ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kaatera Day 7 Collection: ಒಂದೇ ವಾರದಲ್ಲಿ ಶತಕೋಟಿಗೆ ಮುತ್ತಿಕ್ಕಿದ ಕಾಟೇರ! ದರ್ಶನ್‌ ಸಿನಿ ಕೆರಿಯರ್‌ನಲ್ಲಿ ಹೊಸ ದಾಖಲೆ ಸೃಷ್ಟಿ

Kaatera Day 7 Collection: ಒಂದೇ ವಾರದಲ್ಲಿ ಶತಕೋಟಿಗೆ ಮುತ್ತಿಕ್ಕಿದ ಕಾಟೇರ! ದರ್ಶನ್‌ ಸಿನಿ ಕೆರಿಯರ್‌ನಲ್ಲಿ ಹೊಸ ದಾಖಲೆ ಸೃಷ್ಟಿ

  • Kaatera Day 7 Collection: ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಮತ್ತು ಕರುನಾಡೇ ಮೆಚ್ಚಿದ ಕಾಟೇರ ಸಿನಿಮಾ ಕೇವಲ ಒಂದೇ ವಾರದಲ್ಲಿ 104 ಕೋಟಿ ಕಲೆಕ್ಷನ್‌ ಮಾಡಿ, ಹೊಸ ದಾಖಲೆ ಬರೆದಿದೆ. ಬರೋಬ್ಬರಿ 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಮಾರಿಕೊಂಡು ಗಳಿಕೆಯ ಮತ್ತೊಂದು ದೊಡ್ಡ ಜಿಗಿತಕ್ಕೆ ನೆಗೆದಿದೆ. ಏಳನೇ ದಿನದ ಕಲೆಕ್ಷನ್‌ ಎಷ್ಟು? ಇಲ್ಲಿದೆ ಮಾಹಿತಿ.

ಕಾಟೇರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾನೆ. ಗಳಿಕೆಯಲ್ಲಿ ನೂರು ಕೋಟಿಯ ಗಡಿ ದಾಟಿ ದಾಖಲೆ ಅಲಂಕರಿಸಿದ್ದಾನೆ. ಬಿಡುಗಡೆ ಆದಾಗಿನಿಂದ ಇಲ್ಲಿಯವರೆಗೂ ಅಂದರೆ, ಏಳು ದಿನಗಳಲ್ಲಿ ದೊಡ್ಡ ಮೊತ್ತವನ್ನೇ ಕಲೆಹಾಕಿ ಹೊಸ ದಾಖಲೆ ಬರೆದಿದೆ ಕಾಟೇರ. 
icon

(1 / 10)

ಕರ್ನಾಟಕದಲ್ಲಿ ಮಾತ್ರ ಅಬ್ಬರಿಸುತ್ತಿರುವ ಕಾಟೇರ ಸಿನಿಮಾ, ಅದರ ಘಮಲನ್ನು ಪರಭಾಷೆ ಪ್ರೇಕ್ಷಕರಿಗೂ ಹರಡುತ್ತಿದೆ.
icon

(2 / 10)

ಡಿ. 29ರಂದು ಕೇವಲ ಕರ್ನಾಟಕದಲ್ಲಷ್ಟೇ ಬಿಡುಗಡೆ ಆಗಿರುವ ಕಾಟೇರ ಸಿನಿಮಾ ಇದೀಗ ವಿದೇಶಕ್ಕೂ ಹಾರಿದೆ. ಅರಬ್‌ ದೇಶಗಳಲ್ಲೂ ಕಾಟೇರನ ಕಹಳೆ ಮೊಳಗುತ್ತಿದೆ. 
icon

(3 / 10)

ಕಾಟೇರ ಬಿಡುಗಡೆಯಾದ ಮೊದಲೇ ದಿನವೇ (ಡಿ. 29 ಶುಕ್ರವಾರ) ಕರ್ನಾಟಕದಲ್ಲಿ ಮಾತ್ರವೇ 19.79 ಕೋಟಿ ಗಳಿಸಿತ್ತು. 
icon

(4 / 10)

ಅದಾದ ಬಳಿಕ ಎರಡನೇ ದಿನ (ಡಿ.30) 17.35 ಕೋಟಿ, ಮೂರನೇ ದಿನ (ಡಿ.31) 20.96 ಕೋಟಿ, ನಾಲ್ಕನೇ ದಿನವಾದ ಸೋಮವಾರ (ಜ. 1) 18.26 ಕೋಟಿ ಗಳಿಸಿತ್ತು.
icon

(5 / 10)

ಐದನೇ ದಿನವಾದ ಮಂಗಳವಾರ (ಡಿ. 2) 9.24 ಕೋಟಿ ಗಳಿಸಿ ಒಟ್ಟಾರೆ 86.84 ಕೋಟಿ ಬಾಚಿಕೊಂಡಿತ್ತು. 
icon

(6 / 10)

ಐದನೇ ದಿನವಾದ ಮಂಗಳವಾರ (ಡಿ. 2) 9.24 ಕೋಟಿ ಗಳಿಸಿ ಒಟ್ಟಾರೆ 86.84 ಕೋಟಿ ಬಾಚಿಕೊಂಡಿತ್ತು. 

ಆರನೇ ದಿನವಾದ ಬುಧವಾರ (ಜ.3) ಕಾಟೇರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 9.78 ಕೋಟಿ ಕಲೆಕ್ಷನ್‌ ಮಾಡಿ, ಒಟ್ಟಾರೆ 95.36 ಕೋಟಿ ಕಮಾಯಿ ಮಾಡಿತ್ತು.
icon

(7 / 10)

ಗುರುವಾರ (ಜ. 4) 9.52 ಕೋಟಿ ಕಲೆಕ್ಷನ್‌ ಮಾಡಿ, ಕೇವಲ ಏಳೇ ದಿನದಲ್ಲಿ 104. 58 ಕೋಟಿ ಬಾಚಿಕೊಂಡಿದೆ ಕಾಟೇರ. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ನೂರು ಕೋಟಿ ಗಳಿಕೆ ಕಂಡ ದರ್ಶನ್‌ ಅವರ ಮೊದಲ ಸಿನಿಮಾ ಇದಾಗಿದೆ. 
icon

(8 / 10)

ರಾಬರ್ಟ್‌ ಸಿನಿಮಾ ಬಳಿಕ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ದರ್ಶನ್‌ ಕಾಂಬಿನೇಷನ್‌ನ ಎರಡನೇ ಸಿನಿಮಾ ಈ ಕಾಟೇರ. ಈ ಚಿತ್ರವೇ ಈಗ ಅತ್ಯಂತ ಕಡಿಮೆ ಅವಧಿಯಲ್ಲಿ ನೂರು ಕೋಟಿ ದಾಟಿ ನಿಂತಿದೆ. 
icon

(9 / 10)

ರಾಕ್‌ಲೈನ್‌ ವೆಂಕಟೇಶ್‌ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. 
icon

(10 / 10)

ರಾಕ್‌ಲೈನ್‌ ವೆಂಕಟೇಶ್‌ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು