ಕನ್ನಡ ಸುದ್ದಿ  /  ಕ್ರೀಡೆ  /  Icc Odi Rankings: ರೋಹಿತ್​​​ಗೆ​​​​ ಬಿಗ್​​​ ಶಾಕ್​ ಕೊಟ್ಟ ಕೊಹ್ಲಿ.. ಐಸಿಸಿ ಶ್ರೇಯಾಂಕದಲ್ಲಿ ವಿರಾಟ್​ ಜಿಗಿತ!

ICC ODI Rankings: ರೋಹಿತ್​​​ಗೆ​​​​ ಬಿಗ್​​​ ಶಾಕ್​ ಕೊಟ್ಟ ಕೊಹ್ಲಿ.. ಐಸಿಸಿ ಶ್ರೇಯಾಂಕದಲ್ಲಿ ವಿರಾಟ್​ ಜಿಗಿತ!

ICC ODI Rankings: ಕಿಂಗ್​​​ ಕೊಹ್ಲಿ ಮತ್ತೊಮ್ಮೆ ತಮ್ಮ ಹಳೆಯ ಶೈಲಿಗೆ ಮರಳುತ್ತಿದ್ದು, ಕಳಪೆ ಫಾರ್ಮ್‌ನಿಂದ ಕಂಬ್ಯಾಕ್​ ಮಾಡುತ್ತಿದ್ದಾರೆ. ಇದೀಗ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ (ICC ODI Ranking)​ ಪ್ರಕಟಗೊಂಡಿದ್ದು, ಮಾಜಿ ನಾಯಕ ಭಾರಿ ಜಿಗಿತ ಕಂಡಿದ್ದಾರೆ.

ವಿರಾಟ್​​ ಕೊಹ್ಲಿ ಮತ್ತು ರೋಹಿತ್​ ಶರ್ಮಾ
ವಿರಾಟ್​​ ಕೊಹ್ಲಿ ಮತ್ತು ರೋಹಿತ್​ ಶರ್ಮಾ (Twitter)

ಟೀಮ್​ ಇಂಡಿಯಾ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ (Virat Kohli) ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ. ಕಿಂಗ್​​​ ಕೊಹ್ಲಿ ಬ್ಯಾಟಿಂಗ್​​​​ನಲ್ಲಿ ಮತ್ತೊಮ್ಮೆ ತಮ್ಮ ಹಳೆಯ ಶೈಲಿಗೆ ಮರಳುತ್ತಿದ್ದು, ಕಳಪೆ ಫಾರ್ಮ್‌ನಿಂದ ಕಂಬ್ಯಾಕ್​ ಮಾಡುತ್ತಿದ್ದಾರೆ. ಈಗ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ (ICC ODI Ranking)​ ಪ್ರಕಟಗೊಂಡಿದ್ದು, ಮಾಜಿ ನಾಯಕ ಭಾರಿ ಜಿಗಿತ ಕಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕೊಹ್ಲಿ, ಅಮೋಘ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. 54 ರನ್​ ಗಳಿಸಿ ಪಂದ್ಯಕ್ಕೆ ಆಧಾರವಾಗಿದ್ದರು. ಇದೀಗ ಈ ಅರ್ಧಶತಕದೊಂದಿಗೆ ಒಡಿಐ ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೆ ತಲುಪಿದಿದ್ದಾರೆ. ಆ ಮೂಲಕ ಹಲವು ತಿಂಗಳುಗಳ ಬಳಿಕ ಟಾಪ್​​​-10 ರೊಳಗೆ ಮತ್ತೆ ಪ್ರವೇಶ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ ಟಾಪ್-10 ಆಟಗಾರರ ಪಟ್ಟಿಯಿಂದ ಸ್ವಲ್ಪ ಸಮಯದಿಂದ ಹೊರಗುಳಿದಿದ್ದರು. ಆದರೆ, ಈಗ ಅವರು ಟಾಪ್ 10 ರೊಳಗೆ ಪ್ರವೇಶಿಸಿದ್ದು, ಸದ್ಯ 719 ರೇಟಿಂಗ್‌ಗಳೊಂದಿಗೆ ಏಕದಿನ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಆ ಮೂಲಕ ಟೀಮ್​​ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.

