dakshina-kannada News, dakshina-kannada News in kannada, dakshina-kannada ಕನ್ನಡದಲ್ಲಿ ಸುದ್ದಿ, dakshina-kannada Kannada News – HT Kannada

Latest dakshina kannada Photos

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ, ಕತ್ರಿನಾ ಕೈಫ್ ಆಗಮಿಸಿ, ಸರ್ಪಸಂಸ್ಕಾರ ಸಹಿತ ವಿವಿಧ ಸೇವೆಗಳಲ್ಲಿ ಭಾಗಿಯಾದರು. ತಮಿಳು ಚಿತ್ರರಂಗದ ನಿರ್ದೇಶಕರೊಬ್ಬರ ಸೂಚನೆಯಂತೆ ಕತ್ರಿನಾ ಅವರಿಂದ ಮಾಹಿತಿ ಪಡೆದು, ಬಂದಿದ್ದಾರೆ. ಖಾಸಗಿ ವಸತಿಗೃಹದಿಂದ ನೇರವಾಗಿ ದೇವಸ್ಥಾನಕ್ಕೆ ಬಂದ ವೇಳೆ ಮಾಸ್ಕ್ ಹಾಕಿ, ತಲೆಗೆ ದುಪಟ್ಟಾ ಹಾಕಿದ್ದರು. ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು.

Katrina Pics| ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್‌, ಸಂತಾನಪ್ರಾಪ್ತಿಗಾಗಿ ಸೇವೆ

Wednesday, March 12, 2025

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ಸೇರಿದ ಸಾವಿರಾರು ಭಕ್ತರ ಸಮ್ಮುಖ ವೈಭವದಿಂದ ನಡೆಯಿತು

Bantwal Rathotsav: ದಕ್ಷಿಣ ಕನ್ನಡದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ: 201ನೇ ಬ್ರಹ್ಮರಥೋತ್ಸವ ಸಡಗರ

Saturday, March 8, 2025

ಮಾಹಿತಿಯನ್ನು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ವಯಂಸೇವಕರು ನೀಡುತ್ತಾರೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಸಾವಿತ್ರಿ ಹಾಗೂ ರಾಜಯೋಗಿ ಬ್ರಹ್ಮಾಕುಮಾರ ಗಣಪತಿ ಅವರು ತಿಳಿಸಿದ್ದಾರೆ.

ಶಿವರಾತ್ರಿ ಹಿನ್ನೆಲೆ: ಬಿ ಸಿ ರೋಡ್‌ ಬಳಿ ಜ್ಯೋತಿರ್ಲಿಂಗ ದರ್ಶನ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಪ್ರಥಮ

Tuesday, February 25, 2025

4. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ

ಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದೆಂದು ಹೇಳಲಾದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತನ್ನ ಗಜಪೃಷ್ಟಾಕೃತಿಯ ರಚನೆಯಿಂದ ಗಮನ ಸೆಳೆದಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದವರ ಆಡಳಿತಕ್ಕೊಳಪಟ್ಟಿದ್ದು, ಸುತ್ತಮುತ್ತಲಿನ ಜನರು ಇಲ್ಲಿಗೆ ಆಗಮಿಸುವಲ್ಲದೆ, ಹತ್ತೂರಿನಿಂದಲೂ ಇದರ ಮಹಿಮೆಯನ್ನು ಗುರುತಿಸಿ ಬರುತ್ತಾರೆ..ವಿಟ್ಲದ ಜಾತ್ರೆ ಇಲ್ಲಿನ ಮುಖ್ಯ ಉತ್ಸವ. ಶಿವರಾತ್ರಿಯಂದೂ ಇಲ್ಲಿ ಹಬ್ಬದ ವಾತಾವರಣವಿರುತ್ತದೆ.

