ipl News, ipl News in kannada, ipl ಕನ್ನಡದಲ್ಲಿ ಸುದ್ದಿ, ipl Kannada News – HT Kannada

Latest ipl Photos

ಈ ಹಿಂದಿನ ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಹಲವು ಆಟಗಾರರು ಆಡಿದ್ದಾರೆ. ಅವರಲ್ಲಿ ಶಕೀಬ್‌ ಅಲ್‌ ಹಸನ್‌, ಮುಸ್ತಫಿಜುರ್‌ ರೆಹ್ಮಾನ್‌ ಪ್ರಮುಖರು. ಆದರೆ, ಈ ಬಾರಿಯ ಯಾವುದೇ ತಂಡವು ಬಾಂಗ್ಲಾದೇಶದ ಆಟಗಾರರನ್ನು ಬಿಡ್ ಮಾಡಲು ಮುಂದಾಗಲಿಲ್ಲ

ಐಪಿಎಲ್ 2025ರಲ್ಲಿ ಇರಲ್ಲ ಬಾಂಗ್ಲಾದೇಶ ಆಟಗಾರರು;‌ ಹರಾಜಿನಲ್ಲಿ ಒಬ್ಬರಿಗೂ ಬಿಡ್‌ ಮಾಡದ ಫ್ರಾಂಚೈಸಿಗಳು, ಕಾರಣವೇನು?

Wednesday, November 27, 2024

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅಂತಾರಾಷ್ಟ್ರೀಯ ಆಟಗಾರರ ಜೊತೆಗೆ ಅನ್​ಕ್ಯಾಪ್ಡ್​ ಪ್ಲೇಯರ್ಸ್​​​ ಬೇಡಿಕೆ ಹೆಚ್ಚಿತ್ತು. ಅವರಿಗೂ ಬೃಹತ್ ಮೊತ್ತದ ಲಾಟರಿ ಹೊಡೆಯಿತು. ನೇಹಾಲ್ ವಧೇರಾರಿಂದ ನಮನ್ ಧೀರ್ ತನಕ ಅನೇಕ ಅನ್​ಕ್ಯಾಪ್ಡ್​ ಪ್ಲೇಯರ್ಸ್​ ಕೋಟ್ಯದೀಶರಾಗಿ ಹೊರಹೊಮ್ಮಿದರು. ಕೋಟಿ ಕೋಟಿ ದುಡಿದ ಟಾಪ್​-7 ಅನ್​ಕ್ಯಾಪ್ಡ್​ ಪ್ಲೇಯರ್ಸ್ ಯಾರು?

Uncapped Players: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಐವರು ಅನ್​ಕ್ಯಾಪ್ಡ್​ ಪ್ಲೇಯರ್ಸ್​ಗೆ ಭರ್ಜರಿ ಲಾಟರಿ

Tuesday, November 26, 2024

2025ರ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಐದು ಆಟಗಾರರು ಭಾರತದವರು ಎಂಬುದು ವಿಶೇಷ. 2024ರ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಈ ಬಾರಿ ಭಾರತೀಯ ಆಟಗಾರರು ಕಮಾಲ್ ಮಾಡಿದ್ದಾರೆ. ಆ ಟಾಪ್ ಐವರು ಆಟಗಾರರು ಮತ್ತು ಪಡೆದಿರುವ ಮೊತ್ತದ ವಿವರ ಇಲ್ಲಿದೆ.

ವಿದೇಶಿಗರನ್ನ ಹಿಂದಿಕ್ಕಿದ ಭಾರತೀಯ ಆಟಗಾರರು; ಐಪಿಎಲ್ 2025 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಕ್ರಿಕೆಟರ್ಸ್ ಫೋಟೊಸ್

Tuesday, November 26, 2024

2018ರ ತನಕ ಪೃಥ್ವಿ ಕರಿಯರ್​ ಗ್ರಾಫ್ ಅಗ್ರಸ್ಥಾನದಲ್ಲಿತ್ತು, ಆದರೆ 2019 ರಿಂದ ಆ ಗ್ರಾಫ್ ಕುಸಿಯಲು ಆರಂಭಿಸಿತು. ಡೋಪಿಂಗ್ ಹಗರಣದಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾದರು. ನಂತರ ಶಿಸ್ತು ಉಲ್ಲಂಘನೆ, ಪ್ರಾಕ್ಟೀಸ್ ಸೆಷನ್​ಗಳನ್ನು ತಪ್ಪಿಸಿಕೊಂಡಿದ್ದು, ಕೋಚ್​ಗಳೊಂದಿಗೆ ಜಗಳ, ಬದ್ದತೆ ಇಲ್ಲದಿರುವುದು, ಫಿಟ್​ನೆಸ್​ ಕಾಪಾಡಿಕೊಳ್ಳದಿರುವು ಸೇರಿದಂತೆ ಪೃಥ್ವಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದವು. ಇದೆಲ್ಲವೂ ಆತನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಹೀಗಾಗಿ, ಯಾವುದೇ ತಂಡವು ಖರೀದಿಗೆ ಮುಂದಾಗಲಿಲ್ಲ. ಮಾಜಿ ತಜ್ಞರು ಸಹ ಪೃಥ್ವಿ ಅಹಂ ಬಿಡಬೇಕು ಎಂದೆಲ್ಲಾ ಸೂಚಿಸಿದ್ದರು. ಆದರೆ ಯಾರ ಮಾತಿಗೂ ಕ್ಯಾರೆ ಎನ್ನಲಿಲ್ಲ. ಇದೀಗ ನಿಂಗಿದು ಬೇಕಿತ್ತಾ…. ಎನ್ನುವಂತಾಗಿದೆ.

ರನ್ನೂ ಬರಲಿಲ್ಲ, ಮೊಂಡುತನವೂ ಬಿಡಲಿಲ್ಲ; ಹರಾಜಿನಲ್ಲಿ ಯಾರಿಗೂ ಬೇಡವಾದ ಅನ್​ಫಿಟ್ ಪೃಥ್ವಿ ಶಾ, ನಿಂಗಿದು ಬೇಕಿತ್ತಾ...

Tuesday, November 26, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರನ್ನು ಕೈಬಿಟ್ಟರೂ ಸಮತೋಲಿತ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮತ್ತೊಬ್ಬ ಕನ್ನಡಿಗನನ್ನು ಖರೀದಿಸಿದ ಆರ್​ಸಿಬಿ; ಅನ್​ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಮೂಲಬೆಲೆಗೆ ಬೆಂಗಳೂರು ತೆಕ್ಕೆಗೆ!

Monday, November 25, 2024

ಅಲ್ಲಾ ಘಜಾನ್ಫರ್ 2024ರ ಅಂಡರ್ 19 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸುದ್ದಿಯಾಗಿದ್ದರು. ಅವರು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದರು. (ಫೋಟೋ-X)

4.8 ಕೋಟಿಗೆ ಮುಂಬೈಗೆ ಸೇಲಾದ ಅಲ್ಲಾಹ್‌ ಘಜನ್ಫರ್ ಯಾರು; ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್‌ಗೆ ಯಾಕಿಷ್ಟು ಬೇಡಿಕೆ?

Monday, November 25, 2024

ಜೋಶ್ ಹೇಜಲ್​ವುಡ್, ಫಿಲ್ ಸಾಲ್ಟ್, ಜಿತೇಶ್ ವರ್ಮಾ ಮತ್ತು ಲಿಯಾಮ್ ಲಿವಿಂಗ್​ಸ್ಟನ್ ಅವರನ್ನು ಆರ್​​ಸಿಬಿ ಖರೀದಿಸಿದೆ.

ಯಪ್ಪಾ, ಚಹಲ್​ಗಿಂತಲೂ ಕಡಿಮೆ ಮೊತ್ತ ಪಡೆದ ಕೆಎಲ್ ರಾಹುಲ್, ಸ್ಟಾರ್​ ಆಟಗಾರರ ಖರೀದಿಸದೆ ಟ್ರೋಲ್ ಆಗ್ತಿದೆ RCB

Sunday, November 24, 2024

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜಿನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಟೀಂ ಇಂಡಿಯಾದ ಇಬ್ಬರು ಆಟಗಾರರು ದೊಡ್ಡ ಮೂತ್ತಕ್ಕೆ ಬಿಕರಿಯಾಗಿದ್ದಾರೆ. ಈ ಪಟ್ಟಿಯಲ್ಲಿರುವ ಟಾಪ್ ಐವರು ಆಟಗಾರರ ವಿವರ ಇಲ್ಲಿದೆ.

IPL Auction 2025: ಐಪಿಎಲ್ ಹರಾಜು ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಅಗ್ರ 5 ಆಟಗಾರರು ಇವರೇ

Sunday, November 24, 2024

2024ರ ಐಪಿಎಲ್ ಹರಾಜಿನಲ್ಲಿ ಹರ್ಷದೀಪ್ ಸಿಂಗ್ ಹೆಸರನ್ನು ಮೊದಲ ಆಟಗಾರರಾಗಿ ಹರಾಜಿಗೆ ಪರಿಗಣಿಸಲಾಯಿತು. 18 ಕೋಟಿ ರೂಪಾಯಿಗೆ ಆರ್ ಟಿಎಂ ನಿಯಮದಡಿ ಪಂಜಾಬ್ ಕಿಂಗ್ಸ್ ಪಾಲಾದರು. ಹರಾಜಿನಲ್ಲಿ ಬಿಕರಿಯಾದ ಮೊದಲ 6 ಆಟಗಾರರು, ಖರೀದಿಸಿದ ತಂಡಗಳು ಹಾಗೂ ಮೊತ್ತದ ವಿವರ ಹೀಗಿದೆ.

ಮಿಚೆಲ್ ಸ್ಟಾರ್ಕ್ ರಿಂದ ಜೋಸ್ ಬಟ್ಲರ್ ವರಿಗೆ; ಮೊದಲ ಸುತ್ತಿನಲ್ಲಿ ಮಾರಾಟವಾದ 6 ಆಟಗಾರರು, ಖರೀದಿಸಿದ ಮೊತ್ತ, ತಂಡಗಳ ವಿವರ ಇಲ್ಲಿದೆ

Sunday, November 24, 2024

ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಅಂದರೆ ಭಾನುವಾರ ಮತ್ತು ಸೋಮವಾರ ನಡೆಯಲಿದೆ. ಐಪಿಎಲ್ ಹರಾಜು ಸೌದಿ ಅರೇಬಿಯಾದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಅಧಿಕೃತ ಪ್ರಸಾರಕರು ಅಣಕು ಹರಾಜನ್ನು ಆಯೋಜಿಸಿದ್ದರು. ಜಿಯೋ ಸಿನೆಮಾದ ಅಣಕು ಹರಾಜಿನಲ್ಲಿ ಆಕಾಶ್ ಚೋಪ್ರಾ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದ್ದರು. ಸಿಎಸ್​ಕೆ ತಂಡವನ್ನು ಸುರೇಶ್ ರೈನಾ, ದೀಪ್ ದಾಸ್ ಗುಪ್ತಾ ಲಕ್ನೋವನ್ನು ಪ್ರತಿನಿಧಿಸಿದ್ದರು. ಮೈಕ್ ಹೆಸ್ಸನ್ ಆರ್​ಸಿಬಿ ಟೇಬಲ್​ನಲ್ಲಿದ್ದರು. ಇಯಾನ್ ಮಾರ್ಗನ್ ಪಂಜಾಬ್, ಸಂಜಯ್ ಬಂಗಾರ್ ಕೋಲ್ಕತಾ ತಂಡವನ್ನು ಪ್ರತಿನಿಧಿಸಿದ್ದರು.

ಜಿಯೋ ಸಿನಿಮಾ ಅಣಕು ಹರಾಜಿನಲ್ಲಿ ರಿಷಭ್ ಪಂತ್ ದಾಖಲೆಯ 33 ಕೋಟಿ ರೂಪಾಯಿಗೆ ಸೇಲ್; ಯಾರು ಎಷ್ಟಕ್ಕೆ ಬಿಕರಿಯಾದ್ರು?

Saturday, November 23, 2024

ಪ್ರಸಕ್ತ ಸಾಲಿನ ಐಪಿಎಲ್​ ಮೆಗಾ ಹರಾಜಿನಲ್ಲಿ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಿಲ್ ಜಾಕ್ಸ್ ಸೇರಿದಂತೆ ಪ್ರಮುಖ ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

IPL Expensive Players: ಐಪಿಎಲ್ ಪ್ರತಿ ಹರಾಜಿನಲ್ಲೂ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರು ಇವರೇ

Thursday, November 21, 2024

ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್ ಅವರಂಥಾ ಆಟಗಾರರನ್ನು ಹೊರತುಪಡಿಸಿ, ಕೆಲವೊಬ್ಬ ಕ್ರಿಕೆಟಿಗರ ಖರೀದಿಗೆ ಫ್ರಾಂಚೈಸಿಗಳು ಮುಂದಾಗಿವೆ. ಈ ಯುವ ಆಟಗಾರರ ಮೇಲೆ ತಂಡಗಳು ದುಬಾರಿ ಹಣ ಸುರಿಯಬಹುದು.

ಐಪಿಎಲ್ ಮೆಗಾ ಹರಾಜು: ಪಂತ್-ರಾಹುಲ್ ಮಾತ್ರವಲ್ಲ, ಈ 7 ಯುವ ಆಟಗಾರರ ಖರೀದಿಗೂ ಮುಗಿಬೀಳಲಿವೆ ಫ್ರಾಂಚೈಸಿಗಳು

Tuesday, November 19, 2024

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯುವ ತಾರೆಗಳು ವಿವಿಧ ತಂಡಗಳ ಪಾಲಾಗುವ ನಿರೀಕ್ಷೆಯಲ್ಲಿದ್ದಾರೆ. ವಯಸ್ಸಿನಲ್ಲಿ ತುಂಬಾ ಕಿರಿಯಗಿರುವ ಕೆಲವೇ ಆಟಗಾರರಿದ್ದಾರೆ. ಹರಾಜಿನಲ್ಲಿ ಕಿರಿಯರಾದ ಆ ಐದು ಆಟಗಾರರ ಬಗ್ಗೆ ತಿಳಿಯೋಣ. ಇನ್ನೂ 14 ವರ್ಷವೂ ಆಗದ ಒಬ್ಬ ಆಟಗಾರನಿದ್ದಾನೆ. ಉಳಿದಂತೆ 18 ವರ್ಷಕ್ಕಿಂತ ಮೇಲ್ಪಟ್ಟ ಆಟಗಾರರಿದ್ದಾರೆ. ಇವರಲ್ಲಿ ಮೂವರು ಭಾರತೀಯರು ಮತ್ತು ಇಬ್ಬರು ವಿದೇಶಿ ಆಟಗಾರರು ಸೇರಿದ್ದಾರೆ.

ಐಪಿಎಲ್ 2025 ಮೆಗಾ ಹರಾಜು ಪಟ್ಟಿಯಲ್ಲಿರುವ ಟಾಪ್ 5 ಕಿರಿಯ ಆಟಗಾರರಿವರು; ಇಬ್ಬರು ವಿದೇಶಿಗರು

Monday, November 18, 2024

ಐಪಿಎಲ್ 2025 ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಐಪಿಎಲ್‌ ಹರಾಜಿನ ಅಂತಿಮ ಪಟ್ಟಿಯಲ್ಲಿ ಒಟ್ಟು 22 ಸ್ಲಾಟ್​​​ಗಳಲ್ಲಿ 574 ಆಟಗಾರರಿದ್ದಾರೆ. ಯುವ ಆಟಗಾರರು ಮತ್ತು ಅನುಭವಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಈ ಪೈಕಿ ಅತ್ಯಂತ ಹಿರಿಯ ಆಟಗಾರರು ಯಾರು ಎಂಬುದನ್ನು ಮುಂದೆ ನೋಡೋಣ.

ಜೇಮ್ಸ್ ಆಂಡರ್ಸನ್ ಟು ಫಾಫ್ ಡು ಪ್ಲೆಸಿಸ್; ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಹಿರಿಯ ಆಟಗಾರರ ಪಟ್ಟಿ ಇದು

Sunday, November 17, 2024

ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ಐಪಿಎಲ್​ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 21 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. 2008 ರಿಂದ 2025 ರವರೆಗೆ ಐಪಿಎಲ್​ನಲ್ಲಿ ಒಂದೇ ತಂಡದ ಪರ ಕಾಣಿಸಿಕೊಳ್ಳಲಿರುವ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿ, ತಾನು 3 ವರ್ಷಗಳ ಕಾಲ ಆಡಿದರೆ ಐಪಿಎಲ್​ನಲ್ಲಿ 20 ವರ್ಷಗಳ ಕಾಲ ಒಂದೇ ತಂಡದಲ್ಲಿ ಆಡಿದ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ.

RCB Captain: ಆರ್​ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆಯೇ; ಸ್ಪಷ್ಟನೆ ನೀಡಿದ ಫ್ರಾಂಚೈಸಿ ನಿರ್ದೇಶಕ

Thursday, October 31, 2024

ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಐದು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.

17ನೇ ಆವೃತ್ತಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಐವರಿಗೆ ಮಣೆ ಹಾಕಿದ SRH; ಈತನಿಗೆ 23 ಕೋಟಿ ಕೊಟ್ಟ ಆರೆಂಜ್ ಆರ್ಮಿ!

Thursday, October 31, 2024

ಚೆನ್ನೈ ಸೂಪರ್ ಕಿಂಗ್ಸ್ 2025ರ ಐಪಿಎಲ್​ಗೂ ಮುನ್ನ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಐವರನ್ನು ಉಳಿಸಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

CSK Retention: ಧೋನಿಗೆ 4 ಕೋಟಿ, ಋತುರಾಜ್, ಜಡ್ಡುಗೆ 18 ಕೋಟಿ; ಐವರನ್ನು ಉಳಿಸಿಕೊಂಡು ಪ್ರಮುಖರನ್ನು ಕೈಬಿಟ್ಟ ಸಿಎಸ್​ಕೆ

Thursday, October 31, 2024

ಟೂರ್ನಿಯಲ್ಲಿ ಟ್ರೋಫಿ ಗೆಲ್ಲದಿದ್ದರೂ ತನ್ನ ಅದ್ಭುತ ಆಟದ ಮೂಲಕ ಇಡೀ ಜಗತ್ತನ್ನೇ ತನ್ನ ಗಮನ ಸೆಳೆದಿತ್ತು. ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ತಂಡಗಳಿಗೆ ನಡುಕ ಸೃಷ್ಟಿಸಿತ್ತು. ಇದೀಗ ಮೆಗಾ ಹರಾಜಿಗೂ ಮುನ್ನ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಚರ್ಚೆ ನಡೆಸುತ್ತಿದೆ. ಇದರ ನಡುವೆ ಈ ಮೂವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಐಪಿಎಲ್-2024ರಲ್ಲಿ ಅಬ್ಬರಿಸಿದ ಮೂವರ ರಿಟೇನ್​ಗೆ ಎಸ್​ಆರ್​​ಹೆಚ್ ಚಿಂತನೆ; ಪ್ಯಾಟ್ ಕಮಿನ್ಸ್​ಗಿಲ್ಲ ಅವಕಾಶ

Wednesday, August 21, 2024

2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್​​ ಆಟಗಾರರು ತಮ್ಮ ತಂಡಗಳನ್ನು ತೊರೆಯುತ್ತಾರೆ ಎಂದು ವರದಿಯಾಗಿದೆ. ಐಪಿಎಲ್​​ನ ಮೆಗಾ ಹರಾಜಿಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಡೆಲ್ಲಿ ಮ್ಯಾನೇಜ್ಮೆಂಟ್ ಮತ್ತು ಪಂತ್ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹಾಗಾಗಿ ಅವರನ್ನು ಕೈಬಿಡಲು ಚಿಂತಿಸುತ್ತಿದೆ.

ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ

Saturday, July 20, 2024

ಒಂದು ಬಾರಿಯೂ ಕಪ್ ಗೆಲ್ಲದ ಆರ್​​ಸಿಬಿ 1,896 ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ್ದು, ಎರಡನೇ ಸ್ಥಾನ ಪಡೆದಿದೆ. 2023ರಲ್ಲೂ ಆರ್​ಸಿಬಿ ಎರಡನೇ ಸ್ಥಾನ ಪಡೆದಿತ್ತು.

ಚಾಂಪಿಯನ್ ಕೆಕೆಆರ್​ಗಿಂತಲೂ ಆರ್​ಸಿಬಿ ಬ್ರ್ಯಾಂಡ್ ಮೌಲ್ಯವೇ ಹೆಚ್ಚು! ಇಲ್ಲಿದೆ 10 ತಂಡಗಳ ವಿವರ

Wednesday, June 12, 2024