ಶ್ರೀಲಂಕಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ ಒಟ್ಟು 726 ಪಾಯಿಂಟ್ಸ್ ಕಲೆ ಹಾಕಿದ್ದರು. ಈ ಮೂಲಕ ಮತ್ತೆ ಟಾಪ್-5 ನತ್ತ ಮುಖ ಮಾಡಿದ್ದರು. ಕಳೆದ ಬಾರಿ 8ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಲಂಕಾ ವಿರುದ್ಧ ಶತಕ ಸಿಡಿಸುತ್ತಿದ್ದಂತೆ 2 ಸ್ಥಾನ ಜಿಗಿತ ಕಂಡಿದ್ದರು. ಬಳಿಕ ನ್ಯೂಜಿಲೆಂಡ್​​ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಟಾಪ್​-10 ಆಟಗಾರರ ಪಟ್ಟಿಯಲ್ಲಿ ಹೆಸರನ್ನು ಕಳೆದುಕೊಂಡಿದ್ದರು.

ಅಗ್ರಸ್ಥಾನದಲ್ಲೇ ಬಾಬರ್​​ ಅಜಮ್

ಪಾಕಿಸ್ತಾನ ತಂಡದ ಕ್ಯಾಪ್ಟನ್​ ಬಾಬರ್ ಅಜಮ್​, ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. 2ನೇ ಸ್ಥಾನದಲ್ಲಿ ರಸ್ಸಿ ವಾಂಡರ್ ಡುಸೆನ್ ಇದ್ದಾರೆ. 777 ಪಾಯಿಂಟ್​​​ ಪಡೆದಿದ್ದಾರೆ. 3ನೇ ಸ್ಥಾನದಲ್ಲಿರುವ ಇಮಾಮ್​ ಉಲ್​ ಹಕ್ ಮತ್ತು 4ನೇ ಸ್ಥಾನದಲ್ಲಿರುವ ಕ್ವಿಂಟನ್​ ಡಿ ಕಾಕ್​ ಸಮಾನ ಅಂಕ ಗಳಿಸಿದ್ದಾರೆ. ಇಬ್ಬರೂ ಸಹ 740 ರೇಟಿಂಗ್​ ಹೊಂದಿದ್ದಾರೆ.​ 5ನೇ ಸ್ಥಾನದಲ್ಲಿರುವ ಶುಭ್​ಮನ್​ ಗಿಲ್​​ 738 ಅಂಕ, 6ನೇ ಸ್ಥಾನದಲ್ಲಿರುವ ಡೇವಿಡ್​ ವಾರ್ನರ್​​ 726 ಅಂಕ ಪಡೆದಿದ್ದಾರೆ.

ರೋಹಿತ್ ಶರ್ಮಾ ಮತ್ತು ಪ್ರೀಮಿಯರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕೂಡ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ. 1 ಸ್ಥಾನ ಜಿಗಿತ ಕಂಡ ರೋಹಿತ್​​​​ ಶರ್ಮಾ ಬ್ಯಾಟಿಂಗ್‌ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್​​​ನಲ್ಲಿ ಪಾಂಡ್ಯ 10 ಸ್ಥಾನ ಏರಿಕೆ ಕಂಡಿದ್ದು, 76ನೇ ಸ್ಥಾನದಲ್ಲಿದ್ದಾರೆ.

ಈ ವರ್ಷ 2 ಏಕದಿನ ಶತಕ

2023ರ ವರ್ಷ ಕೊಹ್ಲಿ ಪಾಲಿಗೆ ಬಿಡುವಿಲ್ಲದ ವರ್ಷ. ಈ ವರ್ಷ ಅವರು ಒಟ್ಟು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 53.37 ಸರಾಸರಿಯಲ್ಲಿ 427 ರನ್ ಗಳಿಸಿದ್ದಾರೆ. ಮತ್ತು ಸ್ಟ್ರೈಕ್​ರೇಟ್​ ಕೂಡ ಅದ್ಭುತವಾಗಿದೆ. ಬ್ಯಾಟಿಂಗ್ ಸ್ಟ್ರೈಕ್ ರೇಟ್ 116.03. ಈ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ 2 ಶತಕ ಮತ್ತು 1 ಅರ್ಧ ಶತಕ ಬಂದಿದೆ. ಅವರ ಗರಿಷ್ಠ ಸ್ಕೋರ್ ಅಜೇಯ 166 ರನ್ ಆಗಿದೆ.