Maha Shivratri 2025: ಶಿವರಾತ್ರಿಗೆ ನೀವು ಭೇಟಿ ನೀಡಬಹುದಾದ ದಕ್ಷಿಣ ಕನ್ನಡದ ಪ್ರಮುಖ 5 ಶಿವಸಾನಿಧ್ಯಗಳು ಇವು

Sunday, February 16, 2025

ದಕ್ಷಿಣ ಕನ್ನಡದ ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿಯಲ್ಲಿರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿತ್ತು

Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು

Friday, February 7, 2025

ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ 4.30ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಒಟ್ಟು 3 ಆವೃತ್ತಿಗಳಲ್ಲಿ 108 ಸುತ್ತು ಸೂರ್ಯ ನಮಸ್ಕಾರ ಸ್ತೋತ್ರ ಪಠಣದೊಂದಿಗೆ ನಡೆದು 6.30ಕ್ಕೆ ಕಾರ್ಯಕ್ರಮ ಸಮಾಪನಗೊಂಡಿತು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ; 500ಕ್ಕೂ ಹೆಚ್ಚು ಮಂದಿ ಭಾಗಿ

Tuesday, February 4, 2025

ಸಂಜೆ 4 ಗಂಟೆಯಿಂದ ಸೂರ್ಯಾಸ್ತದವರೆಗೆ 6 ಬಾರಿ ಶ್ರೀ ವಿಷ್ಣು ನಾಮ ಸ್ತೋತ್ರ ಪಠಣ ಮಾಡಿ ಕೊನೆಗೆ ಓಂ ನಮೋ ವಾಸುದೇವಾಯ ನಮಃ  ಮಂತ್ರದ ಮೂಲಕ ಸಮಾಪನಗೊಂಡಿತು.

ಸೋಮೇಶ್ವರ ಕಡಲ ಕಿನಾರೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ; 3000ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆ

Monday, January 27, 2025

ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 8143.53 ಕಿ.ಮಿ. (ಶೇ.79.24 ) ಇದರಲ್ಲಿ ದಟ್ಟರಾಣ್ಯ ಇರುವುದು 1188.52 ಕಿಮಿ. ಸಾಮಾನ್ಯ ಅರಣ್ಯ ಇರುವುದು ಕಿ.ಮಿ. 5861.39 ಒಟ್ಟು  ಭೂ ಪ್ರದೇಶ 10277 ಕಿ.ಮಿ.

Karnataka Forest Area: ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಇರುವ ಟಾಪ್‌ 10 ಜಿಲ್ಲೆಗಳು

Sunday, January 19, 2025

ಮೊದಲನೇ ಸಭಾಂಗಣದಲ್ಲಿ ಬೆಳಗ್ಗೆ ಉದಯರಾಗದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಜಿತ್ ಸರಳಾಯ ಕಾರ್ಯಕ್ರಮ ನೀಡಿದರು. ಬಳಿಕ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು

ಮಂಗಳೂರು ಲಿಟ್ ಫೆಸ್ಟ್‌ ಉದ್ಘಾಟಿಸಿದ ಸಾಹಿತಿ ಎಸ್‌ಎಲ್ ಭೈರಪ್ಪ; ವೈವಿಧ್ಯಮಯ ಸಾಹಿತ್ಯ ಕಾರ್ಯಕ್ರಮ

Saturday, January 11, 2025

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇಂದು (ಡಿಸೆಂಬರ್ 10) 30ನೇ ವರ್ಷದ ಆಳ್ವಾಸ್ ವಿರಾಸತ್‌ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಆಳ್ವಾಸ್ ವಿರಾಸತ್ 2024; ಮೂಡಬಿದಿರೆಯಲ್ಲಿ ವಿರಾಸತ್ ಸಂಭ್ರಮಕ್ಕೆ ಮುನ್ನುಡಿ, ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್

Tuesday, December 10, 2024

ಅಲ್ಲಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಷಷ್ಠಿಯ ದಿನದಂದು ಎಳೆಯಲಾಗುತ್ತದೆ. ಇದಕ್ಕಾಗಿಯೇ ನಾಡಿನ ನಾನಾ ಭಾಗಗಳಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಥೋತ್ಸವದಲ್ಲಿ ಭಾಗಿಯಾಗುವರು.

Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ

Sunday, December 8, 2024

ಮದುವೆ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಆಡುನುಡಿ. ಪ್ರೀತಿ, ಪ್ರೇಮಕ್ಕೆ ನಾಡು, ನುಡಿ ಸೇರಿ ಯಾವುದೇ ಎಲ್ಲೆಯ ಹಂಗಿಲ್ಲ ಎಂಬ ಮಾತೂ ಇದೆ. ಇವೆರಡೂ ನಿಜ ಎನ್ನುವಂತೆ ಕೆಲಸದ ನಿಮಿತ್ತ ಥೈಲ್ಯಾಂಡ್ ಪ್ರವಾಸಕ್ಕೆ ಹೋದವನಿಗೆ ಅಲ್ಲಿನ ಯುವತಿ ಜತೆಗೆ ಪ್ರೇಮಾಂಕುರವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವುದು ಸದ್ಯದ ಸುದ್ದಿ. ಅಂತಹದೊಂದು ಅಪೂರ್ವ ವಿವಾಹದ ಸಚಿತ್ರ ವರದಿ ಇಲ್ಲಿದೆ.

ತುಳುನಾಡು- ಥೈಲ್ಯಾಂಡ್ ಲವ್‌ ಸ್ಟೋರಿ; ಮಂಗಳೂರು ಯುವಕ ಪೃಥ್ವಿರಾಜ್ ಕೈ ಹಿಡಿದ ಮೊಂತಕಾನ್ ಸಸೂಕ್, ಅಪೂರ್ವ ವಿವಾಹದ ಚಿತ್ರನೋಟ

Friday, December 6, 2024

ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು  ಮತ್ತು ಡೆಕೊರೇಟರ್ಸ್ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದ್ದು ಗಮನ ಸೆಳೆಯಿತು.

Dharmasthala Lakshadeepotsav 2024: ಬೆಂಗಳೂರಿನ ಭಕ್ತರ ಅಲಂಕಾರ ಸೇವೆ; ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣದ ಹೀಗಿತ್ತು

Saturday, November 30, 2024

ದೀಪಾವಳಿ ಸಂಭ್ರಮ; ಪುತ್ತೂರು ಸಮೀಪದ ಪರ್ಪುಂಜ ರಾಮಜಾಲು  ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಪಾಡ್ಯದ ದಿನವಾದ ಇಂದು (ನವೆಂಬರ್ 2) ಬಲಿಯೇಂದ್ರ (ಬಲೀಂದ್ರ) ಪೂಜೆ ನೆರವೇರಿತು. ಈ ಕಾರ್ಯಕ್ರಮದ ಚಿತ್ರನೋಟ ಮತ್ತು ಪೂಜೆಯ ವಿಶೇಷ ವಿವರ ಇಲ್ಲಿದೆ.

ದೀಪಾವಳಿ ಸಂಭ್ರಮ; ಪುತ್ತೂರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ, ಏನಿದು; ಇಲ್ಲಿದೆ ವಿವರಣೆ, ಚಿತ್ರನೋಟ

Saturday, November 2, 2024

ವಿಶೇಷವಾಗಿ ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿದವು. ನೃತ್ಯ ರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೊಗ ಮತ್ತು ನಾನಾ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನಜಾತ್ರೆಯೇ ನೆರೆದಿತ್ತು. ವೈ ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.

ಮಂಗಳೂರು ದಸರಾ: ಅದ್ಧೂರಿತನದೊಂದಿಗೆ ರಾತ್ರಿಯಿಡೀ ನಡೆದ ಶೋಭಾಯಾತ್ರೆ, ಅಂಗರಂಗ ವೈಭವದ ಫೋಟೋಸ್

Monday, October 14, 2024

ತಮ್ಮ ಅಪರಿಮಿತ ಜ್ಞಾನ, ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,  ಶೇಷ ಕಾರಂತ-ಲಕ್ಷ್ಮಮ್ಮ ದಂಪತಿ ಪುತ್ರರಾಗಿ 1902ರ ಅಕ್ಟೋಬರ್‌ 10ರಂದು ಈಗಿನ ಉಡುಪಿಯ ಕೋಟಾದಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.

ಶಿವರಾಮ ಕಾರಂತರು ಶಿಕ್ಷಣ ಪಡೆದದ್ದು ಎಷ್ಟು, ಬರೆದದ್ದು ಎಷ್ಟಿರಬಹುದು; ಕಡಲತೀರದ ಭಾರ್ಗವನ ಅಪೂರ್ವ ಬದುಕಿನ ಕ್ಷಣಗಳು

Thursday, October 10, 2024

ಚಿಕ್ಕಮಗಳೂರು ಜಿಲೆಯಲ್ಲಿಸೆಪ್ಟಂಬರ್‌1 ರಿಂದ 22ರವರೆಗೆ 117 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 1 ಅಧಿಕವಾಗಿದೆ

ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾತ್ರ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ: ಯಾವ್ಯಾವ ಜಿಲ್ಲೆಯಲ್ಲಿ ಅಧಿಕ, ಸಾಮಾನ್ಯ photos

Sunday, September 22, 2024

ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ವೈದ್ಯರು, ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಯ ಒಂದು ನೋಟ. ವೈದ್ಯರ ಮುಷ್ಕರದ ಕಾರಣ ವಿವಿಧ ಆಸ್ಪತ್ರೆಗಳಲ್ಲಿ ಒಪಿಡಿ ಕೆಲಸ ಮಾಡಿಲ್ಲ. ಕ್ಲಿನಿಕ್‌ಗಳೂ ಬಂದ್ ಆಗಿದ್ದವು. ಇದರಿಂದ ಹೊರ ರೋಗಿಗಳು ಕೊಂಚ ತೊಂದರೆ ಅನುಭವಿಸಿದರು.

ಕೋಲ್ಕತ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ; ಕರಾವಳಿ ಕರ್ನಾಟಕದಲ್ಲೂ ಒಪಿಡಿ ಬಂದ್ ಮಾಡಿ ವೈದ್ಯರ ಮುಷ್ಕರ, ರೋಗಿಗಳಿಗೆ ತಟ್ಟಿದ ಬಿಸಿ-Photos

Saturday, August 17, 2024

ದಕ್ಷಿಣ ಕನ್ನಡ ಸಹಿತ ಕರ್ನಾಟಕ ಕರಾವಳಿಯಲ್ಲಿ ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಜೀವನದಿ ಎನ್ನಲಾಗುವ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅತ್ತ ಕುಮಾರಧಾರಾ ನದಿಯೂ ಮೈದುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಘಟ್ಟ ಹತ್ತುವ ಮಾರ್ಗಗಳಾದ ಆಗುಂಬೆ, ಸಂಪಾಜೆ, ಶಿರಾಡಿಗಳಲ್ಲಿ ಭೂಕುಸಿತದ ಆತಂಕವಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದರೆ, ಚಾರ್ಮಾಡಿ ರಸ್ತೆಯೂ ಅಪಾಯದ ಭೀತಿಯಲ್ಲಿದೆ. ಇಡೀ ದಿನದ ಮಳೆಯ ಚಿತ್ರನೋಟ ಇಲ್ಲಿದೆ.

ಕರ್ನಾಟಕದ ಮುಂಗಾರು ಮಳೆ; ಕರಾವಳಿಯಲ್ಲಿ ನಿಲ್ಲದ ವರ್ಷಧಾರೆ, ಭೂಮಾರ್ಗಕ್ಕೆ ಕಂಟಕ, ಉಕ್ಕಿ ಹರಿದ ನದಿಗಳು, ನಾಳೆಯೂ ರೆಡ್ ಅಲರ್ಟ್, ಫೋಟೋಸ್‌

Friday, July 19, 2024

ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ಇಲ್ಲಿನ ಖಾದ್ಯಗಳನ್ನು ಸವಿದು ಖರೀದಿ ನಡೆಸಿದರು. 60ಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ಸ್ಥಳೀಯ ತಳಿಯ 600, ತಿಪಟೂರು ತಳಿಯ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೋಲಾರದಿಂದ 1 ಸಾವಿರ ಮಾವಿನಹಣ್ಣೂ ಬಂದಿದ್ದ ಕಾರಣ ಹಲಸಿನೊಂದಿಗೆ ಮಾವು ಜೋಡಿಯಾಯಿತು.

ಮಂಗಳೂರಿನಲ್ಲಿ ಘಮಘಮಿಸಿದ ಹಲಸು ಮೇಳ; 20 ಸಾವಿರಕ್ಕೂ ಅಧಿಕ ಮಂದಿ ಭಾಗಿ -Photos

Tuesday, June 18, 2024