how-to-tech News, how-to-tech News in kannada, how-to-tech ಕನ್ನಡದಲ್ಲಿ ಸುದ್ದಿ, how-to-tech Kannada News – HT Kannada

Latest how to tech Photos

ಸಲಹೆ 1: ಲ್ಯಾಪ್‌ಟಾಪ್‌ನಲ್ಲಿರುವ ಪರ್ಫಾಮೆನ್ಸ್‌ ಮ್ಯಾನೇಜ್‌ಮೆಂಟ್‌ ಟೂಲ್‌ (performance management tool) ಬಳಕೆ ಮಾಡಲು ಮರೆಯಬೇಡಿ. ಈ ಟೂಲ್‌ ಎಲ್ಲಿದೆ ಅಂತೀರ? ಟಾಸ್ಕ್‌ ಬಾರ್‌ ಪಕ್ಕ ಇರುವ ಬ್ಯಾಟರಿ ಐಕಾನ್‌ ಕ್ಲಿಕ್‌ ಮಾಡುವ ಮೂಲಕ ನೀವು ಇಲ್ಲಿಗೆ ಪ್ರವೇಶಿಸಬಹುದು. ಅಲ್ಲಿ ಬ್ಯಾಟರಿ ಹೆಚ್ಚು ಬಳಸುವ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿ. ಅಲ್ಲಿ ವಿವಿಧ ಬ್ಯಾಟರಿ ಮೋಡ್‌ ಆಯ್ಕೆಗಳು ಇರುತ್ತವೆ. ಸೂಕ್ತವಾಗಿರುವ ಮೋಡ್‌ ಆಯ್ಕೆ ಮಾಡಿ ಬ್ಯಾಟರಿ ಚಾರ್ಜ್‌ ಉಳಿತಾಯ ಮಾಡಿ.

ಲ್ಯಾಪ್‌ಟಾಪ್‌ ಬ್ಯಾಟರಿ ಚಾರ್ಜ್‌ ದೀರ್ಘಕಾಲ ಉಳಿಸೋದು ಹೇಗೆ? ಈ 10 ಟಿಪ್ಸ್‌ ಪಾಲಿಸಿದ್ರೆ ಪವರ್‌ ಕಟ್‌ ಸಮಯದಲ್ಲೂ ನಿಶ್ಚಿಂತೆ

Saturday, October 19, 2024

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮೊದಲು ಸ್ಟಾರ್ಟ್‌ಗೆ ಹೋಗಿ. ಅಲ್ಲಿ ಕಂಟ್ರೋಲ್‌ ಪ್ಯಾನೆಲ್‌ ತೆರೆಯಿರಿ. ಅಲ್ಲಿ ‘ಈಸಿ ಆಫ್‌ ಆ್ಯಕ್ಸೆಸ್‌’ ಎಂಬ ಆಯ್ಕೆಯನ್ನು ಸಕ್ರೀಯಗೊಳಿಸಿ. ಮೌಸ್‌ ಇಲ್ಲದೆ ಕಂಪ್ಯೂಟರ್‌ ಬಳಸಲು ಇದು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ. ಇಲ್ಲಿಂದ ಮುಂದೆ ನಿಮ್ಮ ಕೀಬೋರ್ಡ್‌ನ ಕೀಲಿಗಳೇ ಮೌಸ್‌ನ ಹಲವು ಕಾರ್ಯಗಳನ್ನು ಮಾಡುತ್ತದೆ.
ಹೆಲ್ಪ್‌ ಅಥವಾ ಸಹಾಯಕ್ಕಾಗಿ ಎಫ್‌1 ಬಳಸಿರಿ.

Keyboard Shortcuts: ಈ ಶಾರ್ಟ್‌ಕಟ್‌ಗಳನ್ನು ತಿಳಿದುಕೊಂಡ್ರೆ ಕೆಲಸ ಫಟಾಫಟ್‌; ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವವರಿಗೆ ಉಪಯುಕ್ತ ಮಾಹಿತಿ

Thursday, October 17, 2024

ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ.  ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್‌ ಪ್ರಮೋಷನ್‌ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್‌ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್‌ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್‌ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು.

ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಹಣ ಗಳಿಸಲು ಬಯಸುವವರಿಗೆ ಅಮೂಲ್ಯ 5 ಸಲಹೆಗಳು; ಸೋಷಿಯಲ್‌ ಮೀಡಿಯಾದಲ್ಲಿ ಝಣ ಝಣ ಕಾಂಚಾಣ

Wednesday, October 9, 2024

ಮಾರಾಟಗಾರರ ಬಗ್ಗೆ ತಿಳಿದುಕೊಳ್ಳಿ: ಈಗಾಗಲೇ ಹಲವು ಕಂಪನಿಗಳು ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸಿವೆ. ಇಬ್ಬರಿಂದ ಪಡೆದು ಇನ್ನೊಬ್ಬರಿಗೆ ನೀಡುವ ಸೆಕೆಂಡ್‌ ಹ್ಯಾಂಡ್‌ ಫೋನ್‌ಗಳ ಬದಲು ಹಳೆಯ ಫೋನ್‌ ಅನ್ನು ಸಾಕಷ್ಟು ಪರಿಶೀಲನೆ ನಡೆಸಿ ರಿಪೇರಿ ಮಾಡಿ ಮಾರಾಟ ಮಾಡುವ ಟ್ರಸ್ಟೆಡ್‌ ಸಂಸ್ಥೆಗಳಿಂದ ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಸಿ. ಈ ರೀತಿ ಮಾರಾಟ ಮಾಡುವ ಸೆಲ್ಲರ್‌ಗಳ ಕುರಿತು ಬಳಕೆದಾರರು ನೀಡಿರುವ ರಿವ್ಯೂಗಳನ್ನು ಗಮನಿಸಿ.

ಹಳೆಯ ಫೋನ್‌ ಖರೀದಿಗೆ ಮಾರ್ಗದರ್ಶಿ: ಸೆಕೆಂಡ್‌ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ 6 ವಿಷಯ ಸರಿ ಇರುವುದೇ ಪರಿಶೀಲಿಸಿ

Tuesday, October 1, 2024

ಐಫೋನ್ ಖರೀದಿಸುವುದು ಹಲವರ ಆಸೆ-ಕನಸು. ಇದೇ ಕಾರಣಕ್ಕೆ ವಿಶ್ವಾದ್ಯಂತ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಕೂಡಾ ಒಂದು. 2024ರ ಮೂರನೇ ತ್ರೈಮಾಸಿಕದಲ್ಲಿ ಐಫೋನ್‌ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಆದಾಯವು ಸರಿಸುಮಾರು 39 ಬಿಲಿಯನ್ ಡಾಲರ್ ತಲುಪಿದೆ. ಈ ಬೇಡಿಕೆ ಹಾಗೂ ಜನಪ್ರಿಯತೆಯು ಹೆಚ್ಚಾಗುತ್ತಿರುವುದರಿಂದ ಒರಿಜಿನಲ್ ಮಾದರಿಗಳನ್ನು ಹೋಲುವ ನಕಲಿ ಐಫೋನ್‌ಗಳ ಹೆಚ್ಚಳಕ್ಕೂ ಕಾರಣವಾಗಿದೆ.

ನಿಮ್ಮ ಐಫೋನ್ ಒರಿಜಿನಲಾ ಅಲ್ಲ ನಕಲಿಯಾ? ಹೆಚ್ಚಾಯ್ತು ಡೂಪ್ಲಿಕೇಟ್ ಭೀತಿ, ಗುಣಮಟ್ಟ ಪರೀಶಿಲಿಸಲು ಈ ಟೆಸ್ಟ್‌ ಮಾಡಿ

Saturday, September 28, 2024

ಹಲವು ವದಂತಿ ಹಾಗೂ ಮಾಹಿತಿಯ ಸೋರಿಕೆಯಿಂದಾಗಿ ವನ್‌ಪ್ಲಸ್ 13 ಈಗ ಸುದ್ದಿಯಲ್ಲಿದೆ. ಹೊಸ ತಲೆಮಾರಿನ ಫೋನ್‌ ಬಿಡುಗಡೆಯ ದಿನಾಂಕವನ್ನು ಕಂಪನಿಯ ಚೀನಾ ಅಧ್ಯಕ್ಷ ಲೂಯಿಸ್ ಲೀ ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ವನ್‌ಪ್ಲಸ್ 13 ಅಕ್ಟೋಬರ್‌ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿದೆ. ಆದಾರೆ, ಭಾರತದಲ್ಲಿ ಈ ಫೋನ್ 2025ರ ಜನವರಿಯಲ್ಲಿ ಮಾರಾಟಕ್ಕೆ ಲಭ್ಯವಾಗುವ‌ ನಿರೀಕ್ಷೆ ಇದೆ.

