Latest parenting Photos

ಹೋಲಿಕೆ ಮಾಡುವುದು - ಅವರ ಮಗು ನೋಡು ಎಷ್ಟು ಒಳ್ಳೆಯನು, ಅವರ ಮಗು ತುಂಬಾ ಚೆನ್ನಾಗಿ ಓದುತ್ತಾನೆ, ತರಗತಿಗೆ ಫಸ್ಟ್ ಅಂತೆ ಹೀಗಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದು ಕೂಡ ಮಕ್ಕಳಲ್ಲಿನ ಕೀಳರಿಮೆಗೆ ಮುಖ್ಯ ಕಾರಣವಾಗಿದೆ.

Parenting: ಮಕ್ಕಳಲ್ಲಿ ಕೀಳರಿಮೆ ಏಕೆ ಉಂಟಾಗುತ್ತೆ? 5 ಮುಖ್ಯ ಕಾರಣಗಳಿವು

Sunday, April 28, 2024

ಯಶಸ್ವಿ ಪೋಷಕರು ಮಗುವಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ತುಂಬುತ್ತಾರೆ. ಇದೇ ವೇಳೆ ಅವರಲ್ಲಿ ಒತ್ತಡ  ಹಾಗೂ ಹೊರೆಯಾಗದಂತೆ ಎಚ್ಚರವಾಗಿರುತ್ತಾರೆ. ಮಗುವಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಕ್ರಿಯಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಾರೆ.

ಯಶಸ್ವಿ ಮಕ್ಕಳ ಪೋಷಕರಲ್ಲಿ ಕಾಣಿಸುವ 7 ಸಾಮಾನ್ಯ ಸಂಗತಿಗಳಿವು; ನಿಮಗೂ ಈ ಟಿಪ್ಸ್ ಸಹಾಯವಾಗುತ್ತೆ

Sunday, April 28, 2024

ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸುವುದು ಮುಖ್ಯ. ಇದು ಆರೋಗ್ಯಕರ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

Parenting: ಮಕ್ಕಳ ಭಾವನೆಗಳನ್ನು ನಿಭಾಯಿಸುವುದು ಹೇಗೆ; ಪೋಷಕರಿಗೆ ಅಗತ್ಯ ಸಲಹೆಗಳು ಇಲ್ಲಿದೆ

Saturday, April 20, 2024

ನಿರ್ಲಕ್ಷ್ಯ: ಮಕ್ಕಳಿಗೆ ಆಹಾರ, ವಸತಿ ಸೇರಿದಂತೆ ಭಾವನಾತ್ಮಕ ಬೆಂಬಲದಂಥ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ಪೋಷಕರು ವಿಫಲವಾದರೆ, ಅಂಥಾ ಮಕ್ಕಳಲ್ಲಿ ನಿರ್ಲಕ್ಷ್ಯದ ಭಾವನೆಗಳು ಉಂಟಾಗಬಹುದು.

ಬಾಲ್ಯದಲ್ಲಿ ಮಕ್ಕಳು ಆಘಾತಕ್ಕೊಳಗಾಗಲು ಪೋಷಕರ ಈ ನಡೆಯೇ ಕಾರಣ; ಹೆತ್ತವರೇ, ಮಕ್ಕಳೊಂದಿಗೆ ನಾಜೂಕಾಗಿರಿ

Wednesday, February 14, 2024

ಮಕ್ಕಳ ಬಾಲ್ಯ ಚೆನ್ನಾಗಿ ಇರುವಲ್ಲಿ ಪೋಷಕರ ಪಾತ್ರ ತುಂಬಾನೇ ಮುಖ್ಯವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಬೇಕು ಎನ್ನುವ ಒಂದೇ ಯೋಚನೆಯಲ್ಲಿ ನಾವು ಕೆಲವೊಂದು ಸೂಕ್ಷ್ಮ ವಿಚಾರಗಳನ್ನೇ ಮರೆತುಬಿಡುತ್ತೇವೆ. ಪೋಷಕರಾಗಿ ನಮ್ಮ ಕೆಲವು ತಪ್ಪುಗಳಿಂದ ಮಕ್ಕಳ ನಡುವಿನ ಆರೋಗ್ಯಕರ ಸಂಬಂಧವೇ ಹಾಳಾಗಿಬಿಡಬಹುದು. ಹೀಗಾಗಿ ಮಕ್ಕಳೊಂದಿಗೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

