Vinesh Phogat: ಪದಕ ಗೆದ್ದಾಗ ಸಂಭ್ರಮಿಸ್ತೀರಾ, ಈಗ ಏನಾಯ್ತು; ವ್ಯವಸ್ಥೆಗೆ ಹೆದರಿಕೆನಾ; ಕ್ರಿಕೆಟಿಗರ ಮೌನವನ್ನು ಪ್ರಶ್ನಿಸಿದ ವಿನೇಶ್ ಫೋಗಟ್
ಸ್ಟಾರ್ ಕ್ರಿಕೆಟಿಗರು ಮತ್ತು ಇತರ ಪ್ರಮುಖ ಕ್ರೀಡಾ ಪಟುಗಳ ಮೌನ ವಹಿಸಿರುವುದನ್ನು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ (Vinesh Phogat) ಅವರು ಪ್ರಶ್ನಿಸಿದ್ದಾರೆ. ನೀವು ಈ ವ್ಯವಸ್ಥೆಗೆ ಭಯಪಡುತ್ತೀದ್ದೀರಾ ಎಂದು ಕೇಳಿದ್ದಾರೆ.
ಅಗ್ರ ಕುಸ್ತಿಪಟುಗಳಲ್ಲಿ ಒಬ್ಬರಾದ ಬಜರಂಗ್ ಪೂನಿಯಾ (Bajrang Punia) ಮತ್ತು ಸಾಕ್ಷಿ ಮಲಿಕ್ (Sakshi Malik) ಅವರ ಜೊತೆಗೆ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (WFI president Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ (Sexual harassment) ಆರೋಪದ ಮೇಲೆ ಪ್ರತಿಭಟನೆ (Wrestlers Protest) ನಡೆಸುತ್ತಿರುವ ವಿನೇಶ್ ಫೋಗಟ್ (Vinesh Phogat) ಅವರು, ಈ ವಿಷಯದ ಕುರಿತು ಕ್ರಿಕೆಟಿಗರು ಮತ್ತು ಇತರ ಉನ್ನತ ಕ್ರೀಡಾಪಟುಗಳು ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದಾರೆ. ಪದಕ ಗೆದ್ದಾಗ ನಮ್ಮೊಂದಿಗೆ ಸಂಭ್ರಮಿಸುವ ನೀವು, ಈಗ ನಮ್ಮ ನೋವಿಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ವಿನೇಶ್ ಫೋಗಟ್.
ಇಡೀ ದೇಶವೇ ಕ್ರಿಕೆಟನ್ನು ಆರಾಧಿಸುತ್ತಿದೆ. ಹೆಚ್ಚು ಪ್ರಸಿದ್ಧಿಗೊಂಡಿದೆ. ಆದರೆ, ಒಬ್ಬ ಕ್ರಿಕೆಟಿಗ ಕೂಡ ಈ ಬಗ್ಗೆ ಮಾತನಾಡಿಲ್ಲ. ನೀವು ನಮ್ಮ ಪರ ಮಾತನಾಡಿ ಎಂದು ನಾವು ಹೇಳುತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕನಿಷ್ಠ ಒಂದು ಸಂದೇಶವನ್ನಾದರೂ ಹಾಕಿ. ಯಾರಿಗೆ ನ್ಯಾಯ ಸಿಗಬೇಕು ಎಂಬುದನ್ನು ಹೇಳಿ. ಕ್ರಿಕೆಟಿಗರ ಜೊತೆಗೆ ಬ್ಯಾಡ್ಮಿಂಟನ್ ಆಟಗಾರರು, ಅಥ್ಲೆಟಿಕ್ಸ್, ಬಾಕ್ಸಿಂಗ್ ಪಟುಗಳು ಸಹ ಮೌನ ವಹಿಸಿದ್ದಾರೆ. ಆದರಿದು ನನಗೆ ನೋವು ತಂದಿದೆ ಎಂದಿದ್ದಾರೆ.
ಬ್ಲಾಕ್ ಲೈಟ್ ಮ್ಯಾಟರ್ ಆಂದೋಲನವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ವಿನೇಶ್, ನಮ್ಮ ದೇಶದಲ್ಲಿ ದೊಡ್ಡ ಅಥ್ಲೀಟ್‌ಗಳೇ ಇಲ್ಲದಂತಾಗಿದೆ. ನಮ್ಮಲ್ಲಿ ಕ್ರಿಕೆಟಿಗರು ಮಾತ್ರ ಇದ್ದಾರೆ. USನಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳುವಳಿಯ ಸಂದರ್ಭದಲ್ಲಿ ಅವರು ತಮ್ಮ ಬೆಂಬಲ ಕೋರಿದ್ದರು. ಆದರೀಗ ನಾವು ಅಷ್ಟು ಅರ್ಹರಲ್ಲವೇ? ನಾವು ಪದಕ ಗೆದ್ದಾಗ ನೀವು ನಮ್ಮನ್ನು ಅಭಿನಂದಿಸಲು ಮುಂದೆ ಬರುತ್ತೀರಿ. ಹೀಗಿರುವಾಗ ಕ್ರಿಕೆಟಿಗರೂ ಟ್ವೀಟ್ ಮಾಡುತ್ತಾರೆ. ಅಭಿ ಕ್ಯಾ ಹೋ ಗಯಾ? (ಈಗ ಏನಾಯಿತು?) ವ್ಯವಸ್ಥೆಗೆ ನೀವು ತುಂಬಾ ಹೆದರುತ್ತೀರಾ? ಎಂದು ವಿನೇಶ್ ಪ್ರಶ್ನಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜಕಾರಣಿಗಳು ಮತ್ತು ಹಲವು ನಾಯಕರು ಕುರಿತು ಮಾತನಾಡಿದ್ದಾರೆ. ಗುರುವಾರ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಭಟನಾಕಾರರಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಮೂವರು ಕುಸ್ತಿಪಟುಗಳ ಚಿತ್ರದ ಜೊತೆ ’ಅವರಿಗೆ ಯಾವಾಗ ನ್ಯಾಯ ಸಿಗುತ್ತದೆ?’ ಎಂದು ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಖಾರವಾಗಿ ಮಾತನಾಡಿದ್ದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ (Indian Olympic Association (IOA) President PT Usha) ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಉಷಾ ಅವರ ಹೇಳಿಕೆ ಅಸೂಕ್ಷ್ಮ ಎಂದು ಕರೆದಿದ್ದಾರೆ. ನಾವು ಸಂವಿಧಾನದ ಪ್ರಕಾರ ಬದುಕುತ್ತೇವೆ ಮತ್ತು ಸ್ವತಂತ್ರ ನಾಗರಿಕರು. ನಾವು ಎಲ್ಲಿ ಬೇಕಾದರೂ ಹೋಗಬಹುದು ಎಂದಿದ್ದಾರೆ.
ನಾವು ಬೀದಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದೇವೆ ಅಂದರೆ, ಅದರ ಹಿಂದೆ ಬಲವಾದ ಕಾರಣ ಇದೆ ಎಂದೇ ಅರ್ಥ. ಯಾರೂ ನಮ್ಮ ಮಾತನ್ನು ಕೇಳುತ್ತಿಲ್ಲ. ಅದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಥವಾ ಕ್ರೀಡಾ ಸಚಿವಾಲಯ ಆಗಿರಬಹುದು. ಆಕೆಯ ಈ ಮಾತು ಸಂವೇದನಾರಹಿತವಾಗಿದೆ. ನಾನು ಅವರಿಗೆ ಕರೆ ಮಾಡಿದೆ, ಆದರೆ ಅವರು ನನ್ನ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.