ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ

ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತೀಯರಿವರು; ಅವಿಸ್ಮರಣೀಯ ಗೆಲುವಿನ ಕ್ಷಣದ ಚಿತ್ರಗುಚ್ಛ

  • ಒಲಿಂಪಿಕ್ಸ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಕ್ರೀಡಾಪಟುಗಳು ಈವರೆಗೆ ವೈಯಕ್ತಿಕ ವಿಭಾಗದಲ್ಲಿ ಒಟ್ಟು 23 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 19 ಪದಕಗಳು 21ನೇ ಶತಮಾನದಲ್ಲಿ ಬಂದಿವೆ.

ಒಲಿಂಪಿಕ್ಸ್‌ನಲ್ಲಿ ಭಾರತ ದೇಶ ಈವರೆಗೆ ಒಟ್ಟು 35 ಪದಕಗಳನ್ನು ಗೆದ್ದಿದೆ, ಅದರಲ್ಲಿ 12 ಪದಕಗಳನ್ನು ಪುರುಷರ ಹಾಕಿ ತಂಡವೊಂದೇ ಗೆದ್ದ ಸಾಧನೆ ಮಾಡಿದೆ. ಈಗ ಭಾರತದ ಕ್ರೀಡಾಪಟುಗಳು ವೈಯಕ್ತಿಕವಾಗಿ ಗೆದ್ದ ಪದಕಗಳು ಯಾವುವು ಎಂಬುದನ್ನು ನೋಡೋಣ.
icon

(1 / 20)

ಒಲಿಂಪಿಕ್ಸ್‌ನಲ್ಲಿ ಭಾರತ ದೇಶ ಈವರೆಗೆ ಒಟ್ಟು 35 ಪದಕಗಳನ್ನು ಗೆದ್ದಿದೆ, ಅದರಲ್ಲಿ 12 ಪದಕಗಳನ್ನು ಪುರುಷರ ಹಾಕಿ ತಂಡವೊಂದೇ ಗೆದ್ದ ಸಾಧನೆ ಮಾಡಿದೆ. ಈಗ ಭಾರತದ ಕ್ರೀಡಾಪಟುಗಳು ವೈಯಕ್ತಿಕವಾಗಿ ಗೆದ್ದ ಪದಕಗಳು ಯಾವುವು ಎಂಬುದನ್ನು ನೋಡೋಣ.(AP / PTI)

ಕುಸ್ತಿಪಟು ಕೆಡಿ ಜಾಧವ್ ದೇಶದ ಸ್ವತಂತ್ರ ಇತಿಹಾಸದಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಬ್ಯಾಂಟಮ್ ವೇಟ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ ಜಾಧವ್ ಕಂಚಿನ ಪದಕ ಗೆದ್ದರು. 
icon

(2 / 20)

ಕುಸ್ತಿಪಟು ಕೆಡಿ ಜಾಧವ್ ದೇಶದ ಸ್ವತಂತ್ರ ಇತಿಹಾಸದಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಬ್ಯಾಂಟಮ್ ವೇಟ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ ಜಾಧವ್ ಕಂಚಿನ ಪದಕ ಗೆದ್ದರು. (Olympics)

ಲಿಯಾಂಡರ್ ಪೇಸ್ 1995ರ ಅಟಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. 1980ರಲ್ಲಿ ಪುರುಷರ ಹಾಕಿ ತಂಡದ ಚಿನ್ನದ ನಂತರ ದೇಶಕ್ಕೆ ಇದು ಮೊದಲನೆ ಪದಕ. ಪೇಸ್ ಸೆಮಿಫೈನಲ್‌ನಲ್ಲಿ ಚಿನ್ನದ ಪದಕ ವಿಜೇತ ಆಂಡ್ರೆ ಅಗಾಸ್ಸಿ ವಿರುದ್ಧ ಸೋತರು. ಕಂಚಿನ ಪದಕದ ಪಂದ್ಯದಲ್ಲಿ ಬ್ರೆಜಿಲ್‌ನ ಫರ್ನಾಂಡೊ ಮೆಲಿಗೆನಿ ಅವರನ್ನು ಎದುರಿಸಿ 3-6, 6-2, 6-4 ಸೆಟ್ ಗಳಿಂದ ಗೆದ್ದರು.
icon

(3 / 20)

