ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ
- Gas Cylinder Saving Tips: ದಿನಕಳೆದಂತೆ ದಿನಬಳಕೆ ವಸ್ತುಗಳೆಲ್ಲಾ ದುಬಾರಿಯಾಗುತ್ತಿದೆ. ಅದರಂತೆ ನಿತ್ಯ ಅಡುಗೆ ಮಾಡಲು ಬೇಕಾದ ಗ್ಯಾಸ್ ಬೆಲೆ ಕೂಡಾ ಹೆಚ್ಚುತ್ತಿದೆ. ಹೀಗಾಗಿ ಅಡುಗೆ ಅನಿಲ ಉಳಿತಾಯ ಮಾಡಲು ಏನು ಮಾಡಬಹುದು ಎಂಬ ಯೋಚನೆ ನಿಮ್ಮದಾಗಿರಬಹುದು. ಇದಕ್ಕೆ ಸಲಹೆ ಇಲ್ಲಿದೆ.
- Gas Cylinder Saving Tips: ದಿನಕಳೆದಂತೆ ದಿನಬಳಕೆ ವಸ್ತುಗಳೆಲ್ಲಾ ದುಬಾರಿಯಾಗುತ್ತಿದೆ. ಅದರಂತೆ ನಿತ್ಯ ಅಡುಗೆ ಮಾಡಲು ಬೇಕಾದ ಗ್ಯಾಸ್ ಬೆಲೆ ಕೂಡಾ ಹೆಚ್ಚುತ್ತಿದೆ. ಹೀಗಾಗಿ ಅಡುಗೆ ಅನಿಲ ಉಳಿತಾಯ ಮಾಡಲು ಏನು ಮಾಡಬಹುದು ಎಂಬ ಯೋಚನೆ ನಿಮ್ಮದಾಗಿರಬಹುದು. ಇದಕ್ಕೆ ಸಲಹೆ ಇಲ್ಲಿದೆ.
(1 / 9)
ಗ್ಯಾಸ್‌ನಲ್ಲಿ ಅಡುಗೆ ಮಾಡುವಾಗ ನೀವು ಕೆಲವು ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಅನಿಲದ ವೆಚ್ಚವನ್ನು ಕಡಿಮೆ ಮಾಡಬಹುದು. ಅಕ್ಕಿ, ಬೇಳೆಕಾಳು ಹಾಗೂ ತರಕಾರಿಗಳನ್ನು ಬೇಯಿಸುವಾಗ ಕೆಲವೊಂದು ಸಲಹೆಗಳನ್ನು ಸನುಸರಿಸಿ.(freepik)
(2 / 9)
ಬೇಯಿಸುವ ಮೊದಲು ಅಕ್ಕಿ (ಕೆಲವೊಂದು ಅಕ್ಕಿ ಮಾತ್ರ) ಮತ್ತು ಬೇಳೆಕಾಳುಗಳನ್ನು 1 ಗಂಟೆ ಕಾಲ ನೆನೆಸಿಡಿ. ಆಗ ಅವು ಮೃದುವಾಗುತ್ತದೆ. ಹೀಗಾಗಿ ಬೇಗನೆ ಬೇಯುತ್ತದೆ. ನಿಮ್ಮ ಗ್ಯಾಸ್ ಉಳಿಯುತ್ತದೆ.
(3 / 9)
ನೆನೆಸಿದ ನಂತರ, ಬೇಳೆಕಾಳುಗಳನ್ನು ಕಡಿಮೆ ಶಾಖದಲ್ಲಿ ಪಾತ್ರೆಯಲ್ಲಿ ಕುದಿಸಿ. ನಿಮಗೆ ಕುಡಿಯಲು ನೀರು ಬೇಕೆಂದರೆ, ಬೇಳೆ ಕಾಳು ಪಾತ್ರೆ ಮೇಲೆ ಮತ್ತೊಂದು ಪಾತ್ರೆ ಇರಿಸಿ. ಮೇಲಿನ ನೀರು ಕೆಳಗಿನ ಪಾತ್ರೆಯ ಶಾಖದಿಂದ ಬಿಸಿಯಾಗುತ್ತದೆ.
(4 / 9)
ನಿಮ್ಮ ಪಾತ್ರೆ ಎಷ್ಟು ದೊಡ್ಡದಿದೆಯೋ ಅದಕ್ಕೆ ತಕ್ಕನಾಗಿ ಗ್ಯಾಸ್ ಸ್ಟವ್ ಉರಿಸಿ. ಚಿಕ್ಕ ಪಾತ್ರೆ ಇದ್ದಾಗ ಸಿಮ್‌ನಲ್ಲಿಡಿ. ಆಗ ಗ್ಯಾಸ್ ಬಳಕೆ ಕಡಿಮೆಯಾಗುತ್ತದೆ.
(5 / 9)
ಅಕ್ಕಿಯನ್ನು ಬೇಯಿಸುವಾಗ ಆರಂಭದಲ್ಲಿ ದೊಡ್ಡ ಉರಿಯಲ್ಲಿ ಬೇಯಿಸಿ. ಅನ್ನ ಬೇಯುವ ಹಂತಕ್ಕೆ ಬರುವಾಗ ಸಿಮ್‌ನಲ್ಲಿಡಿ.
(6 / 9)
ತರಕಾರಿಗಳನ್ನು ಬೇಯಿಸುವಾಗಲೂ ಕೆಲವೊಂದು ಸುಲಭ ಟ್ರಿಕ್ ಅನುಸರಿಸಬೇಕು. ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುವ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
(7 / 9)
ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುವ ತರಕಾರಿಗಳನ್ನು ದೊಡ್ಡ ತುಂಡುಗಳಾಗಿ ಇಡಬಹುದು. ಅಡುಗೆ ಮಾಡುವಾಗ ತರಕಾರಿಗಳಿಗೆ ಮುಚ್ಚಳ ಮುಚ್ಚಿ ಬೇಯಿಸಿ. ಇದು ಹೆಚ್ಚು ಗ್ಯಾಸ್ ತೆಗೆದುಕೊಳ್ಳುವುದಿಲ್ಲ. ಸಾಧ್ಯವಾದಷ್ಟು ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ.
(8 / 9)
ಗ್ಯಾಸ್ ಮೇಲೆ ಮೇಲೆ ಚಹಾ ಅಥವಾ ಇತರ ಆಹಾರವನ್ನು ತಯಾರಿಸುವಾಗ ಸಣ್ಣ ಬರ್ನರ್‌ನಲ್ಲಿ ಮಧ್ಯಮ ಉರಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸಿ. ಎಲ್ಲಾ ಸಮಯದಲ್ಲಿ ಹೆಚ್ಚು ಗ್ಯಾಸ್ ವ್ಯರ್ಥವಾಗುವಂತೆ ದೊಡ್ಡ ಉರಿ ಬೇಡ. ಇದು ಸಾಕಷ್ಟು ಅನಿಲವನ್ನು ಉಳಿಸಬಹುದು.
ಇತರ ಗ್ಯಾಲರಿಗಳು