Kannada Ramayana Books:ಕನ್ನಡದಲ್ಲಿ ರಾಮಾಯಣ ಕುರಿತಾದ 10 ಪ್ರಮುಖ ಕೃತಿಗಳು, ಯಾವೆಲ್ಲ ಲೇಖಕರು ಬರೆದಿದ್ದಾರೆ ಗೊತ್ತೆ? photos-literature news kannada literary personalities wrote on10 ramayana books by kuvempu maasti hsv latha rajashekhar kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Ramayana Books:ಕನ್ನಡದಲ್ಲಿ ರಾಮಾಯಣ ಕುರಿತಾದ 10 ಪ್ರಮುಖ ಕೃತಿಗಳು, ಯಾವೆಲ್ಲ ಲೇಖಕರು ಬರೆದಿದ್ದಾರೆ ಗೊತ್ತೆ? Photos

Kannada Ramayana Books:ಕನ್ನಡದಲ್ಲಿ ರಾಮಾಯಣ ಕುರಿತಾದ 10 ಪ್ರಮುಖ ಕೃತಿಗಳು, ಯಾವೆಲ್ಲ ಲೇಖಕರು ಬರೆದಿದ್ದಾರೆ ಗೊತ್ತೆ? photos

  • ರಾಮಾಯಣ ಎನ್ನುವ ಕಥಾನಕ ಕನ್ನಡದ ಸಾಹಿತ್ಯ ವಲಯವನ್ನೂ ಆವರಿಸಿದೆ. ಹಲವಾರು ಸಾಹಿತಿಗಳು, ವಿದ್ವಾಂಸರು ರಾಮಾಯಣವನ್ನು( Ramayana) ತಮ್ಮದೇ ನೆಲೆಯಲ್ಲಿ ನೋಡಿದ್ದಾರೆ. ಕನ್ನಡದಲ್ಲಿಯೇ ರಾಮಾಯಣ ಕುರಿತು ಸಾಕಷ್ಟು ಕೃತಿಗಳು ಬಂದಿವೆ. ಇದರಲ್ಲಿ ಪ್ರಮುಖ ಎನ್ನಿಸುವ ಹತ್ತು ಕೃತಿಗಳನ್ನು ರಾಮನವಮಿ ಹಿನ್ನೆಲೆಯಲ್ಲಿ( Ramanavami2024) ಇಲ್ಲಿ ನೀಡಲಾಗಿದೆ. 

ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣದರ್ಶನಂ ನಂತೆಯೆ ಜನಪ್ರಿಯ ವಾಲ್ಮೀಕಿ ರಾಮಾಯಣ ಕೂಡ ಆರು ದಶಕದ ಹಿಂದೆಯೇ ಪ್ರಕಟಿತ ಕೃತಿ. ಮೈಸೂರಿನ ಪುಸ್ತಕ ಪ್ರಕಾಶನ ಇದನ್ನು ಹೊರ ತಂದಿದೆ.
icon

(1 / 10)

ರಾಮಪಟ್ಟಾಭಿಷೇಕ 1968 ರಲ್ಲಿ ಪ್ರಕಟವಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಕಾವ್ಯವು ‘ ಆದಿಕವಿ ವಾಲ್ಮೀಕಿ’ಯ ಸರಳ ರಗಳೆಯ ರೂಪದಲ್ಲಿ ಪ್ರಕಟವಾಗಿದೆ.
icon

(2 / 10)

ಹಿರಿಯ ಸಾಹಿತಿ  ವಿ.ಸೀ ಅವರು ರಚಿಸಿರುವ ವಾಲ್ಮೀಕಿ ರಾಮಾಯಣವಿದು. ಇದನ್ನು ದಶಕದ ಹಿಂದೆ  ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. 
icon

(3 / 10)

ಕನ್ನಡದ ಹಿರಿಯ ಸಾಹಿತಿ ಎಚ್. ಎಸ್.ವೆಂಕಟೇಶ ಮೂರ್ತಿ ಅವರು ದಶಕದ ಹಿಂದೆ ಹೊರ ತಂದ ಶ್ರೀ ರಾಮಚರಣ ಮಹಾಕಾವ್ಯವೂ ರಾಮಾಯಣದ ಹಿನ್ನೆಲೆಯದ್ದೇ. ಬೆಂಗಳೂರಿನ ಅಭಿವನ ಪ್ರಕಾಶನವು ಇದನ್ನು ಪ್ರಕಟಿಸಿದೆ.,
icon

(4 / 10)

ಮೈಸೂರಿನ ಮಹಾರಾಜರಾದ ಚಾಮರಾಜ ಒಡೆಯರ ‘ಕನ್ನಡ ರಾಮಾಯಣ ಕೂಡ ಜನಪ್ರಿಯ ಕೃತಿಯೇ. ಎರಡು ಶತಮಾನದ ಹಿಂದೆಯೇ ಪ್ರಕಟವಾಗಿರುವ ‘ಶ್ರೀ ಚಾಮರಾಜೋಕ್ತಿವಿಲಾಸ ಎಂಬ ಕನ್ನಡ ರಾಮಾಯಣ’ ಕೃತಿ ಏಳು ಸಂಪುಟಗಳಲ್ಲಿದೆ.
icon

(5 / 10)

ಕನ್ನಡದ ವಿದ್ವಾಂಸ, ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಶ್ರೀನಿವಾಸ ತೋಫಖಾನೆ ಅವರು ರಚಿಸಿದ ಗೀತ ರಾಮಾಯಣ ಕೃತಿ ಕೂಡ ರಾಮಾಯಣದ ಮಹತ್ವವನ್ನು ಸಾರುತ್ತದೆ.
icon

(6 / 10)

ಹಿರಿಯ ರಾಜಕಾರಣಿ ಎಂ.ವೀರಪ್ಪಮೊಯಿಲಿ ಸಾಹಿತಿಯಾಗಿಯೂ ಗುರುತಿಸಿಕೊಂಡವರು. ಅವರ ಶ್ರೀ ರಾಮಾಯಣ ಮಹಾನ್ವೇಷಣಂ ಪ್ರಮುಖ ಕೃತಿ.ಮಹೇಶ್ವರಿ ಪ್ರಕಾಶನ -ಇದನ್ನು ಪ್ರಕಟಿಸಿದೆ.
icon

(7 / 10)

ಮೈಸೂರಿನ ತನುಮನ ಪ್ರಕಾಶನ ಹೊರ ತಂದಿರುವ ಸು.ರುದ್ರಮೂರ್ತಿ ಶಾಸ್ತ್ರಿ ಅವರ ವಾಲ್ಮೀಕಿ ರಾಮಾಯಣ ಕೃತಿಯು ರಾಮಾಯಣವನ್ನು ಭಿನ್ನ ರೀತಿಯಲ್ಲಿ ನೋಡುತ್ತದೆ.
icon

(8 / 10)

ಹತ್ತಕ್ಕೂ ಮಹಾದರ್ಶನ ಗ್ರಂಥಗಳನ್ನು ಹೊರ ತಂದಿರುವ ಹಿರಿಯ ಸಾಹಿತಿ ಡಾ.ಲತಾ ರಾಜಶೇಖರ್‌ ಅವರು ದಶಕದ ಹಿಂದೆ ಪ್ರಕಟಿಸಿದ ಶ್ರೀರಾಮಮಹಾದರ್ಶನ ಕೂಡ ಬೃಹತ್‌ ಗ್ರಂಥವೇ.
icon

(9 / 10)

ಹಿರಿಯ ವಿದ್ವಾಂಸ ಜಗದೀಶ ಶರ್ಮಾ ಅವರು ದಶಕಂಠ ರಾವಣ ಎನ್ನುವ ಕೃತಿಯನ್ನು ರಾಮಾಯಣ ಆಧರಿತವಾಗಿಯೇ ರಚಿಸಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು