Women Health: ಮಹಿಳೆಯರಲ್ಲಿ ಕಂಡುಬರುವ ಮೂತ್ರನಾಳದ ಸೋಂಕನ್ನು ತಡೆಗಟ್ಟಲು ಇಲ್ಲಿವೆ ಒಂದಿಷ್ಟು ಉಪಯುಕ್ತ ಸಲಹೆಗಳು
International women's day 2024: ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರನಾಳದ ಸೋಂಕು ಕೂಡಾ ಒಂದು. ಸಮಸ್ಯೆ ಆರಂಭದಲ್ಲೇ ಸೋಂಕನ್ನು ತಡೆಗಟ್ಟುವ ಕೆಲವು ಪರಿಹಾರಗಳು ಇಲ್ಲಿವೆ.
(1 / 6)
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ, ಮೂತ್ರನಾಳದ ಸೋಂಕು. ಬ್ಯಾಕ್ಟೀರಿಯಾಗಳು ಗುದದ್ವಾರ ಅಥವಾ ಗುದನಾಳದಿಂದ ಮೂತ್ರಕೋಶವನ್ನು ಪ್ರವೇಶಿಸುತ್ತವೆ ಮತ್ತು ಮೂತ್ರನಾಳದ ಮೂಲಕ ಹರಡುತ್ತವೆ. ನೀವು ಯುಟಿಐ ಹೊಂದಿದ್ದರೆ, ನೀವು ಹೆಚ್ಚು ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು. ಮೂತ್ರದಲ್ಲಿ ರಕ್ತವೂ ಕಂಡುಬರುತ್ತದೆ. ಇದು ಸಂಭವಿಸದಂತೆ ತಡೆಯಲು ಕೆಲವು ಮಾರ್ಗಗಳಿವೆ.(Unsplash)
(2 / 6)
ಯುಟಿಐ (Urinary Tract Infection) ತಪ್ಪಿಸಲು ಹೆಚ್ಚು ನೀರು ಕುಡಿಯಿರಿ. ದೇಹವನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳಿ. ಮೂತ್ರ ವಿಸರ್ಜಿಸಿದಾಗ ಬ್ಯಾಕ್ಟೀರಿಯಾಗಳು ಹೊರ ಹೋಗುವ ಸಾಧ್ಯತೆ ಇದೆ.(Shutterstock)
(3 / 6)
ಮೂತ್ರ ವಿಸರ್ಜಿಸಬೇಕು ಎಂದಾಗ ನೀವು ಮೂತ್ರ ವಿಸರ್ಜನೆ ಮಾಡಬೇಕು. ಅದನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮೂತ್ರ ಬಂದಾಗಲೆಲ್ಲಾ ಆಗಲೇ ವಿಸರ್ಜಿಸಿ. (Unsplash)
(4 / 6)
ಲೈಂಗಿಕ ಕ್ರಿಯೆಗೂ ಮುನ್ನ ಹಾಗೂ ನಂತರ ಮೂತ್ರ ವಿಸರ್ಜನೆ ಮಾಡಬೇಕು. ಇದು ಸಂಭೋಗದ ಸಮಯದಲ್ಲಿ ದೇಹಕ್ಕೆ ಪ್ರವೇಶಿಸಿದ ಬ್ಯಾಕ್ಟೀರಿಯಾವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.(Freepik)
(5 / 6)
ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಆರ್ದ್ರ ವಾತಾವರಣವನ್ನು ತಪ್ಪಿಸಿ. ಬಿಗಿಯಾದ ಒಳ ಉಡುಪನ್ನು ಧರಿಸಿದರೆ ಗಾಳಿಯ ಕೊರತೆಯಿಂದ ಇಡೀ ಪ್ರದೇಶವೇ ಬೆವರುತ್ತದೆ. ಹಾಗಾಗಿ ಸಡಿಲವಾದ ಒಳ ಉಡುಪುಗಳನ್ನು ಧರಿಸಿ.(Shutterstock)
ಇತರ ಗ್ಯಾಲರಿಗಳು