Tech CEOs: ಭಾರತೀಯ ಮೂಲದ 10 ಪವರ್‌ಫುಲ್‌ ಸಿಇಒಗಳು, ಸುಂದರ್‌ ಪಿಚೈ, ಅರವಿಂದ್‌ ಕೃಷ್ಣ.. ಪಟ್ಟಿಯಲ್ಲಿ ಇನ್ಯಾರಿದ್ದಾರೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tech Ceos: ಭಾರತೀಯ ಮೂಲದ 10 ಪವರ್‌ಫುಲ್‌ ಸಿಇಒಗಳು, ಸುಂದರ್‌ ಪಿಚೈ, ಅರವಿಂದ್‌ ಕೃಷ್ಣ.. ಪಟ್ಟಿಯಲ್ಲಿ ಇನ್ಯಾರಿದ್ದಾರೆ ನೋಡಿ

Tech CEOs: ಭಾರತೀಯ ಮೂಲದ 10 ಪವರ್‌ಫುಲ್‌ ಸಿಇಒಗಳು, ಸುಂದರ್‌ ಪಿಚೈ, ಅರವಿಂದ್‌ ಕೃಷ್ಣ.. ಪಟ್ಟಿಯಲ್ಲಿ ಇನ್ಯಾರಿದ್ದಾರೆ ನೋಡಿ

Indian-origin tech CEOs List: ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಡೋಬ್‌ನಂತಹ ಪ್ರಮುಖ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಒಗಳು ಜಾಗತಿಕವಾಗಿ ಗಮನ ಸೆಳೆಯುತ್ತಿದ್ದಾರೆ. ಅಂತಹ 10 ಸಿಇಒಗಳ ವಿವರ ಇಲ್ಲಿದೆ.

ಸುಂದರ್ ಪಿಚೈ: ಸುಂದರ್ ಪಿಚೈ ಗೂಗಲ್ ಮತ್ತು ಅದರ ಮಾತೃ ಕಂಪನಿ ಆಲ್ಫಾಬೆಟ್ ಮುಖ್ಯಸ್ಥರಾಗಿದ್ದಾರೆ.  ಇವರು 2004ರಲ್ಲಿ ಗೂಗಲ್‌ನಲ್ಲಿ ಉದ್ಯೋಗ ಆರಂಭಿಸಿದರು. ಕ್ರೋಮ್‌ ಮತ್ತು ಆಂಡ್ರಾಯ್ಡ್‌ನಂತಹ ಉತ್ಪನ್ನಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಐಐಟಿ ಖರಗ್‌ಪುರ, ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.
icon

(1 / 10)

ಸುಂದರ್ ಪಿಚೈ: ಸುಂದರ್ ಪಿಚೈ ಗೂಗಲ್ ಮತ್ತು ಅದರ ಮಾತೃ ಕಂಪನಿ ಆಲ್ಫಾಬೆಟ್ ಮುಖ್ಯಸ್ಥರಾಗಿದ್ದಾರೆ.  ಇವರು 2004ರಲ್ಲಿ ಗೂಗಲ್‌ನಲ್ಲಿ ಉದ್ಯೋಗ ಆರಂಭಿಸಿದರು. ಕ್ರೋಮ್‌ ಮತ್ತು ಆಂಡ್ರಾಯ್ಡ್‌ನಂತಹ ಉತ್ಪನ್ನಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಐಐಟಿ ಖರಗ್‌ಪುರ, ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.(Reuters)

ಸತ್ಯ ನಾಡೆಲ್ಲಾ: ಸತ್ಯ ನಾಡೆಲ್ಲಾ ಅವರು 2014 ರಿಂದ ಮೈಕ್ರೋಸಾಫ್ಟ್ ಸಿಇಒ ಆಗಿದ್ದಾರೆ. ಅವರು 1997ರಲ್ಲಿ  ಕಂಪನಿಗೆ ಸೇರಿದರು. ಕ್ಲೌಡ್‌ ಕಂಪ್ಯೂಟಿಂಗ್‌ಗೆ ಶಿಫ್ಟ್‌ ಆದರು. ಇರು ಹೈದರಾಬಾದ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್  ಪದವಿ ಪಡೆದಿದ್ದಾರೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
icon

(2 / 10)

ಸತ್ಯ ನಾಡೆಲ್ಲಾ: ಸತ್ಯ ನಾಡೆಲ್ಲಾ ಅವರು 2014 ರಿಂದ ಮೈಕ್ರೋಸಾಫ್ಟ್ ಸಿಇಒ ಆಗಿದ್ದಾರೆ. ಅವರು 1997ರಲ್ಲಿ  ಕಂಪನಿಗೆ ಸೇರಿದರು. ಕ್ಲೌಡ್‌ ಕಂಪ್ಯೂಟಿಂಗ್‌ಗೆ ಶಿಫ್ಟ್‌ ಆದರು. ಇರು ಹೈದರಾಬಾದ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್  ಪದವಿ ಪಡೆದಿದ್ದಾರೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.(PTI)

