automobile News, automobile News in kannada, automobile ಕನ್ನಡದಲ್ಲಿ ಸುದ್ದಿ, automobile Kannada News – HT Kannada

Latest automobile Photos

ರಾಯಲ್ ಎನ್‌ಫೀಲ್ಡ್ ಗೋವಾ ಕ್ಲಾಸಿಕ್ 350 ಬೈಕ್ ಇದೀಗ ಅನಾವರಣಗೊಂಡಿರುವುದಷ್ಟೇ. ಅಧಿಕೃತಕವಾಗಿ ನವೆಂಬರ್ 23, 2024ರಂದು ರಾಯಲ್ ಎನ್ ಫೀಲ್ಡ್ ಮೋಟೊವರ್ಸ್ ಉತ್ಸವದಲ್ಲಿ ಬಿಡುಗಡೆಯಾಗಲಿದೆ.

ರಾಯಲ್‌ ಎನ್‌ಫೀಲ್ಡ್‌ ಗೋವಾ ಕ್ಲಾಸಿಕ್‌ 350 ನೋಡಿದ್ದೀರಾ? ಫಂಕಿ ಶೇಡ್‌ನಿಂದ ವರ್ಣರಂಜಿತವಾದ ಬೈಕ್‌ನ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ

Thursday, November 21, 2024

ಟಿವಿಎಸ್ ಮೋಟಾರ್ ಕಂಪನಿಯು ನವೀಕರಿಸಿದ ಅಪಾಚೆ ಆರ್ ಟಿಆರ್ 160 4ವಿ  ಬೈಕನ್ನು ಬಿಡುಗೆ ಮಾಡಿದೆ. ಇದರ ದೆಹಲಿ ಎಕ್ಸ್‌ಶೋರೂಂ ದರ 1,39,990 ರೂಪಾಯಿ ಇದೆ. ಈ ಹಿಂದಿನ ಅಪಾಚೆಗೆ ಹೋಲಿಸಿದರೆ ದರ  5,000 ರೂಪಾಯಿಯಷ್ಟು ಹೆಚ್ಚಾಗಿದೆ.

ಹೊಸ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 4ವಿ ಬಿಡುಗಡೆ, ದರವೆಷ್ಟು, ಫೀಚರ್ಸ್‌ ಏನೇನಿದೆ? ಹಳೆ ಅಪಾಚೆಗೆ ಹೋಲಿಸಿದರೆ ಸಾಕಷ್ಟು ಹೊಸತನ- ಚಿತ್ರಗಳು

Wednesday, November 20, 2024

2024 Maruti Suzuki Dzire launched: ಮಾರುತಿ ಸುಜುಕಿ ಕಂಪನಿಯ ಹೊಸ ಡಿಜೈರ್‌ಗಾಗಿ ಕಾಯುವಿಕೆ ಅಂತ್ಯವಾಗಿದೆ. ಕೊನೆಗೂ ದೇಶದ ಮಾರುಕಟ್ಟೆಗೆ ಹೊಸ ಡಿಜೈರ್‌ ಕಾರು ಹೊಸ ರೂಪದಲ್ಲಿ ಆಗಮಿಸಿದೆ. ಈ ಕಾರಿಗೆ ಈ ವರ್ಷದ ಡಿಸೆಂಬರ್‌ವರೆಗೆ ದರ ತುಸು ಕಡಿಮೆ ಇರಲಿದೆ. ಈ ಕಾರಿನ ಎಲ್ಲಾ ಆವೃತ್ತಿಗಳ ದರ, ತಾಂತ್ರಿಕ ವಿವರಗಳು ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಚಿತ್ರಗಳು: ಹೊಸ ಮಾರುತಿ ಡಿಜೈರ್‌ ಬಿಡುಗಡೆಯಾಯ್ತು, ದರ ಕಡಿಮೆ, ಡಿಸೈನ್‌ ಸೂಪರ್‌, ಎಂಜಿನ್‌ ಹೇಗಿದೆ, ಸ್ಥಳಾವಕಾಶ ಎಷ್ಟಿದೆ? ಇಲ್ಲಿದೆ ವಿವರ

Monday, November 11, 2024

ನಾಲ್ಕನೇ ತಲೆಮಾರಿನ ಡಿಜೈರ್ ಗ್ಲೋಬಲ್ ಎನ್‌ಕ್ಯಾಪ್‌ನಿಂದ ಐದು ಸ್ಟಾರ್ ಕ್ರ್ಯಾಶ್ ರೇಟಿಂಗ್ ಪಡೆದ ಮೊದಲ ಮಾರುತಿ ಸುಜುಕಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಯಸ್ಕರ ಮತ್ತು ಮಕ್ಕಳ ಸುರಕ್ಷತಾ ಅಂಶಗಳ ಆಧಾರದ ಮೇಲೆ ಮತ್ತು  ಪಾದಚಾರಿಗಳ ಸುರಕ್ಷತೆಗಾಗಿ ಗ್ಲೋಬಲ್ ಎನ್‌ಕ್ಯಾಪ್‌ ಜಾಗತಿಕ ಕಾರು ಮಾದರಿಗಳಲ್ಲಿ ಕ್ರ್ಯಾಶ್ ಪರೀಕ್ಷೆಗಳನ್ನು ನಡೆಸುತ್ತದೆ. ಇದೇ ಮೊದಲ ಬಾರಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಮಾರುತಿಯ ಕಾರೊಂದು ಈ ಸಾಧನೆ ಮಾಡಿದೆ.

ಹೊಸ ಡಿಜೈರ್‌ ಕಾರಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಸಿಗ್ತು 5 ಸ್ಟಾರ್‌ ರೇಟಿಂಗ್‌, ಸೇಫ್ಟಿಯಲ್ಲಿ ಗೆದ್ದ ಮಾರುತಿ ಸುಜುಕಿಯ ಮೊದಲ ಕಾರು

Friday, November 8, 2024

ಸ್ಪೋರ್ಟ್ಸ್ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಎನ್ 125 ಬಿಡುಗಡೆಯಾಗಿದೆ. ಆದರೆ, ಈ ಬೈಕ್‌ ಬಗ್ಗೆ ಸಾಕಷ್ಟು ಜನರು ಅಪಸ್ವರ ಎತ್ತಿದ್ದಾರೆ.ಒಳ್ಳೆಯ ಡಿಸೈನ್‌ಗೆ ಹೆಸರಾಗಿದ್ದ ಪಲ್ಸರ್‌ ವಿನ್ಯಾಸವನ್ನೇ ಇದು ಹೋಲುತ್ತಿಲ್ಲ ಎನ್ನುವವರೂ ಇದ್ದಾರೆ. ಈ ಬೈಕ್‌ ಇಲ್‌ಇಡಿ ಡಿಸ್ಕ್‌ ಮತ್ತು ಎಲ್‌ಇಡಿ ಡಿಸ್ಕ್‌ ಬಿಟಿ ಎಂಬ ವರ್ಷನ್‌ಗಳಲ್ಲಿ ದೊರಕುತ್ತಿದೆ. ಇದರ ಬೋಲ್ಡ್‌ ಲುಕ್‌ ಕುರಿತು ಕೆಲವರು ಪಾಸಿಟೀವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೈನ್‌ ಹೆಸರಲ್ಲಿ ಪಲ್ಸರ್‌ ಹೆಸರು ಹಾಳಾಗದೆ ಇದ್ರೆ ಸಾಕು ಎಂಬ ಅಭಿಪ್ರಾಯವೂ ಬಂದಿದೆ.

Bajaj Pulsar N125: ಹೊಸ ಬಜಾಜ್‌ ಪಲ್ಸರ್‌ ಎನ್‌ 125 ಆಗಮನ, ಬೋಲ್ಡ್‌ ಲುಕ್‌ನಿಂದ ಹಳೆ ಚಾರ್ಮ್‌ ಕಳೆದೋಯ್ತ? ಓದಿ ಬೈಕ್‌ ವಿಮರ್ಶೆ

Saturday, October 19, 2024

ಫ್ರೆಂಚ್ ಆಟೋ ದೈತ್ಯ  ರೆನೊ (ಕೆಲವರು ರೆನಾಲ್ಟ್ ಎಂದು ಉಚ್ಚರಿಸುತ್ತಾರೆ)  ತನ್ನ ಇತ್ತೀಚಿನ ಕಾನ್ಸೆಪ್ಟ್ ಕಾರು ಎಂಬ್ಲೆಮ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದು ಶೂಟಿಂಗ್-ಬ್ರೇಕ್ ಶೈಲಿಯ ಎಲೆಕ್ಟ್ರಿಕ್ ಕಾರಾಗಿದೆ. ಇದು ಡ್ಯುಯಲ್ ಪವರ್ ಟ್ರೇನ್ ಸೆಟಪ್ ಅನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಶಕ್ತಿ ಎರಡರಲ್ಲೂ ಪ್ರಯಾಣಿಸಲಿದೆಯಂತೆ.

Renault Embleme: ಕಾರು ಅಂದ್ರೆ ಹೀಗಿರಬೇಕು, ಡಬಲ್‌ ಎಂಜಿನ್‌ನ ರೆನೊ ಎಂಬ್ಲೆಮ್ ಅಂದ ನೋಡಲೆರಡು ಕಣ್ಣು ಸಾಲದಮ್ಮ

Sunday, October 13, 2024

ಇದೊಂಥರಾ ವಿಚಿತ್ರ ಕಾರು. ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ ಅಂತ ಗಾಬರಿಯಾಗಬೇಡಿ. ಇದು ರೋಬೋ ಟ್ಯಾಕ್ಸಿ.ಇದರ ಹೆಸರು ಟೆಸ್ಲಾ ಸೈಬರ್‌ಕ್ಯಾಬ್‌. ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್‌ ಈ ಕ್ಯಾಬ್‌ನ ಚಿತ್ರಗಳನ್ನು ಅನಾವರಣಗೊಳಿಸಿದ್ದಾರೆ. 2026ರಲ್ಲಿ ಇದರ ಉತ್ಪಾದನೆ ಶುರುವಾಗಲಿದೆ ಎಂದೂ ಅವರು ಪ್ರಕಟಿಸಿದ್ದಾರೆ.

ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ; ಟೆಸ್ಲಾ ಸೈಬರ್‌ಕ್ಯಾಬ್‌ ಚಿತ್ರನೋಟ

Sunday, October 13, 2024

ಯಮಹಾ ತನ್ನ ಹಳೆ ವಿನ್ಯಾಸಕ್ಕೆ ಬದಲಾಗಿ 2025ರ ಯಮಹಾ ಆರ್‌3ರಲ್ಲಿ ಅತ್ಯಾಕರ್ಷಕ ಸ್ಪೋರ್ಟ್ಸ್‌ ಲುಕ್ ನೀಡಿದೆ. ಅದರ ಲೈಟಿಂಗ್‌ ಮತ್ತು ಇನ್ನು ಕೆಲವು ಬದಲಾವಣೆಗಳು ಬೈಕ್‌ಗೆ ಅತ್ಯಾಕರ್ಷಕ ಲುಕ್ ನೀಡಿದೆ.

ಹೊಸ ನೋಟ, ಫೀಚರ್‌ನೊಂದಿಗೆ ಬೈಕ್‌ ಪ್ರಿಯರ ಮನಸೆಳಯುತಿದೆ 2025 ಯಮಹಾ ಆರ್‌3; ಅಮೆರಿಕದ ಇದರ ಬೆಲೆಗೆ ಭಾರತದಲ್ಲಿ ಪುಟ್ಟ ಕಾರು ಖರೀದಿಸಬಹುದು

Saturday, October 12, 2024

2025ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹಲವು ಹೊಸ ಫೀಚರ್‌ಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ವರ್ಷದ ಕೊನೆಯಲ್ಲಿ ಭಾರತದ ರಸ್ತೆಗೆ ಆಗಮಿಸುವ ಸೂಚನೆಯಿದೆ. ಈಗಾಗಲೇ ಕಂಪನಿಯು ಹಲವು ಸೂಪರ್‌ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

2025 ಟ್ರಯಂಫ್ ಟ್ರೈಡೆಂಟ್ ಬಿಡುಗಡೆ: ಸಾಟಿಯಿಲ್ಲದ ಅಪ್‌ಡೇಟ್‌, ಹೊಸತನದ ಫೀಚರ್‌ಗಳು; ಚಿತ್ರಗಳನ್ನು ನೋಡುತ್ತಾ ಬೈಕ್‌ನ ಮಾಹಿತಿ ಪಡೆಯಿರಿ

Thursday, October 10, 2024

Used Car Loan Tips: ಮೊದಲ ಬಾರಿಗೆ ವಾಹನ ಖರೀದಿಸುವವರಿಗೆ ಸೆಕೆಂಡ್‌ ಹ್ಯಾಂಡ್‌ ಕಾರು ಸೂಕ್ತವಾಗಿದೆ. ಈ ರೀತಿ ಸೆಕೆಂಡ್‌ ಹ್ಯಾಂಡ್‌ ವಾಹನ ಖರೀದಿಸುವಾಗ ಸಾಕಷ್ಟು ಜನರಿಗೆ ಸಾಕಷ್ಟು ಹಣ ಉಳಿತಾಯವಾಗಬಹುದು. ಆದರೆ, ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಹಣ ಹೊಂದಿಸುವುದು ಕೆಲವರಿಗೆ ಸವಾಲಾಗಿ ಪರಿಣಮಿಸಬಹುದು. ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ವಾಹನ ಸಾಲ ದೊರಕಿದರೆ ಸುಲಭವಾಗಿ ಇಎಂಐ ಪಾವತಿಸುತ್ತ ಸಾಲ ತೀರಿಸಬಹುದು.

Used Car Loan Tips: ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ವಾಹನ ಸಾಲ ದೊರಕುತ್ತಿಲ್ಲವೇ? ಈ 4 ಅಂಶಗಳನ್ನು ಗಮನಿಸಿ

Wednesday, October 9, 2024

ಸ್ಕೋಡಾ ತನ್ನ ಎಲ್ರೋಕ್ ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮುನ್ನ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಭಾರತಕ್ಕೆ ಮುಂದಿನ ವರ್ಷ ಆಗಮಿಸಲಿದೆ.  ಸ್ಕೋಡಾ ಎಲ್ರಾಕ್ ಇವಿ ಕಂಪನಿಯ ಮೊದಲ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಎಲ್ರೋಕ್ ಸಂಪೂರ್ಣವಾಗಿ ಹೊಸ ವಿನ್ಯಾಸ ತತ್ವವನ್ನು ಹೊಂದಿದೆ. ಕಂಪನಿಯ ಸಾಂಪ್ರದಾಯಿಕ ವಿನ್ಯಾಸ ಶೈಲಿಯನ್ನು ಬಿಟ್ಟು ಹೊಸಬಗೆಯ ವಿನ್ಯಾಸವನ್ನು ಈ ಇವಿ ಹೊಂದಿದೆ.

Skoda Elroq EV: ಅಂದದ ಸ್ಕೋಡಾ ಎಲ್ರೋಕ್ ಇವಿ ನೋಡಿರಣ್ಣ; 28 ನಿಮಿಷದಲ್ಲಿ ಶೇ 80 ಚಾರ್ಜಿಂಗ್‌, ಫುಲ್‌ ಚಾರ್ಜ್‌ಗೆ 560 ಕಿಮೀ ರೇಂಜ್‌

Tuesday, October 8, 2024

ಮ್ಯಾಗ್ನೈಟ್ ಮೊದಲ ನೋಟಕ್ಕೆ ಹಳೆಯ ಆವೃತ್ತಿಯಂತೆಯೇ ಇದೆ. ಆದರೆ, ಕ್ರೋಮ್‌ ಫಿನಿಶ್‌ ಇರುವ ಸ್ವಲ್ಪ ಅಗಲವಾದ ಗ್ರಿಲ್  ಈ ಕಾರಿಗೆ ಹೊಸ ಲುಕ್‌ನೀಡಿದೆ. ಕಾರಿನ ಕೆಳಭಾಗದಲ್ಲಿ ಸಾಂಪ್ರದಾಯಿಕ ಬೂಮರಾಂಗ್ ತರಹದ ಎಲ್ಇಡಿ ಡಿಆರ್‌ಎಲ್‌ಗಳು ಸುತ್ತುವರೆದಿವೆ. ಮುಂಭಾಗದಲ್ಲಿ ಹೊಸ ಬಂಪರ್‌ ಕೂಡ ಅಳವಡಿಸಲಾಗಿದೆ.

ಪರಿಷ್ಕೃತ 2024 ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆ: ಹೊಸ ಕಾರಲ್ಲಿ ಏನಿದೆ ವಿಶೇಷ? ಚಿತ್ರ ಮಾಹಿತಿ

Friday, October 4, 2024

ಕಿಯಾ ಕಂಪನಿಯು ಬಹುನಿರೀಕ್ಷಿತ ಕಾರ್ನಿವಲ್‌ 2024 ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 2024ರ ಕಿಯಾ ಕಾರ್ನಿವಲ್‌ ಆರಂಭಿಕ ಎಕ್ಸ್‌ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ.ಈಗಾಗಲೇ ಹೊಸ ಕಾರ್ನಿವಲ್‌ ಅನ್ನು  2,796 ಗ್ರಾಹಕರು ಬುಕ್ಕಿಂಗ್‌ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಭಾರತದ ಮಾರುಕಟ್ಟೆಗೆ ಆಗಮಿಸಿದ ಹೊಸ ಕಿಯಾ ಕಾರ್ನಿವಾಲ್‌ ಚಿತ್ರಗಳನ್ನು ನೋಡಿ, ಇದು 63.9 ಲಕ್ಷ ರೂನ ಎಂಪಿವಿ

Thursday, October 3, 2024

ಸ್ಕೂಟರ್‌ನಲ್ಲಿ ಕುಳಿತಾಗ ಕಾಲು ನೆಲಕ್ಕೆ ಸರಿಯಾಗಿ ತಾಗಿದರೆ ಆರಾಮವಾಗಿ ಚಾಲನೆ ಮಾಡಬಹುದು. ಕಾಲು ಎಟುಕದೆ ಇದ್ದರೆ ಸಡನ್‌ ನೆಲಕ್ಕೆ ಕಾರು ಊರುವಾಗ ಗಾಡಿ ಪಲ್ಟಿ ಹೊಡೆಯುವ ಅಪಾಯವಿದೆ. ಕಡಿಮೆ ಎತ್ತರದವರು ಕಡಿಮೆ ಎತ್ತರದ ಸೀಟುಗಳ ಸ್ಕೂಟರ್‌ ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳು ಇವೆ.

ಸ್ಕೂಟರ್‌ ಸವಾರಿಯಲ್ಲಿ ಕಾಲು ನೆಲಕ್ಕೆ ಎಟಕುತ್ತಿಲ್ವ? ಹಗುರ, ಕಡಿಮೆ ಎತ್ತರದ ಸೀಟುಗಳ ಈ ಸ್ಕೂಟಿಗಳನ್ನ ಟ್ರೈ ಮಾಡಿನೋಡಿ

Thursday, October 3, 2024

ಸ್ಕೋಡಾ ಎಲ್ರೋಕ್ ಇವಿ ಜಾಗತಿಕವಾಗಿ ಬಿಡುಗಡೆಯಾಗಿದೆ. ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸ್ಕೋಡಾ ಎಲ್ರಾಕ್ ಇವಿ ಬ್ರ್ಯಾಂಡ್ ನ ಮೊದಲ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್  ಎಸ್‌ಯುವಿಯಾಗಿದೆ. ಎಲ್ರೋಕ್ ಸಂಪೂರ್ಣವಾಗಿ ಹೊಸ ವಿನ್ಯಾಸ ತತ್ವವನ್ನು ಒಳಗೊಂಡಿದೆ. ಈ ಮೂಲಕ ತನ್ನ ಸಾಂಪ್ರದಾಯಿಕ ವಿನ್ಯಾಸವನ್ನು ಈ ಇವಿಗೆ ಅಳವಡಿಸಿಲ್ಲ. ಸಂಪೂರ್ಣ ಹೊಸತನದಿಂದ ಕೂಡಿದೆ.

Skoda Elroq EV: ಸಂಪೂರ್ಣ ಹೊಸತನದ ವಿನ್ಯಾಸ, 560 ಕಿಲೋಮೀಟರ್‌ ರೇಂಜ್‌, ನೂತನ ಸ್ಕೋಡಾ ಎಲ್ರೋಕ್‌ ಎಲೆಕ್ಟ್ರಿಕ್‌ ವಾಹನದ ಚಿತ್ರ ವಿಮರ್ಶೆ

Wednesday, October 2, 2024

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್ ಯುವಿಗೆ ಕಠಿಣ ಪ್ರಶ್ನೆಗಳು ಎದುರಾಗಿದ್ದವು. ಪರಿಸರ ಸ್ನೇಹಿ ಕಾರಿನ ಕ್ಯಾಬಿನ್‌ನ ಲಗ್ಷುರಿ ಹೆಚ್ಚಿಸುವುದು ಹೇಗೆ? ಆತ್ಮವಿಶ್ವಾಸದಿಂದ ಚಾಲನೆ ನೀಡುವಂತಹ ಪವರ್‌ ನೀಡುವುದು ಹೇಗೆ? ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದನ್ನು ನಿಲ್ಲಿಸುವುದು ಹೇಗೆ? ಇದಕ್ಕಾಗಿಯೇ ಮರ್ಸಿಡಿಸ್‌ ಬೆಂಝ್‌ ಕಂಪನಿಯು ಎಲೆಕ್ಟ್ರಿಕ್‌ ಮೋಟಾರ್‌ನ ಮರ್ಸಿಡಿಸ್ ಬೆಂಝ್ ಇಕ್ಯೂಎಸ್  ಪರಿಚಯಿಸಿದೆ.

ಮರ್ಸಿಡಿಸ್‌ ಇಕ್ಯುಎಸ್‌ ವಿಮರ್ಶೆ: 800 ಕಿಮಿಗೂ ಹೆಚ್ಚು ಮೈಲೇಜ್‌, ಪರಿಸರಸ್ನೇಹಿ ಎಸ್‌ಯುವಿಯ 12 ಚಿತ್ರಗಳನ್ನು ನೋಡುತ್ತ ರಿವ್ಯೂ ಓದಿ

Tuesday, September 24, 2024

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ರಿವೋಲ್ಟ್ ಮೋಟಾರ್ಸ್ ತನ್ನ ಎರಡನೇ  ಬೈಕ್‌ ಆರ್‌ವಿ1 ಅನ್ನು ಬಿಡುಗಡೆ ಮಾಡಿದೆ. ಇದನ್ನು ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಕಮ್ಯೂಟರ್ ಮೋಟಾರ್‌ಸೈಕಲ್ ಎಂದು ಹೇಳಿಕೊಂಡಿದೆ. ರಿವೋಲ್ಟ್ ಆರ್‌ವಿ1 ಅನ್ನು ಎರಡು ವರ್ಷನ್‌ಗಳಲ್ಲಿ ದೊರಕುತ್ತದೆ.  ಅಂದ್ರೆ ಇದು RV1 ಮತ್ತು RV1+ ಎಂಬ ಎರಡು ವರ್ಷನ್‌ಗಳಲ್ಲಿ ಲಭ್ಯ.

