ಕನ್ನಡ ಸುದ್ದಿ  /  Photo Gallery  /  Mangalore News India Paddle Festival 2024 Adventure Show In The Midst Of Sea Waves Check Photos Mnk

India Paddle Festival 2024: ಮಂಗಳೂರಿನಲ್ಲಿ ಇಂಡಿಯನ್ ಪ್ಯಾಡಲ್ ಉತ್ಸವ: ಕಡಲ ಅಲೆಗಳ ಮಧ್ಯೆ ಸಾಹಸ ಪ್ರದರ್ಶನ PHOTOS

  • ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಮಂಗಳೂರಿನ ಸಸಿಹಿತ್ಲು ಬೀಚ್ ನಲ್ಲಿ ನಡೆಯಿತು. ಕಡಲ ಅಲೆಗಳ ಮಧ್ಯೆ ಯುವಜನರ ಸಾಹಸಕ್ರೀಡೆ ಈ ಸಂದರ್ಭ ಗಮನ ಸೆಳೆಯಿತು. ಆ ಸಾಹಸ ಕ್ರೀಡೆಯ ಫೋಟೋ ಝಲಕ್‌ ಇಲ್ಲಿದೆ.

ಅಸೋಸಿಯೆಶನ್ ಆಫ್ ಪ್ಯಾಡಲ್ ಸರ್ಫ್ ಪ್ರೊಫೆಷನಲ್ಸ್ ವರ್ಲ್ಡ್ ಟೂರ್ (ಎಪಿಪಿ) ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಆರಂಭಗೊಂಡಿದೆ. 
icon

(1 / 6)

ಮುಂಬರುವ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಗಮನಾರ್ಹ ಬೆಳವಣಿಗೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೊಸ ಅಭಿವೃದ್ದಿಯ ದೃಷ್ಟಿಕೋನದೊಂದಿಗೆ ಈ ಉತ್ಸವ ನಡೆದಿದೆ.
icon

(2 / 6)

ಸ್ಟ್ಯಾಂಡ್ ಆಫ್ ಪ್ಯಾಡ್ಲಿಂಗ್ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲಕ್ರೀಡೆ. ಮಂಗಳೂರು, ಮೂಲ್ಕಿಯಲ್ಲಿ ಪ್ಯಾಡಲ್ ಮತ್ತು ಸರ್ಫಿಂಗ್‌ಗೆ ಪೂರಕ ವಾತಾವರಣವಿದೆ. ಪ್ರವಾಸೋದ್ಯಮ ಇಲಾಖೆ ಉತ್ತೇಜನದೊಂದಿಗೆ ಈ ಭಾಗವೀಗ ಪ್ಯಾಡಲ್ ಮತ್ತು ಸರ್ಫಿಂಗ್ ಹಬ್ ಆಗಿ ಮಾರ್ಪಟ್ಟಿದೆ.
icon

(3 / 6)

ಸ್ಪೇನ್‌, ಇಟಲಿ, ಹಂಗೇರಿ, ಜಪಾನ್, ಇಂಡೋನೇಷ್ಯಾ, ಥಾಯ್ಲೆಂಡ್‌, ದಕ್ಷಿಣ ಕೊರಿಯಾ, ಮಲೇಷ್ಯಾದಿಂದ ಆಗಮಿಸಿದ ಕ್ರೀಡಾಪಟುಗಳು ಈ ಪ್ಯಾಡಲ್ ಉತ್ಸವದಲ್ಲಿ ಪಾಲ್ಗೊಂಡರು.
icon

(4 / 6)

ಭಾರತ ಪ್ರತಿನಿಧಿಸಿದ ಆಕಾಶ್ ಪೂಜಾರ್ ಎಂಬ ಬಾಲಕ ಹದಿನಾರು ವರ್ಷದೊಳಗಿನ ವಿಭಾಗದಲ್ಲಿ ವಿಜಯಿಯಾಗಿ ಗಮನ ಸೆಳೆದಿದ್ದಾರೆ. ಮತ್ತೊಂದು ಸ್ಥಾನದಲ್ಲಿ ರವಿ ಪೂಜಾರ್ ಗೆದ್ದಿದ್ದಾರೆ. ದಕ್ಷಿಣ ಕೊರಿಯಾದ ಜಿಹೂ ಮೂರನೇ ಸ್ಥಾನದಲ್ಲಿ ತೃಪ್ತಿಪಟ್ಟುಕೊಂಡರು.
icon

(5 / 6)

ಬಾಲಿವುಡ್ ಖ್ಯಾತನಾಮರಾದ ಸುನಿಲ್ ಶೆಟ್ಟಿ, ಪೂಜಾ ಹೆಗ್ಡೆ, ಶಿಲ್ಪಾ ಶೆಟ್ಟಿ ಈ ಪ್ಯಾಡಲ್ ಫೆಸ್ಟಿವಲ್ ನ ರಾಯಭಾರಿಗಳಾಗಿದ್ದಾರೆ. ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಕೂಡ ರಾಯಭಾರಿ. ಇವರೆಲ್ಲರೂ ದಕ್ಷಿಣ ಕನ್ನಡ ಮೂಲದವರು.
icon

(6 / 6)

ಇತರ ಗ್ಯಾಲರಿಗಳು