Latest govt of india Photos

ಮಧ್ಯಪ್ರಾಚ್ಯ ಯುದ್ಧದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಇರಾನ್ ಶನಿವಾರ ಇಸ್ರೇಲಿ ಉದ್ಯಮಿ ಇಯಾಲ್ ಆಫರ್‌ಗೆ ಸಂಬಂಧಿಸಿದ ಸರಕು ಹಡಗನ್ನು ವಶಪಡಿಸಿಕೊಂಡಿದೆ. MSC ಏರೀಸ್‌ನಲ್ಲಿ 17 ಭಾರತೀಯ ನಾಗರಿಕರು ಇದ್ದಾರೆ ಎಂದು ತಿಳಿದ ನಂತರ ಭಾರತೀಯ ಅಧಿಕಾರಿಗಳು ಈಗ ತಮ್ಮ ಇರಾನಿನ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಪೋರ್ಚುಗೀಸ್-ಧ್ವಜದ ಎಂಎಸ್‌ಸಿ ಏರಿಸ್‌ ಎಂದು ಗುರುತಿಸಲಾದ ಹಡಗನ್ನು ಈಗ ಟೆಹ್ರಾನ್‌ನ “ಪ್ರಾದೇಶಿಕ ಜಲ ವ್ಯಾಪ್ತಿ”ಗೆ ಬಂದಿದೆ ಎಂದು ಇರಾನ್ ಮಾಧ್ಯಮ ಹೇಳಿದೆ.

ಎಂಎಸ್‌ಸಿ ಏರಿಸ್‌ ಸರಕು ಸಾಗಣೆ ಹಡಗು ಇರಾನ್ ವಶ; 17 ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರದ ಪ್ರಯತ್ನ

Saturday, April 13, 2024

ಭಾರತವು ಪ್ರವಾಸಿಗರೇ ಸ್ವರ್ಗದಂತಿರುವುದು ಸುಳ್ಳಲ್ಲ. ನಮ್ಮ ದೇಶದಲ್ಲಿ ನೋಡಲು ಸಾಕಷ್ಟು ಸುಂದರ, ರಮ್ಯ ಮನೋಹರ ತಾಣಗಳಿವೆ. ಹಸಿರು ಬೆಟ್ಟಗಳಿಂದ, ತಿಳಿ ನೀಲಿ ಕಡಲಿನವರೆಗೆ ಭಾರತಾಂಬೆಯ ಮಡಿಲಿನಲ್ಲಿ ಏನುಂಟು ಏನಿಲ್ಲ ಹೇಳಿ. ಆದರೆ ಭಾರತದಲ್ಲೇ ಇರುವ ಈ ಕೆಲವು ತಾಣಗಳಿಗೆ ಭೇಟಿ ನೀಡಲು ಭಾರತೀಯರು ವಿಶೇಷ ಪರವಾನಿಗೆ ಹೊಂದಿರಬೇಕು. ಇದನ್ನು ಇನ್ನರ್‌ ಲೈನ್‌ ಪರ್ಮಿನ್‌ ಅಥವಾ ಐಎಲ್‌ಪಿ ಎಂದು ಕರೆಯುತ್ತಾರೆ. ಭಾರತದ ಅಂತರರಾಷ್ಟ್ರೀಯ ಗಡಿಗಳೊಂದಿಗೆ ಸಂಪರ್ಕ ಹೊಂದಿರುವ ಈ ತಾಣಗಳು ಸೂಕ್ಷವಲಯಗಳು ಎಂದೂ ಗುರುತಿಸಲ್ಪಟ್ಟಿದೆ. ಈ ಜಾಗಗಳಿಗೆ ಭಾರತೀಯರು ಕೂಡ ವಿಶೇಷ ಅನುಮತಿ ಪಡೆದು ಹೋಗಬೇಕು. ಅಂತಹ ಜಾಗಗಳು ಯಾವುವು, ಅವು ಎಲ್ಲಿವೆ ಎಂಬುದನ್ನು ಗಮನಿಸಿ.

ಲಕ್ಷದ್ವೀಪದಿಂದ ನಾಗಾಲ್ಯಾಂಡ್‌ವರೆಗೆ; ಭಾರತದ ಈ ಸ್ಥಳಗಳಿಗೆ ವಿಶೇಷ ಪರವಾನಿಗೆ ಇಲ್ಲದೆ ಭಾರತೀಯರಿಗೂ ಎಂಟ್ರಿ ಇಲ್ಲ

Thursday, March 14, 2024

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ದೆಹಲಿಗೆ ಪಾದಯಾತ್ರೆ ನಡೆಸಿದ್ದಾರೆ.

