ಕನ್ನಡ ಸುದ್ದಿ  /  ಕ್ರೀಡೆ  /  Neeraj Chopra Record: ನೀರಜ್ ಚೋಪ್ರಾ ಮತ್ತೊಂದು ದಾಖಲೆ; ಜಾವೆಲಿನ್‌ ಥ್ರೋನಲ್ಲಿ ವಿಶ್ವದ ನಂ 1 ಸ್ಥಾನ ಅಲಂಕರಿಸಿದ ಚಿನ್ನದ ಪದಕ ವಿಜೇತ

Neeraj Chopra Record: ನೀರಜ್ ಚೋಪ್ರಾ ಮತ್ತೊಂದು ದಾಖಲೆ; ಜಾವೆಲಿನ್‌ ಥ್ರೋನಲ್ಲಿ ವಿಶ್ವದ ನಂ 1 ಸ್ಥಾನ ಅಲಂಕರಿಸಿದ ಚಿನ್ನದ ಪದಕ ವಿಜೇತ

Neeraj Chopra Record: ಭಾರತದ ಜಾವೆಲಿನ್​ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ (Neeraj Chopra) ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅವರು ಪುರುಷರ ಜಾವೆಲಿನ್ ಎಸೆತದಲ್ಲಿ (Javelin Throw) ನಂಬರ್ ಒನ್ ಶ್ರೇಯಾಂಕ ಪಡೆದಿದ್ದಾರೆ.

ನೀರಜ್​ ಚೋಪ್ರಾ
ನೀರಜ್​ ಚೋಪ್ರಾ

ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಮಿತಿಯ ಪುರುಷರ ಜಾವೆಲಿನ್‌ ಥ್ರೋ ವಿಭಾಗದ ವಿಶ್ವ ರ್ಯಾಂಕಿಂಗ್ (World Athletics mens javelin throw rankings)​ ಬಿಡುಗಡೆಯಾಗಿದೆ. ಭಾರತದ ಸ್ಟಾರ್​ ಅಥ್ಲೀಟ್ ನೀರಜ್ ಚೋಪ್ರಾ (Neeraj Chopra) ಪುರುಷರ ಜಾವೆಲಿನ್ ಎಸೆತದ (Javelin Throw) ಶ್ರೇಯಾಂಕದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 1455 ಅಂಕ ಪಡೆದು ವಿಶ್ವದ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮತ್ತೊಂದು ಐತಿಹಾಸಿಕ ಸಾಧನೆ ಮುಡಿಗೇರಿಸಿಕೊಂಡ ನೀರಜ್‌, ಹಾಲಿ ವಿಶ್ವ ಚಾಂಪಿಯನ್ ಗ್ರನೆಡಾದ ಆ್ಯಂಡರ್​​ಸನ್ ಪೀಟರ್ಸ್ (Anderson Peters) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಗೋಲ್ಡ್​ ಮೆಡಲ್​ ಗೆದ್ದಿದ್ದ ಚೋಪ್ರಾ (Neeraj Chopra Gold win in Tokyo Olympics), ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟ ಮೊದಲ ಅಥ್ಲೀಟ್‌ ಎನಿಸಿದ್ದರು.

1455 ಅಂಕ ಪಡೆದಿರುವ ನೀರಜ್‌ ಚೋಪ್ರಾ ಮೊದಲ ಸ್ಥಾನದಲ್ಲಿದ್ದರೆ, ಆಂಡರ್​​​ಸನ್​​ 1433 ಪಾಯಿಂಟ್ಸ್​​ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. 1416 ಅಂಕ ಪಡೆದಿರುವ ಜೆಕ್‌ ಗಣರಾಜ್ಯದ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಜಾಕುಬ್‌ ವಾಡ್ಲಚ್ (Jakub Wallach) ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನಿಯ ಜೂಲಿಯನ್‌ ವೆಬರ್‌ 1385 ಅಂಕ, ಪಾಕಿಸ್ತಾನದ ಆರ್ಶದ್‌ ನದೀಮ್‌ 1306 ಅಂಕ ಪಡೆದು 4, 5ನೇ ಸ್ಥಾನ ಪಡೆದಿದ್ದಾರೆ.

