Ranji Trophy: 47ನೇ ರಣಜಿ ಫೈನಲ್ ಆಡುತ್ತಿರುವ ಮುಂಬೈಗೆ ಮಧ್ಯಪ್ರದೇಶ ಸವಾಲು; ಇಲ್ಲಿದೆ ತಂಡಗಳ ಬಲಾಬಲ
ಕನ್ನಡ ಸುದ್ದಿ  /  ಕ್ರೀಡೆ  /  Ranji Trophy: 47ನೇ ರಣಜಿ ಫೈನಲ್ ಆಡುತ್ತಿರುವ ಮುಂಬೈಗೆ ಮಧ್ಯಪ್ರದೇಶ ಸವಾಲು; ಇಲ್ಲಿದೆ ತಂಡಗಳ ಬಲಾಬಲ

Ranji Trophy: 47ನೇ ರಣಜಿ ಫೈನಲ್ ಆಡುತ್ತಿರುವ ಮುಂಬೈಗೆ ಮಧ್ಯಪ್ರದೇಶ ಸವಾಲು; ಇಲ್ಲಿದೆ ತಂಡಗಳ ಬಲಾಬಲ

2016-17ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈ ಫೈನಲ್‌ ಪ್ರವೇಶಿಸಿದರೆ. ಮತ್ತೊಂದೆಡೆ 1998-99 ಋತುವಿನ ಬಳಿಕ, ಮಧ್ಯಪ್ರದೇಶ ಕೂಡಾ ಮೊದಲ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

<p>ಮುಂಬೈ ತಂಡ</p>
ಮುಂಬೈ ತಂಡ

ಬೆಂಗಳೂರು: ನಾಳೆಯಿಂದ ರಣಜಿ ಟ್ರೋಫಿಯ ಫೈನಲ್‌ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐತಿಹಾಸಿಕ ಗೆಲುವಿಗಾಗಿ ಬಲಿಷ್ಠ ಮುಂಬೈ ಹಾಗೂ ಮಧ್ಯಪ್ರದೇಶ ಕಾದಾಡಲಿವೆ. ಒಟ್ಟು 46 ಬಾರಿ ಫೈನಲ್‌ ಪ್ರವೇಶಿಸಿರುವ ಮುಂಬೈ, ಈ ಬಾರಿ 47ನೇ ರಣಜಿ ಫೈನಲ್‌ ಆಡುತ್ತಿದೆ. ದಾಖಲೆಯ ಇತಿಹಾಸ ಹೊಂದಿರುವ ಮುಂಬೈಗೆ ಚೊಚ್ಚಲ ಚಾಂಪಿಯನ್‌ ಆಗುವ ತವಕದಲ್ಲಿ ಮಧ್ಯಪ್ರದೇಶ ಪೈಪೋಟಿ ನೀಡಲು ತೊಡೆ ತಟ್ಟಿ ನಿಂತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಿಂದ ರಣಜಿ ಟ್ರೋಫಿಯ ಫೈನಲ್‌ ಪಂದ್ಯ ನಡೆಯಲಿದೆ. ಮಧ್ಯಪ್ರದೇಶವನ್ನು ಎದುರಿಸುವ ಮೂಲಕ ಮುಂಬೈ ತಂಡವು ರಣಜಿ ಟ್ರೋಫಿಯಲ್ಲಿ ಐತಿಹಾಸಿಕ ಪ್ರಾಬಲ್ಯವನ್ನು ವಿಸ್ತರಿಸುವ ಇರಾದೆ ಹೊಂದಿದೆ. ಈವರೆಗೆ ಬರೋಬ್ಬರಿ 41 ಬಾರಿ ರಣಜಿ ಟ್ರೋಫಿ ಗೆಲ್ಲುವ ಮೂಲಕ ಮುಂಬೈ ಇತಿಹಾಸ ನಿರ್ಮಿಸಿದೆ. ಭಾರತದಲ್ಲಿ ದೇಶೀಯ ಮಟ್ಟದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈಗೆ ಮಧ್ಯ ಪ್ರದೇಶ ಸವಾಲೆಸೆದಿದೆ. 87 ಬಾರಿ ನಡೆದ ರಣಜಿ ಟ್ರೋಫಿ ಫೈನಲ್‌ನಲ್ಲಿ, ಮುಂಬೈ 47ನೇ ಬಾರಿ ಫೈನಲ್‌ ಆಡುತ್ತಿದೆ. ಮತ್ತೊಂದೆಡೆ, ಮಧ್ಯಪ್ರದೇಶ ಮೊದಲ ರಣಜಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.

