T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ
T20 World Cup 2024 : ಜೂನ್ 1ರಿಂದ ಪ್ರಾರಂಭವಾಗುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ರಾಯಭಾರಿಯಾಗಿ ಉಸೇನ್ ಬೋಲ್ಟ್ ಅವರನ್ನು ಐಸಿಸಿ ನೇಮಕ ಮಾಡಿದೆ.
ವಿಶ್ವ ಪ್ರಸಿದ್ಧ ಸ್ಟ್ರಿಂಟರ್, 8 ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಮೈಕಾದ ದಿಗ್ಗಜ ಓಟಗಾರ ಉಸೇನ್ ಬೋಲ್ಟ್ (Usain Bolt) ಅವರು ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2024ಕ್ಕೆ (ICC T20 World Cup 2024) ಅಧಿಕೃತ ರಾಯಭಾರಿಯಾಗಿ ಹೆಸರಿಸಲ್ಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿ ಆತಿಥ್ಯದಲ್ಲಿ ಜೂನ್ 1 ರಿಂದ 29 ರವರೆಗೆ ಟಿ20 ವಿಶ್ವಕಪ್ ನಡೆಯಲಿವೆ. ಒಟ್ಟು 55 ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನ ಪಡೆದಿದ್ದು, ಪ್ರತಿಷ್ಠಿತ ಟೂರ್ನಿಯ ಭಾಗವಾಗುತ್ತಿರುವುದು ನನಗೆ ಅಪಾರ ಗೌರವ ಇದೆ ಎಂದು ಉಸೇನ್ ಬೋಲ್ಟ್ ಹೇಳಿಕೆ ನೀಡಿದ್ದಾರೆ. ಚುಟುಕು ಸಮರ ವಿಶ್ವಕಪ್‌ಗೆ ಉತ್ಸಾಹ ತರಲು ನನ್ನ ಶಕ್ತಿ ಮೀರಿ ಸೇವೆ ಸಲ್ಲಿಸಲಿದ್ದೇನೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಬೆಳವಣಿಗೆ ನೀಡಲು ಕಾಯುತ್ತಿದ್ದೇನೆ ಎಂದು ಐಸಿಸಿ ಹೇಳಿಕೆಯಲ್ಲಿ ಬೋಲ್ಟ್ ಹೇಳಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್‌ನಿಂದ ಖ್ಯಾತಿ ಹೆಚ್ಚಿಸಿಕೊಂಡ ಬೋಲ್ಟ್, 100 ಮೀ, 200 ಮೀ ಮತ್ತು 4x100 ಮೀ ರಿಲೇಯಲ್ಲಿ ಚಿನ್ನದ ಪದಕ ಜಯಿಸಿ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದರು. ಕ್ರಮವಾಗಿ 9.58 ಸೆಕೆಂಡ್, 19.19 ಸೆಕೆಂಡ್ ಮತ್ತು 36.84 ಸೆಕೆಂಡ್ಗಳಲ್ಲಿ ಕ್ರಮಿಸಿ ವಿಶ್ವದಾಖಲೆ ಬರೆದಿದ್ದಾರೆ. 2016ರ ರಿಯೊ ಒಲಿಂಪಿಕ್ನಲ್ಲಿ ಐತಿಹಾಸಿಕ ಸಾಧನೆಯ ಮೂಲಕ ಕ್ರೀಡಾ ಐಕಾನ್ ಆಗಿ ಸ್ಥಾನಮಾನ ಹೆಚ್ಚಿಸಿಕೊಂಡಿದ್ದರು.
2024ರ ವಿಶ್ವಕಪ್‌ಗೆ ತಂಡಗಳ ರಚನೆ ಹೇಗೆ?
ಒಟ್ಟು 20 ತಂಡಗಳನ್ನು ತಲಾ ಐದರಂತೆ ನಾಲ್ಕು ಗುಂಪುಗಳನ್ನು ರಚಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಆ ತಂಡಗನ್ನು ಮತ್ತೆ ತಲಾ ನಾಲ್ಕರಣತೆ ಎರಡು ಗುಂಪುಗಳಾಗಿ ಮಾಡಲಾಗುತ್ತದೆ. ಇಲ್ಲಿ ಅಗ್ರ ಸ್ಥಾನ ಪಡೆದ ತಲಾ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 20 ತಂಡಗಳು
ಯುಎಸ್ಎ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಜಿನಿಯಾ, ಕೆನಡಾ, ನೇಪಾಳ, ಓಮನ್, ನಮೀಬಿಯಾ ಮತ್ತು ಉಗಾಂಡಾ.
ಟಿ20 ವಿಶ್ವಕಪ್ ಗ್ರೂಪ್ಗಳು
ಗ್ರೂಪ್-ಎ: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್ಎ.
ಗ್ರೂಪ್-ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್
ಗ್ರೂಪ್-ಸಿ: ನ್ಯೂಜಿಲೆಂಡ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡ, ಪಪುವಾ ನ್ಯೂಗಿನಿಯಾ
ಗ್ರೂಪ್-ಡಿ: ಸೌತ್ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ಶ್ರೀಲಂಕಾ, ನೇಪಾಳ
ದಿನಾಂಕ | ಪಂದ್ಯಗಳು | ಸಮಯ (IST) | ಸ್ಥಳ |
---|---|---|---|
ಜೂನ್ 5, ಬುಧವಾರ | ಭಾರತ vs ಐರ್ಲೆಂಡ್ | 8:30 ಪಿಎಂ | ಸಿಟಿ ಫೀಲ್ಡ್, ನ್ಯೂಯಾರ್ಕ್ |
ಜೂನ್ 9, ಭಾನುವಾರ | ಭಾರತ vs ಪಾಕಿಸ್ತಾನ | 8:30 ಪಿಎಂ | ಸಿಟಿ ಫೀಲ್ಡ್, ನ್ಯೂಯಾರ್ಕ್ |
ಜೂನ್ 12, ಬುಧವಾರ | ಭಾರತ vs ಯುಎಸ್ಎ | 8:30 ಪಿಎಂ | ಸಿಟಿ ಫೀಲ್ಡ್, ನ್ಯೂಯಾರ್ಕ್ |
ಜೂನ್ 15, ಶನಿವಾರ | ಭಾರತ vs ಕೆನಡಾ | 8:30 ಪಿಎಂ | ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ |
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಭಾಗ