ipl-latest-news News, ipl-latest-news News in kannada, ipl-latest-news ಕನ್ನಡದಲ್ಲಿ ಸುದ್ದಿ, ipl-latest-news Kannada News – HT Kannada

Latest ipl latest news Photos

ಈ ಹಿಂದಿನ ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಹಲವು ಆಟಗಾರರು ಆಡಿದ್ದಾರೆ. ಅವರಲ್ಲಿ ಶಕೀಬ್‌ ಅಲ್‌ ಹಸನ್‌, ಮುಸ್ತಫಿಜುರ್‌ ರೆಹ್ಮಾನ್‌ ಪ್ರಮುಖರು. ಆದರೆ, ಈ ಬಾರಿಯ ಯಾವುದೇ ತಂಡವು ಬಾಂಗ್ಲಾದೇಶದ ಆಟಗಾರರನ್ನು ಬಿಡ್ ಮಾಡಲು ಮುಂದಾಗಲಿಲ್ಲ

ಐಪಿಎಲ್ 2025ರಲ್ಲಿ ಇರಲ್ಲ ಬಾಂಗ್ಲಾದೇಶ ಆಟಗಾರರು;‌ ಹರಾಜಿನಲ್ಲಿ ಒಬ್ಬರಿಗೂ ಬಿಡ್‌ ಮಾಡದ ಫ್ರಾಂಚೈಸಿಗಳು, ಕಾರಣವೇನು?

Wednesday, November 27, 2024

2018ರ ತನಕ ಪೃಥ್ವಿ ಕರಿಯರ್​ ಗ್ರಾಫ್ ಅಗ್ರಸ್ಥಾನದಲ್ಲಿತ್ತು, ಆದರೆ 2019 ರಿಂದ ಆ ಗ್ರಾಫ್ ಕುಸಿಯಲು ಆರಂಭಿಸಿತು. ಡೋಪಿಂಗ್ ಹಗರಣದಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾದರು. ನಂತರ ಶಿಸ್ತು ಉಲ್ಲಂಘನೆ, ಪ್ರಾಕ್ಟೀಸ್ ಸೆಷನ್​ಗಳನ್ನು ತಪ್ಪಿಸಿಕೊಂಡಿದ್ದು, ಕೋಚ್​ಗಳೊಂದಿಗೆ ಜಗಳ, ಬದ್ದತೆ ಇಲ್ಲದಿರುವುದು, ಫಿಟ್​ನೆಸ್​ ಕಾಪಾಡಿಕೊಳ್ಳದಿರುವು ಸೇರಿದಂತೆ ಪೃಥ್ವಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದವು. ಇದೆಲ್ಲವೂ ಆತನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಹೀಗಾಗಿ, ಯಾವುದೇ ತಂಡವು ಖರೀದಿಗೆ ಮುಂದಾಗಲಿಲ್ಲ. ಮಾಜಿ ತಜ್ಞರು ಸಹ ಪೃಥ್ವಿ ಅಹಂ ಬಿಡಬೇಕು ಎಂದೆಲ್ಲಾ ಸೂಚಿಸಿದ್ದರು. ಆದರೆ ಯಾರ ಮಾತಿಗೂ ಕ್ಯಾರೆ ಎನ್ನಲಿಲ್ಲ. ಇದೀಗ ನಿಂಗಿದು ಬೇಕಿತ್ತಾ…. ಎನ್ನುವಂತಾಗಿದೆ.

ರನ್ನೂ ಬರಲಿಲ್ಲ, ಮೊಂಡುತನವೂ ಬಿಡಲಿಲ್ಲ; ಹರಾಜಿನಲ್ಲಿ ಯಾರಿಗೂ ಬೇಡವಾದ ಅನ್​ಫಿಟ್ ಪೃಥ್ವಿ ಶಾ, ನಿಂಗಿದು ಬೇಕಿತ್ತಾ...

Tuesday, November 26, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರನ್ನು ಕೈಬಿಟ್ಟರೂ ಸಮತೋಲಿತ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮತ್ತೊಬ್ಬ ಕನ್ನಡಿಗನನ್ನು ಖರೀದಿಸಿದ ಆರ್​ಸಿಬಿ; ಅನ್​ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಮೂಲಬೆಲೆಗೆ ಬೆಂಗಳೂರು ತೆಕ್ಕೆಗೆ!

Monday, November 25, 2024

ಅಲ್ಲಾ ಘಜಾನ್ಫರ್ 2024ರ ಅಂಡರ್ 19 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸುದ್ದಿಯಾಗಿದ್ದರು. ಅವರು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದರು. (ಫೋಟೋ-X)

4.8 ಕೋಟಿಗೆ ಮುಂಬೈಗೆ ಸೇಲಾದ ಅಲ್ಲಾಹ್‌ ಘಜನ್ಫರ್ ಯಾರು; ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್‌ಗೆ ಯಾಕಿಷ್ಟು ಬೇಡಿಕೆ?

Monday, November 25, 2024

ಜೋಶ್ ಹೇಜಲ್​ವುಡ್, ಫಿಲ್ ಸಾಲ್ಟ್, ಜಿತೇಶ್ ವರ್ಮಾ ಮತ್ತು ಲಿಯಾಮ್ ಲಿವಿಂಗ್​ಸ್ಟನ್ ಅವರನ್ನು ಆರ್​​ಸಿಬಿ ಖರೀದಿಸಿದೆ.

ಯಪ್ಪಾ, ಚಹಲ್​ಗಿಂತಲೂ ಕಡಿಮೆ ಮೊತ್ತ ಪಡೆದ ಕೆಎಲ್ ರಾಹುಲ್, ಸ್ಟಾರ್​ ಆಟಗಾರರ ಖರೀದಿಸದೆ ಟ್ರೋಲ್ ಆಗ್ತಿದೆ RCB

Sunday, November 24, 2024

ಪ್ರಸಕ್ತ ಸಾಲಿನ ಐಪಿಎಲ್​ ಮೆಗಾ ಹರಾಜಿನಲ್ಲಿ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಿಲ್ ಜಾಕ್ಸ್ ಸೇರಿದಂತೆ ಪ್ರಮುಖ ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

IPL Expensive Players: ಐಪಿಎಲ್ ಪ್ರತಿ ಹರಾಜಿನಲ್ಲೂ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರು ಇವರೇ

Thursday, November 21, 2024

ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್ ಅವರಂಥಾ ಆಟಗಾರರನ್ನು ಹೊರತುಪಡಿಸಿ, ಕೆಲವೊಬ್ಬ ಕ್ರಿಕೆಟಿಗರ ಖರೀದಿಗೆ ಫ್ರಾಂಚೈಸಿಗಳು ಮುಂದಾಗಿವೆ. ಈ ಯುವ ಆಟಗಾರರ ಮೇಲೆ ತಂಡಗಳು ದುಬಾರಿ ಹಣ ಸುರಿಯಬಹುದು.

ಐಪಿಎಲ್ ಮೆಗಾ ಹರಾಜು: ಪಂತ್-ರಾಹುಲ್ ಮಾತ್ರವಲ್ಲ, ಈ 7 ಯುವ ಆಟಗಾರರ ಖರೀದಿಗೂ ಮುಗಿಬೀಳಲಿವೆ ಫ್ರಾಂಚೈಸಿಗಳು

Tuesday, November 19, 2024

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯುವ ತಾರೆಗಳು ವಿವಿಧ ತಂಡಗಳ ಪಾಲಾಗುವ ನಿರೀಕ್ಷೆಯಲ್ಲಿದ್ದಾರೆ. ವಯಸ್ಸಿನಲ್ಲಿ ತುಂಬಾ ಕಿರಿಯಗಿರುವ ಕೆಲವೇ ಆಟಗಾರರಿದ್ದಾರೆ. ಹರಾಜಿನಲ್ಲಿ ಕಿರಿಯರಾದ ಆ ಐದು ಆಟಗಾರರ ಬಗ್ಗೆ ತಿಳಿಯೋಣ. ಇನ್ನೂ 14 ವರ್ಷವೂ ಆಗದ ಒಬ್ಬ ಆಟಗಾರನಿದ್ದಾನೆ. ಉಳಿದಂತೆ 18 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರಿದ್ದಾರೆ. ಇವರಲ್ಲಿ ಮೂವರು ಭಾರತೀಯರು ಮತ್ತು ಇಬ್ಬರು ವಿದೇಶಿ ಆಟಗಾರರು ಸೇರಿದ್ದಾರೆ.

ಐಪಿಎಲ್ 2025 ಮೆಗಾ ಹರಾಜು ಪಟ್ಟಿಯಲ್ಲಿರುವ ಟಾಪ್ 5 ಕಿರಿಯ ಆಟಗಾರರಿವರು; ಇಬ್ಬರು ವಿದೇಶಿಗರು

Monday, November 18, 2024

ಆರ್‌ಸಿಬಿಯ ರಜತ್ ಪಾಟೀದಾರ್ ಐದನೇ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಈ ವರ್ಷ ಐಪಿಎಲ್‌ನ 13 ಇನ್ನಿಂಗ್ಸ್‌ ಆಡಿ 33 ಸಿಕ್ಸರ್‌ ಬಾರಿಸಿದ್ದಾರೆ. ಅವರು ಒಟ್ಟು 395 ರನ್ ಗಳಿಸಿದ್ದಾರೆ.

‌IPL 2024: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಆಟಗಾರರು; ಅಗ್ರಪಂಕ್ತಿಯಲ್ಲಿ ಎಸ್‌ಆರ್‌ಎಚ್‌-ಆರ್‌ಸಿಬಿ ದಾಂಡಿಗರು

Monday, May 27, 2024

2022ರಲ್ಲಿ ನಡೆದ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಗೆದ್ದ ಅರ್ಜೆಂಟೀನಾ ತಂಡ ಕೂಡಾ ಅದ್ಧೂರಿ ಸಂಭ್ರಮಾಚರಣೆ ನಡೆಸಿತ್ತು. ನಾಯಕ ಲಿಯೋನೆಲ್ ಮೆಸ್ಸಿ ಸಂಭ್ರಮಾಚರಣೆ ನಡೆಸಿ ಶೈಲಿಯಲ್ಲೇ ಶ್ರೇಯಸ್‌ ಅಯ್ಯರ್‌ ಕೂಡಾ ಸಂಭ್ರಮ ಶುರುಮಾಡಿದರು.

ಐಪಿಎಲ್‌ ಟ್ರೋಫಿ ಎತ್ತಿ ಹಿಡಿದು ಕೆಕೆಆರ್‌ ಆಟಗಾರರ ಸಂಭ್ರಮಾಚರಣೆ; ಮೆಸ್ಸಿ ಸ್ಟೈಲ್‌ ಕಾಪಿ ಮಾಡಿದ ಶ್ರೇಯಸ್‌ ಅಯ್ಯರ್ -Photos

Monday, May 27, 2024

ಸನ್ರೈಸರ್ಸ್ ಹೈದರಾಬಾದ್‌ ತಂಡದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ಇವರು ಭರ್ಜರಿ 484 ರನ್ ಗಳಿಸಿದ್ದಾರೆ. ಇದರಲ್ಲಿ 3 ಸ್ಫೋಟಕ ಅರ್ಧಶತಕಗಳಿವೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಇವರ ಹೆಸರಲ್ಲಿದೆ.

ಐಪಿಎಲ್ 2024ರಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟ ಟಾಪ್‌ 10 ಬ್ಯಾಟರ್‌ಗಳು; ಕಿಂಗ್‌ ಕೊಹ್ಲಿಗೆ ಅಗ್ರಪಟ್ಟ

Sunday, May 26, 2024

ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ, 20 ವಿಕೆಟ್‌ ಕಬಳಿಸಿದ್ದಾರೆ. ಒಂದು ಪಂದ್ಯದಲ್ಲಿ 5 ವಿಕೆಟ್‌ ಗೊಂಚಲು ಪಡೆದಿರುವ ಅವರು, ಕೇವಲ 6.48ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ.

ಐಪಿಎಲ್ 2024ರಲ್ಲಿ ಅತ್ತುತ್ತಮ ಪದರ್ಶನ ನೀಡಿದ ಟಾಪ್‌ 5 ಬೌಲರ್‌ಗಳು; ಟೂರ್ನಿಯಲ್ಲಿ ಭಾರತೀಯರ ದರ್ಬಾರ್

Sunday, May 26, 2024

ಹಾಗಿದ್ದರೆ, 2024ರ ಆವೃತ್ತಿಯ ಅಗ್ರ 5 ಲೋ ಸ್ಕೋರ್‌ ಇನ್ನಿಂಗ್ಸ್‌ಗಳು ಯಾವುವು ಎಂಬುದನ್ನು ನೋಡೋಣ.

ಐಪಿಎಲ್‌ ಫೈನಲ್‌ನಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ ಎಸ್‌ಆರ್‌ಎಚ್; 2024ರ ಆವೃತ್ತಿಯಲ್ಲಿ ದಾಖಲಾದ 5 ಕನಿಷ್ಠ ಸ್ಕೋರ್‌ಗಳಿವು

Sunday, May 26, 2024

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ. ಧೋನಿ ಒಟ್ಟು 11 ಬಾರಿ ಫೈನಲ್ ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಅವರು 10 ಫೈನಲ್ ಪಂದ್ಯಗಳಲ್ಲಿ ಆಡಿದ್ದಾರೆ. ಧೋನಿ ನಾಯಕತ್ವದಲ್ಲಿ 2010, 2011, 2018, 2021 ಮತ್ತು 2023ರಲ್ಲಿ ಸಿಎಸ್‌ಕೆ ತಂಡ ಚಾಂಪಿಯನ್ ಆಗಿತ್ತು. ಉಳಿದಂತೆ 2008, 2012, 2013, 2015 ಮತ್ತು 2019ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಧೋನಿ 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಫೈನಲ್ ಆಡಿದ್ದರು. ಆಗ ಪುಣೆ ತಂಡ ರನ್ನರ್ ಅಪ್ ಆಗಿತ್ತು.

ಅತಿ ಹೆಚ್ಚು ಬಾರಿ ಐಪಿಎಲ್ ಫೈನಲ್ ಪಂದ್ಯ ಆಡಿದವರು ಯಾರು? ಅಗ್ರ 10ರಲ್ಲಿ ಇಲ್ಲ ಕೆಕೆಆರ್-ಎಸ್ಆರ್‌ಎಚ್ ಆಟಗಾರರು

Sunday, May 26, 2024

ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್,  ಲೀಗ್ ಹಂತದಲ್ಲಿ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದರೆ ನಿರ್ಣಾಯಕ ಪಂದ್ಯದಲ್ಲಿ ಮಿಂಚುವ ಸ್ಟಾರ್ಕ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟಿಂಗ್ ಕ್ರಮಾಂಕಕ್ಕೆ ಮಾರಕವಾದರು. ಪವರ್ ಪ್ಲೇನಲ್ಲಿ ಪ್ರಮುಖ 3 ವಿಕೆಟ್ ಪಡೆದರು. ಪರಿಣಾಮ ಹೈದರಾಬಾದ್ ತಂಡ ಪಂದ್ಯದಲ್ಲಿ ಸೋತಿತು. ಹೊಸ ಚೆಂಡಿನೊಂದಿಗೆ ಸ್ಟಾರ್ಕ್ ಅವರಿಂದ ನಿರ್ಣಾಯಕ ಪ್ರದರ್ಶನವನ್ನು ತಂಡ ನಿರೀಕ್ಷಿಸುತ್ತಿದೆ.

KKR vs SRH; ಐಪಿಎಲ್ ಫೈನಲ್ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ 5 ಆಟಗಾರರು; ಇವರ ಮೇಲೆ ಎಲ್ಲರ ಕಣ್ಣು

Sunday, May 26, 2024

ನಾಲ್ಕನೆಯದಾಗಿ, ನಾಯಕನಾಗಿ ಪ್ಯಾಟ್ ಕಮಿನ್ಸ್ ಅವರ ಪ್ರದರ್ಶನ ಪ್ರಮುಖ ನಿರ್ಧಾರಗಳು ಹೈದರಾಬಾದ್‌ ಗೆಲ್ಲಲು ಸಹಾಯ ಮಾಡಿತು. ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಇದರ ಹೊರತಾಗಿಯೂ, ಕಮಿನ್ಸ್ ಮಧ್ಯಮ ಓವರ್‌ಗಳಲ್ಲಿ ಶಹಬಾಜ್ ಅಹ್ಮದ್ ಮತ್ತು ಅಭಿಷೇಕ್ ಶರ್ಮಾ ಅವರಿಂದ ಬೌಲಿಂಗ್‌ ಮಾಡಿಸಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ನಿಧಾನಗತಿಯ ಬೌಲರ್‌ಗಳು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಅದರಲ್ಲೂ ಇಪ್ಯಾಕ್ಟ್‌ ಪ್ಲೇಯರ್‌ ಆಗಿ ಶಹಬಾಜ್‌ ಆಡಿಸಿ ತಂಡ ದೊಡ್ಡ ಲಾಭ ಪಡೆಯಿತು. ಅವರು ಪಂದ್ಯಶ್ರೇಷ್ಠರಾದರು.

ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿಗೆ 5 ಕಾರಣಗಳಿವು; ಮಾಡಿದ ತಪ್ಪಿಗೆ ಸೋಲಿನ ಪಾಠ

Saturday, May 25, 2024

ವಿರಾಟ್ ಕೊಹ್ಲಿಗೆ ಸದ್ಯ ಪೈಪೋಟಿ ನೀಡುವವರು ಯಾರೂ ಇಲ್ಲ. ಹೀಗಾಗಿ ಫೈನಲ್‌ ಪಂದ್ಯಕ್ಕೂ ಮುನ್ನವೇ ಐಪಿಎಲ್ 2024ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲು ಸಿದ್ಧರಾಗಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈ ಮೊದಲು ಯಾವ ಭಾರತೀಯನೂ ಈ ಸಾಧನೆ ಮಾಡಿಲ್ಲ.

ಐಪಿಎಲ್ 2024: ವಿರಾಟ್‌ ಕೊಹ್ಲಿ ಆರೆಂಜ್ ಕ್ಯಾಪ್ ಗೆಲ್ಲೋದು ಖಚಿತ; ಮತ್ತೊಂದು ಮುಕುಟ ನಿರೀಕ್ಷೆಯಲ್ಲಿ ಪರ್ಪಲ್ ಪಟೇಲ್

Saturday, May 25, 2024

ಪಂದ್ಯದಲ್ಲಿ ಮೊದಲು ಬಾಟಿಂಗ್‌ ನಡೆಸಿದ ಆರ್‌ಸಿಬಿ 172 ರನ್‌ ಮಾತ್ರ ಗಳಿಸಿತು. ರಾಜಸ್ಥಾನ್‌ ಕರಾರುವಕ್‌ ಬೌಲಿಂಗ್‌ ದಾಳಿಗೆ ಆರ್‌ಸಿಬಿ ಬ್ಯಾಟ್‌ ಬೀಸಲು ಪರದಾಡಿತು.

ರಾಜಸ್ಥಾನ್‌ ರಾಯಲ್ಸ್‌ ಪರ ವಿಶೇಷ ದಾಖಲೆ ಬರೆದ ಆರ್‌ಸಿಬಿ ಮಾಜಿ ಬೌಲರ್ ಯುಜ್ವೇಂದ್ರ ಚಹಾಲ್‌

Thursday, May 23, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಆಟಗಾರರು: ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಹಿಮಾಂಶು ಶರ್ಮಾ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ಚೇಸಿಂಗ್

Wednesday, May 22, 2024

ಐಪಿಎಲ್‌ 2024ರಲ್ಲಿ ಮೊದಲ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದ್ದ ಕೆಕೆಆರ್‌, ಇದೀಗ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಹಾಕಿದೆ. ಮೇ 26ರಂದು ಫೈನಲ್‌ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

ನಾಯಕನಾಗಿ ಧೋನಿ, ರೋಹಿತ್ ಶರ್ಮಾ ಮಾಡದ ವಿಶಿಷ್ಠ ದಾಖಲೆ ಮಾಡಿದ ಶ್ರೇಯಸ್ ಅಯ್ಯರ್

Wednesday, May 22, 2024