೇ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ಪತ್ತೆಹಚ್ಚಲು ಮತ್ತು  ವನ್ಯಜೀವಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಗುತ್ತದೆ. ಈ ತರಬೇತಿ ಕೇಂದ್ರವು ಪ್ರತಿ ವರ್ಷ 10  ಶ್ವಾನಗಳಿಗೆ ಇಡೀ ಕರ್ನಾಟಕ ರಾಜ್ಯಕ್ಕೆ ಅರಣ್ಯ ಮತ್ತು ವನ್ಯಜೀವಿಗಳ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ತರಬೇತಿ ನೀಡುತ್ತದೆ.
icon

(5 / 7)

ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಕರ್ನಾಟಕ ಹುಲಿ  ಯೋಜನೆ ನಿರ್ದೇಶಕ ಡಾ.ಪಿ. ರಮೇಶ್‌ ಕುಮಾರ್‌ ಶ್ವಾನದಳವನ್ನು ಬಲಪಡಿಸುವ ಯೋಜನೆ ರೂಪಿಸಿ ಅನುಮತಿ ಪಡೆದಿದ್ದಾರೆ. ಈಗಾಗಲೇ ಶ್ವಾನದಳ ಹೊಂದಿದ್ದ ಬಂಡೀಪುರದಲ್ಲಿಯೇ ತರಬೇತಿ ಕೇಂದ್ರವನ್ನು ಆರಂಭಿಸುವ ಯೋಜನೆ ರೂಪಿಸಿ ಇದನ್ನು ಜಾರಿಗೆ ತಂದಿದ್ದಾರೆ. ಸುಸಜ್ಜಿತ ಘಟಕವನ್ನು ಬಂಡೀಪುರದಲ್ಲಿ ಸಿಎಫ್‌ ಡಾ.ಮಾಲತಿಪ್ರಿಯ ಉದ್ಘಾಟಿಸಿದರು.
icon

(6 / 7)

ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಅವರು ಬಂಡೀಪುರದಲ್ಲಿ ಆರಂಭಿಸಿರುವ ಶ್ವಾನ ದಳ ತರಬೇತಿ ಕೇಂದ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
icon

(7 / 7)

ಇತರ ಗ್ಯಾಲರಿಗಳು