ಭಾರತದ ನೀರಜ್​ ಚೋಪ್ರಾ ಅವರು ದೋಹಾದಲ್ಲಿ ನಡೆದ ಡೈಮಂಡ್​ ಲೀಗ್​​ನಲ್ಲೂ (Diamond League in doha) ಚಿನ್ನ ಗೆದ್ದಿದ್ದಾರೆ. ಪ್ರಸಕ್ತ ಆವೃತ್ತಿಯ ಮೊದಲ ಪ್ರಯತ್ನದಲ್ಲೇ 88.67 ಮೀಟರ್‌ ದೂರ ಎಸೆದಿದ್ದರು. ಇದರೊಂದಿಗೆ ದಾಖಲೆಯ 89.94 ಮೀಟರ್‌ ಸನಿಹಕ್ಕೆ ಬಂದಿದ್ದರು. ಜೂನ್ 4ರಂದು ನೆದರ್‌ಲೆಂಡ್ಸ್‌ನ ಹೆಂಗೆಲೋದಲ್ಲಿ ನಡೆಯಲಿರುವ ಫ್ಯಾನಿ ಬ್ಲಾಂಕರ್ಸ್-ಕೋಯೆನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಜೂನ್ 13 ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾಗಿಯಾಗಲಿದ್ದಾರೆ.

ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ 2ನೇ ಅಥ್ಲೀಟ್ ಎಂಬ ದಾಖಲೆಯನ್ನು ಬರೆದಿದ್ದರು. 2018ರಲ್ಲಿ ನೀರಜ್ ಚೋಪ್ರಾ ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ಯುಜೀನ್‌ನಲ್ಲಿ ನಡೆದ ಗೇಮ್ಸ್​​ನಲ್ಲಿ ನೀರಜ್​ ಚೋಪ್ರಾ, ಬೆಳ್ಳಿ ಪದಕ ಗೆದ್ದಿದ್ದರು. ಗಾಯಗೊಂಡಿದ್ದ ಕಾರಣ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ.

ಪ್ರಮುಖ ಕ್ರೀಡಾ ಸುದ್ದಿ

WTC Final: ಕಹಿ ಐಪಿಎಲ್ ಆವೃತ್ತಿ ಬೆನ್ನಲ್ಲೇ ವಿರಾಟ್ ಜೊತೆಗೆ ಇಂಗ್ಲೆಂಡ್‌ಗೆ ಹಾರಲಿದ್ದಾರೆ ಏಳು ಆಟಗಾರರು, ವರದಿ ಹೇಳಿದ್ದಿಷ್ಟು

ವಿರಾಟ್ ಕೊಹ್ಲಿಯವರ ಆರ್‌ಸಿಬಿ ತಂಡವು, ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿಯೂ ಮುಗ್ಗರಿಸಿತು. ಮತ್ತೊಂದು ಅರಗಿಸಿಕೊಳ್ಳಲಾಗದ ಆವೃತ್ತಿ ಮುಗಿಸಿದ ಬೆನ್ನಲ್ಲೇ, ವಿರಾಟ್‌ ಕೊಹ್ಲಿ ಮತ್ತೊಂದು ಸವಾಲು ಎದುರಿಸಲು ಸಿದ್ಧರಾಗಿದ್ದಾರೆ. ಟೀಮ್‌ ಇಂಡಿಯಾ ಆಟಗಾರರು ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನತ್ತ ಗಮನ ಹರಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2021ರ ಫೈನಲ್‌ನಲ್ಲಿ ಸೋತಿದ್ದ ಭಾರತ, ಈ ಬಾರಿ ಟೆಸ್ಟ್‌ ಚಾಂಪಿಯನ್‌ ಪಟ್ಟ ಒಲಿಸಿಕೊಳ್ಳುವ ವಿಶ್ವಾಸದಲ್ಲಿದೆ. ಸದ್ಯ ನಾಲ್ಕು ತಂಡಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಐಪಿಎಲ್‌ನ ಪ್ರಸಕ್ತ ಆವೃತ್ತಿಯಿಂದ ಎಲಿಮನೇಟ್‌ ಆಗಿವೆ. ಹೀಗಾಗಿ ಆರ್‌ಸಿಬಿಯ ವಿರಾಟ್‌, ಸಿರಾಜ್‌ ಸೇರಿದಂತೆ ಕೆಲವು ಪ್ರಮುಖ ಆಟಗಾರರು ಇಂಗ್ಲೆಂಡ್‌ಗೆ ಹಾರಲು ಸಜ್ಜಾಗಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.