Karwar News: ಕಾರವಾರ ಸಮೀಪದ ಆಳ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ದೋಣಿ ರಕ್ಷಣೆ, ಹೀಗಿತ್ತು ಕಾರ್ಯಾಚರಣೆ photos
- ಆಳ ಸಮುದ್ರದಲ್ಲಿ ಮೀನುಗಾರಿಕೆ ಸುಲಭವಲ್ಲ. ಯಂತ್ರ ಕೈಕೊಟ್ಟರೆ ಪರಿಸ್ಥಿತಿ ಕಠಿಣ. ಹೀಗೆಯೇ ಕಾರವಾರದ ಆಳ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರಿಕೆ ದೋಣಿ(Indian Fishing Boat) ಅನ್ನು ಕೋಸ್ಟ್ ಗಾರ್ಡ್( INDIAN COAST GUARD) ರಕ್ಷಣೆ ಮಾಡಿದೆ. ಇದರ ಚಿತ್ರನೋಟ ಇಲ್ಲಿದೆ.

(1 / 6)
ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ದೋಣಿಗಳು ಆಳವಾದ ಸಮುದ್ರಕ್ಕೆ ಹೋಗುತ್ತಲೇ ಇರುತ್ತವೆ. ಮೀನುಗಾರಿಕೆ ಅವರ ಕಸುಬುದಾರಿಕೆಯೂ ಹೌದು. ಆಳಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕುವವರು ಅಧಿಕ. ಇವರನ್ನು ಕೋಸ್ಟ್ ಗಾರ್ಡ್( INDIAN COAST GUARD) ಕೂಡ ಕಾಯುತ್ತಲೇ ಇರುತ್ತದೆ.
(2 / 6)
ಕಾರವಾರದಿಂದ ಹೊರಟ ಮೀನುಗಾರಿಕೆ ದೋಣಿಯು ಆಳ ಸಮುದ್ರದಲ್ಲಿ ಸಿಲುಕಿಕೊಂಡಿತ್ತು. ಕೋಸ್ಟ್ ಗಾರ್ಡ್ ಗೆ ಬಂದ ಕರೆ ಆಧರಿಸಿ ಸಿಬ್ಬಂದಿ ದೋಣಿ ಸಿಲುಕಿದ ಸ್ಥಳಕ್ಕೆ ತೆರಳಿದರು.
(3 / 6)
ಕಾರವಾರದಿಂದ ಸುಮಾರು 215 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕೆ ದೋಣಿ ಸಿಲುಕಿ ಹಾಕಿಕೊಂಡಿತ್ತು. ಕೋಸ್ಟ್ ಗಾರ್ಡ್ ಸಿಬ್ಬಂದಿ ವಿಶೇಷ ಹಡಗಿನಲ್ಲಿ ಸ್ಥಳಕ್ಕೆ ತೆರಳುವಲ್ಲಿ ಯಶಸ್ವಿಯಾಯಿತು.
(4 / 6)
ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರ ದೋಣಿಯ ಪರಿಸ್ಥಿತಿಯನ್ನು ಅವಲೋಕಿಸಿದರು. ಕೆಟ್ಟಿದ್ದ ಎಂಜಿನ್ ಅನ್ನು ಸರಿಪಡಿಸಲು ಪ್ರಯತ್ನಿಸಿದರು. ಆದರೆ ಅದು ಸೀಜ್ ಆಗಿ ಹೋಗಿದ್ದರಿಂದ ದುರಸ್ತಿ ಕಷ್ಟ ಎನ್ನುವ ಸಂದೇಶ ರವಾನಿಸಲಾಯಿತು.
(5 / 6)
ಮೇಲಾಧಿಕಾರಿಗಳ ಗಮನಕ್ಕೆ ತಂದು ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರರ ದೋಣಿಯನ್ನು ಹಾಗೂ ಅದರೊಳಗೆ ಇದ್ದ ಮೀನುಗಾರರ ರಕ್ಷಣೆಗೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಮುಂದಾದರು.
ಇತರ ಗ್ಯಾಲರಿಗಳು