ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pakistan Bus Accident: ಪಾಕಿಸ್ತಾನದಲ್ಲಿ ಸೇತುವೆಯಿಂದ ಕೆಳಕ್ಕೆ ಬಿದ್ದ ಬಸ್‌, ಬೆಂಕಿಗಾಹುತಿ, 40 ಮಂದಿ ಸಾವು

Pakistan bus Accident: ಪಾಕಿಸ್ತಾನದಲ್ಲಿ ಸೇತುವೆಯಿಂದ ಕೆಳಕ್ಕೆ ಬಿದ್ದ ಬಸ್‌, ಬೆಂಕಿಗಾಹುತಿ, 40 ಮಂದಿ ಸಾವು

  • ಪಾಕಿಸ್ತಾನದ ಕ್ವೆಟ್ಟಾ ಸಮೀಪ ಸೇತುವೆಯಿಂದ ಬಸ್‌ವೊಂಮದು ಕೆಳಕ್ಕೆ ಉರುಳಿ ಬೆಂಕಿಗೆ ಆಹುತಿಯಾಗಿದೆ. ಈ ದುರ್ಘಟನೆಯಿಂದ ಬಸ್‌ನೊಳಗಿದ್ದ 40 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿತ್ತು.

ಬಸ್‌ನಲ್ಲಿ 48 ಪ್ರಯಾಣಿಕರಿದ್ದರು. ದುರ್ಘಟನೆ ಬಳಿಕ ಕನಿಷ್ಠ 40 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಲೂಚಿಸ್ತಾನ ಪ್ರಾಂತ್ಯದ ಲಾಸ್‌ಬೆಲಾ ಜಿಲ್ಲೆಯ ಹಿರಿಯ ಅಧಿಕಾರಿ ಹಮ್ಜಾ ಅಂಜುಮ್‌ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಮೂರು ಜನರನ್ನು ರಕ್ಷಿಸಲಾಗಿದೆ. 
icon

(1 / 8)

ಬಸ್‌ನಲ್ಲಿ 48 ಪ್ರಯಾಣಿಕರಿದ್ದರು. ದುರ್ಘಟನೆ ಬಳಿಕ ಕನಿಷ್ಠ 40 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಲೂಚಿಸ್ತಾನ ಪ್ರಾಂತ್ಯದ ಲಾಸ್‌ಬೆಲಾ ಜಿಲ್ಲೆಯ ಹಿರಿಯ ಅಧಿಕಾರಿ ಹಮ್ಜಾ ಅಂಜುಮ್‌ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಮೂರು ಜನರನ್ನು ರಕ್ಷಿಸಲಾಗಿದೆ. (AFP)

ಬೆಲಾ ಎಂಬ ನಗರದ ಹತ್ತಿರ ಈ ದುರ್ಘಟನೆ ನಡೆದಿದೆ. ಕ್ವೆಟ್ಟಾದಿಂದ ಬಲೂಚಿಸ್ತಾನ ಪ್ರಾಂತ್ಯದ ಕರಾಚಿಗೆ ಈ ಬಸ್‌ ಪ್ರಯಾಣಿಸುತ್ತಿತ್ತು.
icon

(2 / 8)

ಬೆಲಾ ಎಂಬ ನಗರದ ಹತ್ತಿರ ಈ ದುರ್ಘಟನೆ ನಡೆದಿದೆ. ಕ್ವೆಟ್ಟಾದಿಂದ ಬಲೂಚಿಸ್ತಾನ ಪ್ರಾಂತ್ಯದ ಕರಾಚಿಗೆ ಈ ಬಸ್‌ ಪ್ರಯಾಣಿಸುತ್ತಿತ್ತು.(AP)

ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತಪಟ್ಟವರಲ್ಲಿ ಸಾಕಷ್ಟು ದೇಹಗಳ ಗುರುತೇ ಸಿಗುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 40 ಜನರು ಮೃತಪಟ್ಟಿದ್ದಾರೆ ಎಂದು ಹಮ್ಜಾ ಅಂಜುಮನ್‌ ಹೇಳಿದ್ದಾರೆ. 
icon

(3 / 8)

ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತಪಟ್ಟವರಲ್ಲಿ ಸಾಕಷ್ಟು ದೇಹಗಳ ಗುರುತೇ ಸಿಗುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 40 ಜನರು ಮೃತಪಟ್ಟಿದ್ದಾರೆ ಎಂದು ಹಮ್ಜಾ ಅಂಜುಮನ್‌ ಹೇಳಿದ್ದಾರೆ. (AFP)

ಬಸ್‌ ಅತಿವೇಗದಲ್ಲಿ ಚಲಿಸುತ್ತಿದ್ದದ್ದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ವೇಗವಾಗಿ ಸಾಗುತ್ತಿದ್ದ ಬಸ್‌ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಕ್ಕೆ ಉರುಳಿದೆ. ಬಳಿಕ ಬಸ್‌ ಬೆಂಕಿಗೆ ಆಹುತಿಯಾಗಿದೆ.
icon