ನೀಲ್ ಮೋಹನ್: ಗೂಗಲ್‌ನಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ ಬಳಿಕ ನೀಲ್ ಮೋಹನ್ ಯೂಟ್ಯೂಬ್ ಸಿಇಒ ಆದರು. ಅಲ್ಲಿ ಅವರು ಜಾಹೀರಾತು ವಿಭಾಗದತ್ತ ಗಮನಹರಿಸಿದರು. ಮೋಹನ್  ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.  
icon

(3 / 10)

ನೀಲ್ ಮೋಹನ್: ಗೂಗಲ್‌ನಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ ಬಳಿಕ ನೀಲ್ ಮೋಹನ್ ಯೂಟ್ಯೂಬ್ ಸಿಇಒ ಆದರು. ಅಲ್ಲಿ ಅವರು ಜಾಹೀರಾತು ವಿಭಾಗದತ್ತ ಗಮನಹರಿಸಿದರು. ಮೋಹನ್  ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.  (Philip Pacheco/Bloomberg)

ಶಂತನು ನಾರಾಯಣ್: ಶಂತನು ನಾರಾಯಣ್ 2007ರಿಂದ ಅಡೋಬ್ ಸಿಇಒ ಆಗಿದ್ದಾರೆ. ಅಡೋಬ್‌ ಜತೆ ಇವರ ಪ್ರಯಾಣವು 1998ರಲ್ಲಿ ಪ್ರಾರಂಭವಾಯಿತು. ಇದಕ್ಕೂ ಮೊದಲು ಇವರು ಆಪಲ್ ಮತ್ತು ಸಿಲಿಕಾನ್ ಗ್ರಾಫಿಕ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದ ಇವರು ಅಮೆರಿಕದಲ್ಲಿ ಶಿಕ್ಷಣ ಮುಂದುವರೆಸಿದ್ದರು.
icon

(4 / 10)

ಶಂತನು ನಾರಾಯಣ್: ಶಂತನು ನಾರಾಯಣ್ 2007ರಿಂದ ಅಡೋಬ್ ಸಿಇಒ ಆಗಿದ್ದಾರೆ. ಅಡೋಬ್‌ ಜತೆ ಇವರ ಪ್ರಯಾಣವು 1998ರಲ್ಲಿ ಪ್ರಾರಂಭವಾಯಿತು. ಇದಕ್ಕೂ ಮೊದಲು ಇವರು ಆಪಲ್ ಮತ್ತು ಸಿಲಿಕಾನ್ ಗ್ರಾಫಿಕ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದ ಇವರು ಅಮೆರಿಕದಲ್ಲಿ ಶಿಕ್ಷಣ ಮುಂದುವರೆಸಿದ್ದರು.(Bloomberg)

ಅಜಯ್ ಬಂಗಾ: ಅಜಯ್ ಬಂಗಾ ಪ್ರಸ್ತುತ ವಿಶ್ವ ಬ್ಯಾಂಕ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಮಾಸ್ಟರ್ ಕಾರ್ಡ್ ಸಿಇಒ ಆಗಿ ಸೇವೆ ಸಲ್ಲಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಮತ್ತು ಐಐಎಂ ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದಿರುವ ಬಂಗಾ ಸಿಟಿಗ್ರೂಪ್ ಮತ್ತು ನೆಸ್ಲೆ ಇಂಡಿಯಾದಲ್ಲಿ  ಪ್ರಮುಖ ಹುದ್ದೆಗಳಲ್ಲಿದ್ದರು. 
icon

(5 / 10)

ಅಜಯ್ ಬಂಗಾ: ಅಜಯ್ ಬಂಗಾ ಪ್ರಸ್ತುತ ವಿಶ್ವ ಬ್ಯಾಂಕ್ ಅನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಮಾಸ್ಟರ್ ಕಾರ್ಡ್ ಸಿಇಒ ಆಗಿ ಸೇವೆ ಸಲ್ಲಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಮತ್ತು ಐಐಎಂ ಅಹಮದಾಬಾದ್‌ನಿಂದ ಎಂಬಿಎ ಪದವಿ ಪಡೆದಿರುವ ಬಂಗಾ ಸಿಟಿಗ್ರೂಪ್ ಮತ್ತು ನೆಸ್ಲೆ ಇಂಡಿಯಾದಲ್ಲಿ  ಪ್ರಮುಖ ಹುದ್ದೆಗಳಲ್ಲಿದ್ದರು. (Bloomberg)

ಅರವಿಂದ್ ಕೃಷ್ಣ: ಅರವಿಂದ್ ಕೃಷ್ಣ ಅವರು 2020ರಿಂದ ಐಬಿಎಂ ಸಿಇಒ ಆಗಿದ್ದಾರೆ.1990ರಲ್ಲಿ ಐಬಿಎಂಗೆ ಸೇರಿದ ಅವರು ಕ್ಲೌಡ್ ಮತ್ತು ಕಾಗ್ನಿಟಿವ್ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.  ಐಐಟಿ ಕಾನ್ಪುರದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 
icon

(6 / 10)

