ಕನ್ನಡ ಸುದ್ದಿ  /  Sports  /  Sachin Tendulkar To Shubman Gill 7 Indian Cricketers Who Are Fans Of Lionel Messi Ms Dhoni Football News In Kannada Prs

Lionel Messi: ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿಗೆ ಅತಿದೊಡ್ಡ ಅಭಿಮಾನಿಗಳು ಈ ಭಾರತದ 7 ಕ್ರಿಕೆಟರ್​​ಗಳು

Lionel Messi : ಸಚಿನ್ ತೆಂಡೂಲ್ಕರ್ ಅವರಿಂದ ಶುಭ್ಮನ್ ಗಿಲ್ ರವರೆಗೆ ಸಾರ್ವಕಾಲಿಕ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಅವರಿಗೆ ಅಭಿಮಾನಿಗಳಾಗಿರುವ ಭಾರತದ ಕ್ರಿಕೆಟರ್​​ಗಳ ಪಟ್ಟಿ ಇಲ್ಲಿದೆ.

ಲಿಯೊನೆಲ್ ಮೆಸ್ಸಿಗೆ ಅತಿದೊಡ್ಡ ಅಭಿಮಾನಿಗಳು ಈ ಭಾರತದ 7 ಕ್ರಿಕೆಟರ್​​ಗಳು
ಲಿಯೊನೆಲ್ ಮೆಸ್ಸಿಗೆ ಅತಿದೊಡ್ಡ ಅಭಿಮಾನಿಗಳು ಈ ಭಾರತದ 7 ಕ್ರಿಕೆಟರ್​​ಗಳು

ಲಿಯೊನೆಲ್ ಮೆಸ್ಸಿ.. (Lionel Messi) ಸಾರ್ವಕಾಲಿಕ ಹಾಗೂ ವಿಶ್ವಶ್ರೇಷ್ಠ ಫುಟ್ಬಾಲ್ ಆಟಗಾರ. ಜಗತ್ತಿನ ಮೂಲೆ ಮೂಲೆಯಲ್ಲೂ ಅವರಿಗೆ ಅಭಿಮಾನಿಗಳ ಬಳಗ ಇದೆ. 2022ರ ಫಿಫಾ ಫುಟ್ಬಾಲ್ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ತಂಡವನ್ನು ಚಾಂಪಿಯನ್ ಮಾಡಿದ್ದ ಕಾಲ್ಚೆಂಡಿನ ಚತುರ, 2026 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಕನಸಿನಲ್ಲಿದ್ದಾರೆ.

ಜಾಗತಿಕ ಸೂಪರ್​ ಸ್ಟಾರ್​​ ಮೆಸ್ಸಿಯನ್ನು ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ. ​ಫುಟ್ಬಾಲ್​ ದಿಗ್ಗಜನಿಗೆ ಕ್ರಿಕೆಟ್ ವಲಯದಲ್ಲೂ ವಿಶೇಷ ಅಭಿಮಾನಿ ಬಳಗ ಇದೆ. ಭಾರತದ ಪ್ರಮುಖ ಆಟಗಾರರೇ ಮೆಸ್ಸಿಯನ್ನು ಇಷ್ಟಪಡುತ್ತಾರೆ. ವಿಶ್ವದ ಫುಟ್ಬಾಲ್ ತಾರೆಗೆ ದೊಡ್ಡ ಅಭಿಮಾನಿಗಳಾಗಿರುವ ಭಾರತೀಯ ಕ್ರಿಕೆಟಿಗರು ಯಾರು?

ಮೆಸ್ಸಿ ಅಭಿಮಾನಿಗಳು ಇವರು

ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶುಭ್ಮನ್ ಗಿಲ್, ಸುರೇಶ್ ರೈನಾ, ಕುಲ್ದೀಪ್ ಯಾದವ್, ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್ ಅವರು ಲಿಯೊನೆಲ್ ಮೆಸ್ಸಿ ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ. ಇವರಷ್ಟೇ ಅಲ್ಲದೆ, ವಿಶ್ವ ಕ್ರಿಕೆಟ್​​ನಲ್ಲಿ ಅನೇಕ ಕ್ರಿಕೆಟರ್​ಗಳು ಮೆಸ್ಸಿಗೆ ಫ್ಯಾನ್ ಆಗಿದ್ದಾರೆ.

ಮೆಸ್ಸಿ ಅವರು ಭಾರತಕ್ಕೆ ಒಮ್ಮೆ ಭೇಟಿ ನೀಡಿದ್ದರು. ಅವರೊಂದಿಗೆ ಡಿಯಾಗೋ ಮರಡೋನಾ ಸಹ 2011ರಲ್ಲಿ ಕೋಲ್ಕತ್ತಾಗೆ ಪ್ರಯಾಣಿಸಿದ್ದರು. 2014ರಲ್ಲಿ ಮೆಸ್ಸಿ ಸಂದರ್ಶನವೊಂದರಲ್ಲಿ ಭಾರತದ ಭೇಟಿಯು ತನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ ಎಂದು ಹೇಳಿದ್ದರು. ತಮ್ಮ ಅರ್ಜೆಂಟೀನಾದೊಂದಿಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಸೌಹಾರ್ದ ಪಂದ್ಯದಲ್ಲಿ ವೆನೆಜುವೆಲಾ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಫುಟ್ಬಾಲ್​ನಲ್ಲಿ ಅತಿ ಹೆಚ್ಚು ಗೋಲು

