hockey News, hockey News in kannada, hockey ಕನ್ನಡದಲ್ಲಿ ಸುದ್ದಿ, hockey Kannada News – HT Kannada

Latest hockey Photos

ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಉತ್ತಮ ಫಾರ್ಮ್​​ನಲ್ಲಿದ್ದ ದೀಪಿಕಾ, 47 ಮತ್ತು 48 ನೇ ನಿಮಿಷಗಳಲ್ಲಿ ಗೋಲುಗಳನ್ನು ಗಳಿಸಿ ಗಮನ ಸೆಳೆದರು. ಉಪನಾಯಕಿ ನವನೀತ್ ಕೌರ್ 37ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತ ತಂಡದ ಖಾತೆ ತೆರೆದರು.

ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ 2024: ಜಪಾನ್ ವಿರುದ್ಧ 3-0 ಅಂತರದ ಗೆದ್ದ ಭಾರತ ಸೆಮಿಫೈನಲ್​ಗೆ ಲಗ್ಗೆ

Monday, November 18, 2024

ಹರ್ಮನ್ ಪ್ರೀತ್ ಸಿಂಗ್, ಉತ್ತಮ್ ಸಿಂಗ್ ಮತ್ತು ಜರ್ಮನ್ ಪ್ರೀತ್ ಸಿಂಗ್ ಗಳಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​​ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ಫೈನಲ್​​ ಪ್ರವೇಶಿಸಿದೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ವಿಜೇತ ಭಾರತ ಈಗ ಫೈನಲ್​​ನಲ್ಲಿ ಚೀನಾ ತಂಡವನ್ನು ಎದುರಿಸಲಿದ್ದು, ಹಾಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

Asian Champions Trophy: ದಕ್ಷಿಣ ಕೊರಿಯಾ ಮಣಿಸಿ ಫೈನಲ್​ಗೇರಿದ ಭಾರತ; ಪ್ರಶಸ್ತಿ ಸುತ್ತಿನಲ್ಲಿ ಚೀನಾ ಎದುರಾಳಿ

Monday, September 16, 2024

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಕಿ ತಂಡವು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಈಗಾಗಲೇ ಲೀಗ್‌ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ತಂಡವು ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ಲೀಗ್‌ನ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕಿಸ್ತಾನ ಕೂಡಾ ಟೂರ್ನಿಯ ಸೆಮಿಫೈನಲ್ ತಲುಪಿದೆ. ಭಾರತ 12 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ 8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Asian Champions Trophy: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಹಾಕಿ ಪಂದ್ಯದ ಲೈವ್ ಸ್ಟ್ರೀಮಿಂಗ್ ವಿವರ

Friday, September 13, 2024

2025ರಲ್ಲಿ ಭಾರತದ ಆತಿಥ್ಯದಲ್ಲೇ ಜೂನಿಯರ್​ ಹಾಕಿ ವಿಶ್ವಕಪ್​ ನಡೆಯಲಿದ್ದು, ಅದಕ್ಕೆ ಶ್ರೀಜೇಶ್ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ.

ಪಿಆರ್​​ ಶ್ರೀಜೇಶ್ 2ನೇ ಇನ್ನಿಂಗ್ಸ್ ಆರಂಭ; ವಿದಾಯ ಘೋಷಿಸಿದ ‘ಗೋಡೆ’ಗೆ ಹೊಸ ಜವಾಬ್ದಾರಿ ನೀಡಿದ ಹಾಕಿ ಇಂಡಿಯಾ

Saturday, August 10, 2024

ಪಂದ್ಯವನ್ನು ನೋಡಲು ಮೈದಾನದಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ಅವರಿಗೆ ಆಟಗಾರರು ವಂದನೆ ಸಲ್ಲಿಸಿದರು.

ಕಂಚು ಗೆದ್ದ ಭಾರತ ಹಾಕಿ ತಂಡದ ಭರ್ಜರಿ ಸಂಭ್ರಮಾಚರಣೆ; ಶ್ರೀಜೇಶ್‌ ಎತ್ತಿ ಹಿಡಿದು ಮೆರವಣಿಗೆ ನಡೆಸಿದ ಆಟಗಾರರು -Photos

Thursday, August 8, 2024

ಹಾಕಿ ಗೆಲುವಿನೊಂದಿಗೆ ಭಾರತವು ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಗಳ ಸಂಖ್ಯೆಯನ್ನು 4ಕ್ಕೇರಿಸಿದೆ. ಈ ಎಲ್ಲಾ ಪದಕಗಳು ಕಂಚಿನದ್ದಾಗಿವೆ.

ಸ್ಪೇನ್ ಮಣಿಸಿ ಸತತ 2ನೇ ಬಾರಿಗೆ ಒಲಿಂಪಿಕ್ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ; ಶ್ರೀಜೇಶ್‌ಗೆ ಗೆಲುವಿನ ವಿದಾಯ

Thursday, August 8, 2024

ಆದರೆ, 44 ವರ್ಷಗಳ ಬಳಿಕ ಒಲಿಂಪಿಕ್ಸ್ ಫೈನಲ್ ಪ್ರವೇಶಿಸುವ ಭಾರತದ ಕನಸು ನುಚ್ಚು ನೂರಾಯಿತು. ಕೊನೆಯದಾಗಿ 1980ರ ಒಲಿಂಪಿಕ್ಸ್​​ನಲ್ಲಿ ಫೈನಲ್ ಪ್ರವೇಶಿಸಿ ಚಿನ್ನದ ಪದಕ ಗೆದ್ದಿತ್ತು.

ಜರ್ಮನಿ ವಿರುದ್ಧದ ಸೆಮಿಫೈನಲ್​ನಲ್ಲಿ ಭಾರತ ಹಾಕಿ ತಂಡಕ್ಕೆ ವಿರೋಚಿತ ಸೋಲು; ಕಂಚಿನ ಪದಕಕ್ಕೆ ಸ್ಪೇನ್ ಎದುರು ಸೆಣಸಾಟ

Wednesday, August 7, 2024

ಅದಾಗ್ಯೂ, ಇತ್ತೀಚೆಗೆ ಮುಖಾಮುಖಿಯಾದ ಎಫ್ಐಎಚ್ ಲೀಗ್‌ನಲ್ಲಿ ಜರ್ಮನಿ ವಿರುದ್ಧ ಭಾರತ 3-2 ಅಂತರದಿಂದ ಸೋತಿತ್ತು. ಇದೀಗ ಆಗಸ್ಟ್ 6 ರಂದು ಭಾರತ ಮತ್ತು ಜರ್ಮನಿ ನಡುವಿನ ಸೆಮಿಫೈನಲ್ ಪಂದ್ಯ ರಾತ್ರಿ 10.30ಕ್ಕೆ ನಡೆಯಲಿದೆ. ಜಿಯೋ ಸಿನಿಮಾ ಅಪ್ಲಿಕೇಷನ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು, ಸ್ಪೋರ್ಟ್ಸ್ 18-1 ಮತ್ತು ಸ್ಪೋರ್ಟ್ಸ್​ 18-2 ಚಾನೆಲ್​​ನಲ್ಲೂ ಪಂದ್ಯ ವೀಕ್ಷಿಸಬಹುದು.

ಪ್ಯಾರಿಸ್ ಒಲಿಂಪಿಕ್ಸ್​: 1980ರ ನಂತರ ಹಾಕಿಯಲ್ಲಿ ಫೈನಲ್​ಗೇರಲು ಭಾರತ ತವಕ; ಜರ್ಮನಿ ವಿರುದ್ಧ ಭಾರತದ್ದೇ ಮೇಲುಗೈ

Monday, August 5, 2024

ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾದವರು ಶ್ರೀಜೇಶ್.‌ ಅನುಭವಿ ಗೋಲ್‌ಕೀಪರ್‌‌ ಒಲಿಂಪಿಕ್ಸ್‌ ಬಳಿಕ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಲಿದ್ದಾರೆ. ಗೋಲ್‌ ಬಾಕ್ಸ್‌ ಬಳಿ ಗೋಡೆಯಂತೆ ನಿಂತು ಬ್ರಿಟನ್‌ ಗೋಲು ಅವಕಾಶಗಳಿಗೆ ತಡೆಯೊಡ್ಡಿದ ಶರೀಜೇಶ, ಭಾರತದ ಗೆಲುವಿನ ರೂವಾರಿಯಾದರು.

ಒಲಿಂಪಿಕ್ಸ್: ಗ್ರೇಟ್‌ ಬ್ರಿಟನ್‌ ವಿರುದ್ಧ ಐತಿಹಾಸಿಕ ಜಯ; ಶೂಟೌಟ್‌ನಲ್ಲಿ 4-2 ಅಂತರದಿಂದ ಗೆದ್ದು ಹಾಕಿ ಸೆಮಿಫೈನಲ್‌ ಲಗ್ಗೆಯಿಟ್ಟ ಭಾರತ

Sunday, August 4, 2024

ವಿರಾಮದ ನಂತರ, ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತ ಮತ್ತೆ ಅಂತರವನ್ನು ಹೆಚ್ಚಿಸಿತು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲ್ ಬಾರಿಸಿ ಭಾರತಕ್ಕೆ 3-1ರ ಮುನ್ನಡೆ ತಂದುಕೊಟ್ಟರು. ಮೂರನೇ ಕ್ವಾರ್ಟರ್‌ನಲ್ಲಿ, ಆಸ್ಟ್ರೇಲಿಯಾ ಗೋಲು ಗಳಿಸುವ ಪ್ರಯತ್ನ ಮಾಡಿತು. ಆದರೆ ಅಂತರವನ್ನು ಮತ್ತೆ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ.