Parenting Tips: ಮಕ್ಕಳೊಂದಿಗೆ ಬಲವಾದ ಬಂಧ ಬೆಸೆದುಕೊಳ್ಳಲು ಇಲ್ಲಿದೆ ಬಹು ಮುಖ್ಯ​ ಸಲಹೆಗಳು

Friday, February 2, 2024

ಪೋಷಕರು ಮಕ್ಕಳಲ್ಲಿ ಭಾವಾನಾತ್ಮಕವಾಗಿ ಹಾಗೂ ಮಾನಸಿಕವಾಗಿ ಸುರಕ್ಷಿತ ಸಂಪರ್ಕವನ್ನು ಹೊಂದುವುದು ಮುಖ್ಯವಾಗುತ್ತದೆ. ನಿಮ್ಮ ಪೀಳಿಗೆಗೂ ಇಂದಿನ ಮಕ್ಕಳ ಮನೋಭಾವಕ್ಕೂ ವ್ಯತ್ಯಾಸವಿದೆ ಎಂಬುದನ್ನು ಪೋಷಕರು ಅರಿಯಬೇಕು. ಇಂದಿನ ಪೀಳಿಗೆಗೆ ತಕ್ಕಂತೆ ಪೋಷಕರ ಮನೋಭಾವವೂ ಬದಲಾಗಬೇಕು. ಆಗ ಮಾತ್ರ ಮಕ್ಕಳು ಪೋಷಕರೊಂದಿಗೆ ಸುರಕ್ಷಿತ ಸಂಬಂಧ ಬೆಳೆಸಲು ಇಷ್ಟಪಡುತ್ತಾರೆ ಎನ್ನುತ್ತಾರೆ ತಜ್ಞರಾದ ಎಲಿ ಹಾರ್ವುಡ್‌.

Parenting Tips: ಪೋಷಕರು ಮಕ್ಕಳಿಗೆ ತಪ್ಪದೇ ಕಲಿಸಬೇಕಾದ 5 ಗುಣಗಳಿವು, ಮಕ್ಕಳಲ್ಲಿ ಧೈರ್ಯ ಮೂಡಲು ಇವು ಸಹಕಾರಿ

Thursday, February 1, 2024

ಮೊದಲ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಾಗ ಸಂತಸದ ಜೊತೆಯಲ್ಲಿ ಜವಾಬ್ದಾರಿಗಳ ಮೂಟೆಯೇ ಹೆಗಲ ಮೇಲೇರಿ ಬಿಡುತ್ತದೆ . ಈಗಂತೂ ಚಳಿಗಾಲದ ಸಮಯವಾಗಿರೋದ್ರಿಂದ ಪುಟ್ಟ ಕಂದಮ್ಮಗಳ ಆರೋಗ್ಯದ ಕಡೆಗೆ ಎಷ್ಟು ಜಾಗರೂಕತೆ ವಹಿಸಿದರೂ ಸಹ ಅದು ಕಡಿಮೆ ಎಂದೇ ಎನಿಸುತ್ತದೆ. ಚಳಿಗಾಲದ ಹವಾಮಾನಕ್ಕೆ ಹೊಂದಿಕೊಳ್ಳಲು ಅಗ ತಾನೆ ಜನಿಸಿದ ಮಕ್ಕಳಿಗೆ ತುಸು ಕಷ್ಟವಾಗುತ್ತದೆ. ಆದರೆ ಪೋಷಕರಾಗಿ ನೀವು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಸರಿಯಾದ ಸಮಯಕ್ಕೆ ಕೈಗೊಂಡಲ್ಲಿ ಚಳಿಗಾಲದಲ್ಲಿಯೂ ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯುಂಟಾಗದಂತೆ ನೋಡಿಕೊಳ್ಳಬಹುದಾಗಿದೆ.

ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ.? ಪೋಷಕರಿಗೆ ಇಲ್ಲಿದೆ ಮಹತ್ವದ ಕಿವಿಮಾತು

Wednesday, December 13, 2023

ಗ್ರೀಟಿಂಗ್​ ಕಾರ್ಡ್​: ನಿಮ್ಮ ಬಳಿ ಹಣ ಇಲ್ಲ, ನೀವಿನ್ನೂ ಚಿಕ್ಕವರು, ಆದ್ರೆ ಪೋಷಕರಿಗೆ ಈ ದಿನ ಏನಾದ್ರು ಉಡುಗೊರೆ ನೀಡಬೇಕು ಎಂದು ಬಯಸುತ್ತಿದ್ದೀರಿ ಅಲ್ಲವೇ? ಚಿಂತೆಬಿಡಿ, ನೀವೇ ಒಂದು ಗ್ರೀಟಿಂಗ್​ ಕಾರ್ಡ್​ ತಯಾರಿಸಿ ಅದರಲ್ಲಿ ಅವರಿಗೆ ವಿಶ್​ ನೋಟ್​​ ಬರೆದು ಅಥವಾ ಭಾವನಾತ್ಮಕ ಸಂದೇಶ ಬರೆದು ಅವರಿಗೆ ನೀಡಿ.

Parents Day Gift: ಪೋಷಕರ ದಿನದಂದು ನಿಮ್ಮ ತಂದೆ-ತಾಯಿಗೆ ಉಡುಗೊರೆ ನೀಡಲು ಬಯಸಿದ್ದೀರಾ? ಇಲ್ಲವೆ 7 ಗಿಫ್ಟ್ ಐಡಿಯಾಗಳು

Saturday, July 22, 2023

ಮಕ್ಕಳು ಪೋಷಕರ ಮಾತು ಕೇಳದೇ ಇರುವುದು ಇತ್ತೀಚೆಗೆ ಸಾಮಾನ್ಯ. ಹಲವು ಮನೆಗಳಲ್ಲಿ ಮಕ್ಕಳು ಮಾತು ಕೇಳುತ್ತಿಲ್ಲ ಎಂದು ದೂರುವ ಪೋಷಕರನ್ನು ನೋಡಿದ್ದೇವೆ. ಅವರು ನಿಮ್ಮ ಮೇಲೆ ಸಿಟ್ಟಾಗುವುದು, ಅವರು ಹೇಳಿದ್ದನ್ನು ಕೇಳದೇ ಇದ್ದಾಗ ಅವರದ್ದೇ ಮಾರ್ಗದಲ್ಲಿ ಹೋಗಿ ಅದನ್ನು ಪಡೆಯಲು ಯತ್ನಿಸುವುದು ಇದೆಲ್ಲವೂ ಸಹಜ. ಆದರೆ ಮಕ್ಕಳ ಈ ವರ್ತನೆಯಿಂದ ಕೆಲವೊಮ್ಮೆ ನಾವು ತಾಳ್ಮೆ ಕಳೆದುಕೊಳ್ಳುತ್ತೇವೆ. ಅವರಿಗೆ ಹೊಡೆಯುವುದು ಬಡಿಯುವುದು ಮಾಡುತ್ತೇವೆ. ಆದರೆ ಈ ವರ್ತನೆ ಸಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞ ಜಾಜ್ಮಿನ್‌ ಮೆಕಾಯ್‌. ಈ ಬಗ್ಗೆ ಪೋಷಕರಿಗೆ ಸಲಹೆ ನೀಡುವ ಅವರು ʼಹಟವಾದಿ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರೊಂದಿಗೆ ಆರೋಗ್ಯಕರ ಗಡಿ ಹೊಂದಿಸಲು ಪ್ರಯತ್ನಿಸಬೇಕು. ಇದರಿಂದ ಅವರು ಅರ್ಥ ಮಾಡಿಕೊಳ್ಳಬಹುದು. ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬಹುದುʼ ಹಾಗಾದರೆ ಹಟವಾದಿ ಮಕ್ಕಳೊಂದಿಗೆ ನಿಮ್ಮ ವರ್ತನೆ ಹೇಗಿರಬೇಕು, ನೋಡಿ.

Parenting Tips: ಮಕ್ಕಳು ಮಾತು ಕೇಳುತ್ತಿಲ್ಲವೇ; ಹಟವಾದಿ ಮಕ್ಕಳೊಂದಿಗೆ ಹೀಗಿರಲಿ ಪೋಷಕರ ವರ್ತನೆ

Wednesday, July 5, 2023

ಅಂಗಡಿಯಿಂದ ದುಬಾರಿ ಗಿಫ್ಟ್ ತಂದು ತಂದೆಗೆ ಕೊಟ್ಟು ಅವರನ್ನು ಖುಷಿಪಡಿಸುವ ಹೊರತಾಗಿ ಅಪ್ಪನ ಮೊಗದಲ್ಲಿ ತರಿಸಲು ನಿಮಗೆ ಸಾಧ್ಯವಾಗುವ ಈ ಮೇಲಿನ ಐಡಿಯಾಗಳನ್ನು ಬಳಸಿ.

