IPL 2023: ಧೋನಿ, ಕೊಹ್ಲಿ ಅಲ್ಲ; IPL ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಹೆಸರು ಬಹಿರಂಗಪಡಿಸಿದ ಕುಂಬ್ಳೆ!-not ms dhoni or virat kohli anil kumbles pick for goat of ipl ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಧೋನಿ, ಕೊಹ್ಲಿ ಅಲ್ಲ; Ipl ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಹೆಸರು ಬಹಿರಂಗಪಡಿಸಿದ ಕುಂಬ್ಳೆ!

IPL 2023: ಧೋನಿ, ಕೊಹ್ಲಿ ಅಲ್ಲ; IPL ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಹೆಸರು ಬಹಿರಂಗಪಡಿಸಿದ ಕುಂಬ್ಳೆ!

ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರು ಐಪಿಎಲ್​​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.

ಧೋನಿ ಮತ್ತು ವಿರಾಟ್​
ಧೋನಿ ಮತ್ತು ವಿರಾಟ್​ (Twitter)

ಇಂಡಿಯನ್​ ಪ್ರೀಮಿಯರ್​ ಲೀಗ್​​​​ನಲ್ಲಿ (Indian Premier League) ವಿರಾಟ್​ ಕೊಹ್ಲಿ (Virat Kohli) 6 ಸಾವಿರಕ್ಕೂ ಹೆಚ್ಚು ರನ್​ ಗಳಿಸಿದ್ದಾರೆ. ಐಪಿಎಲ್​​ನಲ್ಲಿ (IPL) ಈ ಸಾಧನೆಗೈದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​​​ 5 ಸಾವಿರಕ್ಕೂ ರನ್​ ಸಿಡಿಸಿದ್ದಾರೆ. ಅಲ್ಲದೆ ಕ್ಯಾಪ್ಟನ್​ ಆಗಿಯೂ ಧೋನಿ ಸಿಎಸ್​​ಕೆ ತಂಡವನ್ನು 9 ಬಾರಿ ಫೈನಲ್​​​​ಗೇರಿಸಿದ್ದು, 4 ಸಲ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ.

ಐಪಿಎಲ್​​​​​​​ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ, ಮಹೇಂದ್ರ ಸಿಂಗ್​​ ಧೋನಿ ಅವರ ಹೆಸರುಗಳು ತಪ್ಪದೇ ಇರುತ್ತವೆ. ಅವರ ಆಟ, ದಾಖಲೆಗಳು.. ಒಂದಾ.. ಎರಡಾ.. ಅವರ ನಡೆದು ಬಂದ ಹೆಜ್ಜೆಗಳೇ ಹೇಳುತ್ತವೆ. ಈ ಇಬ್ಬರು ಎಂತಹ ಅದ್ಭುತ ಆಟಗಾರರು ಎಂಬುದನ್ನು. ಪ್ರತಿಯೊಂದರಲ್ಲೂ ಇವರದ್ದೇ ಕಾರುಬಾರು. ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರು ಈ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.

ಐಪಿಎಲ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬುದಕ್ಕೆ ಉತ್ತರಿಸಿದ ಅನಿಲ್​ ಕುಂಬ್ಳೆ, ಯೂನಿವರ್ಸಲ್ ಬಾಲ್ ಕ್ರಿಸ್ ಗೇಲ್ (Chris Gayle) ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ. ಐಪಿಎಲ್‌ನಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದಾರೆ. ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟ. ಆದರೆ ಎಲ್ಲಾ ಸೀಸನ್‌ಗಳನ್ನು ನೋಡಿದ ನಾನು, ಕ್ರಿಸ್ ಗೇಲ್ ಅವರನ್ನೇ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳುತ್ತೇನೆ. ಒಬ್ಬ ಆಟಗಾರನಾಗಿ ಕ್ರಿಸ್ ಗೇಲ್ ತಂಡದ ಮೇಲೆ ಬೀರಿದ ಪ್ರಭಾವವನ್ನು ಬೇರೆ ಯಾವ ಆಟಗಾರನೂ ತೋರಿಸಲು ಸಾಧ್ಯವಾಗಿಲ್ಲ ಎಂದು ಬಣ್ಣಿಸಿದ್ದಾರೆ.

ಕ್ರಿಸ್ ಗೇಲ್ ಅವರನ್ನು 2011ರಲ್ಲಿ ರಾಯಲ್​ ಚಾಲೆಂಜರ್ಸ್​​​ ಬೆಂಗಳೂರು ಖರೀದಿಸಿದ ನಂತರ, ಅವರು ತಂಡಕ್ಕಾಗಿ ನೀಡಿದ ಪ್ರದರ್ಶನ ಮತ್ತೊಂದು ಹಂತಕ್ಕೆ ಹೋಗಿತ್ತು. ಪವರ್ ಪ್ಲೇ ಓವರ್​​​​ಗಳಲ್ಲಿ ತಮ್ಮ ಶಕ್ತಿ ಶಾಲಿ ಬ್ಯಾಟಿಂಗ್ ಮೂಲಕ ಪಂದ್ಯದ ಸ್ವರೂಪವನ್ನೇ ಬದಲಿಸುತ್ತಿದ್ದರು. ಆ ಮೂಲಕ ಕಡಿಮೆ ಅವಧಿಯಲ್ಲೇ ಐಪಿಎಲ್​​​ನಲ್ಲೂ ತಮ್ಮ ಛಾಪು ಮೂಡಿಸಿದ್ದರು. ಅಂತಹ ಆಟಗಾರರು ಸಿಗುವುದು ತೀರಾ ಕಡಿಮೆ ಎಂದು ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ.

ಅನಿಲ್ ಕುಂಬ್ಳೆ ಅವರು IPL 2009 ಮತ್ತು 2010ನೇ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಕೆಲ ವರ್ಷಗಳ ನಂತರ ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಆದರು. ಕುಂಬ್ಳೆ ಕೋಚಿಂಗ್​ ಅಡಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಕ್ರಿಸ್ ಗೇಲ್ ಆಡಿದ್ದರು. 2021ರ ಐಪಿಎಲ್​​ನಿಂದ ಗೇಲ್​ ಅವರು ಹೊರಗುಳಿದಿದ್ದಾರೆ.

ಅನಿಲ್​ ಕುಂಬ್ಳೆ ಟೀಮ್​ ಇಂಡಿಯಾದ ಕೋಚ್​ ಆಗಿದ್ದ ವಿರಾಟ್​ ಕೊಹ್ಲಿ ತಂಡದ ಕ್ಯಾಪ್ಟನ್​ ಆಗಿದ್ದರು. ಆದರೆ ಈ ಸಮಯದಲ್ಲಿ ಇಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು. ಆ ಕಾರಣದಿಂದಾಗಿ ಅನಿಲ್​ ಕುಂಬ್ಳೆ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೇ ಕೋಪದಿಂದಲೇ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಒಪ್ಪಿಕೊಳ್ಳಲು ಮನಸು ಬರುತ್ತಿಲ್ಲ ಎನ್ನುತ್ತಿದ್ದಾರೆ ಆರ್​ಸಿಬಿ ಅಭಿಮಾನಿಗಳು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.