ಪ್ಯಾರಿಸ್‌ ಒಲಿಂಪಿಕ್ಸ್: ಬರೋಬ್ಬರಿ 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ಹಾಕಿ ತಂಡವನ್ನು ಮಣಿಸಿದ ಭಾರತ

Friday, August 2, 2024

ಭಾರತದ ಪುರುಷರ ಹಾಕಿ ತಂಡವು, ಮಂಗಳವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿತ್ತು. ಆಗ ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತವಾಗಿರಲಿಲ್ಲ. ಆ ಬಳಿಕ ಬೆಲ್ಜಿಯಂ ಹಾಗೂ ಅರ್ಜೆಂಟೀನಾ ಗೆಲುವಿನೊಂದಿಗೆ ಭಾರತದ ಮುಂದಿನ ಹಂತ ಪ್ರವೇಶ ಖಚಿತವಾಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ, ಮುಂದಿನ ಎದುರಾಳಿ ಬಲಿಷ್ಠ ಬೆಲ್ಜಿಯಂ

Wednesday, July 31, 2024

ಟೇಬಲ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಅವರು ವಿಶ್ವದ 18ನೇ ಶ್ರೇಯಾಂಕಿತ ಫ್ರಾನ್ಸ್‌ನ ಆಟಗಾರ್ತಿ ಪ್ರಿತಿಕಾ ಪವಾಡೆ ವಿರುದ್ಧ 4-0 ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಒಲಿಂಪಿಕ್ ಗೇಮ್ಸ್‌ನ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ನಡುವೆ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ,

ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಮಣಿಕಾ ಬಾತ್ರಾ; 3ನೇ ದಿನದಾಟದಲ್ಲಿ ಭಾರತದ ಫಲಿತಾಂಶಗಳ ಚಿತ್ರನೋಟ

Tuesday, July 30, 2024

ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ  ಕುಂಡ್ಯೋಳಂಡ  ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಶಾಸಕ ಎ ಎಸ್ ಪೊನ್ನಣ್ಣ,  ಒಲಂಪಿಯನ್ ಹಾಕಿ ಕನಾ೯ಟಕದ ಕಾಯ೯ದಶಿ೯ ಡಾ. ಅಂಜಪರವಂಡ ಸುಬ್ಬಯ್ಯ ,ಹಾಕಿ ಅಕಾಡೆಮಿ ಅಧ್ಯಕ್ಷ  ಪಾಂಡಂಡ ಬೋಪಣ್ಣ, ಜಿಲ್ಲಾಧಿಕಾರಿ ವೆಂಕಟರಾಜ  ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್,  ಕುಂಡ್ಯೋಳಂಡ  ಕುಟುಂಬದ ಪಟ್ಟೇದಾರ ಎ.ನಾಣಯ್ಯ, ಹಾಕಿ ಹಬ್ಬದ ಅಧ್ಯಕ್ಷ  ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಹಾಕಿ ಕನಾ೯ಟಕದ ಕಾಯ೯ದಶಿ೯ ಡಾ. ಅಂಜಪರವಂಡ ಸುಬ್ಬಯ್ಯ, ಸಾಹಿತಿ ಕಂಬೀರಂಡ ಕಾವೇರಿ ಸುಬ್ಬಯ್ಯ , ಬಾಂಡ್ ಗಣಪತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Kodagu Hockey: ಕೊಡಗಿನಲ್ಲಿ ಹಾಕಿ ವೈಭವ, ಹೀಗಿರಲಿದೆ ತಿಂಗಳ ಕಾಲ ಕೊಡವ 360 ಕುಟುಂಬಗಳ ಕಲರವ photos

Sunday, March 31, 2024

ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು  ಒಂಬತ್ತು ವರ್ಷಗಳ ನಂತರ ಏಷ್ಯನ್‌ ಗೇಮ್ಸ್‌ ಚಿನ್ನ ಗೆದ್ದಿದೆ. ಹಾಲಿ ಚಾಂಪಿಯನ್ ಜಪಾನ್‌ ತಂವನ್ನು ಭರ್ಜರಿಯಾಗಿ ಮಣಿಸಿ ಬಂಗಾರದ ಸಾಧನೆ ಮಾಡಿದೆ.

Asian Games: ಜಪಾನ್‌ ಮಣಿಸಿ ಚಿನ್ನ ಗೆದ್ದ ಭಾರತ ಹಾಕಿ ತಂಡ; ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಸಿಕ್ತು ಟಿಕೆಟ್‌

Friday, October 6, 2023

ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಗೋಲನ್ನು 15 ಮತ್ತು ಎರಡನೇ ಗೋಲವನ್ನು 23ನೇ ನಿಮಿಷದಲ್ಲಿ ಗಳಿಸಿದರು. ಈ ಎರಡೂ ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

India vs Pakistan: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ; ರೋಚಕ ಕ್ಷಣಗಳ ಫೋಟೋಸ್

Thursday, August 10, 2023