ಕನ್ನಡ ಸುದ್ದಿ  /  Photo Gallery  /  Spiritual News Temples In India Vaishno Devi To Kedarnath 7 Famous Temples In India You Must Visit Indian Tourism Rst

Temples in India: ವೈಷ್ಣೋದೇವಿಯಿಂದ ಕೇದಾರನಾಥದವರೆಗೆ, ಭಾರತದ 7 ಪ್ರಸಿದ್ಧ ದೇವಾಲಯಗಳಿವು; ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

  • ಭಾರತವು ಹಲವು ಕಾರಣಗಳಿಂದ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದೆ. ದೇವಾಲಯಗಳ ನಾಡು ಎಂದೇ ಪ್ರಸಿದ್ಧಿಯಾಗಿರುವ ಭಾರತದಲ್ಲಿ ನೂರಾರು ದೇವಾಲಯಗಳಿವೆ. ನೀವು ದೈವಭಕ್ತರಾಗಿದ್ದರೆ ಭಾರತದ ಈ 7 ದೇವಾಲಯಗಳಿಗೆ ಒಮ್ಮೆಯಾದ್ರೂ ಭೇಟಿ ನೀಡಲೇಬೇಕು, ಅದಕ್ಕೂ ಮುಂಚೆ ಇಲ್ಲಿನ ವೈಶಿಷ್ಟ್ಯ ತಿಳಿಯಿರಿ. 

ಭಾರತವು ಸಂಸ್ಕೃತಿ, ಆಚರಣೆಯ ನಲೆವೀಡು. ಹಿಂದೂಗಳ ರಾಷ್ಟ್ರವಾಗಿರುವ ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಆದರೆ ಭಾರತದಲ್ಲಿನ ಈ 7 ಪ್ರಸಿದ್ಧ ದೇವಾಲಯಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ನೀವು ದೈವಭಕ್ತರಾಗಿದ್ದರೆ ಜೀವನದಲ್ಲಿ ಒಮ್ಮೆಯಾದ್ರೂ ಈ ದೇಗುಲಗಳಿಗೆ ಭೇಟಿ ನೀಡಿ, ದೇವರ ಅನುಗ್ರಹ ಪಡೆಯಿರಿ. 
icon

(1 / 9)

ಕಾಶಿವಿಶ್ವನಾಥ ದೇವಾಲಯ: ಉತ್ತರಪ್ರದೇಶದ ವಾರಣಸಿ ಹಳೇ ಬೀದಿಯ ಸಮೀಪದಲ್ಲಿದೆ ಕಾಶಿ ವಿಶ್ವನಾಥ ದೇವಾಲಯ. ಹಿಂದೂ ಸಮುದಾಯಕ್ಕೆ ಈ ದೇಗುಲ ಅತ್ಯಂತ ಪ್ರಸಿದ್ಧ ಎಂದು ಪರಿಗಣಿಸಲಾಗಿದೆ. ಪುಣ್ಯ ಮಾಡಿದವರಷ್ಟೇ ಕಾಶಿಗೆ ಹೋಗಲು ಸಾಧ್ಯ ಎಂಬ ನಂಬಿಕೆ ಹಿಂದಿನಿಂದಲೂ ಬೆಳೆದು ಬಂದಿದೆ. ಇದು ಪವಿತ್ರ ಗಂಗಾ ನದಿಯ ತಟದಲ್ಲಿರುವ ದೇಗುಲವಾಗಿದೆ. 
icon

(2 / 9)

ಪುರಿ ಜಗನ್ನಾಥ ದೇವಾಲಯ: ಒಡಿಶಾ ರಾಜ್ಯದಲ್ಲಿರುವ ಈ ದೇಗುಲವು ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಹಲವು ಕಾರಣದಿಂದ ಈ ದೇವಸ್ಥಾನ ಜಗತ್ಪ್ರಸಿದ್ಧವಾಗಿದೆ. ಇಲ್ಲಿ ವರ್ಷಕೊಮ್ಮೆ ರಥಯಾತ್ರೆ ನಡೆಯುತ್ತದೆ. ಪ್ರಪಂಚದಾದ್ಯಂತ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 
icon

(3 / 9)