ದೆಹಲಿ ಚಲೋ ರೈತ ಪ್ರತಿಭಟನೆ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ದಟ್ಟಣೆ, ಬಿಗಿ ಭದ್ರತೆ; ಚಿತ್ರನೋಟ

Tuesday, February 13, 2024

ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ಇಂದು (ಫೆ.7) ನಡೆಸುತ್ತಿರುವ ಈ ಹೋರಾಟ, ಕನ್ನಡಿಗರ ಹಿತ ಕಾಪಾಡುವಂಥ ಚಳವಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ನೀತಿ; ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಪ್ರತಿಭಟನೆ, ಚಿತ್ರನೋಟ

Wednesday, February 7, 2024

ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ ಇದ್ದು, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಇದನ್ನು ಮಂಗಳವಾರ (ಫೆ.6) ದೆಹಲಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಅಕ್ಕಿಯನ್ನೂ ಪರಿಚಯಿಲಾಗಿದೆ.

ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ; ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೂ ಬಡ, ಮಧ್ಯಮ ವರ್ಗದಿಂದ ಉತ್ತಮ ಪ್ರತಿಕ್ರಿಯೆ

Wednesday, February 7, 2024

ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳ ವಸ್ತುಗಳನ್ನು ಕೆಡವಿದ್ದಾರೆ. ಮ್ಯಾಟ್‌ಗಳು, ಟೆಂಟ್‌ಗಳು ಮತ್ತು ಕೂಲರ್‌ಗಳನ್ನು ಬಿಸಾಡಿದ್ದಾರೆ ಎಂದು ವರದಿಯಾಗಿದೆ.

Sakshi Malik:ನಾವು ಬೀದಿಯಲ್ಲಿ ಥಳಿತಕ್ಕೆ ಒಳಗಾಗ್ತಿದ್ರೆ, ನಮ್ಮ ಪ್ರಧಾನಿ ಮೋದಿ ಪೋಟೋಗೆ ಪೋಸ್​ ಕೊಡೋದ್ರಲ್ಲಿ ಬ್ಯುಸಿಯಿದ್ರು; ಸಾಕ್ಷಿ ಮಲಿಕ್

Monday, May 29, 2023

ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, 75 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಸೈನಿಕರಿಗೆ ಮತ್ತು ಹುತಾತ್ಮ ಅಥವಾ ಮೃತ ಸೈನಿಕರ ಪತ್ನಿಯರಿಗೆ ಆದ್ಯತೆ ನೀಡಬಹುದು ಎಂದು ಹೇಳಿದೆ. ‘ಒಂದು ಹುದ್ದೆ, ಒಂದು ಪಿಂಚಣಿ’ಯ ಬಾಕಿಯನ್ನು ಈ ವರ್ಷದ ಮಾರ್ಚ್‌ನೊಳಗೆ ಕೇಂದ್ರವು ಪಾವತಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಂತರ ರಕ್ಷಣಾ ಸಚಿವಾಲಯ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿ ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ ಮಾಡುವುದಾಗಿ ಹೇಳಿದೆ. ಈ ಅಧಿಸೂಚನೆಯಿಂದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

Supreme Court: ಒಂದು ಹುದ್ದೆ, ಒಂದು ಪಿಂಚಣಿ ಬಾಕಿ ಇತ್ಯರ್ಥ ವಿಚಾರ; ಸುಪ್ರೀಂ ಕೋರ್ಟ್‌ನಿಂದ ಮಹತ್ವದ ನಿರ್ದೇಶನ

Monday, March 13, 2023

ಈ ಅಣೆಕಟ್ಟು ಅಥವಾ ಜಲವಿದ್ಯುತ್ ಯೋಜನೆಯನ್ನು ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆಯಲ್ಲಿ ದಿಬಾಂಗ್ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಇದರಿಂದ ವಾರ್ಷಿಕ 2880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಯನ್ನು ನಿರ್ಮಿಸಲು ಒಟ್ಟು 319 ಶತಕೋಟಿ ರೂಪಾಯಿ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಿಸಲು ಒಟ್ಟು ಒಂಬತ್ತು ವರ್ಷ ಬೇಕಾಗುತ್ತದೆ. ಈ ಹಿಂದೆ, ಬ್ರಹ್ಮಪುತ್ರ ನದಿಯನ್ನು ತಿರುಗಿಸಲು ಚೀನಾ ಭಾರತದ ಗಡಿಯ ಸಮೀಪದಲ್ಲಿ ಟಿಬೆಟ್‌ನಲ್ಲಿ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿದೆ. ಈ ಪರಿಸ್ಥಿತಿಯಲ್ಲಿ ಭಾರತ ಕೂಡ ಚೀನಾ ಗಡಿಗೆ ತೀರಾ ಸಮೀಪದಲ್ಲಿ ಅಣೆಕಟ್ಟು ನಿರ್ಮಿಸಲು ನಿರ್ಧರಿಸಿದೆ.

India's Largest Dam near China Border: ಚೀನಾ ಗಡಿ ಬಳಿ ದೇಶದ ಅತಿ ದೊಡ್ಡ ಅಣೆಕಟ್ಟು; ಒಪ್ಪಿಗೆ ನೀಡಿದೆ ಕೇಂದ್ರ ಸರ್ಕಾರ

Wednesday, March 1, 2023