ಅಂತಾರಾಷ್ಟ್ರೀಯ ಫುಟ್ಬಾಲ್​​ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪೈಕಿ ಮೆಸ್ಸಿ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅವರು 2005ರಿಂದ ಫುಟ್ಬಾಲ್ ಆಡುತ್ತಿರುವ ಮೆಸ್ಸಿ, ಅರ್ಜೆಂಟೀನಾ ಪರ ಒಟ್ಟು 180 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 106 ಗೋಲು ಗಳಿಸಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಅಗ್ರಸ್ಥಾನ ಪಡೆದಿದ್ದು, 205 ಪಂದ್ಯಗಳಲ್ಲಿ 128 ಗೋಲು ಕಲೆ ಹಾಕಿದ್ದಾರೆ.

ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪೈಕಿ ಮೆಸ್ಸಿ ಕೂಡ ಒಬ್ಬರು. 2022ರ ನವೆಂಬರ್ ಹೊತ್ತಿಗೆ, ಲಿಯೊನೆಲ್ ನಿವ್ವಳ ಮೌಲ್ಯವು 600 ಮಿಲಿಯನ್ ಡಾಲರ್‌ ಅಂದರೆ 4 ಸಾವಿರದ 952 ಕೋಟಿ. ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿರುವ ಮೆಸ್ಸಿ, ಅವುಗಳಿಂದ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾರೆ. ಮೆಸ್ಸಿಯ ದಿನದ ಸಂಪಾದನೆ 1,05,000 ಡಾಲರ್ ಅಂದರೆ ಭಾರತದ ಕರೆನ್ಸಿಯಲ್ಲಿ 87 ಲಕ್ಷ ರೂಪಾಯಿಗೂ ಅಧಿಕ. ದಿನದ ಗಳಿಕೆಯಲ್ಲೂ ಮೆಸ್ಸಿ ಟಾಪ್​ನಲ್ಲಿದ್ದಾರೆ.

ಮೆಸ್ಸಿ ಅವರ ವೈಯಕ್ತಿಕ ಪ್ರಶಸ್ತಿಗಳು

ಬ್ಯಾಲನ್ ಡಿ'ಓರ್ : 8

ವರ್ಷದ ಫಿಫಾ ವಿಶ್ವ ಆಟಗಾರ : 7

ಲಾ ಲಿಗಾ ವರ್ಷದ ಆಟಗಾರ : 9

ಯುರೋಪಿಯನ್ ಗೋಲ್ಡನ್ ಶೂ : 6

ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ : 2

ವಿಶ್ವಕಪ್ ಗೋಲ್ಡನ್ ಬಾಲ್ : 2

UEFA ಪುರುಷರ ವರ್ಷದ ಆಟಗಾರ : 2

ಕೋಪಾ ಅಮೇರಿಕಾ ಅತ್ಯಂತ ಮೌಲ್ಯಯುತ ಆಟಗಾರ : 2

ಅರ್ಜೆಂಟೀನಾ ಜೊತೆಗಿನ ಮೆಸ್ಸಿಯ ಸಾಧನೆಗಳು ಹೇಗಿವೆ ಎಂಬುದು ಇಲ್ಲಿದೆ:

ಫಿಫಾ ವಿಶ್ವಕಪ್ 2022 ಗೆಲುವು

ಬೀಜಿಂಗ್ 2008 ರಲ್ಲಿ ಒಲಿಂಪಿಕ್ ಚಿನ್ನ

ಸಾರ್ವಕಾಲಿಕ ಪ್ರಮುಖ ಗೋಲ್ ಸ್ಕೋರರ್: 106 (ವಿಶ್ವಕ್ಕೆ 3ನೇ ಸ್ಥಾನ)

ಹೆಚ್ಚಿನ ಅಂತಾರಾಷ್ಟ್ರೀಯ ಕ್ಯಾಪ್‌ಗಳು: 180

ದಕ್ಷಿಣ ಅಮೆರಿಕಾದ ರಾಷ್ಟ್ರಕ್ಕೆ ಹೆಚ್ಚಿನ ಗೋಲ್​: 106

ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಕಿರಿಯ ಅರ್ಜೆಂಟೀನಾದ: 18 ವರ್ಷ 357 ದಿನಗಳು

ಅರ್ಜೆಂಟೀನಾ ಪರ 4 ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ

ಹೆಚ್ಚಿನ ವೈಯಕ್ತಿಕ ವಿಶ್ವಕಪ್ ಪಂದ್ಯಗಳು : 26

ಹೆಚ್ಚು ಅರ್ಜೆಂಟೀನಾ ವಿಶ್ವಕಪ್ ಗೋಲುಗಳು : 13

ವಿಶ್ವಕಪ್ ಗುಂಪು ಹಂತ, 16ರ ಸುತ್ತು, ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