ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ಸಚಿನ್​, ಧೋನಿ ಅಲ್ಲ; ಐಪಿಎಲ್​​ನ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಹೆಸರಿಸಿದ ವಿರಾಟ್​ ಕೊಹ್ಲಿ

Virat Kohli: ಸಚಿನ್​, ಧೋನಿ ಅಲ್ಲ; ಐಪಿಎಲ್​​ನ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಹೆಸರಿಸಿದ ವಿರಾಟ್​ ಕೊಹ್ಲಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡದ ಸ್ಟಾರ್​​​ ಬ್ಯಾಟರ್​​ ವಿರಾಟ್​ ಕೊಹ್ಲಿ (Virat Kohli), ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಆದರೆ ಎಂಎಸ್​ ಧೋನಿ (MS Dhoni) ಮತ್ತು ಸಚಿನ್​ ತೆಂಡೂಲ್ಕರ್​ (Sachin Tendulkar) ಹೆಸರನ್ನೇ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಇಂಡಿಯನ್​ ಪ್ರೀಮಿಯರ್ ಲೀಗ್ (IPL 2023)​ ಇತಿಹಾಸದಲ್ಲಿ ಘಟಾನುಘಟಿ ಆಟಗಾರರು ಕಾಣಿಸಿಕೊಂಡಿದ್ದಾರೆ. ವಿಶ್ವ ಶ್ರೇಷ್ಠ ಆಟಗಾರರೇ ಐಪಿಎಲ್​ ಅಖಾಡದಲ್ಲಿ ರನ್​ ಮಳೆ ಸುರಿಸಿದ್ದಾರೆ. ವಿಕೆಟ್​​ ಬೇಟೆಯಾಡಿದ್ದಾರೆ. ಸಚಿನ್​ ತೆಂಡೂಲ್ಕರ್​, ಸನತ್​ ಜಯಸೂರ್ಯ, ಸುರೇಶ್​ ರೈನಾ, ಎಂಎಸ್​ ಧೋನಿ, ರೋಹಿತ್​ ಶರ್ಮಾ, ಡ್ವೇನ್​ ಬ್ರಾವೋ, ಕ್ರಿಸ್​ ಗೇಲ್​.. ಹೀಗೆ ಪ್ರಮುಖ ಆಟಗಾರರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೆ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​​​ ಬ್ಯಾಟರ್​​ ವಿರಾಟ್​ ಕೊಹ್ಲಿ (Virat Kohli), ಈ ಮೇಲೆ ಗುರುತಿಸಿದ ಎಲ್ಲರನ್ನೂ ಬಿಟ್ಟು, ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಜಿಯೋ ಸಿನಿಮಾದಲ್ಲಿ ರಾಬಿನ್​ ಉತ್ತಪ್ಪ (Robin Uthappa) ನಡೆಸಿದ ಸಂದರ್ಶನದಲ್ಲಿ ಕಿಂಗ್​ ಕೊಹ್ಲಿ, ಗುರು ಎಂಎಸ್​ ಧೋನಿ (MS Dhoni) ಮತ್ತು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ (Sachin Tendulkar) ಹೆಸರನ್ನೇ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.

ಎಬಿಡಿ ಮತ್ತು ಮಲಿಂಗ್​​ ಫೇವರಿಟ್​

ಪಂಜಾಬ್ ಕಿಂಗ್ಸ್‌ (Punjab Kings) ಎದುರಿನ ಪಂದ್ಯಕ್ಕೂ ಮುನ್ನ ಜಿಯೋ ಸಿನಿಮಾದ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಕೊಹ್ಲಿ ವಿಚಾರಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಎದುರಾದ ಐಪಿಎಲ್‌ನ ಆಲ್​​ ಟೈಮ್​ ಗ್ರೇಟ್​ ಕ್ರಿಕೆಟರ್​ ಯಾರು ಎನ್ನುವ ಕ್ಲಿಷ್ಠಕರ ಪ್ರಶ್ನೆಗೆ ವಿರಾಟ್ ಕೊಹ್ಲಿ, ಒಬ್ಬರನ್ನು ಗುರುತಿಸದೆ ಇಬ್ಬರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಒಬ್ಬರು ಅವರ ಆಪ್ತ ಗೆಳೆಯ ಎಂಬುದು ವಿಶೇಷ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ಮೊದಲಿ ಆರ್​ಸಿಬಿ ಆಪತ್ಭಾಂಧವ, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ (AB de Villiers). ಮತ್ತೊಬ್ಬ ಆಟಗಾರ ಅಂದರೆ ಮುಂಬೈ ತಂಡದ ಮಾಜಿ ಆಟಗಾರ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ (Lasith Malinga) ಎಂದು ಕೊಹ್ಲಿ ತನ್ನ ಅಭಿಪ್ರಾಯ ಹೊರ ಹಾಕಿದ್ದಾರೆ. ಕೆಲವರು ಸಚಿನ್​ ಮತ್ತು ಧೋನಿ ಹೆಸರನ್ನು ಗುರುತಿಸದಿರುವುದಕ್ಕೆ ಬೇಸರ ಹೊರ ಹಾಕಿದ್ದಾರೆ.

