ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ಯಾ: ಹಾಗಿದ್ದರೆ ಪೆಪ್ಪರ್ ಮಶ್ರೂಮ್ ಬಿರಿಯಾನಿ ಟ್ರೈ ಮಾಡಿ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ಯಾ: ಹಾಗಿದ್ದರೆ ಪೆಪ್ಪರ್ ಮಶ್ರೂಮ್ ಬಿರಿಯಾನಿ ಟ್ರೈ ಮಾಡಿ, ಇಲ್ಲಿದೆ ರೆಸಿಪಿ

ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ಯಾ: ಹಾಗಿದ್ದರೆ ಪೆಪ್ಪರ್ ಮಶ್ರೂಮ್ ಬಿರಿಯಾನಿ ಟ್ರೈ ಮಾಡಿ, ಇಲ್ಲಿದೆ ರೆಸಿಪಿ

ಅಣಬೆ ಖಾದ್ಯಗಳೆಂದರೆ ಬಹುತೇಕರು ಇಷ್ಟಪಡುತ್ತಾರೆ. ಇದು ತಿನ್ನಲು ಮಾಂಸಾಹಾರ ಖಾದ್ಯಗಳಂತೆಯೇ ಇರುತ್ತದೆ. ಹೀಗಾಗಿ ಮಾಂಸಾಹಾರಿಗಳಿಗಂತೂ ಅಣಬೆ ಬಹಳ ಅಚ್ಚುಮೆಚ್ಚು. ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ಯಾ?ಹಾಗಿದ್ದರೆ ಪೆಪ್ಪರ್ ಮಶ್ರೂಮ್ ಬಿರಿಯಾನಿ ಟ್ರೈ ಮಾಡಿ, ಅದ್ಭುತ ರುಚಿ ನೀಡುವ ಈ ರೆಸಿಪಿಯನ್ನು ತಯಾರಿಸುವುದು ತುಂಬಾನೇ ಸರಳ.

ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ಯಾ: ಹಾಗಿದ್ದರೆ ಪೆಪ್ಪರ್ ಮಶ್ರೂಮ್ ಬಿರಿಯಾನಿ ಟ್ರೈ ಮಾಡಿ, ಇಲ್ಲಿದೆ ರೆಸಿಪಿ
ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ಯಾ: ಹಾಗಿದ್ದರೆ ಪೆಪ್ಪರ್ ಮಶ್ರೂಮ್ ಬಿರಿಯಾನಿ ಟ್ರೈ ಮಾಡಿ, ಇಲ್ಲಿದೆ ರೆಸಿಪಿ (PC: Slurrp)

ಚಳಿಗಾಲದಲ್ಲೂ ಮಳೆ ಬರುತ್ತಿರುವುದರಿಂದ ಅಣಬೆಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಂತ ಅವೆಲ್ಲವೂ ತಿನ್ನಲು ಯೋಗ್ಯವಲ್ಲ, ಕೆಲವು ಮಾತ್ರ ಆರೋಗ್ಯಕ್ಕೆ ಒಳ್ಳೆಯದು. ಬಹುತೇಕ ಅಣಬೆಗಳು ವಿಷಕಾರಿಯಾಗಿರುತ್ತದೆ. ಉತ್ತಮ ಅಣಬೆಗಳು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿದೆ. ಹೀಗಾಗಿ ಸಿಕ್ಕ-ಸಿಕ್ಕ ಅಣಬೆಗಳನ್ನು ಕಿತ್ತು ಖಾದ್ಯ ಮಾಡಿ ತಿಂದರೆ ಪ್ರಾಣಕ್ಕೆ ಕುತ್ತು ಬರಬಹುದು. ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುವುದರಿಂದ ಅಲ್ಲಿಂದಲೇ ಖರೀದಿಸುವುದು ಉತ್ತಮ. ಅಣಬೆಯನ್ನು ಸಾಂಬಾರ್, ಗ್ರೇವಿ, ಬಿರಿಯಾನಿ ಮಾಡಿ ಸವಿಯಬಹುದು. ಮಾಂಸಾಹಾರಿಗಳಿಗಂತೂ ಅಣಬೆ ಬಹಳ ಅಚ್ಚುಮೆಚ್ಚು. ನೀವು ಎಂದಾದರೂ ಅಣಬೆಯ ಪೆಪ್ಪರ್ ಬಿರಿಯಾನಿ ಮಾಡಿ ಸವಿದಿದ್ದೀರಾ? ಇದರ ರುಚಿ ತುಂಬಾ ಅದ್ಭುತವಾಗಿರುತ್ತದೆ. ಕಾಳುಮೆಣಸಿನ ಪುಡಿಯಿಂದ ಮಾಡಲಾಗುವ ಈ ಬಿರಿಯಾನಿಯ ರುಚಿ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಈ ಚಳಿಯಲ್ಲಿ ಬಿಸಿ ಬಿಸಿ, ಖಾರ ಖಾರವಾದ ಖಾದ್ಯ ಸವಿಯಬೇಕು ಎಂದರೆ ಈ ಪೆಪ್ಪರ್ ಮಶ್ರೂಮ್ ಬಿರಿಯಾನಿ ಪ್ರಯತ್ನಿಸಬಹುದು. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಚಳಿಗೆ ಬಿಸಿ ಬಿಸಿ, ಖಾರ ಖಾದ್ಯ ತಿನ್ನಬೇಕು ಎಂದೆನಿಸುತ್ತಿದ್ದರೆ ಇದನ್ನು ಮಾಡಿ ಸವಿಯಬಹುದು. ಪೆಪ್ಪರ್ ಮಶ್ರೂಮ್ ಬಿರಿಯಾನಿ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪೆಪ್ಪರ್ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಬಾಸ್ಮತಿ ಅಕ್ಕಿ- ಒಂದೂವರೆ ಕಪ್, ಟೊಮೆಟೋ- ಒಂದು, ಈರುಳ್ಳಿ- ಒಂದು, ಬೆಳ್ಳುಳ್ಳಿ ಎಸಳು- ಆರು, ಶುಂಠಿ- 1 ಸಣ್ಣ ತುಂಡು, ಮೆಣಸಿನಕಾಯಿ- ಎರಡು, ಕೊತ್ತಂಬರಿ ಪುಡಿ- ನಾಲ್ಕು ಟೀ ಚಮಚ, ನಿಂಬೆ ರಸ- ಒಂದು ಟೀ ಚಮಚ, ಅಣಬೆ- 200 ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ನಾಲ್ಕು ಟೀ ಚಮಚ, ಲವಂಗ- ಎರಡು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಜೀರಿಗೆ- ಒಂದು ಟೀ ಚಮಚ, ಕಾಳುಮೆಣಸು- ಅರ್ಧ ಟೀ ಚಮಚ, ದಾಲ್ಚಿನ್ನಿ- 1 ಸಣ್ಣ ತುಂಡು, ಸೋಂಪು- ಒಂದು ಟೀ ಚಮಚ, ಏಲಕ್ಕಿ- ಎರಡು, ಬಿರಿಯಾನಿ ಎಲೆಗಳು- ಎರಡು, ಅರಿಶಿನ- ಒಂದು ಟೀ ಚಮಚ, ಮೆಣಸಿನಪುಡಿ- ಒಂದು ಟೀ ಚಮಚ, ಇಂಗು- ಒಂದು ಚಿಟಿಕೆ.

ರೆಸಿಪಿ ತಯಾರಿಸುವ ವಿಧಾನ: ಬಾಸ್ಮತಿ ಅಕ್ಕಿಯನ್ನು ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಡಬೇಕು.

- ಮಶ್ರೂಮ್‍ಗಳನ್ನು ಸ್ವಚ್ಛವಾಗಿ ತೊಳೆದು ಅವುಗಳನ್ನು ನಿಮಗೆ ಬೇಕಾದ ಗಾತ್ರಕ್ಕೆ ಅನುಗುಣವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ.

- ಕಡಾಯಿಯನ್ನು ಸ್ಟೌವ್ ಮೇಲಿಟ್ಟು ಬಿರಿಯಾನಿ ಮಸಾಲೆ ಪುಡಿಯನ್ನು ತಯಾರಿಸಿ .

- ಲವಂಗ, ಕೊತ್ತಂಬರಿ, ಜೀರಿಗೆ, ಕರಿಮೆಣಸು, ದಾಲ್ಚಿನ್ನಿ, ಸೋಂಪು, ಏಲಕ್ಕಿ, ಬಿರಿಯಾನಿ ಎಲೆ ಹಾಕಿ ಬಾಣಲೆಯಲ್ಲಿ ಹುರಿಯಿರಿ.

