ಪಾರ್ಟಿ ಬಿಟ್ಟು ಕ್ರಿಕೆಟ್ ಆಡಿ; ಪೃಥ್ವಿ ಶಾಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಕಠಿಣ ಸಂದೇಶ-focus on cricket not parties wasim akram does not hesitate issues stern message to prithvi shaw as dc star dropped prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾರ್ಟಿ ಬಿಟ್ಟು ಕ್ರಿಕೆಟ್ ಆಡಿ; ಪೃಥ್ವಿ ಶಾಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಕಠಿಣ ಸಂದೇಶ

ಪಾರ್ಟಿ ಬಿಟ್ಟು ಕ್ರಿಕೆಟ್ ಆಡಿ; ಪೃಥ್ವಿ ಶಾಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಕಠಿಣ ಸಂದೇಶ

Wasim Akram on Prithvi Shaw: ಐಪಿಎಲ್​ನಲ್ಲಿ ಮತ್ತೊಂದು ಕಳಪೆ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಗಿರುವ ಪೃಥ್ವಿ ಶಾ ಅವರಿಗೆ ವಾಸೀಂ ಅಕ್ರಮ್, ಉಪಯುಕ್ತ ಸಲಹೆ ನೀಡಿದ್ದಾರೆ.

ಪಾರ್ಟಿ ಬಿಟ್ಟು ಕ್ರಿಕೆಟ್ ಆಡಿ; ಪೃಥ್ವಿ ಶಾಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಕಠಿಣ ಸಂದೇಶ
ಪಾರ್ಟಿ ಬಿಟ್ಟು ಕ್ರಿಕೆಟ್ ಆಡಿ; ಪೃಥ್ವಿ ಶಾಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಕಠಿಣ ಸಂದೇಶ

2024ರ ಇಂಡಿಯನ್ ಪ್ರೀಮಿಯರ್ ಲೀಗ್​ನ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪ್ಲೇಆಫ್​ ರೇಸ್​​ನಲ್ಲಿದೆ. ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನದಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ರಿಷಭ್ ಪಂತ್ (Rishabh Pant) ಪಡೆ, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಪ್ರಸ್ತುತ ಆಡಿರುವ 12 ಪಂದ್ಯಗಳಲ್ಲಿ 6 ಗೆಲುವು, 6 ಸೋಲು ಅನುಭವಿಸಿ 12 ಅಂಕ ಪಡೆದಿರುವ ಡೆಲ್ಲಿ, ಉಳಿದ ಎರಡು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್​ ಪ್ರೇಶಿಸುವ ಲೆಕ್ಕಾಚಾರದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಮ್ಮ ಎರಡು ಪಂದ್ಯಗಳು ಬಾಕಿ ಉಳಿದಿವೆ.

ಈ ಸೀಸನ್​​ನ ದ್ವಿತೀಯಾರ್ಧದಲ್ಲಿ ಡೆಲ್ಲಿ ಸುಧಾರಿತ ಪ್ರದರ್ಶನ ಹೊಂದಿದ್ದರೂ ತಂಡದ ಭಾರತೀಯ ಸ್ಟಾರ್ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw) ಅಸ್ಥಿರತೆಯಿಂದ ಉಳಿದಿದ್ದಾರೆ. ಪೃಥ್ವಿ ಪಾಲಿಗೆ 2023ರ ಐಪಿಎಲ್ ಅತ್ಯಂತ ಕೆಟ್ಟ ವರ್ಷವಾಗಿತ್ತು. 8 ಪಂದ್ಯಗಳಲ್ಲಿ 100 ರನ್ ಗಡಿ ದಾಟಲು ಸಹ ಸಾಧ್ಯವಾಗಿರಲಿಲ್ಲ. ಆದರೆ 2024ರಲ್ಲಿ ಅವಕಾಶ ಪಡೆದ ಆರಂಭಿಕ ಪಂದ್ಯಗಳಲ್ಲಿ ಸುಧಾರಿತ ಪ್ರದರ್ಶನ ನೀಡಿದ್ದರೂ ನಂತರ ಅದೇ ಫಾರ್ಮ್​ ಕಂಡುಕೊಳ್ಳಲು ವಿಫಲರಾದರು. ಈ ಬಾರಿಯೂ 8 ಪಂದ್ಯಗಳಲ್ಲಿ 198 ರನ್ ಗಳಿಸಿದ್ದಾರೆ. ಸ್ಟ್ರೈಕ್​ರೇಟ್ 163.64. 