ಸೌತ್​ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ 2011ರ ಬಳಿಕ ಆರ್​​ಸಿಬಿ ತಂಡ ಭಾಗವಾಗಿದ್ದಾರೆ. ವಿಲಿಯರ್ಸ್​ ಕಳೆದ ವರ್ಷವೇ ಐಪಿಎಲ್​​ ಸೇರಿ ಎಲ್ಲಾ ಟಿ20 ಮಾದರಿ ಕ್ರಿಕೆಟ್​​ಗೆ ಗುಡ್​ಬೈ ಹೇಳಿದ್ದರು. ಈವರೆಗೂ 184 ಐಪಿಎಲ್ ಪಂದ್ಯಗಳನ್ನಾಡಿದ್ದು, 39.71ರ ಬ್ಯಾಟಿಂಗ್ ಸರಾಸರಿಯಲ್ಲಿ 5162 ರನ್‌ ಸಿಡಿಸಿದ್ದಾರೆ. 40 ಅರ್ಧಶತಕಗಳನ್ನು ಸಿಡಿಸಿ, 3 ಶತಕಗಳನ್ನೂ ಚಚ್ಚಿದ್ದಾರೆ.

ಯಾರ್ಕರ್​ ಸ್ಪೆಷಲಿಸ್ಟ್​, ಡೆತ್‌ ಓವರ್‌ ಸ್ಪೆಷಲಿಸ್ಟ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಮುಂಬೈ ಇಂಡಿಯನ್ಸ್‌ಗೆ ಏಕಾಂಗಿಯಾಗಿ ಅದೆಷ್ಟೋ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಮಾಲಿಂಗ ಒಟ್ಟು122 ಪಂದ್ಯಗಳನ್ನಾಡಿದ್ದು, 7.14ರ ಎಕನಮಿಯಲ್ಲಿ ಬರೋಬ್ಬರಿ 170 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಪ್ರಸ್ತುತ ಅವರು ರಾಜಸ್ಥಾನ್​​​ ರಾಯಲ್ಸ್​ ತಂಡದ ಬೌಲಿಂಗ್​ ಕೋಚ್​ ಆಗಿ ನೇಮಕಗೊಂಡಿದ್ದಾರೆ.

ಇನ್ನು ವೆಸ್ಟ್​ ಇಂಡೀಸ್​​ ತಂಡದ ಸುನಿಲ್ ನರೈನ್ (Sunil Narine) ಹಾಗೂ ಅಫ್ಘಾನಿಸ್ತಾನ ತಂಡದ ರಶೀದ್ ಖಾನ್ (Rashid Khan) ಈ ಇಬ್ಬರಲ್ಲಿ ಅತ್ಯುತ್ತಮ ಸ್ಪಿನ್ನರ್ ಯಾರೆಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ, ಯೋಚಿಸಿ ಉತ್ತರ ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ರಶೀದ್ ಖಾನ್ ಉತ್ತಮ ಸ್ಪಿನ್ನರ್ ಎಂದಿದ್ದಾರೆ. 24 ವರ್ಷದ ರಶೀದ್​ ಖಾನ್​​​ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 539 ವಿಕೆಟ್​ ಉರುಳಿಸಿದ್ದಾರೆ. ಹಾಗೆಯೇ ಸುನಿಲ್​ ನರೈನ್​ ಟಿ20 ಕ್ರಿಕೆಟ್​​ನಲ್ಲಿ 484 ವಿಕೆಟ್​ ಬೇಟೆಯಾಡಿದ್ದಾರೆ.