2016-17ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈ ಫೈನಲ್‌ ಪ್ರವೇಶಿಸಿದೆ. ಮತ್ತೊಂದೆಡೆ 1998-99 ಋತುವಿನ ಬಳಿಕ, ಮಧ್ಯಪ್ರದೇಶ ಮೊದಲ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ಪ್ರವೇಶಿಸುತ್ತಿದೆ.

ಈ ಋತುವಿನಲ್ಲಿ ಮುಂಬೈ ಗೆಲುವಿನ ಓಟ

ಸೌರಾಷ್ಟ್ರ ವಿರುದ್ಧದ ಮೊದಲ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದ್ದು, ಗೋವಾ ವಿರುದ್ಧದ ಪಂದ್ಯವನ್ನು ಮುಂಬೈ 119 ರನ್‌ಗಳಿಂದ ಗೆದ್ದಿದೆ. ಒಡಿಶಾ ವಿರುದ್ಧ ಇನ್ನಿಂಗ್ಸ್‌ ಹಾಗೂ 108 ರನ್‌ಗಳ ಗೆಲುವು ಸಾಧಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರಾಖಂಡ್‌ ವಿರುದ್ಧ 725 ರನ್‌ಗಳ ಭಾರಿ ಅಂತರದಿಂದ ಗೆದ್ದು ಸೆಮಿ ಫೈನಲ್‌ ಪ್ರವೇಶಿಸಿತು. ಸೆಮೀಸ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ ಡ್ರಾ ಸಾಧಿಸಿದರೂ, ಮೊದಲ ಇನ್ನಿಂಗ್ಸ್‌ ಲೀಡ್‌ ಆಧಾರದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತು.

<p>ಸರ್ಫರಾಜ್ ಖಾನ್</p>
ಸರ್ಫರಾಜ್ ಖಾನ್

ಮುಂಬೈ ಪರ ಹೆಚ್ಚು ರನ್‌ ಗಳಿಸಿದ ಆಟಗಾರರು

ಸರ್ಫರಾಜ್ ಖಾನ್ -803 ರನ್, ಸರಾಸರಿ 133.33

ಯಶಸ್ವಿ ಜೈಸ್ವಾಲ್ -419 ರನ್, ಸರಾಸರಿ 104.75

ಅರ್ಮಾನ್ ಜಾಫರ್ -339 ರನ್, ಸರಾಸರಿ 84.75

ಹೆಚ್ಚು ವಿಕೆಟ್ ಪಡೆದ ಆಟಗಾರರು

ಶಮ್ಸ್ ಮುಲಾನಿ -37 ವಿಕೆಟ್, ಸರಾಸರಿ 14.59

ತನುಷ್ ಕೋಟ್ಯಾನ್ -18 ವಿಕೆಟ್, ಸರಾಸರಿ 21.00

ಮೋಹಿತ್ ಅವಸ್ತಿ -14 ವಿಕೆಟ್, ಸರಾಸರಿ 21.21

ಮುಂಬೈ ತಂಡ

ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸುವೇದ್ ಪರ್ಕರ್, ಸರ್ಫರಾಜ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್‌ ಕೀಪರ್‌), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಆದಿತ್ಯ ತಾರೆ, ರಾಯ್ಸ್ಟನ್ ಡಯಾಸ್‌, ಸಾಯಿರಾಜ್ ಪಾಟಿಲ್, ಪ್ರಶಾಂತ್ ಸೋಲಂಕಿ, ಧ್ರುಮಿಲ್ ಮಟ್ಕರ್, ಅರ್ಜುನ್ ತೆಂಡೂಲ್ಕರ್, ಆಕರ್ಷಿತ್ ಗೋಮೆಲ್, ಸಚಿನ್ ಯಾದವ್, ಸಿದ್ಧಾರ್ಥ್ ರಾವತ್, ಶಶಾಂಕ್ ಅತ್ತಾರ್ಡೆ, ಭೂಪೇನ್ ಲಾಲ್ವಾನಿ, ಅಮನ್ ಹಕೀಮ್ ಖಾನ್

