ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kaatera Day 6 Collection: ಆರನೇ ದಿನವೂ ಕಾಟೇರನ ಬೊಕ್ಕಸಕ್ಕೆ ಕೋಟಿ ಕೋಟಿ! ಶತಕೋಟಿಗೆ ಬೇಕು ಕೇವಲ ಇಷ್ಟೇ ಮೊತ್ತ

Kaatera Day 6 Collection: ಆರನೇ ದಿನವೂ ಕಾಟೇರನ ಬೊಕ್ಕಸಕ್ಕೆ ಕೋಟಿ ಕೋಟಿ! ಶತಕೋಟಿಗೆ ಬೇಕು ಕೇವಲ ಇಷ್ಟೇ ಮೊತ್ತ

  • Kaatera Day 6 Collection: ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾನೆ. ಗಳಿಕೆಯಲ್ಲಿ ನೂರು ಕೋಟಿಯ ಸನಿಹಕೆ ಆಗಮಿಸಿದ್ದಾನೆ. ಇದೀಗ ಬಿಡುಗಡೆ ಆದಾಗಿನಿಂದ ಇಲ್ಲಿಯವರೆಗೂ ಅಂದರೆ, ಆರು ದಿನಗಳಲ್ಲಿ ದೊಡ್ಡ ಮೊತ್ತವನ್ನೇ ಕಲೆಹಾಕಿ ಹೊಸ ದಾಖಲೆ ಬರೆದಿದೆ. ಹಾಗಾದರೆ, ಆರನೇ ದಿನ ಕಾಟೇರನ ಬೊಕ್ಕಸಕ್ಕೆ ಬಂದು ಬಿದ್ದ ಮೊತ್ತ ಎಷ್ಟು?

ದರ್ಶನ್‌ ನಟನೆಯ ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. 
icon

(1 / 9)

ಕರ್ನಾಟಕದಲ್ಲಿ ಮಾತ್ರ ಅಬ್ಬರಿಸುತ್ತಿರುವ ಕಾಟೇರ ಸಿನಿಮಾ, ಅದರ ಘಮಲನ್ನು ಪರಭಾಷೆ ಪ್ರೇಕ್ಷಕರಿಗೂ ಪಸರಿಸುತ್ತಿದ್ದಾರೆ.
icon

(2 / 9)

ಇತ್ತೀಚೆಗಷ್ಟೇ ಕರ್ನಾಟಕದಲ್ಲಷ್ಟೇ ಬಿಡುಗಡೆ ಆಗಿರುವ ಈ ಸಿನಿಮಾವನ್ನು ಪರಭಾಷೆಗೂ ಡಬ್‌ ಮಾಡಿ ರಿಲೀಸ್‌ ಮಾಡುವ ಪ್ಲಾನ್‌ನಲ್ಲಿದೆ ತಂಡ.
icon

(3 / 9)

ಸಿನಿಮಾ ಬಿಡುಗಡೆಯಾದ ಮೊದಲೇ ದಿನವೇ (ಶುಕ್ರವಾರ) ಕರ್ನಾಟಕದಲ್ಲಿ ಮಾತ್ರವೇ 19.79 ಕೋಟಿ ಗಳಿಸುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ನೂತನ ರೆಕಾರ್ಡ್‌ ಬರೆದಿತ್ತು ಕಾಟೇರ. 
icon

(4 / 9)

ಅದಾದ ಬಳಿಕ ಎರಡನೇ ದಿನ (ಶನಿವಾರ) 17.35 ಕೋಟಿ, ಮೂರನೇ ದಿನ (ಭಾನುವಾರ) 20.96 ಕೋಟಿ, ನಾಲ್ಕನೇ ದಿನವಾದ ಸೋಮವಾರ 18.26 ಕೋಟಿ ಗಳಿಸಿತ್ತು.
icon

(5 / 9)

ಐದನೇ ದಿನವಾದ ಮಂಗಳವಾರ 9.24 ಕೋಟಿ ಗಳಿಸಿ ಒಟ್ಟಾರೆ 86.84 ಕೋಟಿ ಬಾಚಿಕೊಂಡಿತ್ತು. ಇದೀಗ ಆರನೇ ದಿನದ ಕಲೆಕ್ಷನ್‌ ರಿಪೋರ್ಟ್‌ ಹೊರಬಿದ್ದಿದೆ. 
icon

(6 / 9)

ಆರನೇ ದಿನವಾದ ಬುಧವಾರ ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 9.78 ಕೋಟಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಒಟ್ಟಾರೆ 95.36 ಕೋಟಿ ಕಮಾಯಿ ಮಾಡಿದೆ.
icon

(7 / 9)

ಇಂದಿನ (ಗುರುವಾರ) ಕಲೆಕ್ಷನ್‌ 8 ಕೋಟಿ ಎಂದು ಅಂದಾಜಿಸಿದರೂ, ಕೇವಲ ಏಳೇ ದಿನದಲ್ಲಿ ನೂರು ಕೋಟಿ ಪ್ಲಸ್‌ ಗಳಿಕೆ ಕಾಣಲಿದೆ ಕಾಟೇರ ಸಿನಿಮಾ. 
icon

(8 / 9)

ಆರನೇ ದಿನದ ಗಳಿಕೆ 9.78 ಕೋಟಿ ಎಂದು  ಕಾಟೇರ ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ.
icon

(9 / 9)

ಆರನೇ ದಿನದ ಗಳಿಕೆ 9.78 ಕೋಟಿ ಎಂದು  ಕಾಟೇರ ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ.

IPL_Entry_Point

ಇತರ ಗ್ಯಾಲರಿಗಳು