ರಿವೋಲ್ಟ್‌ ಆರ್‌ವಿ 1: ಪೂರ್ತಿ ಚಾರ್ಜ್‌ಗೆ 160 ಕಿಮೀ ಓಡೋ ಬೈಕಿದು, ಓಲಾ ರೋಡ್‌ಸ್ಟೆರ್‌ ಎಕ್ಸ್‌ಗೆ ನಡುಕ- ಚಿತ್ರಗಳನ್ನು ನೋಡಿ

Wednesday, September 18, 2024

ನಾಲ್ಕನೇ ತಲೆಮಾರಿನ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನಾವರಣಗೊಂಡಿದೆ. ಈ ಬಾರಿ ಐಷಾರಾಮಿ ಗ್ರ್ಯಾಂಡ್ ಟೂರರ್ ಹಳೆಯ ಡಬ್ಲ್ಯು 12 ಎಂಜಿನ್‌ ಬದಲು ಹೊಸ ಟ್ವಿನ್-ಟರ್ಬೋಚಾರ್ಜ್ಡ್ ಹೈಬ್ರಿಡ್ ವಿ 8 ಎಂಜಿನ್‌ ಮೂಲಕ ಆಗಮಿಸಿದೆ. ಒಂದು ಫುಲ್‌ ಟ್ಯಾಂಕ್‌ ಮತ್ತು ಫುಲ್‌ ಬ್ಯಾಟರಿ ಚಾರ್ಜಿಂಗ್‌ನಲ್ಲಿ 829 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ.

ಬೆಂಟ್ಲಿ ಫ್ಲೈಯಿಂಗ್‌ ಸ್ಪುರ್‌ ಅನಾವರಣ: ಅವಳಿ ಟರ್ಬೊ ಹೈಬ್ರಿಡ್‌ ವಿ8 ಎಂಜಿನ್‌ನ ಹೊಸ ಬೆಂಟ್ಲಿ ಕಾರು ನೋಡಿರಣ್ಣ- Photos

Thursday, September 12, 2024

ಎಂಜಿ ವಿಂಡ್ಸರ್ ಇವಿಯನ್ನು  ಎಂಜಿ ಮೋಟಾರ್‌ ಕಂಪನಿಯು ಮೂರನೇ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿಯಾಗಿ ಬಿಡುಗಡೆ ಮಾಡಿದೆ. ಇದು 9.99 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಒಂದು ಫುಲ್‌ ಚಾರ್ಜ್‌ಗೆ 331 ಕಿ.ಮೀ. ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಅಕ್ಟೋಬರ್‌ 3ರಿಂದ ಈ ಕಾರಿನ ಬುಕ್ಕಿಂಗ್‌ ಆರಂಭವಾಗಲಿದೆ.

MG Windsor EV: ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆಗಮಿಸಿದ ಎಂಜಿ ವಿಂಡ್ಸರ್‌ ಎಲೆಕ್ಟ್ರಿಕ್‌ ವಾಹನ, ದರ 9.99 ಲಕ್ಷ ರೂಪಾಯಿ

Wednesday, September 11, 2024

HD Kumaraswamy: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಎಚ್‌ಡಿಕೆ ಕರೆ ನೀಡಿದ್ದಾರೆ.  ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿದ ಬಳಿಕ ಅವರು "ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme)  ಯೋಜನೆಯನ್ನು ಮುಂದುವರಿಸಲಾಗುವುದು" ಎಂದು ಹೇಳಿದ್ದಾರೆ.

ಸ್ಕೂಟರ್‌ ರೈಡ್‌ ಮಾಡಿದ ಕುಮಾರಣ್ಣ, ಆಟೋ ರಿಕ್ಷಾ ಚಾಲನೆಗೂ ಜೈ ಅಂದ್ರು ಎಚ್‌ಡಿ ಕುಮಾರಸ್ವಾಮಿ- ಇವಿ ದಿನದಂದು ಪರಿಸರಸ್ನೇಹಿ ಸವಾರಿ- Photos

Monday, September 9, 2024