ಕನ್ನಡ ಸುದ್ದಿ  /  Cricket  /  Virat Kohli Will Be Fired Up Just By Looking At Gautam Gambhir In Kkr Dugout Former Rcb Star Varun Aaron On Duel Prs

ಕೆಕೆಆರ್​​ ಡಗೌಟ್​ ನೋಡಿದ್ರೆ ಉರಿದುಬೀಳುತ್ತಾರೆ ಕೊಹ್ಲಿ; ಗಂಭೀರ್-ವಿರಾಟ್ ಕಾಳಗ ಹತ್ತಿರದಿಂದ ನೋಡಿದ ಆರ್​ಸಿಬಿ ಮಾಜಿ ವೇಗಿ ಹೇಳಿದ್ದಿಷ್ಟು

Varun Aaron on Virat Kohli and gautam Gambhir Clash: ಕೆಕೆಆರ್ ಡಗೌಟ್​ನಲ್ಲಿ ಗೌತಮ್ ಗಂಭೀರ್ ಅವರನ್ನು ನೋಡಿದರೆ ಸಾಕು ವಿರಾಟ್ ಕೊಹ್ಲಿ ಅವರು ಫುಲ್ ಚಾರ್ಜ್ ಆಗುತ್ತಾರೆ ಎಂದು ಎಂದು ಆರ್​​ಸಿಬಿ ಮಾಜಿ ಕ್ರಿಕೆಟಿಗ ವರುಣ್ ಆರೋನ್ ಹೇಳಿದ್ದಾರೆ.

ಗಂಭೀರ್-ಕೊಹ್ಲಿ ಕಾಳಗಕ್ಕೆ ಕಾಯುತ್ತೇನೆ ಎಂದ ಆರ್​ಸಿಬಿ ಮಾಜಿ ವೇಗಿ ವರುಣ್ ಆರೋನ್
ಗಂಭೀರ್-ಕೊಹ್ಲಿ ಕಾಳಗಕ್ಕೆ ಕಾಯುತ್ತೇನೆ ಎಂದ ಆರ್​ಸಿಬಿ ಮಾಜಿ ವೇಗಿ ವರುಣ್ ಆರೋನ್

ಐಪಿಎಲ್​ನ ರಣರೋಚಕ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ಕಲ್ಪಿಸಲು ಸಿದ್ಧವಾಗಿದೆ. ಅದು ಕೂಡ ಮದಗಜಗಳ ಕಾದಾಟ ಎಂದೇ ಬಿಂಬಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟಕ್ಕೆ ಸಜ್ಜಾಗಿವೆ. ಈ ಪಂದ್ಯವು ಕೆಕೆಆರ್​ vs ಆರ್​ಸಿಬಿ ಪಂದ್ಯ ಎನ್ನುವುದಕ್ಕಿಂತ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ನಡುವಿನ ಕಾಳಗ ಎಂದೇ ಬಿಂಬಿತವಾಗಿದೆ. ಹಾಗಾಗಿ, ಕ್ರಿಕೆಟ್​ ಪ್ರಿಯರು ಈ ಪಂದ್ಯಕ್ಕಾಗಿ ಕಾದು ಕುಳಿದಿದ್ದಾರೆ.

ಬೆಂಗಳೂರು ಮತ್ತು ಕೋಲ್ಕತಾ ನಡುವಿನ ಐಪಿಎಲ್ ಪಂದ್ಯ ಬದಲಿಗೆ ಗಂಭೀರ್ vs ಕೊಹ್ಲಿ ನಡುವೆ ಪೈಪೋಟಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ, ಯಶ್ ದಯಾಳ್ vs ರಿಂಕು ಸಿಂಗ್, ಮೊಹಮ್ಮದ್ ಸಿರಾಜ್ vs ಆ್ಯಂಡ್ರೆ ರಸೆಲ್ ನಡುವಿನ ದೊಡ್ಡ ಕದನ ಎಂದೇ ಕರೆಯಲಾಗುತ್ತಿದೆ. ಲಕ್ನೋ ಸೂಪರ್​ ಜೈಂಟ್ಸ್ ಮೆಂಟರ್​ ಸ್ಥಾನದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೆಂಟರ್​ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಇಬ್ಬರು ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ಐಪಿಎಲ್​ನಲ್ಲಿ ಈ ಜೋಡಿ ನಡುವೆ ಗಲಾಟೆ ನಡೆದಿದ್ದ ಕಾರಣ ಕಾವು ಹೆಚ್ಚಾಗಿದೆ.

ಅಚ್ಚರಿ ಹೇಳಿಕೆ ನೀಡಿದ ವರುಣ್ ಆರೋನ್

ಕೊಹ್ಲಿ ಮತ್ತು ಗಂಭೀರ್ ನಡುವಿನ ಪೈಪೋಟಿ ವಿಚಾರವಾಗಿ ಆರ್​​ಸಿಬಿ ತಂಡದ ಮಾಜಿ ವೇಗಿ ವರುಣ್ ಆರೋನ್, ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಮತ್ತು ಗಂಭೀರ್ ಮುಖಾಮುಖಿಯಾದಾಗ ವಾತಾವರಣ ಹೇಗಿರುತ್ತದೆ ಎಂಬುದರ ಕುರಿತು ವಿವರಿಸಿದ್ದಾರೆ. ಮೈದಾನದ ಹೊರಗೆ ಇಬ್ಬರ ಮುಖಾಮುಖಿಗೆ ನಾನು ಕೂಡ ಎದುರು ನೋಡುತ್ತಿದ್ದೇನೆ ಎಂದು ಹೇಳಿರುವ ಅರೋನ್, ಕೆಕೆಆರ್​ ಡಗೌಟ್ ನೋಡಿದರೆ, ವಿರಾಟ್ ಕೊಹ್ಲಿ ಉರಿದುಕೊಳ್ಳುತ್ತಾರೆ ಎಂಬ ಅಚ್ಚರಿಯ ವಿಚಾರವನ್ನು ತಿಳಿಸಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಎಷ್ಟು ಉತ್ಸುಕರಾಗಿದ್ದಾರೆ ಎಂಬುದರ ಕುರಿತು ಮಾತನಾಡಿದ ಆರೋನ್, 'ನಾನು ಬೌಂಡರಿ ರೇಖೆಯ ಹೊರಗೆ ಪಂದ್ಯವನ್ನು ಎದುರು ನೋಡುತ್ತಿದ್ದೇನೆ. ಗೌತಮ್ ಗಂಭೀರ್ ಆರ್​​ಸಿಬಿ ಡಗೌಟ್ ಪಕ್ಕದಲ್ಲಿಯೇ ಬೌಂಡರಿ ಲೈನ್​​ನಲ್ಲಿ ಇರಲಿದ್ದಾರೆ. ಅಲ್ಲಿ ಏನಾಗಲಿದೆ ಎಂಬುದರ ಕುರಿತು ನನಗೂ ತಿಳಿದಿಲ್ಲ. ಆದರೂ ಕುತೂಹಲ ಹೆಚ್ಚಾಗಿದೆ. ವಿರಾಟ್ ಹೇಗಿದ್ದಾರೆಂದು ನಿಮಗೆ ವಿಶೇಷವಾಗಿ ಹೇಳಬೇಕಿಲ್ಲ. ಅವರು ಯಾವಾಗಲೂ ಆಕ್ರಮಣಕಾರಿ. ಕೆಕೆಆರ್ ಡಗೌಟ್ ನೋಡಿದರೆ, ಖಂಡಿತವಾಗಿ ಉರಿದು ಬೀಳುತ್ತಾರೆ ಎಂದು ಹೇಳಿದ್ದಾರೆ.

ನಾನು ಕಾಯುತ್ತಿದ್ದೇನೆ ಎಂದ ಆರ್​ಸಿಬಿ ಮಾಜಿ ವೇಗಿ

ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವಿನ ಪೈಪೋಟಿಯನ್ನು ಹತ್ತಿರದಿಂದ ನೋಡಿದ ನೋಡಿದ ವ್ಯಕ್ತಿಗಳಲ್ಲಿ ವರುಣ್ ಆರೋನ್ ಕೂಡ ಒಬ್ಬರು. ಅವರು 2014 ಮತ್ತು 2016 ರ ನಡುವೆ ಆರ್​ಸಿಬಿ ತಂಡದ ಭಾಗವಾಗಿದ್ದರು. ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಇದನ್ನು ತಮ್ಮ ಕಣ್ಣ ಮುಂದೆ ನೋಡದಿರಬಹುದು. ಆದರೆ ಅವರಿಗೆ ಪೈಪೋಟಿ ಬಗ್ಗೆ ತಿಳಿದಿದೆ. ಇಬ್ಬರ ನಡುವಿನ ಪೈಪೋಟಿ ಯುದ್ಧದಂತೆ ಭಾಸವಾಗುತ್ತದೆ. ಹಾಗಾಗಿ ನಾನು ಮೈದಾನದ ಹೊರಗೆ ಅದನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ.

2013ರಲ್ಲಿ ಚಿನ್ನಸ್ವಾಮಿಯಲ್ಲಿ ನಡೆದ ಆರ್​​ಸಿಬಿ ಮತ್ತು ಕೆಕೆಆರ್ ಪಂದ್ಯದ ಸಮಯದಲ್ಲಿ ಗಂಭೀರ್ ಮತ್ತು ಕೊಹ್ಲಿ ಅವರು ಮೊದಲ ಬಾರಿಗೆ ಗಲಾಟೆ ಮಾಡಿಕೊಂಡಿದ್ದರು. ಅಂದಿನಿಂದ ಒಂದಲ್ಲ ಒಂದು ಬಾರಿ ಇಬ್ಬರ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಇದಾಗಿ ಮೂರು ವರ್ಷಗಳ ನಂತರ, ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಮತ್ತೊಂದು ಐಪಿಎಲ್ ಪಂದ್ಯದಲ್ಲಿ, ಗಂಭೀರ್ ಮತ್ತು ಕೊಹ್ಲಿ ನಡುವೆ ಮತ್ತೊಂದು ಬಿಸಿಯಾದ ವಾಗ್ವಾದ ನಡೆದಿತ್ತು.

ಅಷ್ಟೇ ಯಾಕೆ ಕಳೆದ ಬಾರಿ ಎಲ್​ಎಸ್​ಜಿ ತಂಡದ ಮೆಂಟರ್ ಆಗಿದ್ದ ಗಂಭೀರ್​, ತನ್ನ ತಂಡದ ಆಟಗಾರರ ವಿಚಾರವಾಗಿ ಕೊಹ್ಲಿಯೊಂದಿಗೆ ದೊಡ್ಡ ಗಲಾಟೆ ಮಾಡಿಕೊಂಡಿದ್ದರು. ಪರಸ್ಪರ ಮಾತಿನ ಚಕಮಕಿ ಕೂಡ ನಡೆದಿತ್ತು. ಇದು ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ, ಇಬ್ಬರಿಗೂ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿತ್ತು. ಐಪಿಎಲ್​ನಲ್ಲಿ ಹಲವು ಬಾರಿ ಇಬ್ಬರು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ.

IPL_Entry_Point