OnePlus 13: ಶೀಘ್ರದಲ್ಲೇ ವನ್‌ಪ್ಲಸ್ 13 ಬಿಡುಗಡೆ; ಹೊಸ ಫೋನ್‌ನಲ್ಲಿ ಏನೆಲ್ಲಾ ಅಪ್ಡೇಟ್ ಬರಲಿದೆ ನೋಡಿ

Saturday, September 14, 2024

ನೀವು iPhone ಬಳಸುತ್ತಿದ್ದರೆ ಅದರಲ್ಲಿ 5G ಅನ್ನು ಆಫ್ ಮಾಡಲು ಭಿನ್ನ ವಿಧಾನಗಳಿವೆ. 5G ಮತ್ತು 4G ವೇಗದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲ. ಹೀಗಾಗಿ ಕೆಲವರು 4G ವೇಗವನ್ನು ಆಯ್ಕೆ ಮಾಡುತ್ತಾರೆ. ಐಫೋನ್‌ನಲ್ಲಿ 5G ಅನ್ನು ಆಫ್ ಮಾಡಲು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.

ಐಫೋನ್‌ ಮತ್ತು ಆಂಡ್ಯಾಯ್ಡ್‌ ಫೋನ್‌ನಲ್ಲಿ 5G ಆಫ್ ಮಾಡುವುದು ಹೇಗೆ? ಹಂತವಾರು ವಿವರ ಇಲ್ಲಿದೆ

Wednesday, July 10, 2024

2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತಹಂತದ ಮಾರ್ಗದರ್ಶಿ ಇಲ್ಲಿದೆ. ವೇತನ ಪಡೆಯುವವರು ಐಟಿಆರ್‌ 1 ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಮೊದಲು www.incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಇದಾದ ಬಳಿಕ ಮುಂದೆ ನೀಡಲಾದ ವಿವರವನ್ನು ಅನುಸರಿಸಿ. ಅಂದಹಾಗೆ, ಐಟಿಆರ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ಹೆಚ್ಚು ವಿಳಂಬ ಮಾಡದೆ ಸಲ್ಲಿಸಿ.

ITR filing: ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಹೇಗೆ? ಉದ್ಯೋಗಿಗಳು ಐಟಿಆರ್‌-1 ಸಲ್ಲಿಸಲು ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

Wednesday, July 10, 2024

1. ಬ್ಯಾಟರಿ ಡ್ರೈನ್, ಹಿಟಿಂಗ್ ಸಮಸ್ಯೆಗಳು: ನಿಮ್ಮ ಐಫೋನ್‌ ಬ್ಯಾಟರಿ ತುಂಬಾ ಬೇಗ ಖಾಲಿಯಾಗುತ್ತಿದೆ ಎಂದರೆ ಐಫೋನ್ ಹ್ಯಾಕ್ ಆಗಿದೆ ಅಥವಾ ಸ್ಪೈವೇರ್ ನುಸುಳಿರಬಹುದು ಎಂಬುದರ ಸಂಕೇತವಾಗಿದೆ. ನಿಮ್ಮ ಐಫೋನ್ ಸೆಟ್ಟಿಂಗ್‌ಗೆ ಹೋಗಿ ಯಾವ ಅಪ್ಲಿಕೇಶನ್ ಹೆಚ್ಚು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಪರಿಶೀಲಿಸಿ.

iPhone Hacked: ನಿಮ್ಮ ಐಫೋನ್ ಹ್ಯಾಕ್ ಆಗಿದೆಯಾ, ಇಲ್ವಾ ಅಂತ ತಿಳಿದುಕೊಳ್ಳಬೇಕಾ; ಹೀಗೆ ಮಾಡಿ

Saturday, April 13, 2024

ಏನಿದು ಭಾಷಿಣಿ?: ಮೊದಲಿಗೆ ಭಾಷಿಣಿ ಎಂದರೇನು ಎಂದು ತಿಳಿದುಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲಿ ಭಾಷಣ ಮಾಡಿರುವುದನ್ನು ಎಐ ಭಾಷಿಣಿಯು ಅದೇ ಸಮಯದಲ್ಲಿ ಅನುವಾದ ಮಾಡಿತ್ತು. ಇದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧರಿತ ಭಾಷಾ ಅನುವಾದ ಟೂಲ್‌. ಈ ಟೂಲ್‌ ಬಳಸಿ ಭಾರತದ ಹಲವು ಭಾಷೆಗಳಲ್ಲಿ ಸಂವಾದ ನಡೆಸಬಹುದು. ಎಲ್ಲಾದರೂ ನಿಮಗೆ ತಮಿಳು ಗೊತ್ತಿಲ್ಲ ಎಂದಿರಲಿ. ತಮಿಳು ಭಾಷಿಕನ ಜತೆ ಮಾತನಾಡಲು ನೀವು ಈ ಆಪ್‌ ಬಳಸಬಹುದು. ನೀವು ಕನ್ನಡದಲ್ಲಿ ಮಾತನಾಡಿದ್ದನ್ನು ಅದು ತಮಿಳು ಭಾಷೆಗೆ ತಕ್ಷಣೆ ಪರಿವರ್ತಿಸಿ ನೀಡುತ್ತದೆ. ಬಾಂಗ್ಲಾ, ಹಿಂದಿ, ಇಂಗ್ಲಿಷ್‌ ಹೀಗೆ ಯಾವುದೇ ಭಾಷೆಗೂ ಇದು ತಕ್ಷಣ ಅನುವಾದ ಮಾಡಿಕೊಡುತ್ತದೆ. ಅನುವಾದವನ್ನು ಅಕ್ಷರ ರೂಪದಲ್ಲಿ ಅಥವಾ ಧ್ವನಿ ರೂಪದಲ್ಲಿ ಪಡೆಯಬಹುದು. ಓಪನ್‌ಎಐನ ಚಾಟ್‌ಜಿಪಿಟಿ ಮತ್ತು ಗೂಗಲ್‌ನ ಬ್ರಾಡ್‌ ರೀತಿ ಈ ಎಐ ಲಾರ್ಜ್‌ ಲ್ಯಾಂಗ್ವೇಜ್‌ ಮಾಡೆಲ್‌ ಅನ್ನು ಬಳಸಿ ಈ ಎಐ ಭಾಷಿಣಿ ಕಾರ್ಯನಿರ್ವಹಿಸುತ್ತದೆ. ಈ ಎಐ ಭಾಷಿಣಿಯನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಬಳಸಲು ಬಯಸಿದರೆ ಈ ಮುಂದಿನ ಸ್ಟೆಪ್‌ ಟು ಸ್ಟೆಪ್‌ ಗೈಡ್‌ ಅನುಸರಿಸಿ.

Bhashini: ಎಐ ಭಾಷಿಣಿಯನ್ನು ಮೊಬೈಲ್‌ನಲ್ಲಿ ಬಳಸುವುದು ಹೇಗೆ? ಭಾಷಾ ಅನುವಾದ ಟೂಲ್‌ ಬಳಕೆಗೆ ಇಲ್ಲಿದೆ ಹಂತಹಂತದ ಮಾರ್ಗದರ್ಶಿ

Tuesday, December 19, 2023

ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್​ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್​ಗಳ ಚಾರ್ಜರ್ ಬಳಸಬೇಡಿ.

Mobile Charging: ಮೊಬೈಲ್​ ಚಾರ್ಜಿಂಗ್​ ವಿಚಾರದಲ್ಲಿ ನೀವು ಮಾಡುವ ತಪ್ಪುಗಳಿವು: ಬ್ಯಾಟರಿ ಬಾಳಿಕೆ ಬರಬೇಕು ಅಂದ್ರೆ ಹೀಗೆ ಮಾಡಿ

Friday, December 15, 2023