ಸಿದ್ಧಿವಿನಾಯಕ ದೇವಸ್ಥಾನ ಮುಂಬೈ: ಗಣೇಶನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಬಾಲಿವುಡ್‌ ಸ್ಟಾರ್‌ಗಳ ಫೇವರಿಟ್‌ ದೇಗುಲವಿದು ಅಂತಲೇ ಹೇಳಬಹುದು. ದೇಶದ ಖ್ಯಾತ ಉದ್ಯಮಿಗಳು ಇಲ್ಲಿಗೆ ಭೇಟಿ ನೀಡಿ ಗಣಪ ಅನುಗ್ರಹ ಪಡೆಯುತ್ತಾರೆ. ದೇಶದ ಶ್ರೀಮಂತ ದೇಗುಲಗಳಲ್ಲಿ ಇದು ಕೂಡ ಒಂದು. 
icon

(4 / 9)

ವೈಷ್ಣೋದೇವಿ ದೇವಾಲಯ ಕತ್ರಾ: ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಈ ದೇವಾಲಯವು ಹಿಂದೂಗಳ ಪವಿತ್ರ ದೇವಸ್ಥಾನಗಳಲ್ಲಿ ಒಂದು. ಜಮ್ಮುವಿನಲ್ಲಿ ಈ ದೇವಾಲಯವು ಅದ್ಭುತ ಪ್ರಕೃತಿ ಸೌಂದರ್ಯದಿಂದ ಸುತ್ತುವರಿದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ವೈಷ್ಣೋದೇವಿ ಸನ್ನಿಧಾನಕ್ಕೆ ಬಂದು ದೇವಿಯ ಆಶೀರ್ವಾದ ಪಡೆಯುತ್ತಾರೆ. 
icon

(5 / 9)

ಸೋಮನಾಥ ದೇವಾಲಯ: ಇದು ಭಾರತದ ಪುರಾತನ ದೇವಸ್ಥಾನಗಳಲ್ಲಿ ಒಂದು. ಗುಜರಾತ್‌ನ ಸೌರಾಷ್ಟ್ರದಲ್ಲಿರುವ ಈ ದೇವಾಲಯವು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಾಯಲವು ಚಂದ್ರ ದೇವನಿಗೆ ಸಮರ್ಪಿತವಾಗಿದೆ. ಭಾರತದಲ್ಲಿನ 12 ಜೋತಿರ್ಲಿಂಗಗಳಲ್ಲಿ ಇದೂ ಒಂದು. 
icon

(6 / 9)

ಕೇದಾರನಾಥ ದೇವಾಲಯ: ಭಾರತದ ಅತ್ಯಂತ ಪ್ರಸಿದ್ಧ ಶಿವ ದೇವಸ್ಥಾನಗಳಲ್ಲಿ ಇದೂ ಒಂದು. ಉತ್ತರಾಖಂಡ ರಾಜ್ಯದ ಕೇದಾರನಾಥ ಪಟ್ಟಣದಲ್ಲಿರುವ ಈ ದೇವಾಲಯವು ಸಮುದ್ರಮಟ್ಟದಿಂದ 3583 ಮೀಟರ್‌ ಎತ್ತರದಲ್ಲಿದೆ. ಈ ದೇವಾಲಯವು ಏಪ್ರಿಲ್‌ನಿಂದ ನವೆಂಬರ್‌ವರೆಗೆ ತೆರೆದಿರುತ್ತದೆ. ಶ್ರಾವಣ ಮಾಸದಲ್ಲಿ ಸಾಕಷ್ಟು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 
icon

(7 / 9)

ಅನಂತ ಪದ್ಮನಾಭಸ್ವಾಮಿ ದೇವಸ್ಥಾನ: ಭಾರತದ ಅತ್ಯಂತ ಶ್ರೀಮಂತ ದೇವರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯವು ಕೇರಳದ ತಿರುವನಂತಪುರದಲ್ಲಿದೆ. ಇದು ಭಾರತ ಮಾತ್ರವಲ್ಲ, ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಎನ್ನಿಸಿಕೊಂಡಿದೆ. 
icon

(8 / 9)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(9 / 9)

ಇತರ ಗ್ಯಾಲರಿಗಳು