ಲಿಯಾಂಡರ್ ಪೇಸ್ 1995ರ ಅಟಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. 1980ರಲ್ಲಿ ಪುರುಷರ ಹಾಕಿ ತಂಡದ ಚಿನ್ನದ ನಂತರ ದೇಶಕ್ಕೆ ಇದು ಮೊದಲನೆ ಪದಕ. ಪೇಸ್ ಸೆಮಿಫೈನಲ್‌ನಲ್ಲಿ ಚಿನ್ನದ ಪದಕ ವಿಜೇತ ಆಂಡ್ರೆ ಅಗಾಸ್ಸಿ ವಿರುದ್ಧ ಸೋತರು. ಕಂಚಿನ ಪದಕದ ಪಂದ್ಯದಲ್ಲಿ ಬ್ರೆಜಿಲ್‌ನ ಫರ್ನಾಂಡೊ ಮೆಲಿಗೆನಿ ಅವರನ್ನು ಎದುರಿಸಿ 3-6, 6-2, 6-4 ಸೆಟ್ ಗಳಿಂದ ಗೆದ್ದರು.(Getty Images)

ಕರ್ಣಂ ಮಲ್ಲೇಶ್ವರಿ 2000ರ ಸಿಡ್ನಿಯಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳೆಯರ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಮಲ್ಲೇಶ್ವರಿ ಪದಕ ಗೆದ್ದರು.
icon

(4 / 20)

ಕರ್ಣಂ ಮಲ್ಲೇಶ್ವರಿ 2000ರ ಸಿಡ್ನಿಯಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳೆಯರ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಮಲ್ಲೇಶ್ವರಿ ಪದಕ ಗೆದ್ದರು.(Getty Images )

ರಾಜ್ಯವರ್ಧನ್ ಸಿಂಗ್ ರಾಥೋಡ್ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಏಕೈಕ ಪದಕ ವಿಜೇತರಾಗಿದ್ದರು. ರಾಥೋಡ್ ವೈಯಕ್ತಿಕ ಬೆಳ್ಳಿ ಗೆದ್ದ ಮೊದಲ ಭಾರತೀಯ. ಪುರುಷರ ಟ್ರ್ಯಾಪ್ ಶೂಟಿಂಗ್‌ನಲ್ಲಿ ಈ ಪದಕ ಬಂದಿದೆ.
icon

(5 / 20)

ರಾಜ್ಯವರ್ಧನ್ ಸಿಂಗ್ ರಾಥೋಡ್ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಏಕೈಕ ಪದಕ ವಿಜೇತರಾಗಿದ್ದರು. ರಾಥೋಡ್ ವೈಯಕ್ತಿಕ ಬೆಳ್ಳಿ ಗೆದ್ದ ಮೊದಲ ಭಾರತೀಯ. ಪುರುಷರ ಟ್ರ್ಯಾಪ್ ಶೂಟಿಂಗ್‌ನಲ್ಲಿ ಈ ಪದಕ ಬಂದಿದೆ.(Getty Images)

2008ರಲ್ಲಿ ಬೀಜಿಂಗ್‌ ಗೇಮ್ಸ್‌ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಗೆಲ್ಲುವ ಮೂಲಕ ಅಭಿನವ್ ಬಿಂದ್ರಾ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1980ರಲ್ಲಿ ಪುರುಷರ ಹಾಕಿ ತಂಡವು ಬಂಗಾರ ಗೆದ್ದ ನಂತರ ಇದು ಒಟ್ಟಾರೆಯಾಗಿ ಭಾರತಕ್ಕೆ ಮೊದಲ ಚಿನ್ನ.
icon

(6 / 20)

2008ರಲ್ಲಿ ಬೀಜಿಂಗ್‌ ಗೇಮ್ಸ್‌ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಗೆಲ್ಲುವ ಮೂಲಕ ಅಭಿನವ್ ಬಿಂದ್ರಾ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1980ರಲ್ಲಿ ಪುರುಷರ ಹಾಕಿ ತಂಡವು ಬಂಗಾರ ಗೆದ್ದ ನಂತರ ಇದು ಒಟ್ಟಾರೆಯಾಗಿ ಭಾರತಕ್ಕೆ ಮೊದಲ ಚಿನ್ನ.(Getty Images)

ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ವಿಜೇಂದರ್ ಸಿಂಗ್ ಪಾತ್ರರಾಗಿದ್ದಾರೆ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 75 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 
icon

(7 / 20)

ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ವಿಜೇಂದರ್ ಸಿಂಗ್ ಪಾತ್ರರಾಗಿದ್ದಾರೆ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 75 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. (Getty Images)

ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪುರುಷರ 66 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ 66 ಕೆಜಿ ಫ್ರೀಸ್ಟೈಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ  ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(8 / 20)

ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪುರುಷರ 66 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ 66 ಕೆಜಿ ಫ್ರೀಸ್ಟೈಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ  ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(AFP)

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಜಯ್ ಕುಮಾರ್ ಬೆಳ್ಳಿ ಪದಕ ಗೆದ್ದರು.
icon

(9 / 20)

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಜಯ್ ಕುಮಾರ್ ಬೆಳ್ಳಿ ಪದಕ ಗೆದ್ದರು.(PTI)

ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. 
icon

(10 / 20)

ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. (Getty Images)

ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟಿದ್ದರು. ಅವರು ಕ್ರೀಡಾಕೂಟದ ಬಾಕ್ಸಿಂಗ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(11 / 20)

ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟಿದ್ದರು. ಅವರು ಕ್ರೀಡಾಕೂಟದ ಬಾಕ್ಸಿಂಗ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(Getty Images)

ಲಂಡನ್ ಒಲಿಂಪಿಕ್ಸ್‌ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದರು.
icon

(12 / 20)

ಲಂಡನ್ ಒಲಿಂಪಿಕ್ಸ್‌ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದರು.(Getty Images)

ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ 60 ಕೆಜಿ ಫ್ರೀಸ್ಟೈಲ್‌ನಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದಾರೆ.
icon

(13 / 20)

ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ 60 ಕೆಜಿ ಫ್ರೀಸ್ಟೈಲ್‌ನಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ 58 ಕೆಜಿ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದರು. ಆ ಮೂಲಕ ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(14 / 20)

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ 58 ಕೆಜಿ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದರು. ಆ ಮೂಲಕ ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.(PTI)

ರಿಯೋ ಡಿ ಜನೈರೊದಲ್ಲಿ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ತಲುಪಿದ ಸಿಂಧು ಬೆಳ್ಳಿಗೆ ತೃಪ್ತಿಪಟ್ಟರು. ಫೈನಲ್ನಲ್ಲಿ ಅವರು ಸ್ಪೇನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ 21-19, 12-21, 15-21 ಅಂತರದಲ್ಲಿ ಸೋತರು. ಆ ಬಳಿಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು, ಸುಶೀಲ್ ಕುಮಾರ್ ನಂತರ ಸತತ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕಗಳನ್ನು ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(15 / 20)

ರಿಯೋ ಡಿ ಜನೈರೊದಲ್ಲಿ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ತಲುಪಿದ ಸಿಂಧು ಬೆಳ್ಳಿಗೆ ತೃಪ್ತಿಪಟ್ಟರು. ಫೈನಲ್ನಲ್ಲಿ ಅವರು ಸ್ಪೇನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ 21-19, 12-21, 15-21 ಅಂತರದಲ್ಲಿ ಸೋತರು. ಆ ಬಳಿಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು, ಸುಶೀಲ್ ಕುಮಾರ್ ನಂತರ ಸತತ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕಗಳನ್ನು ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(Reuters file photo)

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ವೇಟ್ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರು. 2021ರಲ್ಲಿ ಭಾರತೀಯರು ಗೆದ್ದ ದಾಖಲೆಯ ಏಳು ಪದಕಗಳಲ್ಲಿ ಇದು ಮೊದಲನೆಯದು.
icon

(16 / 20)

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ವೇಟ್ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರು. 2021ರಲ್ಲಿ ಭಾರತೀಯರು ಗೆದ್ದ ದಾಖಲೆಯ ಏಳು ಪದಕಗಳಲ್ಲಿ ಇದು ಮೊದಲನೆಯದು.(PTI)

ಲೊವ್ಲಿನಾ ಬೊರ್ಗೊಹೈನ್ ಒಲಿಂಪಿಕ್ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದರು.
icon

(17 / 20)

ಲೊವ್ಲಿನಾ ಬೊರ್ಗೊಹೈನ್ ಒಲಿಂಪಿಕ್ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದರು.(AP)

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 
icon

(18 / 20)

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. (AFP)

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ಗೆದ್ದಿದ್ದಾರೆ.
icon

(19 / 20)

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕ ಗೆದ್ದಿದ್ದಾರೆ.(REUTERS)

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಚಿನ್ನದ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದರು. ಇದಕ್ಕೂ ಮೊದಲು ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆದ್ದರು. ಆ ಮೂಲಕ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಮತ್ತು ದೇಶದ ಸ್ವತಂತ್ರ ಇತಿಹಾಸದಲ್ಲಿ ಟ್ರ್ಯಾಕ್ ಮತ್ತು ಫೀಲ್ಸ್‌ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು.
icon

(20 / 20)

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಚಿನ್ನದ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದರು. ಇದಕ್ಕೂ ಮೊದಲು ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆದ್ದರು. ಆ ಮೂಲಕ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಎರಡನೇ ಭಾರತೀಯ ಮತ್ತು ದೇಶದ ಸ್ವತಂತ್ರ ಇತಿಹಾಸದಲ್ಲಿ ಟ್ರ್ಯಾಕ್ ಮತ್ತು ಫೀಲ್ಸ್‌ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು.(Getty Images)


ಇತರ ಗ್ಯಾಲರಿಗಳು