Fathers Day 2023: ದುಬಾರಿ ವಸ್ತುಗಳನ್ನ ಗಿಫ್ಟ್ ನೀಡುವ ಹೊರತಾಗಿ ಅಪ್ಪನ ಮೊಗದಲ್ಲಿ ನಗು ಹೇಗೆ ತರಿಸಬಹುದು? ಇಲ್ಲಿದೆ ಐಡಿಯಾಗಳು

Saturday, June 17, 2023

ಪೋಷಕರು ತಮ್ಮ ಕೈಲಾದಷ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಪೋಷಕರು ಮಕ್ಕಳ ವಿಷಯದಲ್ಲಿ ತಪ್ಪು ಮಾಡಬಹುದು. ಮಕ್ಕಳ ಬಯಕೆಗಳನ್ನು ಪೂರೈಸುವುದು ಮಾತ್ರವಲ್ಲ, ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದುವುದು ಬಹಳ ಮುಖ್ಯವಾಗುತ್ತದೆ. ಭಾವಾನಾತ್ಮಕವಾಗಿ ಮಕ್ಕಳೊಂದಿಗೆ ಸಂಬಂಧ ಹೊಂದುವುದರಿಂದ ಮಕ್ಕಳ ಬೆಳವಣಿಗೆಗೆ ಹಲವು ರೀತಿಯಲ್ಲಿ ಸಹಾಯವಾಗುತ್ತವೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ವಿಷಯದಲ್ಲಿ ಪೋಷಕರು ಮಾಡುವ ಸಾಮಾನ್ಯ ತಪ್ಪುಗಳು ಹೀಗಿವೆ.

Parenting: ಮಕ್ಕಳೊಂದಿಗೆ ಪೋಷಕರಿಗಿರಲಿ ಉತ್ತಮ ಬಾಂಧವ್ಯ; ಈ ತಪ್ಪುಗಳಿಗೆ ಎಂದಿಗೂ ಅವಕಾಶ ನೀಡದಿರಿ

Tuesday, June 6, 2023

ಪಾಸಿಟಿವ್‌ ಪೇರೆಂಟಿಂಗ್‌ ಅಥವಾ ಧನಾತ್ಮಕ ಪೇರೆಂಟಿಂಗ್‌ ಎನ್ನುವುದು ಮಕ್ಕಳ ಸಾಮಾಜಿಕ, ಭಾವನಾತ್ಮಕ ಹಾಗೂ ಅರಿವಿನ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಗುವಿನ ಭವಿಷ್ಯದ ಏಳಿಗೆಗೆ ಪೋಷಕರು ಮಾಡಬಹುದಾದ ಸಕಾರಾತ್ಮಕ ಸಲಹೆಗಳು ಇಲ್ಲಿವೆ.

Parenting: ಮಕ್ಕಳಿಗೆ ಪ್ರೀತಿಯೊಂದಿಗೆ ಶಿಸ್ತನ್ನೂ ಕಲಿಸಿ; ಸುಭದ್ರ ಭವಿಷ್ಯಕ್ಕೆ ಇದೇ ಬುನಾದಿ

Monday, June 5, 2023

ನಿಮ್ಮ ಮಕ್ಕಳು ಮೇಲಿನ ಎಲ್ಲಾ ರೋಗಲಕ್ಷಣಗಳನ್ನು ಹೊಂದಿದ್ದರೆ ಹೆದರುವುದು, ಚಿಂತಿಸುವುದು ಬೇಡ. ಎಲ್ಲಾ ಸಮಸ್ಯೆಗೂ ಏನಾದರೂ ಪರಿಹಾರ ಇದ್ದೇ ಇರುತ್ತದೆ. ಆದ್ದರಿಂದ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ಸೂಕ್ತ ವೈದ್ಯರ ಬಳಿ ಹೋಗಿ.  ಇದು ಭವಿಷ್ಯದಲ್ಲಿ ಮಕ್ಕಳಿಗೆ ಇನ್ನಷ್ಟು ಆರೋಗ್ಯ ಸಮಸ್ಯೆ ಕಾಡುವುದನ್ನು ತಪ್ಪಿಸುತ್ತದೆ.

Thyroid in Children: ಮಕ್ಕಳಿಗೂ ಕಾಡುತ್ತೆ ಥೈರಾಯ್ಡ್‌ ಸಮಸ್ಯೆ..ಈ ಲಕ್ಷಣಗಳು ಕಂಡುಬಂದರೆ ತಪ್ಪದೆ ವೈದ್ಯರ ಬಳಿ ಕರೆದೊಯ್ಯಿರಿ

Tuesday, January 10, 2023

ಮಕ್ಕಳು ಅಥವಾ ಹದಿಹರೆಯದವರು ತಮ್ಮ ಆಲೋಚನೆಯಲ್ಲಿ ಹೆಚ್ಚು ಪ್ರಬುದ್ಧತೆಯನ್ನು ಹೊಂದಿರುವುದಿಲ್ಲ. ಅವರು ತಾವು ಬೆಳೆದಿದ್ದೇವೆ ಎಂದೇ ಭಾವಿಸುತ್ತಾರೆ. ಇದೇ ವಿಚಾರವಾಗಿ ಯೋಗ ಆಫ್ ಇಮ್ಮಾರ್ಟಲ್ಸ್ ನ ಸಂಸ್ಥಾಪಕರಾದ ಇಶಾನ್ ಶಿವಾನಂದ್ ಅವರು, ಮಕ್ಕಳಲ್ಲಿ ಜಾಗೃತಿ ಮತ್ತು ಕೆಲಸದ ಅಭ್ಯಾಸವನ್ನು ಹೇಗೆ ಬೆಳೆಸಬೇಕು ಎಂಬುದರ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.

Parenting Tips: ಹದಿಹರೆಯದ ಮಕ್ಕಳೊಂದಿಗೆ ಪೋಷಕರು ಹೇಗೆ ನಡೆದುಕೊಳ್ಳಬೇಕು? ತಜ್ಞರ ಸಲಹೆ ಹೀಗಿವೆ

Monday, December 5, 2022

ಕಾರಣವನ್ನು ಗುರುತಿಸಿ: ಮಗುವಿನ ಕೈಬರಹವನ್ನು ಸರಿಪಡಿಸುವ ಮೊದಲು, ಕಾರಣವನ್ನು ನೋಡಿ. ಅವರು ಪೆನ್ ಅಥವಾ ಪೆನ್ಸಿಲ್ ಅನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ. ಹಾಳೆಯ ಅಥವಾ ನೋಟ್​ ಬುಕ್​ ಕೆಳಗಡೆ ಒತ್ತಿಗೆ ಏನು ಇಟ್ಟುಕೊಂಡಿದ್ದಾರೆ ಎಂಬುದನ್ನು ಗಮನಿಸಿ. ಮಕ್ಕಳು ಕುಳಿತುಕೊಳ್ಳುವ ಭಂಗಿಯನ್ನು ಗಮನಿಸಿ.

Handwriting Tips: ನಿಮ್ಮ ಮಕ್ಕಳ ಹ್ಯಾಂಡ್​ರೈಟಿಂಗ್​ ಸುಧಾರಿಸುವುದು ಹೇಗೆ? ಇಲ್ಲಿವೆ ಟಿಪ್ಸ್

Wednesday, November 23, 2022

ಮಕ್ಕಳನ್ನು ಸಲಹುವಾಗ ಅಸಹಾಯಕತೆ, ಹತಾಶೆ, ಅನಿಶ್ಚಿತತೆ, ನೋವು, ನಿರಾಶೆ ಮತ್ತು ಕೋಪ ಸಾಮಾನ್ಯ. ಮಕ್ಕಳು ಮತ್ತು ಅವರೊಂದಿಗಿನ ಸಂವಾದಗಳು ಕೆಲವೊಮ್ಮೆ ಪೋಷಕರಿಗೆ ಕೋಪ ತರಿಸುತ್ತದೆ. ಇದು ಕೆಲವೊಮ್ಮೆ ಹತೋಟಿಗೆ ತರಲು ಕಷ್ಟವಾಗಬಹುದು ಅಥವಾ ಹೊರೆ ಅನುಭವಿಸಬಹುದು. ಇಂತಹ ಸಂದರ್ಭದಲ್ಲಿ ಶಾಂತವಾಗಿರಲು, ಸರ್ಟಿಫೈಡ್ ಸೈಕೋಥೆರಪಿಸ್ಟ್ ಮತ್ತು ಪೇರೆಂಟಿಂಗ್ ಎಕ್ಸ್‌ಪರ್ಟ್ ಜೆಸ್ಸಿಕಾ ವಾಂಡರ್‌ವೈರ್ ಕೆಲ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Parenting tips: ಮಗುವಿನ ನಡವಳಿಕೆಯಿಂದ ಕೋಪ ಬರುತ್ತಾ? ಶಾಂತರಾಗಲು ಹೀಗೆ ಮಾಡಿ

