ಕನ್ನಡ ಸುದ್ದಿ  /  ವಿಷಯ  /  kolkata knight riders

Latest kolkata knight riders Photos

ಮಾರ್ಚ್ 23ರಂದು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಕೋಲ್ಕತ್ತಾ ಪಂದ್ಯದ ವೇಳೆ ಮಯಾಂಕ್ ಅಗರ್ವಾಲ್ ಔಟಾದಾಗ ಫ್ಲೇಯಿಂಗ್ ಕಿಸ್ ಕೊಟ್ಟಿದ್ದರು. ಹಾಗಾಗಿ ಆಗ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿ ಹರ್ಷಿತ್ ದಂಡಕ್ಕೆ ಒಳಗಾಗಿದ್ದರು.

ಬುದ್ದಿ ಕಲಿಯದ ಕೆಕೆಆರ್​ ವೇಗಿ ಹರ್ಷಿತ್​ ರಾಣಾಗೆ ಮತ್ತೆ ದಂಡದ ಬರೆ; ಒಂದು ಪಂದ್ಯದಿಂದ ನಿಷೇಧ

Tuesday, April 30, 2024

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ನ 47ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್​ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ; ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ

Monday, April 29, 2024

ಇದು ಟಿ20 ಕ್ರಿಕೆಟ್​ ರನ್ ಚೇಸ್​​ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿ ಆರ್​ಸಿಬಿ ದಾಖಲೆ ಸರಿಗಟ್ಟಿದೆ. ಪಂಜಾಬ್ 2 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಆದಾಗ್ಯೂ, ಆರ್​​​ಸಿಬಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ಸೋತಿತ್ತು.

262 ರನ್ ಚೇಸ್; ಐಪಿಎಲ್ ಅಲ್ಲ, ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಹೊಸ ವಿಶ್ವದಾಖಲೆ ನಿರ್ಮಿಸಿದ ಪಂಜಾಬ್ ಕಿಂಗ್ಸ್

Saturday, April 27, 2024

ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿದೆ. ಕೆಕೆಆರ್ ವಿರುದ್ಧ ಪಂಜಾಬ್ ಬ್ಯಾಟರ್​ಗಳು ಒಟ್ಟು 24 ಸಿಕ್ಸರ್​​ ಬಾರಿಸಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಜಾನಿ ಬೈರ್​​ಸ್ಟೋ 9, ಶಶಾಂಕ್ ಸಿಂಗ್ 8, ಪ್ರಭುಸಿಮ್ರಾನ್ ಸಿಂಗ್ 5 ಮತ್ತು ರಿಲೀ ರೊಸ್ಸೌ ಎರಡು ಸಿಕ್ಸರ್ ಬಾರಿಸಿದ್ದಾರೆ.

ಗರಿಷ್ಠ ಸಿಕ್ಸರ್, ಅತ್ಯಧಿಕ ರನ್ ಚೇಸ್; ಕೆಕೆಆರ್ vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ 5 ಸಾರ್ವಕಾಲಿಕ ದಾಖಲೆಗಳು ನಿರ್ಮಾಣ

Saturday, April 27, 2024

ಇದೇ ಋತುವಿನಲ್ಲಿ ಕೆಕೆಆರ್ 250ಕ್ಕೂ ಹೆಚ್ಚು ರನ್ ಗಳಿಸಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 272 ರನ್ ಗಳಿಸಿತ್ತು. ಇದರೊಂದಿಗೆ ಆರ್​​ಸಿಬಿ ದಾಖಲೆಯನ್ನು ಕೆಕೆಆರ್​ ಸರಿಗಟ್ಟಿದೆ. ಎಸ್​​​ಆರ್​ಹೆಚ್​ ಒಂದು ಆವೃತ್ತಿಯಲ್ಲಿ 3 ಬಾರಿ 250+ ರನ್ ಗಡಿ ದಾಟಿ ದಾಖಲೆ ಬರೆದಿದ್ದು, ಆರ್​​ಸಿಬಿ 2 ಬಾರಿ 250ರ ಗಡಿ ದಾಟಿದೆ. 2013ರಲ್ಲಿ 263 ರನ್ ಬಾರಿಸಿದ್ದ ಆರ್​​ಸಿಬಿ, ಇದೇ ವರ್ಷ 262 ರನ್ ಬಾರಿಸಿತ್ತು.

ಪಂಜಾಬ್ ಕಿಂಗ್ಸ್ ವಿರುದ್ಧ 261 ರನ್​​ಗಳ ಬೃಹತ್ ಮೊತ್ತ ದಾಖಲಿಸಿ ಆರ್​​ಸಿಬಿ ರೆಕಾರ್ಡ್ ಸರಿಗಟ್ಟಿದ ಕೆಕೆಆರ್

Friday, April 26, 2024

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ರಿಷಿ ಧವನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್, ಪ್ರಿನ್ಸ್ ಚೌಧರಿ

ಕೆಕೆಆರ್ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಲಿವಿಂಗ್‌ಸ್ಟನ್ ಔಟ್, ಕೋಲ್ಕತ್ತಾ ತಂಡದಿಂದ ಹೊರಬಿದ್ದ ದುಬಾರಿ ಬೌಲರ್

Friday, April 26, 2024

ಇದಕ್ಕೆ ಪ್ರತಿಯಾಗಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಉತ್ತರಿಸಲು ವಿಫಲರಾದರು. ಆದರೆ ವಿಲ್ ಜಾಕ್ಸ್ (32 ಎಸೆತಗಳಲ್ಲಿ 55 ರನ್) ಮತ್ತು ರಜತ್ ಪಾಟೀದಾರ್ (23 ಎಸೆತಗಳಲ್ಲಿ 52 ರನ್) ಬೆಂಗಳೂರು ತಂಡವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದರು. ಕೊನೆಯ ಓವರ್ನಲ್ಲಿ ಸ್ಟಾರ್ಕ್ ಎಸೆತಗಳಲ್ಲಿ ಕರಣ್ ಶರ್ಮಾ ಮೂರು ಸಿಕ್ಸರ್‌ ಸಿಡಿಸಿದರು. ಅವರು ಔಟಾದ ನಂತರ, ಕೊನೆಯ ಎಸೆತದಲ್ಲಿ ತಂಡಕ್ಕೆ 3 ರನ್ ಅವಶ್ಯಕತೆಯಿತ್ತು. ಲಾಕಿ ಫರ್ಗುಸನ್ ಎರಡನೇ ರನ್‌ ಓಡುವ ವೇಳೆ ಔಟಾದರು.

ಆರ್‌ಸಿಬಿ ವಿರುದ್ಧ ಗೆದ್ದು ತವರಿನಲ್ಲಿ ವಿಶೇಷ ಅರ್ಧಶತಕ ಬಾರಿಸಿದ ಕೆಕೆಆರ್; ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ

Monday, April 22, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಪ್ಲೇಯರ್ಸ್: ಸುಯೇಶ್ ಪ್ರಭುದೇಸಾಯಿ, ಅನುಜ್ ರಾವತ್, ಹಿಮಾಂಶು ಶರ್ಮಾ, ವಿಜಯ್‌ಕುಮಾರ್ ವೈಶಾಕ್, ಸ್ವಪ್ನಿಲ್ ಸಿಂಗ್

ಕೆಕೆಆರ್ ವಿರುದ್ಧ ಹಸಿರುಡುಗೆಯಲ್ಲಿ ಕಣಕ್ಕಿಳಿದು ಟಾಸ್ ಗೆದ್ದ ಆರ್​ಸಿಬಿ; ತಂಡದಲ್ಲಿ 3 ಬದಲಾವಣೆ

Sunday, April 21, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.

ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

Saturday, April 20, 2024

ನರೈನ್‌ ಕೆಕೆಆರ್‌ ತಂಡದ ಪ್ರಮುಖ ಸ್ಪಿನ್‌ ಬೌಲರ್‌. ಇವರ ಬ್ಯಾಟಿಂಗ್‌ ಕೌಶಲದಿಂದಾಗಿ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಲಾಗಿತ್ತು. ಅದರಂತೆಯೇ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ.‌ ತಂಡದ ಬ್ಯಾಟಿಗ್‌ ತಂತ್ರ ಪಲ ಕೊಡುತ್ತಿದೆ.

49 ಎಸೆತಗಳಲ್ಲಿ ಶತಕ ಸಿಡಿಸಿದ ಸುನಿಲ್ ನರೈನ್; ಐಪಿಎಲ್‌ನಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Tuesday, April 16, 2024

ರೋಚಕ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್; ತಂಡಕ್ಕೆ ಮರಳಿದ‌ ಜಾಸ್ ಬಟ್ಲರ್, ಅಶ್ವಿನ್

Tuesday, April 16, 2024

ಪಂದ್ಯದಲ್ಲಿ ಟಾಸ್‌ ಗೆದ್ದ ಕೆಕೆಆರ್‌ ತಂಡದ ನಾಯಕ ಶ್ರೇಯಸ್‌ ಆಯ್ಯರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಲಕ್ನೋ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ; ಕನ್ನಡಿಗನ ಹೊರಗಿಟ್ಟ ಎಲ್‌ಎಸ್‌ಜಿ, ಶಮರ್ ಜೋಸೆಫ್‌ ಪದಾರ್ಪಣೆ

Sunday, April 14, 2024

ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್‌ ಆಯ್ಕೆ ಮಾಡಿತು. ಬ್ಯಾಟಿಂಗ್ ನಡೆಸಿದ ಕೆಕೆಆರ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಫಿಲ್‌ ಸಾಲ್ಟ್ ಗೋಲ್ಡನ್‌ ಡಕ್‌ ಆದರು. ತುಷಾರ್ ದೇಶಪಾಂಡೆ ಎಸೆತಕ್ಕೆ ರವೀಂದ್ರ ಜಡೇಜಾ ಕ್ಯಾಚ್‌ ಪಡೆದು ಫಿಲ್ ಸಾಲ್ಟ್ ಅವರನ್ನು ಹೊರಕಳುಹಿಸಿದರು.

ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್

Tuesday, April 9, 2024

ಕೆಕೆಆರ್‌ ತಂಡದ ವಿರುದ್ಧ ಟಾಸ್‌ ಗೆದ್ದ ಚೆನ್ನೈ ಸೂಪಪರ್‌ ಕಿಂಗ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಕೆಕೆಆರ್ ವಿರುದ್ಧ ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್; ಮುಸ್ತಫಿಜುರ್‌ ಕಂಬ್ಯಾಕ್‌, ಆಡುವ ಬಳಗದಲ್ಲಿ ಶಾರ್ದುಲ್

Monday, April 8, 2024

ದೆಹಲಿ ಕ್ಯಾಪಿಟಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಅಭಿಷೇಕ್ ಪೊರೆಲ್, ಕುಮಾರ್ ಕುಶಾಗ್ರಾ, ಪ್ರವೀಣ್ ದುಬೆ, ಲಲಿತ್ ಯಾದವ್, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಕೆಕೆಆರ್​ ಬ್ಯಾಟಿಂಗ್ ಆಯ್ಕೆ; ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ

Wednesday, April 3, 2024

ಒಬ್ಬ ಆಟಗಾರ ಐಪಿಎಲ್‌ನಲ್ಲಿ 100 ಸಿಕ್ಸರ್‌ ಬಾರಿಸಿದರೆ, ಇನ್ನೋರ್ವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಮೂರನೇ ಆಟಗಾರ 500 ಟಿ20 ಪಂದ್ಯಗಳನ್ನು ಆಡಿದ ಅಪರೂಪದ ದಾಖಲೆ ನಿರ್ಮಿಸಿದರೆ. ನಾಲ್ಕನೇ ಆಟಗಾರ ಐಪಿಎಲ್‌ನಲ್ಲಿ 1000 ರನ್ ಗಡಿ ದಾಟಿದರು.

ಒಂದೇ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ನಾಲ್ವರು ಕೆಕೆಆರ್ ಆಟಗಾರರು; ದಾಖಲೆಯೊಂದಿಗೆ ಗೆಲುವಿನ ಖುಷಿ

Saturday, March 30, 2024

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿದರು. ಅವರು 4 ಬೌಂಡರಿ ಮತ್ತು 4 ಸಿಕ್ಸರ್​​ ಸಿಡಿಸಿ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಈ ಪಂದ್ಯದಲ್ಲಿ 4 ಸಿಕ್ಸರ್​ ಬಾರಿಸಿದ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್; ಎಂಎಸ್ ಧೋನಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

Saturday, March 30, 2024

ಮೂರು ಪಂದ್ಯಗಳಿಂದಲೂ ಫಾಫ್ ಡು ಪ್ಲೆಸಿಸ್, ರಜತ್ ಪಾಟೀದಾರ್​ ಅಬ್ಬರಿಸಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದ ಕ್ಯಾಮರೂನ್  ಗ್ರೀನ್​ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಇನ್ನೇನು ಲಯಕ್ಕೆ ಮರಳಿದರು ಎನ್ನುವಷ್ಟರಲ್ಲಿ ಔಟಾದರು. ಈ ನಾಲ್ವರ ವೈಫಲ್ಯವೂ ತಂಡಕ್ಕೆ ಕಾಡುತ್ತಿದೆ. ಮುಂದಿನ ಪಂದ್ಯದಲ್ಲಿ ಈ ಆಟಗಾರರಿಂದ ಅದ್ಭುತ ಪ್ರದರ್ಶನ ಹೊರಬರಬೇಕಿದೆ. ಅಲ್ಲದೆ, ಬೌಲಿಂಗ್​​ನಲ್ಲಿ ಯಾರಿಂದಲೂ ಪರಿಣಾಮಕಾರಿ ಪ್ರದರ್ಶನ ಬರುತ್ತಿಲ್ಲ. ಮೂರು ಪಂದ್ಯಗಳಿಂದಲೂ ಬೌಲಿಂಗ್ ವಿಭಾಗವು ಕೆಟ್ಟ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದೆ.

ಪಿಚ್ ಮರ್ಮ, ಕಳಪೆ ಬೌಲಿಂಗ್​; ಮೆಗಾ ಫೈಟ್​ನಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣಗಳಿವು

Saturday, March 30, 2024

ಐಪಿಎಲ್​ 2024ರ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಹೈವೋಲ್ಟೇಜ್ ಕದನಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ವೇದಿಕೆ ಕಲ್ಪಿಸುತ್ತಿದೆ. ಮೊದಲು ಬ್ಯಾಟಿಂಗ್ ನಡೆಸುವ ಆರ್​​ಸಿಬಿ ಬೃಹತ್ ಗುರಿ ನೀಡುವ ಲೆಕ್ಕಾಚಾರದಲ್ಲಿದೆ.

ಮೆಗಾ ಫೈಟ್​ನಲ್ಲಿ ಆರ್​ಸಿಬಿ ವಿರುದ್ಧ ಟಾಸ್ ಗೆದ್ದ ಕೆಕೆಆರ್​ ಬೌಲಿಂಗ್; ಅದೇ ತಂಡ ಕಣಕ್ಕಿಳಿಸಿದ ಬೆಂಗಳೂರು

Friday, March 29, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮಾರ್ಚ್ 29ರಂದು ಹೈವೋಲ್ಟೇಜ್ ಫೈಟ್​ ನಡೆಯಲಿದೆ. ಎಂ ಚಿನ್ನಸ್ವಾಮಿ ಮೈದಾನವು ಈ ಪಂದ್ಯಕ್ಕೆ ವೇದಿಕೆ ಕಲ್ಪಿಸಲಿದೆ.

ಮುಜೀಬ್ ಉರ್ ರೆಹಮಾನ್ ಔಟ್; ಆರ್​​ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಕೆಕೆಆರ್​ ತಂಡವನ್ನು ಸೇರಿಕೊಂಡ 16 ವರ್ಷದ ಆಟಗಾರ

Friday, March 29, 2024