luxury-cars News, luxury-cars News in kannada, luxury-cars ಕನ್ನಡದಲ್ಲಿ ಸುದ್ದಿ, luxury-cars Kannada News – HT Kannada

Latest luxury cars Photos

Used Car Loan Tips: ಮೊದಲ ಬಾರಿಗೆ ವಾಹನ ಖರೀದಿಸುವವರಿಗೆ ಸೆಕೆಂಡ್‌ ಹ್ಯಾಂಡ್‌ ಕಾರು ಸೂಕ್ತವಾಗಿದೆ. ಈ ರೀತಿ ಸೆಕೆಂಡ್‌ ಹ್ಯಾಂಡ್‌ ವಾಹನ ಖರೀದಿಸುವಾಗ ಸಾಕಷ್ಟು ಜನರಿಗೆ ಸಾಕಷ್ಟು ಹಣ ಉಳಿತಾಯವಾಗಬಹುದು. ಆದರೆ, ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಹಣ ಹೊಂದಿಸುವುದು ಕೆಲವರಿಗೆ ಸವಾಲಾಗಿ ಪರಿಣಮಿಸಬಹುದು. ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ವಾಹನ ಸಾಲ ದೊರಕಿದರೆ ಸುಲಭವಾಗಿ ಇಎಂಐ ಪಾವತಿಸುತ್ತ ಸಾಲ ತೀರಿಸಬಹುದು.

Used Car Loan Tips: ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ವಾಹನ ಸಾಲ ದೊರಕುತ್ತಿಲ್ಲವೇ? ಈ 4 ಅಂಶಗಳನ್ನು ಗಮನಿಸಿ

Wednesday, October 9, 2024

ರೋಲ್ಸ್ ರಾಯ್ಸ್ ಫ್ಯಾಂಟಮ್‌ ಸೇಡಾನ್ ಮಾದರಿಯ ಕಾರು ಪೆಟ್ರೋಲ್ ಚಾಲಿತ ಇಂಜಿನ್, ಒಂದು ಲೀಟರ್ ಪೆಟ್ರೋಲ್‌ಗೆ 7 ಕಿ.ಮೀ. ಮೈಲೇಜ್‌. ಈ ಕಾರಿನ ದರ 8.9 ಕೋಟಿ ರೂನಿಂದ 10.5 ಕೋಟಿ ರೂ.

ಭಾರತದಲ್ಲಿರುವ ಆಯ್ದ 10 ಐಷಾರಾಮಿ ಕಾರುಗಳಿವು, ಅವುಗಳ ಮೈಲೇಜ್‌ ಮತ್ತು ದರ ವಿವರ

Monday, October 7, 2024

ಕಿಯಾ ಕಂಪನಿಯು ಬಹುನಿರೀಕ್ಷಿತ ಕಾರ್ನಿವಲ್‌ 2024 ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 2024ರ ಕಿಯಾ ಕಾರ್ನಿವಲ್‌ ಆರಂಭಿಕ ಎಕ್ಸ್‌ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ.ಈಗಾಗಲೇ ಹೊಸ ಕಾರ್ನಿವಲ್‌ ಅನ್ನು  2,796 ಗ್ರಾಹಕರು ಬುಕ್ಕಿಂಗ್‌ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಭಾರತದ ಮಾರುಕಟ್ಟೆಗೆ ಆಗಮಿಸಿದ ಹೊಸ ಕಿಯಾ ಕಾರ್ನಿವಾಲ್‌ ಚಿತ್ರಗಳನ್ನು ನೋಡಿ, ಇದು 63.9 ಲಕ್ಷ ರೂನ ಎಂಪಿವಿ

Thursday, October 3, 2024

ಸ್ಕೋಡಾ ಎಲ್ರೋಕ್ ಇವಿ ಜಾಗತಿಕವಾಗಿ ಬಿಡುಗಡೆಯಾಗಿದೆ. ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸ್ಕೋಡಾ ಎಲ್ರಾಕ್ ಇವಿ ಬ್ರ್ಯಾಂಡ್ ನ ಮೊದಲ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್  ಎಸ್‌ಯುವಿಯಾಗಿದೆ. ಎಲ್ರೋಕ್ ಸಂಪೂರ್ಣವಾಗಿ ಹೊಸ ವಿನ್ಯಾಸ ತತ್ವವನ್ನು ಒಳಗೊಂಡಿದೆ. ಈ ಮೂಲಕ ತನ್ನ ಸಾಂಪ್ರದಾಯಿಕ ವಿನ್ಯಾಸವನ್ನು ಈ ಇವಿಗೆ ಅಳವಡಿಸಿಲ್ಲ. ಸಂಪೂರ್ಣ ಹೊಸತನದಿಂದ ಕೂಡಿದೆ.

Skoda Elroq EV: ಸಂಪೂರ್ಣ ಹೊಸತನದ ವಿನ್ಯಾಸ, 560 ಕಿಲೋಮೀಟರ್‌ ರೇಂಜ್‌, ನೂತನ ಸ್ಕೋಡಾ ಎಲ್ರೋಕ್‌ ಎಲೆಕ್ಟ್ರಿಕ್‌ ವಾಹನದ ಚಿತ್ರ ವಿಮರ್ಶೆ

Wednesday, October 2, 2024

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್ ಯುವಿಗೆ ಕಠಿಣ ಪ್ರಶ್ನೆಗಳು ಎದುರಾಗಿದ್ದವು. ಪರಿಸರ ಸ್ನೇಹಿ ಕಾರಿನ ಕ್ಯಾಬಿನ್‌ನ ಲಗ್ಷುರಿ ಹೆಚ್ಚಿಸುವುದು ಹೇಗೆ? ಆತ್ಮವಿಶ್ವಾಸದಿಂದ ಚಾಲನೆ ನೀಡುವಂತಹ ಪವರ್‌ ನೀಡುವುದು ಹೇಗೆ? ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದನ್ನು ನಿಲ್ಲಿಸುವುದು ಹೇಗೆ? ಇದಕ್ಕಾಗಿಯೇ ಮರ್ಸಿಡಿಸ್‌ ಬೆಂಝ್‌ ಕಂಪನಿಯು ಎಲೆಕ್ಟ್ರಿಕ್‌ ಮೋಟಾರ್‌ನ ಮರ್ಸಿಡಿಸ್ ಬೆಂಝ್ ಇಕ್ಯೂಎಸ್  ಪರಿಚಯಿಸಿದೆ.

ಮರ್ಸಿಡಿಸ್‌ ಇಕ್ಯುಎಸ್‌ ವಿಮರ್ಶೆ: 800 ಕಿಮಿಗೂ ಹೆಚ್ಚು ಮೈಲೇಜ್‌, ಪರಿಸರಸ್ನೇಹಿ ಎಸ್‌ಯುವಿಯ 12 ಚಿತ್ರಗಳನ್ನು ನೋಡುತ್ತ ರಿವ್ಯೂ ಓದಿ

Tuesday, September 24, 2024

ನಾಲ್ಕನೇ ತಲೆಮಾರಿನ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನಾವರಣಗೊಂಡಿದೆ. ಈ ಬಾರಿ ಐಷಾರಾಮಿ ಗ್ರ್ಯಾಂಡ್ ಟೂರರ್ ಹಳೆಯ ಡಬ್ಲ್ಯು 12 ಎಂಜಿನ್‌ ಬದಲು ಹೊಸ ಟ್ವಿನ್-ಟರ್ಬೋಚಾರ್ಜ್ಡ್ ಹೈಬ್ರಿಡ್ ವಿ 8 ಎಂಜಿನ್‌ ಮೂಲಕ ಆಗಮಿಸಿದೆ. ಒಂದು ಫುಲ್‌ ಟ್ಯಾಂಕ್‌ ಮತ್ತು ಫುಲ್‌ ಬ್ಯಾಟರಿ ಚಾರ್ಜಿಂಗ್‌ನಲ್ಲಿ 829 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ.

ಬೆಂಟ್ಲಿ ಫ್ಲೈಯಿಂಗ್‌ ಸ್ಪುರ್‌ ಅನಾವರಣ: ಅವಳಿ ಟರ್ಬೊ ಹೈಬ್ರಿಡ್‌ ವಿ8 ಎಂಜಿನ್‌ನ ಹೊಸ ಬೆಂಟ್ಲಿ ಕಾರು ನೋಡಿರಣ್ಣ- Photos

Thursday, September 12, 2024

ಟಾಟಾ ಕರ್ವ್ ಇವಿ ಕಾರಿನ ಆರಂಭಿಕ ಬೆಲೆಯು (ಎಕ್ಸ್‌ ಶೋರೂಂ ದರ) 17.49 ಲಕ್ಷ ರೂ. ಇದೆ. ಈ ಎಲೆಕ್ಟ್ರಿಕ್ ಎಸ್ ಯುವಿ ಒಂದು ಬಾರಿ ಚಾರ್ಜ್ ಮಾಡಿದರೆ 585 ಕಿ.ಮೀ ರೇಂಜ್‌ ನೀಡುತ್ತದೆ. ಕಂಪನಿಯ ಪ್ರಕಾರ ಫುಲ್‌ ಚಾರ್ಜ್‌ ಮಾಡಿದ್ರೆ ಸುಮಾರು 425 ಕಿ.ಮಿ.ವರೆಗೆ ಯಾವುದೇ ಆಂತಕವಿಲ್ಲದೆ ಸಾಗಬಹುದು. ಈ ಕಾರು ಇವಿ 45 ಕಿಲೋವ್ಯಾಟ್ ಮತ್ತು  55 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ಲಭ್ಯ. ಇದು ಲೆವೆಲ್ -2 ಎಡಿಎಎಸ್, ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಸೀಟು ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. ಈ ಕಾರು ಭಾರತದ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಎಂಜಿ ಝಡ್ ಎಸ್‌ಇವಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುತ್ತದೆ.

Tata Curvv to MG ZS: 25 ಲಕ್ಷಕ್ಕಿಂತ ಕಡಿಮೆ ದರದ ಎಲೆಕ್ಟ್ರಿಕ್‌ ಕಾರು ಬೇಕೆ? ಫುಲ್‌ ಚಾರ್ಜ್‌ಗೆ ಅತ್ಯಧಿಕ ಕಿಮೀ ಸಾಗುವ ಅಗ್ರ 5 ಕಾರುಗಳಿವು

Monday, September 9, 2024

ಭಾರತೀಯ ಕಾರು ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ತನ್ನ ಟಾಟಾ ಕರ್ವ್‌ ICE ಕಾರನ್ನು ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ ಟಾಟಾ ಕರ್ವ್‌ ಆಲ್‌ ಎಲೆಕ್ಟ್ರಿಕ್‌ ಮಾದರಿ ನಂತರ ಇತ್ತೀಚೆಗೆ ಟಾಟಾ ಕರ್ವ್‌ (Tata Curvv) ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್ ಆವೃತ್ತಿಯನ್ನೂ ಬಿಡುಗಡೆ ಮಾಡಿದೆ. ಈ  ಕಾರು ಪ್ರಸ್ತುತ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮುಂತಾದವುಗಳ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿದೆ.

Tata Curvv ಹೇಗಿದೆ? ಇಲ್ಲಿವೆ ನೋಡಿ ಬೊಂಬಾಟ್ ಫೋಟೋಸ್, ಕಣ್ತುಂಬಿಕೊಳ್ಳಿ

Tuesday, September 3, 2024

ಆಡಿ ಆರ್‌ಎಸ್3 ಪರ್ಫಾಮೆನ್ಸ್ ಸೆಡಾನ್ ನವೀಕರಿಸಿದ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಐಷಾರಾಮಿ ಸೆಡಾನ್ ಕಾರು, ವಿನ್ಯಾಸ ಮತ್ತು ವೈಶಿಷ್ಟ್ಯದಲ್ಲಿ ಅಪ್ಡೇಟ್‌ಗಳೊಂದಿಗೆ ಬಂದಿದೆ. ಕಾರು ಹೆಚ್ಚು ಆಕರ್ಷಕವಾಗಿದ್ದು, ಹೊಸ ಆಡಿ ಆರ್‌ಎಸ್ 3 ಕಾರಿನ ಹೊರಭಾಗ ಮತ್ತು ಕ್ಯಾಬಿನ್ ಒಳಭಾಗದ ನವೀಕರಣಗಳು ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತವೆ ಎಂದು ವಾಹನ ತಯಾರಕರು ನಿರೀಕ್ಷಿಸಿದ್ದಾರೆ.

Audi RS3: ಜಾಗತಿಕ ಮಾರುಕಟ್ಟೆಗೆ ಕಾಲಿಟ್ಟ ‘ಆಡಿ ಆರ್‌ಎಸ್3’; ಕಾರಿನ ಸ್ಟೈಲಿಶ್‌ ಲುಕ್‌ ಹೀಗಿದೆ ನೋಡಿ

Thursday, August 22, 2024

ನ್ಯಾಚುರಲಿ ಆಸ್ಪಿರೇಟೆಡ್ ವಿ10 ಎಂಜಿನ್ ಸ್ಥಾನದಲ್ಲಿ 4.0-ಲೀಟರ್ ವಿ8 ಬೈಕ್ ಹೈಬ್ರಿಡ್ ಎಂಜಿನ್ ಇರಲಿದೆ. ಇದು ಟ್ವಿನ್ ಟರ್ಬೋಚಾರ್ಜ್ಡ್ ಆಗಿದೆ. ಈ ಎಂಜಿನ್ 9,000 ರಿಂದ 9,750 ಆರ್​​ಪಿಎಂ ಮಧ್ಯೆ 789 ಬಿಹೆಚ್​ಪಿ ಪವರ್ ಮತ್ತು 4,000 ರಿಂದ 7,000 ಆರ್​ಪಿಎಂ ನಡುವೆ 730 ಎನ್ಎಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Lamborghini Temerario: ಗಂಟೆಗೆ 343 ಕಿಮೀ ವೇಗ, ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ; ಇದು ಲ್ಯಾಂಬೋರ್ಗಿನಿ ಸೂಪರ್ ಕಾರು

Thursday, August 22, 2024

ಝೀ ಟಿವಿಯಲ್ಲಿ ಪ್ರಸಾರವಾಗುವ ಏಕ್ತಾ ಕಪೂರ್‌ ಅವರ ಕುಂಡಲಿ ಭಾಗ್ಯ ಹಿಂದಿ ಧಾರಾವಾಹಿಯ ನಟಿ ಅದ್ರಿಜಾ ರಾಯ್‌ಗಿನ್ನೂ 25 ವರ್ಷ ವಯಸ್ಸು. ಇದೀಗ ತನ್ನ ಮೊದಲ ಕಾರು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಅದರಲ್ಲೇನು ವಿಶೇಷ ಅನ್ನುವಿರಾ? ಈ ನಟಿ ಬಿಎಂಡಬ್ಲ್ಯು ಕಂಪನಿಯ ದುಬಾರಿ ಕಾರೊಂದನ್ನು ಖರೀದಿಸಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಇವರು ಹಲವು ಬಂಗಾಳಿ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಹಿಂದಿಯ ಕೆಲವು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ.
ಸೀರಿಯಲ್‌ಗಳಲ್ಲಿ ಮಾತ್ರವಲ್ಲದೆ ಎರಡು ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪರಿನೀತ, ಗೋಲ್ಪೆರ್‌ ಮಾಯಾಜಾಲ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನರ್‌ ಮೀ ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ. ಹಲವು ಮ್ಯೂಸಿಕ್‌ ವಿಡಿಯೋಗಳನ್ನೂ ಹೊರತಂದಿದ್ದಾರೆ.

Adrija Roy: ಕುಂಡಲಿ ಭಾಗ್ಯ ಸೀರಿಯಲ್‌ ನಟಿಯ ಕಾರುಬಾರು; 25 ವರ್ಷ ವಯಸ್ಸಿನಲ್ಲಿಯೇ ದುಬಾರಿ ಬಿಎಂಡಬ್ಲ್ಯು ಕಾರಿನ ಒಡತಿ

Wednesday, July 31, 2024

ಭಾರತ ಮತ್ತು ಪ್ರಪಂಚದಾದ್ಯಂತ 2005 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಕಾಲಾನುಕ್ರಮದಲ್ಲಿ ಅಗತ್ಯಕ್ಕೆ ತಕ್ಕಂತೆ ಬಹುತೇಕ ಹಲವು ಸುಧಾರಣೆಗಳನ್ನು ಒಗ್ಗೂಡಿಸುತ್ತ ಬಂದಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ, ಅದು ತನ್ನ ಅತಿದೊಡ್ಡ ಸವಾಲನ್ನು ಎದುರಿಸುತ್ತಿರುವುದು, ಎಂಟ್ರಿ ಲೆವೆಲ್ ಎಸ್‌ಯುವಿಗಳಿಂದ. ಭಾರತೀಯ ಕಾರು ಮಾರುಕಟ್ಟೆಯ ಸಾಕಷ್ಟು ಭಾಗವನ್ನು ಈ ಎಸ್‌ಯುವಿಗಳು ಆಕ್ರಮಿಸಿಕೊಂಡಿದ್ದು, ಈ ಹಾಟ್ ಹ್ಯಾಚ್ ಬ್ಯಾಕ್ ಕಾರು ತನ್ನ ಅಪ್ರತಿಮ ಇಮೇಜ್ ಅನ್ನು ಉಳಿಸಿಕೊಳ್ಳಬಹುದೇ ಎಂಬುದೀಗ ಪ್ರಶ್ನೆ.

ಮಾರುತಿ ಸುಜುಕಿ ಸ್ವಿಫ್ಟ್ 2024; ಜಾಣರ ಜಗತ್ತಿಗೊಂದು 3 ಸಿಲಿಂಡರ್ ಎಂಜಿನ್‌, ಸ್ಪೋರ್ಟ್ಸ್ ಡಿಸೈನ್ ಕಾರು, ಚಿತ್ರನೋಟ ಹೀಗಿದೆ ನೋಡಿ

Thursday, May 16, 2024

ಮಧುಬಾಲ, ಮನೆದೇವ್ರು ಸೀರಿಯಲ್‌ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟಿ ಅರ್ಚನಾ ಮದುವೆಯಾದ ಬಳಿಕ ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿದ್ದಾರೆ. ಅವರಿಗೆ ಮುದ್ದಾದ ಮಗುವೂ ಇದೆ. ಇದೀಗ ಇವರು ಮರ್ಸಿಡಿಸ್‌ ಬೆಂಝ್‌ ಕಾರಿನ ಮಾಲೀಕರಾಗಿದ್ದಾರೆ.

ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಈಗ ಅದ್ಧೂರಿ ಕಾರಿನ ಒಡತಿ; ಮನೆದೇವ್ರು ಸೀರಿಯಲ್‌ ನಟಿ ಮನೆಗೆ ಬಂತು ಮರ್ಸಿಡಿಸ್‌ ಬೆಂಝ್ ಜಿಎಲ್‌ಇ 450

Tuesday, May 14, 2024

ಆಡಿ ಕ್ಯೂ 6 ಇ-ಟ್ರಾನ್ ಕ್ವಾಟ್ರೊ ಎಲೆಕ್ಟ್ರಿಕ್ ಕಾರಿನಲ್ಲಿರುವ ಉನ್ನತ ಸ್ಥಾನದಲ್ಲಿರುವ ಎಲ್ಇಡಿ ಡಿಆರ್‌ಎಲ್‌ಗಳು  ಕಾರಿನ ಲುಕ್ ಅನ್ನು ಹೆಚ್ಚು ಕ್ರಿಯಾತ್ಮಕವಾಗಿಸಿದೆ. ಉತ್ತಮ ಡ್ರೈವಿಂಗ್ ಡೈನಾಮಿಕ್ಸ್ ಗಾಗಿ,

ಒಮ್ಮೆ ಚಾರ್ಚ್ ಮಾಡಿದ್ರೆ 625 ಕಿಮೀ ಓಡುವ ಸಾಮರ್ಥ್ಯ; ಮಾರುಕಟ್ಟೆಗೆ ಬರಲಿದೆ ಆಡಿ ಕ್ಯೂ6 ಇ-ಟ್ರಾನ್ ಕ್ವಾಟ್ರೊ ಐಷಾರಾಮಿ ಎಲೆಕ್ಟ್ರಿಕ್ ಕಾರು

Thursday, March 21, 2024

ಹೊಸ ಲೆಕ್ಸಸ್ ಎಲ್‌ಎಂ 350 ಹೆಚ್ ಎರಡು  ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಒಂದು 7 ಸೀಟ್‌ಗಳು ಮತ್ತು ಇನ್ನೊಂದು 4 ಸೀಟ್‌ಗಳು, ಏಳು ಸೀಟಿನ ಲೆಕ್ಸಸ್ ಎಲ್‌ಎಂ ಕಾರಿನ ಎಕ್ಸ್‌ ಶೋರಂ ಬೆಲೆ 2 ಕೋಟಿ ಮತ್ತು 4 ಸೀಟರ್ ಕಾರಿನ ಬೆಲೆ 2.5 ಕೋಟಿ ರೂಪಾಯಿ ಇದೆ.

ಭಾರತೀಯ ಮಾರುಕಟ್ಟೆಗೆ ಬಂತು ಐಷಾರಾಮಿ ಲೆಕ್ಸಸ್ ಎಲ್‌ಎಂ 350ಎಚ್ ಕಾರು; ಬೆಲೆ 2 ಕೋಟಿ ರೂಪಾಯಿ -Lexus LM 350h

Tuesday, March 19, 2024

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ನಾಲ್ಕು ವರ್ಷಗಳ ವಿರಾಮದ ನಂತರ ಸ್ವಿಟ್ಜರ್ಲೆಂಡ್‌ನಲ್ಲಿ 5 ದಿನಗಳ ಜಿನೀವಾ ಇಂಟರ್‌ನ್ಯಾಷನಲ್ ಮೋಟಾರ್ ಶೋ ಶುರುವಾಗಿದೆ.

ಮೊದಲ ದಿನ (ಫೆ.27) ಪ್ರದರ್ಶನದಲ್ಲಿ ಕಂಡ ಡಾಸಿಯಾ ಸ್ಯಾಂಡ್ ರೈಡರ್ ಆಫ್-ರೋಡ್ ವಾಹನ.

ಸ್ವಿಟ್ಜರ್ಲೆಂಡಲ್ಲಿ 5 ದಿನದ ಜಿನೀವಾ ಮೋಟಾರ್ ಶೋ 2024; ಪ್ರತಿಷ್ಠಿತ ವರ್ಷದ ಕಾರು ಪ್ರಶಸ್ತಿ ಗೆದ್ದವರಾರು, ಇಲ್ಲಿದೆ ಒಂದು ಫೋಟೋ ವರದಿ

Tuesday, February 27, 2024

ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಚೀನಾದ ಬಿವೈಡಿ ಮುಂದಾಗಿದೆ. ಅಮೆರಿಕದ ಟೆಸ್ಲಾಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಬಿವೈಡಿ ಈಗ ಫೆರಾರಿ ಮತ್ತು ಲ್ಯಾಂಬೊರ್ಗಿನಿಯಂತಹ ಸೂಪರ್ ಕಾರ್ ತಯಾರಕರಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಯಾಂಗ್ವಾಂಗ್ ಯು9 ಎಂಬ ತನ್ನದೇ ಆದ ಎಲೆಕ್ಟ್ರಿಕ್ ಸೂಪರ್ ಕಾರ್ ಅನ್ನು ಈಗ ಮಾರುಕಟ್ಟೆ ಮುಂದಿಟ್ಟಿದೆ.

ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ; ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9ರ ಚಿತ್ರನೋಟ

Tuesday, February 27, 2024

ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ 2024ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಕಾರು ಮಂಗಳವಾರ (ಜ.16) ಬಿಡುಗಡೆಯಾಗಿದೆ.

2024 Hyundai Creta: ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡಿತು ಹೊಸ ಹ್ಯುಂಡೈ ಕ್ರೆಟಾ; ಇಲ್ಲಿದೆ ಸಚಿತ್ರ ವಿವರ

Tuesday, January 16, 2024

ಸ್ಮಾರ್ಟ್‌ಫೋನ್ ಉತ್ಪಾದಕ ದಿಗ್ಗಜ ಕಂಪನಿ ಷಓಮಿ ಚೀನಾದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಈ ಕಾರಿಗೆ ಎಸ್‌ಯು 7 ಎಂಬ ಹೆಸರನ್ನು ಷಓಮಿ ಇಟ್ಟಿದೆ. ಎಸ್‌ಯು ಎಂದರೆ ಸ್ಪೀಡ್‌ ಅಲ್ಟ್ರಾ ಎಂಬುದರ ಸಂಕ್ಷಿಪ್ತ ರೂಪ.

ಎಲೆಕ್ಟ್ರಿಕ್ ಸೆಡಾನ್ ಅನ್ನು ಬೀಜಿಂಗ್‌ನಲ್ಲಿ ಚೀನಾದ ಕಾರು ತಯಾರಕ ಬಿಎಐಸಿ ಗ್ರೂಪ್ ಒಡೆತನದ ಸೌಲಭ್ಯಗಳ ಪೈಕಿ ಒಂದರಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ವಾರ್ಷಿಕ 2 ಲಕ್ಷ ವಾಹನಗಳ ಉತ್ಪಾದನೆಯಾಗುತ್ತದೆ.

Xiaomi SU7 : ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಷಓಮಿ ಎಸ್‌ಯು7 ಪ್ರವೇಶ, 800 ಕಿಮೀ ರೇಂಜ್‌ನ ಚೊಚ್ಚಲ ಇ-ಕಾರು

Thursday, December 28, 2023

ಕಿಚ್ಚ ಸುದೀಪ್‌ ಅವರ ಮನೆಯಲ್ಲಿ ಸರಿ ಸುಮಾರು ಹತ್ತಕ್ಕೂ ಅಧಿಕ ಕಾರುಗಳಿವೆ.ಒಂದೊಂದು ಕಾರೂ, ದುಬಾರಿ ಬೆಲೆಯದ್ದೇ ಇದೆ. ಇದೀಗ ಆ ಕಾರ್‌ ಬಳಗಕ್ಕೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ಅದೇ ಪೋರ್ಷೆ ಪನಾಮೆರಾ GTS ಕಾರು.

Kichcha Sudeep: ಕಿಚ್ಚನ ಮನೆಗೆ ಬಂತು ದುಬಾರಿ ಬೆಲೆಯ ಹೊಸ ಕಾರು; ಇದರ ಬೆಲೆಗೆ ನೀವು 8 ಲಕ್ಷ ಮೌಲ್ಯದ 25 ಕಾರ್‌ ಖರೀದಿಸಬಹುದು!

Sunday, November 5, 2023