ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ಹೊರಗಿನವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ; ತನ್ನ ಸ್ಟ್ರೈಕ್​ರೇಟ್ ಬಗ್ಗೆ ಟೀಕಿಸಿದವರಿಗೆ ಚಾಟಿ ಬೀಸಿದ ವಿರಾಟ್ ಕೊಹ್ಲಿ

Virat Kohli: ಹೊರಗಿನವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ; ತನ್ನ ಸ್ಟ್ರೈಕ್​ರೇಟ್ ಬಗ್ಗೆ ಟೀಕಿಸಿದವರಿಗೆ ಚಾಟಿ ಬೀಸಿದ ವಿರಾಟ್ ಕೊಹ್ಲಿ

ಕಳೆದ ಕೆಲವು ಪಂದ್ಯಗಳಲ್ಲಿ ನಿಧಾನವಾಗಿ ಬ್ಯಾಟ್​ ಬೀಸಿದ್ದಾರೆ. ಇದು ಟಿ20 ಕ್ರಿಕೆಟ್​ಗೆ ತಕ್ಕುದಾದ ಆಟವಲ್ಲ. ಯುವ ಆಟಗಾರರು ನಿಮಗಿಂತ ಉತ್ತಮ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದರು. ಅಂತಹವರಿಗೆ ವಿರಾಟ್​ ಕೊಹ್ಲಿ ಚಾಟಿ ಬೀಸಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ಎದುರಿನ ಪಂದ್ಯದಲ್ಲಿ ಬೆಂಕಿ ಬಿರುಗಾಳಿ ಬ್ಯಾಟಿಂಗ್​ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (RCB Star Batter Virat Kohli Century), 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿದರು. 62 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ, ಒಟ್ಟಾರೆ ಐಪಿಎಲ್​ನಲ್ಲಿ ತಮ್ಮ 6ನೇ ಶತಕ ಸಿಡಿಸಿದರು. ಅವರ ಸೆಂಚುರಿ ಸಹಾಯದಿಂದ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಟ್ರೆಂಡಿಂಗ್​ ಸುದ್ದಿ

ಈ ಭರ್ಜರಿ ಗೆಲುವಿನೊಂದಿಗೆ ಬೆಂಗಳೂರು ಪ್ಲೇ ಆಫ್​ (Play Off) ಆಸೆಯನ್ನು ಮತ್ತಷ್ಟು ಜೀವಂತವಾಗಿ ಉಳಿಸಿಕೊಂಡಿದೆ. ಕೊಹ್ಲಿ ಅವರ ಶತಕ (100), ನಾಯಕ ಫಾಫ್ ಡು ಪ್ಲೆಸಿಸ್ (71), ಆರ್‌ಸಿಬಿ 187 ರನ್‌ಗಳನ್ನು ಚೇಸ್‌ ಮಾಡುವಲ್ಲಿ ಯಶಸ್ವಿಯಾಯಿತು. ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ತಲುಪಿತು. ಪಂದ್ಯ ಮುಕ್ತಾಯದ ನಂತರ ಮಾತನಾಡಿದ ಕೊಹ್ಲಿ, ತನ್ನ ಸ್ಟ್ರೈಕ್​ರೇಟ್ ​ಬಗ್ಗೆ ಟೀಕಿಸಿದವರಿಗೆ ತಿರುಗೇಟು (Virat Kohli on Strike Rate) ನೀಡಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ನಿಧಾನವಾಗಿ ಬ್ಯಾಟ್​ ಬೀಸಿದ್ದಾರೆ. ಇದು ಟಿ20 ಕ್ರಿಕೆಟ್​ಗೆ ತಕ್ಕುದಾದ ಆಟವಲ್ಲ. ಯುವ ಆಟಗಾರರು ನಿಮಗಿಂತ ಉತ್ತಮ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದರು. ಟೂರ್ನಿ ಆರಂಭದಲ್ಲೂ ಟೀಕೆ ಎದುರಿಸಿದ್ದರು. ಕಳೆದ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ 20 ಎಸೆತಗಳಲ್ಲಿ 32 ರನ್ ಗಳಿಸಿದ ಕೊಹ್ಲಿ, 62 ಎಸೆತಗಳಲ್ಲಿ ತಮ್ಮ ಶತಕ ತಲುಪಿದರು.

ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, 'ನಾನು ಈಗಾಗಲೇ ತುಂಬಾ ಒತ್ತಡಕ್ಕೆ ಒಳಗಾಗಿದ್ದೇನೆ. ಆದರೆ ಹೊರಗಿನವರು ಏನು ಹೇಳುತ್ತಾರೆಂದು ತಲೆ ಕಡಿಸಿಕೊಳ್ಳುವುದಿಲ್ಲ. ಆ ಕಡೆ ಗಮನವೂ ನೀಡುವುದಿಲ್ಲ. ಏಕೆಂದರೆ ಅದು ಅವರ ಅಭಿಪ್ರಾಯ. ಆದರೆ ಅಂತಹ ಪರಿಸ್ಥಿತಿ ತಿಳಿದು ಹೇಗೆ ಆಡಿದರೆ ಗೆಲ್ಲಬಹುದು ಎಂಬುದು ತಿಳಿದಿದೆ. ತುಂಬಾ ಸಮಯದಿಂದಲೂ ಅದನ್ನೇ ಮಾಡಿದ್ದೇನೆ. ತಂಡಕ್ಕೆ ಗೆಲುವು ತಂದುಕೊಡುವುದು ಅಷ್ಟೇ ಅಲ್ಲ, ಹೆಮ್ಮೆಪಡುವಂತೆ ಮಾಡುವುದೇ ನನ್ನ ಗುರಿ ಎಂದು ಹೇಳಿದ್ದಾರೆ.

ಜೊತೆಯಾಟದ ಬಗ್ಗೆ ಮಾತನಾಡಿದ ಕೊಹ್ಲಿ, ನಾವು ಉತ್ತಮ ಆರಂಭವನ್ನು ಬಯಸಿದ್ದೆವು. ಆದರೆ, ಮೊದಲ ವಿಕೆಟ್​ಗೆ 172 ರನ್​ ನಿರೀಕ್ಷಿಸಿರಲಿಲ್ಲ. ಆದರೆ, ಈ ಋತುವಿನಲ್ಲಿ ಫಾಫ್ ಮತ್ತು ನಾನು ಎಷ್ಟು ತುಂಬಾ ಅದ್ಭುತವಾಗಿ ಆಡಿದ್ದೇವೆ. ಫಾಫ್ ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದಾರೆ. ನಾನು ಒಂದೆರಡು ಇನ್ನಿಂಗ್ಸ್​ಗಳಲ್ಲಿ ತಾಳ್ಮೆಯುತ ಆಟವಾಡಿದ್ದೇನೆ. ನಾನು ನೆಟ್ಸ್‌ನಲ್ಲಿ ಆಡಿದ ರೀತಿಯೇ ಆಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಎಸ್​ಆರ್​ಎಚ್​ ವಿರುದ್ಧ ಉತ್ತಮ ಅಂಕಿ-ಅಂಶ ಹೊಂದಿರುವ ಕುರಿತು ಪ್ರತಿಕ್ರಿಯಿಸಿದ ಕೊಹ್ಲಿ, ನಾನು ಹಿಂದಿನ ದಾಖಲೆಗಳನ್ನು ನೋಡಿ ಆಡುವುದಿಲ್ಲ. ಪಂದ್ಯ ಗೆಲುವಿನ ಕಡೆ ನೋಡುತ್ತೇನೆ ಎಂದಿದ್ದಾರೆ. ಐಪಿಎಲ್ ನಂತರ ನಮಗೆ ಟೆಸ್ಟ್ ಕ್ರಿಕೆಟ್ ಬರಲಿದೆ. ಹಾಗಾಗಿ ನನ್ನ ಬ್ಯಾಟಿಂಗ್ ತಂತ್ರಕ್ಕೆ ಬದ್ಧವಾಗಿರುತ್ತೇನೆ ಎಂದಿರುವ ಕೊಹ್ಲಿ, ಈ ಋತುವಿನಲ್ಲಿ ಫಾಫ್​ ಮತ್ತು ನಾನು ಸುಮಾರು 900 ರನ್‌ಗಳನ್ನು ಒಟ್ಟಿಗೆ ಗಳಿಸಿದ್ದೇವೆ. ನಾನು ಎಬಿಡಿ ವಿಲಿಯರ್ಸ್​ ಒಟ್ಟಿಗೆ ಬ್ಯಾಟಿಂಗ್​ ಮಾಡುವವಾಗ ಹೇಗೆ ಆಡುತ್ತಿದ್ದೇನೋ ಅದೇ ರೀತಿ ಇದೆ ಎಂದು ಹೇಳಿದ್ದಾರೆ.