Friday, November 11, 2022

ಸಾಮಾನ್ಯವಾಗಿ, ಮಗುವಿನ ಎತ್ತರವು ಮಗುವಿನ ಪೋಷಕರ ಎತ್ತರವನ್ನು ಅವಲಂಬಿಸಿರುತ್ತದೆ. ಆದರೆ ಕೆಲವೊಮ್ಮೆ ಹೆತ್ತವರು ಎತ್ತರವಿದ್ದರೂ, ಮಕ್ಕಳು ಸರಿಯಾದ ಎತ್ತರಕ್ಕೆ ಬೆಳೆಯುವುದಿಲ್ಲ. ಕೆಲವೊಮ್ಮೆ ಮಗುವಿಗೆ ಸರಿಯಾದ ಪೋಷಣೆ ಸಿಗದೆ ಹೀಗಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಎತ್ತರವನ್ನು ಹೆಚ್ಚಿಸಲು ವ್ಯಾಯಾಮದ ಜೊತೆಗೆ ಅವರ ಆಹಾರದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

Food For Kids: ಮಕ್ಕಳ ಬೆಳವಣಿಗೆ ಸರಿಯಾಗಿಲ್ವಾ? ಸ್ನಾಯು ಬಲವಾಗಲು, ಎತ್ತರ ಹೆಚ್ಚಿಸಲು ಈ 5 ಆಹಾರ ಕೊಡಿ

Tuesday, November 8, 2022

ಮಕ್ಕಳು ತಪ್ಪು ಮಾಡುವುದು ತೀರಾ ಸಾಮಾನ್ಯ. ಇದನ್ನು ನೋಡಿದ ಪಾಲಕರು ಕಿರುಚಾಡಿ ಬೈಯ್ಯುವುದು ಹೊಡೆಯುವುದ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮಕ್ಕಳು ತಪ್ಪು ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಮಕ್ಕಳನ್ನು ಬೈಯುವುದರಿಂದ ಅವರ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಅಂತಹ ಪೋಷಕರು ಹೆಚ್ಚಿನ ಮಟ್ಟದ ಒತ್ತಡ ಮತ್ತು ಆತಂಕವನ್ನು ಹೊಂದಿರುತ್ತಾರೆ.

Parenting Tips: ಸಣ್ಣ ವಿಚಾರಕ್ಕೂ ಮಕ್ಕಳಿಗೆ ಗದರಿಸುತ್ತೀರಾ? ಪೋಷಕರು ಈ ವಿಚಾರ ತಿಳಿದುಕೊಂಡಿರಿ

Monday, October 10, 2022

ಕೆಲವೊಮ್ಮೆ ಮಕ್ಕಳು ತಮ್ಮ ಭಾವನೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುವುದಿಲ್ಲ. ಅದಕ್ಕೆ ನಿಜವಾದ ಕಾರಣವೇನು? ಪ್ರತಿಯೊಂದು ಸಂಬಂಧದಲ್ಲಿ ಮಾತು ತುಂಬಾ ಮುಖ್ಯ. ಈ ಮಾತುಕತೆ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಇರುವ ಅಸ್ತ್ರ. ಮಕ್ಕಳ ಪಾಲನೆ ಮಾಡುವುದು ಹೇಗೆ ಎಂಬುದು ಮುಖ್ಯವಲ್ಲ, ಮಕ್ಕಳ ಭಾವನೆಗಳನ್ನು ಮತ್ತು ಅವರು ಏನು ಯೋಚಿಸುತ್ತಾರೆ ಎಂಬುದನ್ನು ಆಲಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ತಮ್ಮ ಭಾವನೆಗಳ ಬಗ್ಗೆ ಮಾತನಾಡಲು ಮಕ್ಕಳನ್ನು ಪ್ರೋತ್ಸಾಹಿಸುವುದು ಸಹ ಮುಖ್ಯವಾಗಿದೆ.

Child care: ಪೋಷಕರೇ, ನಿಮ್ಮ ಮಕ್ಕಳ ಮಾತು ಕೇಳಿ ಪ್ಲೀಸ್

Tuesday, July 26, 2022