ಅರವಿಂದ್ ಕೃಷ್ಣ: ಅರವಿಂದ್ ಕೃಷ್ಣ ಅವರು 2020ರಿಂದ ಐಬಿಎಂ ಸಿಇಒ ಆಗಿದ್ದಾರೆ.1990ರಲ್ಲಿ ಐಬಿಎಂಗೆ ಸೇರಿದ ಅವರು ಕ್ಲೌಡ್ ಮತ್ತು ಕಾಗ್ನಿಟಿವ್ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ.  ಐಐಟಿ ಕಾನ್ಪುರದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. (REUTERS)

ವಿವೇಕ್ ಶಂಕರನ್: ವಿವೇಕ್ ಶಂಕರನ್ 2019ರಲ್ಲಿ ಆಲ್ಬರ್ಟ್ಸನ್ ಸಿಇಒ ಆಗಿ ನೇಮಕಗೊಂಡರು. ಮಿಚಿಗನ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಜಾರ್ಜಿಯಾ ಟೆಕ್‌ನಿಂದ ಪ್ರೊಡಕ್ಷನ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
icon

(7 / 10)

ವಿವೇಕ್ ಶಂಕರನ್: ವಿವೇಕ್ ಶಂಕರನ್ 2019ರಲ್ಲಿ ಆಲ್ಬರ್ಟ್ಸನ್ ಸಿಇಒ ಆಗಿ ನೇಮಕಗೊಂಡರು. ಮಿಚಿಗನ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಜಾರ್ಜಿಯಾ ಟೆಕ್‌ನಿಂದ ಪ್ರೊಡಕ್ಷನ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ವಿಮಲ್ ಕಪೂರ್: ವಿಮಲ್ ಕಪೂರ್ 1989ರಲ್ಲಿ ಹನಿವೆಲ್‌ ಕಂಪನಿಗೆ ಸೇರಿದರು.  2023ರಲ್ಲಿ ಹನಿವೆಲ್‌ ಸಿಇಒ ಆದರು. ಥಾಪರ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
icon

(8 / 10)

ವಿಮಲ್ ಕಪೂರ್: ವಿಮಲ್ ಕಪೂರ್ 1989ರಲ್ಲಿ ಹನಿವೆಲ್‌ ಕಂಪನಿಗೆ ಸೇರಿದರು.  2023ರಲ್ಲಿ ಹನಿವೆಲ್‌ ಸಿಇಒ ಆದರು. ಥಾಪರ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.(Honeywell)

ರೇವತಿ ಅದ್ವೈತಿ: ರೇವತಿ ಅದ್ವೈತಿ ಅವರು 2019ರಲ್ಲಿ ಫ್ಲೆಕ್ಸ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅವರು ಬಿಟ್ಸ್ ಪಿಲಾನಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.  ಥಂಡರ್ ಬರ್ಡ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. 
icon

(9 / 10)

ರೇವತಿ ಅದ್ವೈತಿ: ರೇವತಿ ಅದ್ವೈತಿ ಅವರು 2019ರಲ್ಲಿ ಫ್ಲೆಕ್ಸ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅವರು ಬಿಟ್ಸ್ ಪಿಲಾನಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.  ಥಂಡರ್ ಬರ್ಡ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ. (Hindustan Times)

ರವಿಕುಮಾರ್ ಎಸ್: ರವಿಕುಮಾರ್ ಎಸ್ 2022ರಲ್ಲಿ ಕಾಗ್ನಿಜೆಂಟ್‌ ಕಂಪನಿಯ ಸಿಇಒ ಆದರು. ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಪರಮಾಣು ವಿಜ್ಞಾನಿಯಾಗಿ ವೃತ್ತಿಜೀವನ ಆರಂಭಿಸಿದ ಇವರು ಬಳಿಕ ಐಟಿ ಕ್ಷೇತ್ರಕ್ಕೆ ಪ್ರವೇಶಿಸಿದರು. ಶಿವಾಜಿ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್  ಪದವಿ ಪಡೆದಿದ್ದರು.  ಕ್ಸೇವಿಯರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಿಂದ ಎಂಬಿಎ ಪಡೆದರು.
icon

(10 / 10)

ರವಿಕುಮಾರ್ ಎಸ್: ರವಿಕುಮಾರ್ ಎಸ್ 2022ರಲ್ಲಿ ಕಾಗ್ನಿಜೆಂಟ್‌ ಕಂಪನಿಯ ಸಿಇಒ ಆದರು. ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಪರಮಾಣು ವಿಜ್ಞಾನಿಯಾಗಿ ವೃತ್ತಿಜೀವನ ಆರಂಭಿಸಿದ ಇವರು ಬಳಿಕ ಐಟಿ ಕ್ಷೇತ್ರಕ್ಕೆ ಪ್ರವೇಶಿಸಿದರು. ಶಿವಾಜಿ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್  ಪದವಿ ಪಡೆದಿದ್ದರು.  ಕ್ಸೇವಿಯರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಿಂದ ಎಂಬಿಎ ಪಡೆದರು.(Cognizant)


ಇತರ ಗ್ಯಾಲರಿಗಳು