(4 / 8)

ಬಸ್‌ ಅತಿವೇಗದಲ್ಲಿ ಚಲಿಸುತ್ತಿದ್ದದ್ದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ವೇಗವಾಗಿ ಸಾಗುತ್ತಿದ್ದ ಬಸ್‌ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಕ್ಕೆ ಉರುಳಿದೆ. ಬಳಿಕ ಬಸ್‌ ಬೆಂಕಿಗೆ ಆಹುತಿಯಾಗಿದೆ.(AFP)

ದುರಂತದ ಚಿತ್ರಗಳು ಭೀತಿ ಹುಟ್ಟಿಸುತ್ತವೆ. ಬಸ್‌ ತಲೆಕೆಳಗಾಗಿ ಮಗುಚಿ ಬಿದ್ದಿರುವುದನ್ನು ಗಮನಿಸಬಹುದು. ಗಾಯಗೊಂಡವರ ಪರಿಸ್ಥಿತಿಯೂ ಚಿಂತಜನಕವಾಗಿದೆ ಎನ್ನಲಾಗಿದೆ.
icon

(5 / 8)

ದುರಂತದ ಚಿತ್ರಗಳು ಭೀತಿ ಹುಟ್ಟಿಸುತ್ತವೆ. ಬಸ್‌ ತಲೆಕೆಳಗಾಗಿ ಮಗುಚಿ ಬಿದ್ದಿರುವುದನ್ನು ಗಮನಿಸಬಹುದು. ಗಾಯಗೊಂಡವರ ಪರಿಸ್ಥಿತಿಯೂ ಚಿಂತಜನಕವಾಗಿದೆ ಎನ್ನಲಾಗಿದೆ.(AP)

ಗುರುತು ಪತ್ತೆಹಚ್ಚಲಾಗದ ದೇಹಗಳನ್ನು ಡಿಎನ್‌ಎ ಮಾದರಿ ಸಂಗ್ರಹಿಸುವ ಸಲುವಾಗಿ ಕರಾಚಿಗೆ ಸಾಗಿಸಲಾಗುತ್ತದೆ. ಗುರುತು ಪತ್ತೆಹಚ್ಚಿದ ಬಳಿಕ ಮೃತಪಟ್ಟವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
icon

(6 / 8)

ಗುರುತು ಪತ್ತೆಹಚ್ಚಲಾಗದ ದೇಹಗಳನ್ನು ಡಿಎನ್‌ಎ ಮಾದರಿ ಸಂಗ್ರಹಿಸುವ ಸಲುವಾಗಿ ಕರಾಚಿಗೆ ಸಾಗಿಸಲಾಗುತ್ತದೆ. ಗುರುತು ಪತ್ತೆಹಚ್ಚಿದ ಬಳಿಕ ಮೃತಪಟ್ಟವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.(AP)

ಅಪಘಾತ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಲಾಸಾಬೆಲಾ ವೆಲ್‌ಫೇರ್‌ ಟ್ರಸ್ಟ್‌, ಈದಿ ವೆಲ್‌ಫೇರ್‌ ಟ್ರಸ್ಟ್‌ನ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.
icon

(7 / 8)

ಅಪಘಾತ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಲಾಸಾಬೆಲಾ ವೆಲ್‌ಫೇರ್‌ ಟ್ರಸ್ಟ್‌, ಈದಿ ವೆಲ್‌ಫೇರ್‌ ಟ್ರಸ್ಟ್‌ನ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.(AP)

ಬಲೂಚಿಸ್ತಾನದ ಮುಖ್ಯಮಂತ್ರಿ ಮಿರ್‌ ಅಬ್ದುಲ್‌ ಕುಡೋಸ್‌ ಭಿಜೆಂಜೊ ಅವರು ಈ ದುರ್ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಅತ್ಯುತ್ತಮ ವೈದ್ಯಕೀಯ ನೆರವು ನೀಡುವಂತೆ ಅವರು ಆದೇಶ ನೀಡಿದ್ದಾರೆ.
icon

(8 / 8)

ಬಲೂಚಿಸ್ತಾನದ ಮುಖ್ಯಮಂತ್ರಿ ಮಿರ್‌ ಅಬ್ದುಲ್‌ ಕುಡೋಸ್‌ ಭಿಜೆಂಜೊ ಅವರು ಈ ದುರ್ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಅತ್ಯುತ್ತಮ ವೈದ್ಯಕೀಯ ನೆರವು ನೀಡುವಂತೆ ಅವರು ಆದೇಶ ನೀಡಿದ್ದಾರೆ.(AFP)


IPL_Entry_Point

ಇತರ ಗ್ಯಾಲರಿಗಳು