ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಮಹಿಳಾ ಚೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ದೊಡ್ಡಬಳ್ಳಾಪುರದ ಶಿಕ್ಷಕಿ ಆಯ್ಕೆ

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಮಹಿಳಾ ಚೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ದೊಡ್ಡಬಳ್ಳಾಪುರದ ಶಿಕ್ಷಕಿ ಆಯ್ಕೆ

  • Karnataka State level government employees sports meet: ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಮಹಿಳಾ ಚೆಸ್​​ ವಿಭಾಗದಲ್ಲಿ ಅಮೋಘ ಗೆಲುವು ಸಾಧಿಸಿರುವ ದೊಡ್ಡಬಳ್ಳಾಪುರದ ಜಯಶ್ರೀ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಮಹಿಳಾ ಚೆಸ್​ ವಿಭಾಗದಲ್ಲಿ ದೊಡ್ಡಬಳ್ಳಾಪುರ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಜಯಶ್ರೀ ಅಭೂತಪೂರ್ವ ಗೆಲುವು ದಾಖಲಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
icon

(1 / 7)

ಕ್ರೀಡಾಕೂಟದಲ್ಲಿ ಅತ್ಯುತ್ತಮ ಆಟದ ಕೌಶಲಗಳನ್ನು ಪ್ರದರ್ಶಿಸಿದ ಜಯಶ್ರೀ ಅವರು ಎದುರಾಳಿಗಳನ್ನು ಸುಲಭವಾಗಿ ಕಟ್ಟಿ ಹಾಕಿದರು. ಕಾಯಿಗಳನ್ನು ನಡೆಸುವಾಗ ಅತ್ಯಂತ ಜಾಣ್ಮೆ ನಡೆ ಅನುಸರಿಸಿದರು. ಯಾವ ಸಂದರ್ಭದಲ್ಲೂ ಒತ್ತಡಕ್ಕೆ ಒಳಗಾಗದೆ ಕಾಯಿಗಳನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು.
icon

(2 / 7)

ಯಾವ ವೃತ್ತಿಪರ ಆಟಗಾರರಿಗೂ ಕಡಿಮೆ ಇಲ್ಲ ಎನ್ನುವಂತೆ ಆಟವನ್ನಾಡಿದ ಜಯಶ್ರೀ, ಯಾವ ಕ್ಷಣದಲ್ಲೂ ವಿಚಲಿತರಾಗಿಲ್ಲ. ಒಂದೊಂದು ಕಾಯಿಯನ್ನೂ ಯೋಚಿಸಿ ಮುನ್ನಡೆಸಿದ ಅವರು, ಎದುರಾಳಿಯನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು.
icon

(3 / 7)

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅಮೋಘ ಗೆಲುವು ಸಾಧಿಸಿರುವ ಜಯಶ್ರೀ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದ ಮಹಿಳಾ ಚೆಸ್ ವಿಭಾಗವು ಗೋವಾದಲ್ಲಿ ನಡೆಯಲಿದೆ. ಆದರೆ ಕ್ರೀಡಾಕೂಟ ನಡೆಯುವ ದಿನಾಂಕ ಇನ್ನೂ ಅಧಿಕೃತಗೊಂಡಿಲ್ಲ.
icon

(4 / 7)

ರಾಷ್ಟ್ರಮಟ್ಟದ ಚೆಸ್ ವಿಭಾಗಕ್ಕೆ ಆಯ್ಕೆಯಾದ ಶಿಕ್ಷಕಿ ಜಯಶ್ರೀ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಅವರು ಪ್ರಶಂಸನಾ ಪತ್ರ ನೀಡಿದರು. ರಾಷ್ಟ್ರಮಟ್ಟದಲ್ಲೂ ವಿಜಯಶಾಲಿ ಆಗಲೆಂದು ಶುಭ ಹಾರೈಸಿದರು.
icon

(5 / 7)

ಜಯಶ್ರೀ ಅವರು ದೊಡ್ಡಬಳ್ಳಾಪುರ ತಾಲೂಕಿನ‌ ಸಾಸಲು ಹೋಬಳಿಯ‌ ಪುಟ್ಟಲಿಂಗಯ್ಯನಪಾಳ್ಯದವರು. ಸದ್ಯ ಅವರು ತಾಲೂಕಿನ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
icon

(6 / 7)

ಜಯಶ್ರೀ ಅವರ ಪತಿ ನರಸಿಂಹಮೂರ್ತಿ ಅವರು ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
icon

(7 / 7)

ಜಯಶ್ರೀ ಅವರ ಪತಿ ನರಸಿಂಹಮೂರ್ತಿ ಅವರು ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು