ಕನ್ನಡ ಸುದ್ದಿ  /  ವಿಷಯ  /  bangladesh cricket team

Latest bangladesh cricket team Photos

ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ, ಇದರೊಂದಿಗೆ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು, ಗೆಲುವು ದಾಖಲಿಸಿದೆ. ಅಲ್ಲದೆ, ಈ ಸರಣಿಗೂ ಮುನ್ನ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ ದ್ವೀಪರಾಷ್ಟ್ರ ಇದೀಗ ನಾಲ್ಕನೇ ಸ್ಥಾನಕ್ಕೇರಿದೆ. ಗೆಲುವಿನ ಶೇಕಡವಾರು 50ರಷ್ಟು ಹೊಂದಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​; ಗೆದ್ದ ಶ್ರೀಲಂಕಾ ಭಾರಿ ಏರಿಕೆ, ಸೋತ ಬಾಂಗ್ಲಾದೇಶ ಭಾರಿ ಕುಸಿತ, ಭಾರತ ಎಷ್ಟು ಸುರಕ್ಷಿತ?

Wednesday, April 3, 2024

ಕ್ರಿಕ್‌ಬಜ್‌ ಜೊತೆಗೆ ಮಾತನಾಡಿರುವ ಹಿರಿಯ ಸ್ಟಾರ್ ಆಲ್‌ರೌಂಡರ್, ಒತ್ತಡದಿಂದಾಗಿ ವಿಶ್ವಕಪ್‌ನಾದ್ಯಂತ ದೃಷ್ಟಿ ಮಸುಕಾಗಿತ್ತು ಎಂದು ಹೇಳಿಕೊಂಡಿದ್ದಾರೆ.‌ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಅದು ತನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.

ಪಂದ್ಯಾವಳಿ ಪೂರ್ತಿ ದೃಷ್ಟಿ ಮಸುಕಾಗಿತ್ತು; ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ವಿವರಿಸಿದ ಶಕೀಬ್

Tuesday, December 26, 2023

ಉಭಯ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯವು ಡಿಸೆಂಬರ್‌ 23ರಂದು ನೇಪಿಯರ್‌ನಲ್ಲಿ ನಡೆಯಲಿದೆ.

ಸೌಮ್ಯ ಸರ್ಕಾರ್ 169 ರನ್‌ ಹೊರತಾಗಿಯೂ ಸೋತ ಬಾಂಗ್ಲಾ; ಎರಡನೇ ಏಕದಿನ ಗೆದ್ದ ಕಿವೀಸ್, ಸರಣಿ ವಶ

Wednesday, December 20, 2023

ಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ, 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್​ಗಳ ಗುರಿ ನೀಡಿತು. ಈ ಗುರಿ ಹಿಂಬಾಲಿಸಿದ ಯುಎಇ ತಂಡ, ಬಾಂಗ್ಲಾದೇಶ ಬೌಲರ್​​ಗಳ ದಾಳಿಗೆ ನಡುಗಿತು. ಪರಿಣಾಮ 24.5 ಓವರ್​​ಗಳಲ್ಲಿ ಕೇವಲ 87 ರನ್​​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಚೊಚ್ಚಲ ಏಷ್ಯಾಕಪ್ ಟ್ರೋಫಿ ಕನಸು ಭಗ್ನಗೊಂಡಿತು.

ಅಂಡರ್​-19 ಏಷ್ಯಾಕಪ್ ಫೈನಲ್; ಯುಎಇ ವಿರುದ್ಧ ಗೆದ್ದು ಚರಿತ್ರೆ ಸೃಷ್ಟಿಸಿದ ಬಾಂಗ್ಲಾದೇಶ

Sunday, December 17, 2023

ಮುಂದೆ ಬಾಂಗ್ಲಾದೇಶ ಮತ್ತು ಯುಎಇ ಅಂಡರ್ 19 ತಂಡಗಳು ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಅಂಡರ್ 19 ಏಷ್ಯಾಕಪ್ ಸೆಮಿಫೈನಲ್; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಸೋಲು, ಪಾಕ್ ಮಣಿಸಿ ಫೈನಲ್ ಲಗ್ಗೆ ಇಟ್ಟ ಯುಎಇ

Friday, December 15, 2023

ಬಾಂಗ್ಲಾದೇಶ vs ನ್ಯೂಜಿಲೆಂಡ್ 2ನೇ ಟೆಸ್ಟ್ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ ಕಂಡಿದೆ. ಮೀರ್‌ಪುರದಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಬಾಂಗ್ಲಾದೇಶ ಲೀಗ್ ಪಟ್ಟಿಯಲ್ಲಿ ಕುಸಿದಿದೆ. 2ನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದ ಕಾರಣ ಕಿವೀಸ್​, ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಜಿಗಿತ ಕಂಡಿದೆ.

WTC Points Table: ಬಾಂಗ್ಲಾದೇಶ ಎದುರು 2ನೇ ಟೆಸ್ಟ್​ ಗೆದ್ದ ನ್ಯೂಜಿಲೆಂಡ್; ಅಂಕಪಟ್ಟಿಯಲ್ಲಿ ಬದಲಾವಣೆ

Friday, December 22, 2023

ಇವರಷ್ಟೇ ಅಲ್ಲ, ನ್ಯೂಜಿಲೆಂಡ್​ನ ಕ್ರಿಸ್ ಕ್ರೈನ್ಸ್ (ಫಿಕ್ಸಿಂಗ್), ಬಾಂಗ್ಲಾದೇಶದ ರುಬೆಲ್​ ಹೊಸೈನ್ (ಲೈಂಗಿಕ ಕಿರುಕುಳ) ಭಾರತದ ಅಮಿತ್ ಮಿಶ್ರಾ (ಸ್ನೇಹಿತೆಯ ಮೇಲೆ ಹಲ್ಲೆ), ಬೆನ್​ ಸ್ಟೋಕ್ಸ್ (ಸಾರ್ವಜನಿಕರೊಂದಿಗೆ ಗಲಾಟೆ), ಧನುಷ್ಕಾ ಗುಣತಿಲಕ (ಲೈಂಗಿಕ ಕಿರುಕುಳ), ಶೇನ್​​ ವಾರ್ನ್ (ಮೈದಾನದ ಹೊರಗಿನ ಹಗರಣ), ಸಂದೀಪ್ ಲಮಿಚಾನೆ (ಅತ್ಯಾಚಾರ ಪ್ರಕರಣ), ಕಮ್ರಾನ್ ಅಕ್ಮಲ್ (ಸಂಚಾರ ನಿಯಮ ಉಲ್ಲಂಘನೆ), ಖಲೀದ್ ಲತೀಫ್ ಸೇರಿದಂತೆ ಇನ್ನೂ ಹಲವರು ಜೈಲಿನಲ್ಲಿ ಕಾಲ ಕಳೆದಿದ್ದಾರೆ.

ಫಿಕ್ಸಿಂಗ್​, ಕೊಲೆ, ಹಲ್ಲೆ ಸೇರಿ ಹಲವು ಪ್ರಕರಣಗಳಿಂದ ಜೈಲಿಗೆ ಹೋದ ಕ್ರಿಕೆಟರ್ಸ್; ಪಾಕಿಸ್ತಾನದವರೇ ಹೆಚ್ಚು

Wednesday, December 6, 2023

ಬಾಂಗ್ಲಾದೇಶದ ಕರೆನ್ಸಿಯಲ್ಲಿ ಶಾಕಿಬ್ ಅಲ್ ಹಸನ್ ಅವರ ಒಟ್ಟು ವಾರ್ಷಿಕ ಆದಾಯ 5 ಕೋಟಿ 55 ಲಕ್ಷ 71 ಸಾವಿರ ಬಾಂಗ್ಲಾದೇಶ ಟಾಕಾ. ಇದಲ್ಲದೆ, ಬಾಂಗ್ಲಾದೇಶದ ಈ ಸ್ಟಾರ್ ಆಲ್‌ರೌಂಡರ್ ಬಾಂಡ್‌ಗಳು, ಡಿಬೆಂಚರ್‌ಗಳು ಮತ್ತು ಷೇರು ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅದರಿಂದಲೂ ಲಾಭ ಗಳಿಸುತ್ತಾರೆ.

ಶಕೀಬ್ ಅಲ್ ಹಸನ್ ಆಸ್ತಿ ಮೌಲ್ಯ ಎಷ್ಟು? ಚುನಾವಣೆಗೆ ನಿಂತ ಕ್ರಿಕೆಟಿಗನ ವಾರ್ಷಿಕ ಆದಾಯ ಬಹಿರಂಗ

Tuesday, December 5, 2023

ನಿರೀಕ್ಷೆಯಂತೆ ವಿಶ್ವಕಪ್ ಕೊನೆಯ ಲೀಗ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಜಯಿಸಿದೆ. ಇದರೊಂದಿಗೆ ಲೀಗ್​ನ 9 ಪಂದ್ಯಗಳನ್ನೂ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಜೇಯವಾಗಿ ಸೆಮೀಸ್​​ನಲ್ಲಿ ನ್ಯೂಜಿಲೆಂಡ್​​ ಅನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ. ನೆಟ್​ ರನ್-ರೇಟ್ +2.570.

ಏಕದಿನ ವಿಶ್ವಕಪ್ ಲೀಗ್ ಮುಕ್ತಾಯ, ಅಜೇಯ ತಂಡವಾಗಿ ಸೆಮಿಫೈನಲ್​ಗೆ ಭಾರತ; ಇಲ್ಲಿದೆ ಅಂತಿಮ ಅಂಕಪಟ್ಟಿ

Monday, November 13, 2023

ವಿಶ್ವಕಪ್‌ ಇತಿಹಾಸದಲ್ಲಿ ಆಸೀಸ್​ ಇದೇ ಮೊದಲ ಬಾರಿಗೆ ಅಧಿಕ ರನ್ ಚೇಸ್ ಮಾಡಿದ ದಾಖಲೆ ಬರೆದಿದೆ. ಈ ಪಂದ್ಯಕ್ಕೂ ಮುನ್ನ ಅಫ್ಘನಿಸ್ತಾನ ವಿರುದ್ಧ ಈ ದಾಖಲೆ ಬರೆದಿತ್ತು. ಇದೀಗ ಈ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದೆ.

ಬಾಂಗ್ಲಾದೇಶ ವಿರುದ್ದ ದಾಖಲೆಯ ರನ್ ಚೇಸಿಂಗ್ ಮಾಡಿ ಇತಿಹಾಸ ಬರೆದ ಆಸ್ಟ್ರೇಲಿಯಾ

Sunday, November 12, 2023

ಆಸೀಸ್​ ಸ್ಟಾರ್ ಸ್ಪಿನ್ನರ್​ ಆ್ಯಡಂ ಜಂಪಾ ಪ್ರಸ್ತುತ ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಇದೀಗ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಜಂಪಾ, ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.

Adam Zampa: ಬಾಂಗ್ಲಾದೇಶ ವಿರುದ್ಧ ಎರಡು ವಿಕೆಟ್ ಪಡೆದು ನೂತನ ದಾಖಲೆ ನಿರ್ಮಿಸಿದ ಆ್ಯಡಂ ಜಂಪಾ

Saturday, November 11, 2023

ಆದರೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ತಂಡದೊಂದಿಗೆ ನವೆಂಬರ್​ 15ರಂದು ಕಾದಾಟ ನಡೆಸಲಿದೆ. ಆದರೆ 4ನೇ ಸ್ಥಾನಕ್ಕೆ ಆಸೀಸ್ ಎದುರು ಸೋತ ಅಫ್ಘನ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ 3 ತಂಡಗಳು ತಲಾ 8 ಅಂಕಗಳಿಸಿವೆ.

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸೆಮಿಫೈನಲ್ ಫಿಕ್ಸ್; ಭಾರತದ ಎದುರಿನ ನಾಕೌಟ್ ಪಂದ್ಯಕ್ಕೆ 3 ತಂಡಗಳ ನಡುವೆ ಬಿಗ್ ಫೈಟ್

Wednesday, November 8, 2023

ಏಕದಿನ ವಿಶ್ವಕಪ್​​ನ 38ನೇ ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶ,  ಶ್ರೀಲಂಕಾ ತಂಡವನ್ನೂ ಟೂರ್ನಿಯಿಂದ ಹೊರ ದಬ್ಬಿತು. ಶಕೀಬ್ ಪಡೆ ಸತತ 6 ಸೋಲುಗಳ ನಂತರ ಜಯ ಸಾಧಿಸಿ, 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ನೇರ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ. ಆದರೆ ಲಂಕಾಗೆ ಈ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಆದರೆ 2025ರ ಚಾಂಪಿಯನ್ಸ್​ ಟ್ರೋಫಿಗೆ ಅಫ್ಘನಿಸ್ತಾನ ಅರ್ಹತೆ ಪಡೆದಿದೆ.