ಮಧ್ಯಪ್ರದೇಶದ ಫೈನಲ್‌ ಹಾದಿ

ಗುಜರಾತ್‌ ವಿರುದ್ಧದ ಮೊದಲ ಪಂದ್ಯದಲ್ಲಿ 106 ರನ್‌ಗಳ ಅಂತರದಲ್ಲಿ ಗೆದ್ದ ಮಧ್ಯಪ್ರದೇಶ, ಮೇಘಾಲಯ ವಿರುದ್ಧ ಇನ್ನಿಂಗ್ಸ್‌ ಹಾಗೂ 301 ರನ್‌ಗಳಿಂದ ಜಯಗಳಿಸಿತು. ಕೇರಳ ವಿರುದ್ಧದ ಪಂದ್ಯ ಡ್ರಾದೊಂದಿಗೆ ಅಂತ್ಯವಾಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಪಂಜಾಬ್‌ ವಿರುದ್ಧ 10 ವಿಕೆಟ್‌ಗಳಿಂದ ಭರ್ಜರಿಯಾಗಿ ಜಯಗಳಿಸಿದ ತಂಡ ಸೆಮಿಫೈನಲ್‌ ಪ್ರವೇಶಿಸಿತು. ಸೆಮೀಸ್‌ನಲ್ಲಿ ಬಂಗಾಳದ ವಿರುದ್ಧ 174 ರನ್‌ಗಳ ಅಂತರದಿಂದ ಜಯಗಳಿಸಿ ಫೈನಲ್‌ ಪ್ರವೇಶಿಸಿದೆ.

<p>ಮಧ್ಯಪ್ರದೇಶ ತಂಡ</p>
ಮಧ್ಯಪ್ರದೇಶ ತಂಡ

ಮಧ್ಯಪ್ರದೇಶ ಪರ ಹೆಚ್ಚು ರನ್‌ ಗಳಿಸಿದ ಆಟಗಾರರು

ರಜತ್ ಪಟಿದಾರ್ -506 ರನ್, ಸರಾಸರಿ 72.28

ಯಶ್ ದುಬೆ -480 ರನ್, ಸರಾಸರಿ 80.00

ಶುಭಂ ಶರ್ಮಾ -462 ರನ್, ಸರಾಸರಿ 77.00

ಹೆಚ್ಚು ವಿಕೆಟ್ ಪಡೆದ ಆಟಗಾರರು

ಕುಮಾರ್ ಕಾರ್ತಿಕೇಯ -27 ವಿಕೆಟ್, ಸರಾಸರಿ 16.33

ಗೌರವ್ ಯಾದವ್ -17 ವಿಕೆಟ್, ಸರಾಸರಿ 16.23

ಅನುಭವ್ ಅಗರ್ವಾಲ್ -12 ವಿಕೆಟ್, ಸರಾಸರಿ 15.91

ಮಧ್ಯಪ್ರದೇಶ ತಂಡ

ಆದಿತ್ಯ ಶ್ರೀವಾಸ್ತವ(ನಾಯಕ), ಹಿಮಾಂಶು ಮಂತ್ರಿ (ವಿಕೆಟ್‌ ಕೀಪರ್‌), ಯಶ್ ದುಬೆ, ಶುಭಂ ಎಸ್ ಶರ್ಮಾ, ರಜತ್ ಪಟಿದಾರ್, ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಪುನೀತ್ ದಾಟೆ, ಅನುಭವ್ ಅಗರ್ವಾಲ್, ಕುಮಾರ್ ಕಾರ್ತಿಕೇಯ, ಗೌರವ್ ಯಾದವ್, ಈಶ್ವರ್ ಪಾಂಡೆ, ರಮೀಜ್ ಖಾನ್, ಮಿಹಿರ್ ಹಿರ್ವಾನಿ, ಪಾರ್ಥ್ ಸಹಾನಿ, ಅಜಯ್ ರೊಹೆರಾ, ಕುಲದೀಪ್ ಸೇನ್, ಅರ್ಷದ್ ಖಾನ್, ರಾಕೇಶ್ ಠಾಕೂರ್

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.