special-day News, special-day News in kannada, special-day ಕನ್ನಡದಲ್ಲಿ ಸುದ್ದಿ, special-day Kannada News – HT Kannada

Latest special day Photos

ಬೆಂಗಳೂರಿನಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಚಿವರಾದ ಡಾ.ಮಹದೇವಪ್ಪ. ಶಿವರಾಜ ತಂಡಗಡಿ, ಪ್ರಿಯಾಂಕ್‌ ಖರ್ಗೆ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತತಿರರು ಇದ್ದರು.

ಕರ್ನಾಟಕದಲ್ಲಿ ಕನಕದಾಸರ ಜಯಂತಿ: ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂದ ದಾಸ ಶ್ರೇಷ್ಠರಿಗೆ ಕರುನಾಡ ಗೌರವ ಹೀಗಿತ್ತು

Monday, November 18, 2024

ಬಿರ್ಸಾ ಮುಂಡಾ ಅವರ ಹೋರಾಟದ ನೆನಪಿಗೆ ಕೇಂದ್ರ ಸರ್ಕಾರವು ದೆಹಲಿಯ ಹೊಸ ಸಂಸತ್‌ ಭವನದ ಎದುರು ಶುಕ್ರವಾರ ಮುಂಡಾ ಅವರ ಪ್ರತಿಮೆ ಸ್ಥಾಪಿಸಿದ್ದಾರೆ. ಇದನ್ನು ಉದ್ಘಾಟಿಸಿ ಗೌರವವನ್ನು ಸಲ್ಲಿಸಲಾಯಿತು.

Birsa Munda: ಬದುಕಿದ್ದು 25 ವರ್ಷ, ಮಾಡಿದ್ದು ಮಹಾಕ್ರಾಂತಿ: ಇದು ಆದಿವಾಸಿ ನಾಯಕ ಬಿರ್ಸಾಮುಂಡಾ ಭಾರತಕ್ಕಾಗಿ ಹೋರಾಡಿದ ಸಾಧನೆಯ ಹಾದಿ

Friday, November 15, 2024

ತಮ್ಮ ಅಪರಿಮಿತ ಜ್ಞಾನ, ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,  ಶೇಷ ಕಾರಂತ-ಲಕ್ಷ್ಮಮ್ಮ ದಂಪತಿ ಪುತ್ರರಾಗಿ 1902ರ ಅಕ್ಟೋಬರ್‌ 10ರಂದು ಈಗಿನ ಉಡುಪಿಯ ಕೋಟಾದಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.

ಶಿವರಾಮ ಕಾರಂತರು ಶಿಕ್ಷಣ ಪಡೆದದ್ದು ಎಷ್ಟು, ಬರೆದದ್ದು ಎಷ್ಟಿರಬಹುದು; ಕಡಲತೀರದ ಭಾರ್ಗವನ ಅಪೂರ್ವ ಬದುಕಿನ ಕ್ಷಣಗಳು

Thursday, October 10, 2024

ಒತ್ತಡದ ಬದುಕಿನಲ್ಲಿ ಕಳೆದು ಹೋಗುವುದರ ಜೊತೆಗೆ ನಿಮ್ಮ ಹೃದಯದ ಕಾಳಜಿಗೂ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎಂದು ಒಮ್ಮೆ ಪರೀಕ್ಷೆ ಮಾಡಿಸಿ.

World Heart Day: ಹೃದಯದ ಬಗ್ಗೆ ಕಾಳಜಿ ಇರಲಿ, ನನಗೆ ಏನೂ ಆಗುವುದಿಲ್ಲ ಎಂಬ ವಿಶ್ವಾಸದ ಜೊತೆಗೆ ಹೃದಯದ ಪರೀಕ್ಷೆಯನ್ನೂ ಮಾಡಿಸಿ

Friday, September 27, 2024

ಜಗತ್ತಿನಲ್ಲಿ ಪ್ರವಾಸೋದ್ಯಮ ವಿಪುಲವಾಗಿ ಬೆಳೆದಿದೆ.ಕೋಟ್ಯಂತರ ಜನ ನಿತ್ಯ ಪ್ರವಾಸದಲ್ಲಿ ಇರುತ್ತಾರೆ. ಈ ನೆಲೆಯಲ್ಲಿ ಪ್ರವಾಸೋದ್ಯಮ ದಿನವೂ ರೂಪುಗೊಂಡಿದೆ. "ಪ್ರವಾಸೋದ್ಯಮ ಮತ್ತು ಶಾಂತಿ" ಅನ್ನು 2024 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ವಿಷಯವಾಗಿ ಆಯ್ಕೆ ಮಾಡಲಾಗಿದೆ. ಈ ಥೀಮ್ ಪ್ರವಾಸೋದ್ಯಮವು ಅಂತರರಾಷ್ಟ್ರೀಯ ಸಾಮರಸ್ಯ, ಸಾಂಸ್ಕೃತಿಕ ತಿಳುವಳಿಕೆ ಮತ್ತು ಶಾಂತಿಯನ್ನು ಬೆಳೆಸುವಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.

World Tourism Day2024:ವಿಶ್ವ ಪ್ರವಾಸೋದ್ಯಮ ದಿನ ಇಂದು, ಏನಿದರ ಮಹತ್ವ, ಈ ಬಾರಿಯ ಥೀಮ್‌ ಹೀಗಿದೆ

Friday, September 27, 2024

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಆನಂತರ ತಂತ್ರಜ್ಞಾನ, ಪರಿಸರ, ಕಾಡು, ಕೃಷಿ ಹೀಗೆ ಹಲವು ಆಯಾಮಗಳಲ್ಲಿ ತಮ್ಮ ಬದಕು ಕಟ್ಟಿಕೊಂಡರು. ಸ್ನಾತಕೊತ್ತರ ಪದವಿಯ ಬಳಿಕ  ಓರಗೆಯ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿ ಅರಸಿಕೊಂಡು ಹೋಗದೇ ತೆರಳಿದ್ದು ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು. ಅವರ ಸಾಧನೆಗೆ ಮನೆ ನಿರುತ್ತರವೇ ಸಾಕ್ಷಿ.

Poorna Chandra Tejasvi: ಅನನ್ಯ ಸಾಹಿತಿ, ಪರಿಸರ ಪ್ರೀತಿಯ ಪೂರ್ಣ ಚಂದ್ರ ತೇಜಸ್ವಿ ನೆನಪಾಗೋದು ಈ ಕಾರಣದಿಂದ photos

Sunday, September 8, 2024

ಭಾರತದಲ್ಲಿ 9 ಜಾತಿಯ ರಣಹದ್ದುಗಳಿಗೆ ನೆಲೆ ಕಂಡು ಕೊಂಡಿವೆ.  ಅವುಗಳೆಂದರೆ ಓರಿಯೆಂಟಲ್ ವೈಟ್-ಬೆಡ್, ಲಾಂಗ್-ಬಿಲ್ಡ್, ಸ್ಲೆಂಡರ್-ಬಿಲ್ಡ್, ಹಿಮಾಲಯನ್, ರೆಡ್-ಹೆಡೆಡ್, ಈಜಿಪ್ಟಿಯನ್, ಬಿಯರ್ಡೆಡ್, ಸಿನೆರಿಯಸ್ ಮತ್ತು ಯುರೇಷಿಯನ್ ಗ್ರಿಫನ್. ಈ 9 ಪ್ರಭೇದಗಳಲ್ಲಿ ಹೆಚ್ಚಿನವು ಅಳಿವಿನ ಅಪಾಯದಲ್ಲಿವೆ.

Vulture Awareness Day: ಪರಿಸರ ಸ್ವಚ್ಛತಾ ಕರ್ಮಿ ರಣಹದ್ದುಗಳಿಗೆ ಕರ್ನಾಟಕದಲ್ಲೂ ಉಂಟು ಪ್ರತ್ಯೇಕಧಾಮ, ಇವುಗಳ ವಿಶೇಷ ಏನು photos

Sunday, September 8, 2024

ವನ್ಯಜೀವಿ ಛಾಯಾಗ್ರಹಣ ಕೌಶಲ್ಯದ ಜತೆ ತಾಳ್ಮೆಯನ್ನು ಬಯಸುತ್ತದೆ. ಕಾಡಲ್ಲಿ ವನ್ಯಜೀವಿಗಳು ಸುಲಭವಾಗಿ ಸಿಗುವುದಿಲ್ಲ. ಇನ್ನು ಛಾಯಾಗ್ರಹಣಕ್ಕೆ ಬೇಕಂದರೆ ಸಿಗೋದು ಕಷ್ಟ.

World Photography Day 2024: ಕಬಿನಿ ಕರಿಚಿರತೆ ಛಾಯಾಚಿತ್ರ ಸೆರೆ ಹಿಡಿಯಲು ಕಾಡಿನಲ್ಲಿ ಈ ಛಾಯಾಗ್ರಾಹಕ ಎಷ್ಟು ವರ್ಷ ಕಳೆದಿರಬಹುದು

Monday, August 19, 2024

ಥಟ್ಟನೇ ನೋಡಿದರೆ ಒಮ್ಮೆಗೆ ಇದು ಭಾರತದ ಭೂಪಟವೇ ಇರಬೇಕು ಎನ್ನಿಸದೇ ಇರದು. ಕೊಂಚ ವ್ಯತ್ಯಾಸವಿದ್ದರೂ ಅದನ್ನೇ ಹೋಲುತ್ತದೆ. ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ. ಇದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಂಡಿದೆ.

Independence day 2024: ಭಾರತದ ಭೂಪಟ ಹೋಲುವ ಈ ಜಲಾಶಯ ಯಾವುದು, ಇದು ಕರ್ನಾಟಕದಲ್ಲಿಯೇ ಇದೆ -photos

Tuesday, August 13, 2024

ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತ ಮೊದಲ ಆನೆ 'ಜಯಮಾರ್ತಾಂಡ'. ಜಯಮಾರ್ತಾಂಡ ಆನೆ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತಿತ್ತು. ಸುಮಾರು 45 ವರ್ಷ ಈ ಕಾರ್ಯ ನಿಭಾಯಿಸಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಹೀಗಾಗಿಯೇ, ಅರಮನೆಯ ಮುಖ್ಯದ್ವಾರಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡಲಾಗಿದೆ. ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಹಿರಿಮೆ ಜಯಮಾರ್ತಾಂಡ ಆನೆಗೆ. ಈಗಲೂ ಈ ಆನೆಯ ದಾಖಲೆ ಇತಿಹಾಸವಾಗಿದೆ. ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲ ಬಾರಿ ಅಂಬಾರಿಯನ್ನು ಹೊತ್ತಿತ್ತು. ಒಡೆಯರ್ ಕಾಲದಲ್ಲಿ ಆರಂಭವಾದ ವಿಜಯದಶಮಿಯಿಂದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು. ಈ ರೀತಿ ಆನೆಯೊಂದಕ್ಕೆ ಗೌರವ ಸಿಕ್ಕಿದ್ದು ವಿಶೇಷವೂ ಹೌದು.

Elephant Day 2024: ಮೈಸೂರು ಅರಮನೆ ದ್ವಾರಗಳಿಗೂ ಆನೆಗಳ ಹೆಸರು, ಏನಿದರ ಮಹತ್ವ photos

Monday, August 12, 2024

ಸಿಂಹಾಸನ///

ರಾಜನ ಆಸನವನ್ನು ಸಿಂಹಾಸನ ಎನ್ನುವರು. ಆ ಆಸನ ರಾಜನಿಗೆ ಮಾತ್ರ ಮೀಸಲು. ಸಿಂಹ ಕಾಡಿನ ರಾಜನಾಗಿರುವುದರಿಂದ ನಾಡಿನ ರಾಜನ ಆಸನಕ್ಕೂ ಸಿಂಹಾಸನ ಹೆಸರು ಬಂದಿದೆ.

Lions day 2024: ಸಿಂಹದ ಜತೆ ಜತೆಯಲ್ಲಿಯೇ ನಮ್ಮ ಬದುಕಿಗೆ ಹೊಂದಿಕೆಯಾಗುವ ನುಡಿಗಟ್ಟು ಹೇಗಿವೆ ನೋಡಿ photos

Saturday, August 10, 2024

ಮೈಸೂರಿನಲ್ಲಿ ಜನಿಸಿದ ಮರಿಗೌಡರು ರೈತ ಕುಟುಂಬದಲ್ಲಿ ಬಂದವರು. ಎಂಟು ದಶಕಗಳ ಹಿಂದೆಯೇ ಅವರು ತೋಟಗಾರಿಕೆಯ ಬಗ್ಗೆ ಆಸಕ್ತಿ ಹೊಂದಿ ಕೃಷಿ ಪದವಿ ಮೂಲಕ ವಿಶೇಷ ಗಮನ ನೀಡಿದವರು.

National Horticulture day: ಕರ್ನಾಟಕದ ಹೆಮ್ಮೆಯ ವಿಜ್ಞಾನಿ ಎಂಎಚ್‌ ಮರಿಗೌಡರ ಸ್ಮರಣೆಗೆ ರಾಷ್ಟ್ರೀಯ ತೋಟಗಾರಿಕೆ ದಿನದ ಗೌರವ photos

Thursday, August 8, 2024

ಕಳೆದ ಬಾರಿಯಂತೆ ಈ ಬಾರಿಯೂ ಟೀಮ್‌ ಕುಂದಾಪುರಿಯನ್ಸ್‌ ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಿದೆ. ಚಿತ್ರನಟ ರಮೇಶ್‌ ಭಟ್‌ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಂದಾಪುರ ಭಾಗದ ಗ್ರಾಮೀಣ ಕ್ರೀಡೆಗಳು ನೆರೆದವರನ್ನು ರಂಜಿಸಿತು. ಇದರೊಂದಿಗೆ ಗಂಜಿ ಊಟ ಕಾರ್ಯಕ್ರಮಕ್ಕೆ ಬಂದವರ ಹೊಟ್ಟೆ ತಣಿಸಿತ್ತು. ಇಂದು (ಆಗಸ್ಟ್‌ 4) ನಡೆದ ಕಾರ್ಯಕ್ರಮದಲ್ಲಿ ಇನ್ನೂ ಏನೆಲ್ಲಾ ಇತ್ತು ಎಂಬುದನ್ನು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ.

ಬೆಂಗಳೂರಲ್ಲಿ ಆಸಾಡಿ ಅಮಾವಾಸ್ಯೆ ಘಮ್ಮತ್ತು; ಟೀಮ್‌ ಕುಂದಾಪುರಿಯನ್ಸ್‌ ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ ಹೀಗಿತ್ತು

Sunday, August 4, 2024

ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಸಂಭ್ರಮಾಚರಣೆ ಮನೆ ಮಾಡಿತ್ತು. ವಿಶೇಷವಾಗಿ ಕಾರಿಂಜ ಮತ್ತು ನರಹರಿ ಪರ್ವತಗಳಲ್ಲಿ ನೂರಾರು ಭಕ್ತರು ಮುಂಜಾನೆ ತೀರ್ಥಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ; ಕಾರಿಂಜ, ನರಹರಿ ಪರ್ವತಗಳಲ್ಲಿ ಭಕ್ತರ ತೀರ್ಥಸ್ನಾನ, ಫೋಟೋಸ್

Sunday, August 4, 2024

ಬಟ್ಟೆಯ ಚೀಲದ ಜೋಳಿಗೆ ಹಿಡಿದು , ಕುಡಿತದ ಚಟದಿಂದ ನಿಧನನಾದ ಪ.ಜಾತಿಯ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು. ದುರ್ವಸನಿಗಳು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.

ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

ಇಳಕಲ್‌ ಸ್ವಾಮೀಜಿ ಜೋಳಿಗೆ ಹಿಡಿದರು, ದಾನಕ್ಕಾಗಿ ಅಲ್ಲ, ದುಶ್ಚಟಗಳ ನಿಗ್ರಹಕ್ಕೆ, ಅವರ ಸ್ಮರಣೆಯೇ ಈಗ ವ್ಯಸನಮುಕ್ತ ದಿನ photos

Thursday, August 1, 2024

ಸುಪ್ರಿಯಾ( Supriya) ಮೈಸೂರಿನಲ್ಲಿ ಉದ್ಯೋಗಿ. ಛಾಯಾಗ್ರಹಣ ಇವರ ಹವ್ಯಾಸ. ಇದಕ್ಕಾಗಿ ಕಾಡು ಮೇಡು ಎನ್ನದೇ ಸುತ್ತಿ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆ ಹಿಡಿಯುತ್ತಾರೆ.

International Tiger Day 2024: ಇವರು ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು, ಹುಲಿ ಆ ಕ್ಷಣಕ್ಕಾಗಿ ದಿನವಿಡೀ ಕಾದವರು, ಅವರ ಫೋಟೋ ಒಮ್ಮೆ ನೋಡಿ

Monday, July 29, 2024

ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ, ವಿಜ್ಞಾನ ನಡೆದ ಬಂದ ಹಾದಿಯ ಪರಿಚಯ ನಿಮಗಾಗಬೇಕು ಅಂದ್ರೆ ನೀವು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು. ಜ್ಞಾನ ಸಂಪನ್ಮೂಲಗಳ ಆಗರ ತಾಣವಿದು. ಇಲ್ಲಿಗೆ ಭೇಟಿ ನೀಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮಾತ್ರವಲ್ಲ ನಮ್ಮ ರಾಷ್ಟ್ರದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸ ಮತ್ತು ನಾಗರಿಕತೆಯ ಬಗ್ಗೆ ಪರಿಚಯವೂ ಆಗುತ್ತದೆ. ಇಂತಹ ಅಪರೂಪ ತಾಣವನ್ನು ರಕ್ಷಿಸುವ ಹಾಗೂ ಇದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಮ್ಯೂಸಿಯಂ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಮೇ 18 ರಂದು ಅಂತರರಾಷ್ಟ್ರೀಯ ಮ್ಯೂಸಿಯಂ ದಿನಾಚರಣೆ ಇರುತ್ತದೆ. ಇವತ್ತು ಮ್ಯೂಸಿಯಂ ದಿನವಿದ್ದು ಕರ್ನಾಟಕದ ಟಾಪ್‌ 10 ವಸ್ತು ಸಂಗ್ರಹಾಲಯಗಳ ಬಗ್ಗೆ ತಿಳಿಯಿರಿ.

International Museum Day: ಕಲೆ, ಸಂಸ್ಕೃತಿ, ವಿಜ್ಞಾನ ಪರಂಪರೆಯನ್ನು ಬಿಂಬಿಸುವ ಕರ್ನಾಟಕದ ಟಾಪ್‌ 10 ಮ್ಯೂಸಿಯಂಗಳಿವು

Saturday, May 18, 2024

ಅಮ್ಮ ನೀನು ನಕ್ಕರೆ ನಮ್ಮ ಬಾಳೇ ಸಕ್ಕರೆ, ಚಿತ್ರ: ತಾಯಿ ಮಡಿಲಲ್ಲಿ

https://www.youtube.com/watch?app=desktop&v=3mF0QdAA-5Q

Mothers day 2024: ಅಮ್ಮನ ಕುರಿತ ಕನ್ನಡದ ಎಂದು ಮರೆಯಲಾಗದ 10 ಹಾಡುಗಳು

Sunday, May 12, 2024

ಪ್ರತಿದಿನ ನಿಮ್ಮ ಪ್ರೀತಿಪಾತ್ರರಿಗೆ ಈ ನುಡಿಮುತ್ತುಗಳೊಂದಿಗೆ ಬೆಳಗಿನ ಶುಭೋದಯವನ್ನು ತಿಳಿಸಲು ಈ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲೂ ಇವುಗಳನ್ನು ಶೇರ್ ಮಾಡಿಕೊಳ್ಳಿ.

Subhashita: ಕ್ರೀಡೆಯಿಂದ ಸಾಹಿತ್ಯದವರೆಗೆ; ಸಾಧಕರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಪ್ರತಿದಿನ ಹಂಚಿಕೊಳ್ಳಿ

Monday, March 25, 2024

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಂದ ಹಲವು ಪ್ರಯೋಜನಗಳಿವೆ. ಸ್ನಾಯುವಿನ ಒತ್ತಡ ಕಡಿಮೆಯಾಗುತ್ತದೆ. ಬೆನ್ನುಮೂಳೆ ಗಟ್ಟಿಯಾಗುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತದೆ.

Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ

Friday, February 16, 2024