ಸೋತು ಗೆದ್ದದ್ದು ಲಂಕಾ-ಬಾಂಗ್ಲಾ; 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿದ್ದು ಮಾತ್ರ ಅಫ್ಘಾನಿಸ್ತಾನ!

Tuesday, November 7, 2023

ಭಾರತ ವಿರುದ್ಧದ ಸೋಲಿನ ಹೊರತಾಗಿಯೂ ದಕ್ಷಿಣ ಆಫ್ರಿಕಾ ಪ್ರಸ್ತುತ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ, ಅವರು 2ನೇ ಸ್ಥಾನದಲ್ಲೇ ಉಳಿಯುತ್ತಾರೆ ಎಂಬುದು ಅನಿಶ್ಚಿತ. ಇದೀಗ ಆಸ್ಟ್ರೇಲಿಯಾ ತಂಡಕ್ಕೂ ಅವಕಾಶ ಇದೆ. ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ 12 ಅಂಕ ಕಲೆಹಾಕಿದೆ. ಅವರ ನೆಟ್​​ ರನ್-ರೇಟ್ +1.376.

ಗೆದ್ದ ಭಾರತ ಟೇಬಲ್ ಟಾಪರ್, ಸೋತ ಸೌತ್​ ಆಫ್ರಿಕಾ 2ನೇ ಸ್ಥಾನಕ್ಕೆ ಕುತ್ತು; ರೇಸ್​​ನಲ್ಲಿ ಆಸೀಸ್, ಹೀಗಿದೆ ಅಂಕಪಟ್ಟಿ

Monday, November 6, 2023

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ ನಾಲ್ಕು ಸೋಲುಗಳ ಬಳಿಕ ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು ಪಡೆದಿರುವ ಪಾಕಿಸ್ತಾನ ಪ್ರಶಸ್ತಿ ರೇಸ್‌ನಲ್ಲಿ ಉಳಿದಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿರುವ ವೇಗಿ ಶಾಹೀನ್ ಅಫ್ರಿದಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದವರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಕೇವಲ 51 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ.

Fastest 100 ODI Wickets: ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಕಬಳಿಸಿದ ಅಗ್ರ 5 ಬೌಲರ್ಸ್; ಆಸೀಸ್‌ನ ಇಬ್ಬರು ಆಟಗಾರರಿಗೆ ಸ್ಥಾನ

Wednesday, November 1, 2023

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಬ್ದುಲ್ಲಾ ಶಫೀಕ್ (68) ಮತ್ತು ಫಖರ್ ಜಮಾನ್ (81) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮುರಿಯದ ಮೊದಲ ವಿಕೆಟ್‌ಗೆ 21.1 ಓವರ್‌ಗಳಲ್ಲಿ 128 ರನ್ ಬಾರಿಸಿದರು.

Pakistan vs Bangladesh: ವಿಶ್ವಕಪ್ 2023; ಬಾಂಗ್ಲಾವನ್ನ ಮಣಿಸಿ ಗೆಲುವಿನ ಹಳಿಗೆ ಬಂದ ಪಾಕಿಸ್ತಾನ; ಪೋಟೊಸ್

