profile News, profile News in kannada, profile ಕನ್ನಡದಲ್ಲಿ ಸುದ್ದಿ, profile Kannada News – HT Kannada

Latest profile Photos

ಐದು ವರ್ಷದ ಹಿಂದೆ ಮಂಡ್ಯದಲ್ಲೂ ಲೋಕಸಭೆ ಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಸುಮಲತಾ ಅಂಬರೀಷ್‌ ವಿರುದ್ದ ಸೋಲು ಅನುಭವಿಸಿದ್ದರು.

Nikhil Kumarswamy: ನಿಖಿಲ್‌ ಕುಮಾರ್‌ ಸ್ವಾಮಿಗೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಸೋಲು; ನಟನೆಯ ನಂತರ ಅವರ ದಶಕದ ಸಾರ್ವಜನಿಕ ಹಾದಿ ಹೇಗಿದೆ

Saturday, November 23, 2024

ವಿ ಶ್ರಿನಿವಾಸ್ ಪ್ರಸಾದ್ ಯಾರು?; ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಎಬಿವಿಪಿ ಕಾರ್ಯಕರ್ತರಾಗಿ ಬೆಳೆದ ವಿ ಶ್ರೀನಿವಾಸ ಪ್ರಸಾದ್ ರಾಜಕೀಯವಾಗಿ ಸಂಯುಕ್ತ ಜನತಾದಳ, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ರಾಜಕಾರಣ ಮಾಡಿ ಸುದೀರ್ಘ 5 ದಶಕಗಳ ರಾಜಕಾರಣ ನಡೆಸಿದ್ದನ್ನು ಕಳೆದ ಮಾರ್ಚ್ 17ಕ್ಕೆ ಆಚರಿಸಿಕೊಂಡು ಅದೇ ದಿನ ರಾಜಕೀಯ ನಿವೃತ್ತಿ ಘೋಷಿಸಿದ ಅಪರೂಪದ ರಾಜಕೀಯ ಮುತ್ಸದ್ದಿ ವಿ ಶ್ರೀನಿವಾಸ ಪ್ರಸಾದ್. ಮೈಸೂರಿನ ಅಶೋಕಪುರಂನಲ್ಲಿ ಎಂ ವೆಂಕಟಯ್ಯ ಮತ್ತು ಡಿವಿ ಪುಟ್ಟಮ್ಮ ಅವರ ಪುತ್ರನಾಗಿ 1947ರ ಜುಲೈ 6 ರಂದು ಜನಿಸಿದರು.

ವಿ ಶ್ರಿನಿವಾಸ್ ಪ್ರಸಾದ್ ಯಾರು?; ಚಾಮರಾಜನಗರ ಸಂಸದರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಚಿತ್ರನೋಟ

Monday, April 29, 2024

ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ಅಚ್ಯುತ್‌ ಕುಮಾರ್‌ ಮಾತ್ರವಲ್ಲದೆ ಇನ್ನೊಬ್ಬ ನಟ ಪ್ರೇಕ್ಷಕರ ಗಮನಸೆಳೆದಿದ್ದಾರೆ.  ಖಡಕ್‌ ಪ್ರಿನ್ಸಿಪಾಲ್‌ ಆಗಿ ನಟಿಸಿದ್ದ ಗೋಪಾಲಕೃಷ್ಣ ದೇಶಪಾಂಡೆ ಅವರು ಹಾಸ್ಟೆಲ್‌ಗೆ ನುಗ್ಗಿ ಮಾಡಿದ ಕಾಮಿಡಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಗುರು ಇವರು? ಸೀರಿಯಸ್‌ಗೂ ಸೈ ನಗಿಸಲೂ ಸೈ ಎಂದು ಪ್ರಶ್ನಿಸುತ್ತಿದ್ದಾರೆ. ಬನ್ನಿ ನಟ ಗೋಪಾಲಕೃಷ್ಣ ದೇಶಪಾಂಡೆಯವರ ಬಗ್ಗೆ ಒಂದಿಷ್ಟು ವಿವರ ತಿಳಿದುಕೊಳ್ಳೋಣ.

Yuva Movie: ಯಾರಿವರು ಗೋಪಾಲಕೃಷ್ಣ ದೇಶಪಾಂಡೆ? ಯುವ ಸಿನಿಮಾದಲ್ಲಿ ಗಮನಸೆಳೆದ ಪ್ರಿನ್ಸಿಪಾಲ್‌, ಸೀರಿಯಸ್‌ಗೂ ಸೈ ನಗಿಸಲೂ ಸೈ

Friday, March 29, 2024

ಹೀರಾಬೆನ್ ಮೋದಿ ಅವರ 100 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಆ ಸಮಯದಲ್ಲಿ ತೆಗೆದ ಫೋಟೋ ಇದು.

PM Modi Pics: ಪ್ರಧಾನಿ ಮೋದಿ ಹುಟ್ಟುಹಬ್ಬ ವಿಶೇಷ, ತಾಯಿ ಹೀರಾಬೆನ್ ಆಶೀರ್ವಾದ ಪಡೆದ ನೆನಪುಗಳ ಫೋಟೋಸ್‌

Saturday, September 16, 2023

ಮನಸ್ಸು ಎಂದಿಗೂ ಸಮಸ್ಯೆಯಲ್ಲ,. ಆಲೋಚನಾ ಕ್ರಮದ್ದೇ ಸಮಸ್ಯೆ ಇರುವಂಥದ್ದು.

PM Modi Inspiring Quotes: ಪ್ರಧಾನಿ ಮೋದಿ ಹುಟ್ಟುಹಬ್ಬ ವಿಶೇಷ, ಬದುಕಿಗೆ ಪ್ರೇರಣೆ ನೀಡುವ ಪ್ರಧಾನಿ ಮೋದಿ ಅವರ 10 ನುಡಿಮುತ್ತುಗಳು

Saturday, September 16, 2023

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಕಾರಣ ದೇಶದೆಲ್ಲೆಡೆ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಇಷ್ಟಕ್ಕೂ ಪ್ರಧಾನ ಮಂತ್ರಿ ಹೊಣೆಗಾರಿಕೆಗೆ ಹೂವಿನ ಹಾಸಿಗೆ ಅಲ್ಲ ಎಂಬುದು ಸ್ಪಷ್ಟ. ಪ್ರಧಾನ ಮಂತ್ರಿ ಎಂದರೆ ದೇಶವನ್ನು ಮುನ್ನಡೆಸುವ ಆಡಳಿತ ವ್ಯವಸ್ಥೆಯ ನಾಯಕ ಸ್ಥಾನ. ಪ್ರಸ್ತುತ ಆ ಹೊಣೆಗಾರಿಕೆಯನ್ನು ನರೇಂದ್ರ ಮೋದಿ ನಿಭಾಯಿಸುತ್ತಿದ್ದಾರೆ. ಅವರು ಸಚಿವ ಸಂಪುಟ ಮತ್ತು ರಾಷ್ಟ್ರಪತಿ ಅವರ ನಡುವೆ ಸಂಪರ್ಕ ಮತ್ತು ಸಂವಹನದ ಕೊಂಡಿಯಾಗಿ ಕೆಲಸ ಮಾಡುತ್ತಾರೆ.

Narendra Modi Salary: ಪ್ರಧಾನಿ ನರೇಂದ್ರ ಮೋದಿ ವೇತನ ಎಷ್ಟಿರಬಹುದು ಎಂಬ ಸಹಜ ಕುತೂಹಲದ ಪ್ರಶ್ನೆಗೆ ಇಲ್ಲಿದೆ ಉತ್ತರ

Saturday, September 16, 2023

ಸಿಂಗಾಪುರದ ಮಾಜಿ ಉಪ ಪ್ರಧಾನಿ ಧರ್ಮನ್ ಷಣ್ಮುಗರತ್ನಂ ಅವರು ಆ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. 66 ವರ್ಷ ವಯಸ್ಸಿನ ಭಾರತೀಯ ಮೂಲದ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞರಾಗಿರುವ ಅವರು 70.4 ಶೇಕಡಾ ಮತಗಳನ್ನು ಪಡೆದ ನಂತರ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿ ಆಯ್ಕೆಯಾದರು. ಧರ್ಮನ್ ಮುಂದಿನ 6 ವರ್ಷ ಈ ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ, ಆ ದೇಶದ ಆಡಳಿತ ಪಕ್ಷದೊಂದಿಗೆ ಅವರ ನಿಕಟತೆಯ ಬಗ್ಗೆ ವಿರೋಧ ಪಕ್ಷವು ಕಳವಳ ವ್ಯಕ್ತಪಡಿಸಿದೆ. ಆದರೆ, ಚುನಾವಣೆಯಲ್ಲಿ ಧರ್ಮನ್ ಭಾರಿ ಮತಗಳನ್ನು ಪಡೆದು ಎದುರಾಳಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಮತ್ತೊಬ್ಬ ಅರ್ಥಶಾಸ್ತ್ರಜ್ಞ ಮತ್ತು ವಿದೇಶಿ ಮೀಸಲು ಸಂಸ್ಥೆ 'ಜಿಐಸಿ' ಹೂಡಿಕೆದಾರ ಕೋಕ್ ಸಾಂಗ್ ಮತ್ತು ದೇಶದ ವಿಮಾ ಕಂಪನಿ ಎಟಿಯುಸಿ ಆದಾಯದ ಮಾಜಿ ಮುಖ್ಯಸ್ಥ ಟಾನ್ ಕಿನ್ ಲಿಯಾನ್ ಅವರು ಧರ್ಮನ್ ವಿರುದ್ಧ ಅಧ್ಯಕ್ಷೀಯ ಹೋರಾಟದಲ್ಲಿದ್ದರು. ಆದರೆ ಗೆಲ್ಲಲು ವಿಫಲರಾದರು,

Tharman Shanmugaratnam: ಭಾರತೀಯ ಮೂಲದ ಧರ್ಮನ್ ಷಣ್ಮುಗರತ್ನಂ ಸಿಂಗಾಪುರ ಅಧ್ಯಕ್ಷ, ಅವರ ಕಿರುಪರಿಚಯ ಹೀಗಿದೆ

Saturday, September 2, 2023

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಇಸ್ರೋ ವಿಜ್ಞಾನಿಗಳ ಬಗ್ಗೆ ಇನ್ನಿಲ್ಲದ ಕುತೂಹಲ. ಅನೇಕರಿಗೆ ಅವರು ಪ್ರೇರಣೆ ಕೂಡ. ಚಂದ್ರಯಾನದ ಸಕ್ಸಸ್‍ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಕಲಾವಿದ ಅಜಿತ್ ಕೌಂಡಿನ್ಯ ತಮ್ಮದೇ ಆದ ರೀತಿಯಲ್ಲಿ ವಿಜ್ಞಾನಿಗಳಿಗೆ ಕಲಾಕುಂಚದ ಗೌರವ ಸಲ್ಲಿಸಿದ್ದಾರೆ. ಅವರು ಬಿಡಿಸಿದ ವಿಜ್ಞಾನಿಗಳ ಕ್ಯಾರಿಕೇಚರ್ ಜತೆಗೆ ಆ ವಿಜ್ಞಾನಿಗಳ ಕಿರುಪರಿಚಯವನ್ನು ಇಲ್ಲಿ ಪ್ರಸ್ತುತಿ ಮಾಡಿದ್ದೇವೆ.

Chandrayaan-3: ವಾವ್, ವಿಜ್ಞಾನಿಗಳಿಗಿದು ಅಪರೂಪದ ಅಭಿನಂದನೆ: ಇಸ್ರೋ ಸಾಧಕರಿಗೆ ಕುಂಚ ಗೌರವ ಸಲ್ಲಿಸಿದ ಶಿಡ್ಲಘಟ್ಟದ ಅಜಿತ್ ಕೌಂಡಿನ್ಯ

Thursday, August 24, 2023

ಸುನಿತಾ ಬಿಸ್ವನಾಥ್ ಜೊತೆ ರಾಹುಲ್ ಗಾಂಧಿ ಇರುವ ಚಿತ್ರಗಳನ್ನು ತೋರಿಸುವ ಮೂಲಕ ಬಿಜೆಪಿ ಹಲವು ಪ್ರಶ್ನೆಗಳನ್ನು ಬುಧವಾರ ಎತ್ತಿದೆ. ಬಿಜೆಪಿ ಪರವಾಗಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರು ಸುನಿತಾ ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮತ್ತು ಆ ಸಭೆಯಲ್ಲಿ ಏನಾಯಿತು ಎಂಬುದು ಬಿಜೆಪಿಯ ಪ್ರಶ್ನೆ. ಆದರೆ ಭಾರತದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಈ ಸುನೀತ್ ವಿಶ್ವನಾಥ್ ಯಾರು? ಬಿಜೆಪಿ ಅವರ ಸುತ್ತ ಏಕೆ ಪ್ರಶ್ನೆಗಳನ್ನು ಎತ್ತುತ್ತಿದೆ? ನೋಡೋಣ, ಸುನೀತಾ ವಿಶ್ವನಾಥ್ ಅವರ ಪರಿಚಯ ಹೀಗಿದೆ..

Sunitha Viswanath: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಜತೆಗೆ ಕಾಣಿಸಿಕೊಂಡಿದ್ದ ಸುನೀತಾ ವಿಶ್ವನಾಥ್‌ ಯಾರು; ಅವರ ಫೋಟೋಸ್‌ ಮತ್ತು ಪರಿಚಯ

Thursday, June 29, 2023

ಎಸ್‌.ನಿಜಲಿಂಗಪ್ಪ
ಜನನ - 10.12.1902
ನಿಧನ - 08.08.2000
ಹುಟ್ಟೂರು - ಮದ್ರಾಸ್‌ ಪ್ರಾಂತ್ಯದ ಬಳ್ಳಾರಿ ಜಿಲ್ಲೆಯ ಹಲುವಾಗಲು ಗ್ರಾಮ
ಮುಖ್ಯಮಂತ್ರಿ ಆಗಿದ್ದ ಅವಧಿ - 01.11.1956 ರಿಂದ 16.05.1958 ಮತ್ತು 21.06.1962 ರಿಂದ 29.05.1968
ಕ್ಷೇತ್ರ - ಮೊಳಕಾಲ್ಮುರು, ಶಿಗ್ಗಾಂವಿ, ಬಾಗಲಕೋಟೆ  (ಲಿಂಗಾಯತ ಸಮುದಾಯದವರು)

Chief Ministers of Karnataka List: ಭಾಷಾವಾರು ಪ್ರಾಂತ್ಯ ರಚನೆ ಬಳಿಕದ ಕರ್ನಾಟಕದ ಸಿಎಂಗಳು ಮತ್ತು ಅವರ ಆಡಳಿತಾವಧಿ, ಇತರೆ ವಿವರ ಇಲ್ಲಿವೆ

Wednesday, May 3, 2023