ರಾಜಸ್ಥಾನ್ ರಾಯಲ್ಸ್ ವಿರುದ್ಧ ತಾನಾಡಿದ ಕೊನೆಯ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪೃಥ್ವಿ ಪ್ಲೇಯಿಂಗ್​ ಇಲೆವೆನ್ ಭಾಗವಾಗಿರಲಿಲ್ಲ. ಆರಂಭಿಕರಾಗಿ ಜೇಕ್ ಫ್ರೇಸರ್-ಮೆಕ್ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ಅತ್ಯದ್ಭುತ ಪ್ರದರ್ಶನ ನೀಡಿದರು. ಪೃಥ್ವಿ ಶಾ ಬ್ಯಾಟಿಂಗ್ ಕುರಿತು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸೀಂ ಅಕ್ರಮ್ (Wasim Akram) ಅವರು ಮಾತನಾಡಿದ್ದಾರೆ. ಬಲಗೈ ಆಟಗಾರ ಪ್ರತಿಭೆಯನ್ನು ಮೆಚ್ಚಿದ ಅಕ್ರಮ್, ಅಸಮಂಜಸ ಪ್ರದರ್ಶನ ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದಿರಲು ಕಾರಣ ಏನೆಂಬುದನ್ನು ವಿವರಿಸಿದ್ದಾರೆ. 

ಪೃಥ್ವಿ ಶಾಗೆ ಸಲಹೆ ನೀಡಿದ ವಾಸೀಂ ಅಕ್ರಮ್

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಉಪಯುಕ್ತ ಸಲಹೆಯನ್ನೂ ನೀಡಿರುವ ಅಕ್ರಮ್, ‘ನಾನು ಈ ವರ್ಷ ಅವರನ್ನು (ಪೃಥ್ವಿ) ಹತ್ತಿರದಿಂದ ಗಮನಿಸಿಲ್ಲ. ಆದರೆ ಅವರು ಮೂಲಭೂತ ವಿಷಯಗಳಿಗೆ ಮರಳಬೇಕು, ಪ್ರಥಮ ದರ್ಜೆ ಕ್ರಿಕೆಟ್ ಆಡಬೇಕು. ದೊಡ್ಡ ಸ್ಕೋರ್ ಮಾಡಬೇಕು. ಪಾರ್ಟಿಗಳಲ್ಲಿ ಸಮಯ ಕಳೆಯುವ ಬದಲು ಕ್ರಿಕೆಟ್​​ನತ್ತ ಗಮನ ಹರಿಸಬೇಕು’ ಎಂದು ಸ್ಪೋರ್ಟ್ಸ್​ ಕೀಡಾಗೆ ತಿಳಿಸಿದ್ದಾರೆ.

ಆತನಲ್ಲಿ ಕ್ರಿಕೆಟ್ ಆಡುವ ಸಾಮರ್ಥ್ಯ ಸಾಕಷ್ಟಿದೆ. ಪ್ರಥಮ ದರ್ಜೆ ಕ್ರಿಕೆಟ್ ಆಡಿ. ಸಾಕಷ್ಟು ಶತಕದ ಮೇಲೆ ಶತಕ ಸಿಡಿಸಿ. ತಮ್ಮ ಸಾಮರ್ಥ್ಯ ಸಾಬೀತುಪಡಿಸಿ. ಕಂಬ್ಯಾಕ್ ಮಾಡಿ. ರಾಷ್ಟ್ರೀಯ ತಂಡಕ್ಕೆ ಮರಳಲು ಇರುವ ದಾರಿ ಅಂದರೆ ಅದೊಂದೇ. ತಂಡಕ್ಕೆ ಮರಳಲು ಯಾವುದೇ ಶಾರ್ಟ್​ ಕಟ್ ಇಲ್ಲ. ಕಳ್ಳ ಮಾರ್ಗಗಳು ಇಲ್ಲ. ನಿಮ್ಮ ಕೈಯಲ್ಲಿ ತುಂಬಾ ಸಮಯ ಇದೆ. ಅವಕಾಶ ಕೈಬಿಡಬೇಡಿ. ಅದು ನಿಮಗೆ ಒಳ್ಳೆಯದು ಎಂದಿದ್ದಾರೆ ಅಕ್ರಮ್.

ನಿಯಮಿತವಾಗಿ ಆಡಬೇಕು ಎಂದ ಅಕ್ರಮ್

ಪೃಥ್ವಿ ಶಾ ಅವರು ಕೊನೆಯ ಬಾರಿಗೆ ಭಾರತದ ಪರ ಆಡಿದ್ದು 2021ರಲ್ಲಿ ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಸರಣಿಯಲ್ಲಿ. ಅವರು ನಿಯಮಿತವಾಗಿ ಆಡಬೇಕು, ಮೈದಾನದ ಹೊರಗೂ ತಮ್ಮನ್ನು ತಾವು ನೋಡಿಕೊಳ್ಳಬೇಕು ಎಂದು ಬದಲಾವಣೆ ಕುರಿತು ವಾಸೀಂ ಅಕ್ರಮ್ ಒತ್ತಿ ಹೇಳಿದ್ದಾರೆ. ನೀವು ನಿವೃತ್ತರಾದ ನಂತರ ನಿಮಗೆ ಬೇಕಾದಷ್ಟು ಪಾರ್ಟಿಗಳನ್ನು ಮಾಡಿ, ಆಗ ಯಾರು ಕೇರ್​ ಮಾಡುವುದಿಲ್ಲ. ಆದರೆ ಈಗ ಕ್ರಿಕೆಟ್​​ನತ್ತ ಗಮನ ಹರಿಸಿ ಎಂದು ಅವರು ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೇ 12ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

mysore-dasara_Entry_Point