Wednesday, November 1, 2023

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ಬಳಿಕ ಬಾಂಗ್ಲಾದೇಶ ತಂಡವು ವಿಶ್ವಕಪ್ 2023ರ ಸೆಮಿಫೈನಲ್‌ನಿಂದ ಹೊರಬಿದ್ದ ಮೊದಲ ತಂಡವಾಯಿತು. ಪಾಕಿಸ್ತಾನ ವಿರುದ್ಧ ಸೋತ ಬಳಿಕ ಬಾಂಗ್ಲಾದೇಶವು 7 ಪಂದ್ಯಗಳಲ್ಲಿ ಒಟ್ಟು 2 ಅಂಕಗಳನ್ನು ಮಾತ್ರ ಹೊಂದಿದೆ. ಕೊನೆಯ 2 ಪಂದ್ಯಗಳಲ್ಲಿ ಗೆದ್ದರೂ ತಂಡದಿಂದ 6ಕ್ಕಿಂತ ಹೆಚ್ಚು ಅಂಕಗಳನ್ನು ಕಲೆಹಾಕಲು ಸಾಧ್ಯವಿಲ್ಲ. ಈಗಾಗಲೇ 4 ತಂಡಗಳು 8 ಅಂಕಗಳನ್ನು ತಲುಪಿವೆ. ಹೀಗಾಗಿ ಶಕೀಬ್ ಪಡೆ ಲೀಗ್ ಹಂತದಲ್ಲಿಯೇ ನಿರ್ಗಮಿಸಬೇಕಿದೆ.

ಬಾಂಗ್ಲಾವನ್ನು ಹೊರದಬ್ಬಿ ಮತ್ತೆ ಮೈಕೊಡವಿ ನಿಂತ ಪಾಕಿಸ್ತಾನ, ಕುಸಿದ ಅಫ್ಘಾನಿಸ್ತಾನ; ಹೀಗಿದೆ ಅಂಕಪಟ್ಟಿ

Wednesday, November 1, 2023

ಇಂಗ್ಲೆಂಡ್-ಪಾಕಿಸ್ತಾನ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ ಶ್ರೀಲಂಕಾ ತಂಡವನ್ನು ಮಣಿಸಿತು. ಇದರೊಂದಿಗೆ ಸೆಮಿಫೈನಲ್​ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. 2019ರ ವಿಶ್ವಕಪ್​​​ನಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಅಫ್ಘನ್ ಪ್ರಸಕ್ತ ಟೂರ್ನಿಯಲ್ಲಿ 3ನೇ ಜಯ ಸಾಧಿಸಿದೆ. ಆ ಮೂಲ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಗೆದ್ದದ್ದು ಅಫ್ಘಾನಿಸ್ತಾನ-ಸೋತದ್ದು ಶ್ರೀಲಂಕಾ; ಆದರೆ ಕುಸಿದಿದ್ದು ಪಾಕಿಸ್ತಾನ; ಹೀಗಿದೆ ಅಂಕಪಟ್ಟಿ

Tuesday, October 31, 2023

ಐಸಿಸಿ ಏಕದಿನ ವಿಶ್ವಕಪ್‌ನ 28ನೇ ಪಂದ್ಯ ಅಕ್ಟೋಬರ್ 28 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ವಿರುದ್ಧ ನಡೆಯಿತು. ಡಚ್ಚರು ಬಾಂಗ್ಲಾ ತಂಡವನ್ನು 87 ರನ್‌ಗಲಿಂದ ಸೋಲಿಸಿದ್ದಾರೆ.

BAN vs NED: 6 ಪಂದ್ಯಗಳಿಂದ ಕೇವಲ 1ರಲ್ಲಿ ಮಾತ್ರ ಗೆಲುವು; ನೆದರ್ಲೆಂಡ್ಸ್ ವಿರುದ್ಧ ಸೋತ ಬಾಂಗ್ಲಾದೇಶ ವಿಶ್ವಕಪ್‌ನಿಂದ ಬಹುತೇಕ ಔಟ್

Sunday, October 29, 2023

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಅವರ 174 ರನ್‌ಗಳ ಸ್ಫೋಟಕ ಶತಕದ ನೆರವಿನಿಂದ 382 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 383 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಶಕೀಬ್ ಪಡೆ ವಿಫಲವಾಯಿತು. 46.4 ಓವರ್‌ನಲ್ಲಿ 233 ರನ್‌ಗಳಿಸಿ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ 149 ರನ್‌ಗಳ ದೊಡ್ಡ ಗೆಲುವು ಪಡೆಯಿತು.

SA vs BAN: ಏಕದಿನ ವಿಶ್ವಕಪ್; ಬಾಂಗ್ಲಾದೇಶವನ್ನ 149 ರನ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ; ಅಂಕಪಟ್ಟಿಯಲ್ಲಿ ಟಾಪ್ 2ಗೆ ಜಿಗಿತ; ಫೋಟೊಸ್

Wednesday, October 25, 2023