- ಅವುಗಳನ್ನು ಮಿಕ್ಸಿಗೆ ಹಾಕಿ ಮೆಣಸಿನಪುಡಿ, ಅರಿಶಿನ ಮತ್ತು ಇಂಗು ಸೇರಿಸಿ ಪುಡಿ ಮಾಡಿ ಪಕ್ಕಕ್ಕೆ ಇರಿಸಿ.

- ಈಗ ಬಿರಿಯಾನಿ ಬೇಯಿಸಲು ದೊಡ್ಡ ಪಾತ್ರೆಯನ್ನು ಸ್ಟೌವ್ ಮೇಲೆ ಇರಿಸಿ. ಅದಕ್ಕೆ ಎಣ್ಣೆ ಹಾಕಿ.

- ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.

- ನಂತರ ತೆಳುವಾಗಿ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಹಸಿಮೆಣಸಿನಕಾಯಿಯನ್ನು ಲಂಬವಾಗಿ ಕತ್ತರಿಸಿ ಹುರಿಯಬೇಕು.

- ಟೊಮೆಟೊಗಳನ್ನು ಲಂಬವಾಗಿ ಕತ್ತರಿಸಿ ಮೃದುವಾಗುವವರೆಗೆ ಬೇಯಿಸಿ.

- ಈಗ ಅಣಬೆಗಳನ್ನು ಸೇರಿಸಿ ಫ್ರೈ ಮಾಡಿ.

- ಈ ಸಂಪೂರ್ಣ ಮಿಶ್ರಣವನ್ನು ಮೂರು ನಿಮಿಷಗಳ ಕಾಲ ಫ್ರೈ ಮಾಡಿ.

- ಅಣಬೆಗಳನ್ನು ಬಹುತೇಕ ಬೇಯಿಸುವವರೆಗೆ ಇರಿಸಿ.

- ನಂತರ ಸಿದ್ಧಪಡಿಸಿದ ಬಿರಿಯಾನಿ ಮಸಾಲೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

- ಮೊದಲೇ ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

- ಅಕ್ಕಿಯನ್ನು ಬೇಯಿಸಲು ಮೂರು ಕಪ್ ನೀರು ಸೇರಿಸಿ. ನಿಂಬೆ ಹಿಂಡಿ ಮುಚ್ಚಳ ಮುಚ್ಚಿ.

- ಕಡಿಮೆ ಉರಿಯಲ್ಲಿ ಅರ್ಧ ಗಂಟೆ ಇಟ್ಟರೆ ಬಿರಿಯಾನಿ ಚೆನ್ನಾಗಿ ಬೇಯುತ್ತದೆ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಸ್ಟೌವ್ ಆಫ್ ಮಾಡಿ.

- ಇಷ್ಟು ಮಾಡಿದರೆ ರುಚಿಕರವಾದ ಪೆಪ್ಪರ್ ಮಶ್ರೂಮ್ ಬಿರಿಯಾನಿ ಸಿದ್ಧವಾಗುತ್ತದೆ. ಇದು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿಬಿಸಿಯಾಗಿ ತಿಂದರೆ ರುಚಿ ಅದ್ಭುತವಾಗಿರುತ್ತದೆ.

ಅಣಬೆಯನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ವಿಟಮಿನ್ ಡಿ ಕೊರತೆ ಇರುವವರು ಇದನ್ನು ಸೇವಿಸಬಹುದು. ಚಳಿಗಾಲದಲ್ಲಿ ಸೂರ್ಯನ ಬಿಸಿಲು ಅಷ್ಟಾಗಿ ಬೀಳುವುದಿಲ್ಲವಾದ್ದರಿಂದ ಅಣಬೆಗಳನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು. ಅಲ್ಲದೆ ಇದರಲ್ಲಿ ಆರೋಗ್ಯಕ್ಕೆ ಉತ್ತಮವಾದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ನಿಂಬೆ ರಸ, ಶುಂಠಿ, ಬೆಳ್ಳುಳ್ಳಿ, ಟೊಮೆಟೊ ಬಳಸಲಾಗಿದೆ. ಹೀಗಾಗಿ ಇದು ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಪ್ರಯೋಜನಕಾರಿಯಾಗಿದೆ. ಒಮ್ಮೆ ನೀವು ಪ್ರಯತ್ನಿಸಿ ನೋಡಿ. ಖಂಡಿತ ಇಷ್ಟವಾಗಬಹುದು.

Whats_app_banner